ತುಮಕೂರು : 2022-23ನೇ ಮುಂಗಾರು ಹಂಗಾಮಿನಲ್ಲಿ ಬೆಳೆದ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು, ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು, ಈ ಆಪ್ ಬಳಸಿಕೊಂಡು ರೈತರು ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಛಾಯಾಚಿತ್ರ ಮತ್ತು ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ. ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್‍ನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ತಮ್ಮ ಜಮೀನುಗಳ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನಲ್ಲಿ ಕೂಡಲೇ ಅಪ್‍ಲೋಡ್ ಮಾಡಲು ಕೋರಿದೆ. ಬೆಳೆ ಸಮೀಕ್ಷೆ ಅಪ್‍ಲೋಡ್ ವಿವರವನ್ನು ಬೆಳೆ ವಿಸ್ತೀರ್ಣ, ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಸಾಲ, ಬೆಂಬಲ ಬೆಲೆ ಖರೀದಿ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಉಪಯೋಗಿಸಲಾಗುವುದು. ರೈತರು ಬೆಳೆ ವಿವರಗಳನ್ನು ತಾವೇ ಸ್ವತಃ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ…
Author: News Desk Benkiyabale
ತುಮಕೂರು : ಮಳೆ ಮತ್ತಿತರ ಕಾರಣಗಳಿಗೆ ಗುಂಡಿ ಬಿದ್ದಿರುವ ರಸ್ತೆಗಳು ಸರಾಗ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರು ವುದಲ್ಲದೆ, ಸಾವು, ನೋವುಗಳಿಗೆ ಕಾರಣವಾಗುತ್ತಿದ್ದು, ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತಿಕ್ ಅಹಮದ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಕೂಗಳತೆಯ ದೂರದಲ್ಲಿಯೇ ಇರುವ ಕೋಡಿ ಬಸವೇಶ್ವರ ದೇವಾಲಯದ ಬಳಿ ಗುಂಡಿ ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಮಾತನಾಡಿದ ಅವರು,ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ತುಮಕೂರು ನಗರದಲ್ಲಿ ಬಹುತೇಕ ರಸ್ತೆಗಳು ಗುಂಡಿಯಿಂದ ಕೂಡಿದ್ದು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದರು ಸಹ ಅಧಿಕಾರಿಗಳು ರಸ್ತೆ ಸರಿಪಡಿಸಲು ಮುಂದಾಗುತ್ತಿಲ್ಲ,ತುಮಕೂರು ನಗರದಲ್ಲಿ ಹಲವು ಬಡಾವಣೆಗಳಲ್ಲಿ ಸ್ಮಾರ್ಟ್‍ಸಿಟಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಸಾಕಷ್ಟು ಕಾಮಗಾರಿಗಳು ನಡೆಯುತ್ತಿದ್ದರು.ಬಹುತೇಕ ಕಾಮಗಾರಿಗಳು ಕಳಪೆ ಕಾಮಗಾರಿಗಳಿಂದ ಕೂಡಿವೆ ಇಂತಹ ಕಳಪೆ ಕಾಮಗಾರಿಗಳನ್ನ ಸಾರ್ವಜನಿಕರು ಸಹಿಸಲಾಗುತ್ತಿಲ್ಲ.ಕಳೆದ ಎರಡು ದಿನಗಳ ಹಿಂದೆ ತುಮಕೂರಿನ ಕೊಡಿ ಬಸವೇಶ್ವರ ವೃತ್ತದಲ್ಲಿ…
ಕೊರಟಗೆರೆ : ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಪ್ಪನಹಳ್ಳಿಯ ಸುವರ್ಣಮುಖಿ ನದಿಯಲ್ಲಿ 2 ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ಆಂಧ್ರ ಮೂಲದ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಕೊರಟಗೆರೆ ಪೆÇಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅನೇಕ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲಾ ಕೆರೆ, ಕಟ್ಟೆ, ನದಿಗಳು ತುಂಬಿ ಕೋಡಿ ಬಿದ್ದಿವೆ. ಇನ್ನೂ ಆಂಧ್ರದಿ0ದ ತುಮಕೂರಿಗೆ ಅಕ್ಕಿ ಮೂಟೆಗಳನ್ನು ತುಂಬಿಕೊ0ಡು ಬರುತ್ತಿದ್ದ ಟಾಟಾ ಏಸ್ ಒಂದು ಮಲಪನಹಳ್ಳಿ ಸೇತುವೆ ಬಳಿ ಬಂದು ಚಾಲಕನ ನಿಯಂತ್ರಣ ತಪ್ಪಿ, ನೋಡು ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋಗಿತ್ತು. ಚಾಲಕನ ಹುಡುಕಾಟವನ್ನು ಅಧಿಕಾರಿಗಳು ನಡೆಸುತ್ತಲೆ ಇದ್ದರೂ. ಮಲಪನಹಳ್ಳಿಯಿಂದ ಸುವರ್ಣಮುಖಿ ನದಿಯಲ್ಲಿನ 6 ಕಿ.ಮೀ ಅಂತರದಲ್ಲಿ ಚಾಲಕ ದೇಹ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಎಎಸ್‍ಐ ಮಂಜುನಾಥ್, ಎಎಸ್‍ಐ ಯೋಗೀಶ್, ಸಿಬ್ಬಂದಿ ಬಾಲನಾಯಕ್ ಭೇಟಿ ನೀಡಿ ಮೃತದೇಹವನ್ನು ನದಿಗೆ ಇಳಿದು ಹೊರತೆಗೆದಿದ್ದಾರೆ. ಇತಿಹಾಸದಲ್ಲಿ ಹಿಂದೆ0ದೂ ಕಂಡರಿಯದ ಮಳೆಯನ್ನು ಈ ಬಾರಿ ಕೊರಟಗೆರೆ ತಾಲ್ಲೂಕು ಸೇರಿದಂತೆ ಈಡೀ ಜಿಲ್ಲೆಯ ಜನರು ನೋಡುತ್ತಿದ್ದು, ಅಬ್ಬರದ ಮಳೆಯಿಂದಾಗಿ…
ತುಮಕೂರು : ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೂ ಹಾಗೂ ಸಂಪುಟ ಸಹೋದ್ಯೋಗಿಯೂ ಆಗಿದ್ದ ಉಮೇಶ್ ಕತ್ತಿ ಯವರ ಧಿಡೀರ್ ನಿಧನದ ಸುದ್ದಿ ತಿಳಿದು ದಿಗ್ಭ್ರಮೆಗೊಂಡಿದ್ದೇನೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ಕಂಬನಿ ಮಿಡಿದಿದ್ದಾರೆ. ಕರ್ನಾಟಕ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರುಗಳಲ್ಲಿ ಒಬ್ಬರಾಗಿದ್ದ, ಅತ್ಯಂತ ಅನುಭವಿ ಹಾಗೂ ಉತ್ಸಾಹಿ ರಾಜಕಾರಣಿಯಾಗಿ ಉತ್ತರ ಕರ್ನಾಟಕ ಭಾಗದ ಜನತೆಯ ಧ್ವನಿಯಾಗಿದ್ದ ಉಮೇಶ್ ಕತ್ತಿಯವರ ನಿಧನದಿಂದ ರಾಜ್ಯಕ್ಕೆ ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿವಂಗತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು. . ಕಳೆದ ಸಂಪುಟ ಸಭೆಯಲ್ಲಿ ಉಮೇಶ್ ಕತ್ತಿಯವರು ರಾಜರಾಗಿರಲಿಲ್ಲ. ಆಗ ಏಕೆ ಅಂತ ವಿಚಾರಿಸಿದ್ದೆ, ಒಳ್ಳೆಯ ಹಾಸ್ಯ ಪ್ರಜ್ಞೆ ಇದ್ದಂತಹ ಮನುಷ್ಯ. ಅವರು ಇದ್ದ ಬಳಿಗೆ…
ಗುಬ್ಬಿ : ಅಕಾಲಿಕ ಮಳೆಯಿಂದಾಗಿ ಇಡೀ ತುಮಕೂರು ಜಿಲ್ಲೆಯೇ ಅತಿವೃಷ್ಠಿಯಿಂದ ನೂರಾರು ಎಕರೆ ಭೂಮಿಯಲ್ಲಿ ಬೆಳೆದ ಬೆಳೆಗಳು ನಾಶವಾಗಿದ್ದು, ಗುಬ್ಬಿ ತಾಲ್ಲೂಕಿನ ಅಡಗೂರು ಗ್ರಾಮದ 100 ವರ್ಷಗಳ ಇತಿಹಾಸವುಳ್ಳ ಕೆರೆಯು ಒಡೆಯುವ ಹಂತಕ್ಕೆ ತಲುಪಿರುವುದು ದುರಂತವೇ ಸರಿ. ಅಡಗೂರು ಗ್ರಾಮಕ್ಕೆ ಶಿಥಿಲವಾದ ಕೆರೆಯನ್ನು ನೋಡಲು ಮಾನ್ಯ ನೀರಾವರಿ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರಲು ಇವರ ಬೇಜವಬ್ದಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಈ ಕೆರೆಯ ವಿಸ್ತೀರ್ಣ 44 ಹೆಕ್ಟೇರ್‍ಗಿಂತಲೂ ಹೆಚ್ಚಾಗಿದ್ದು ಈ ಕೆರೆಯನ್ನೇ ನಂಬಿ ಸುಮಾರು 36 ಹಳ್ಳಿಗಳ ರೈತಾಪಿ ವರ್ಗದವರು ಜೀವನ ನಡೆಸುತ್ತಿದ್ದು ಅಕಾಲಿಕ ಮಳೆಯಿಂದಾಗಿ ಸುಮಾರು ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ವಾಣಿಜ್ಯ ಬೆಳೆಗಳು ಹಾಳಾಗುವಂತಾಗಿದ್ದು ಸರ್ಕಾರದ ಜನಪ್ರತಿನಿಧಿಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದೇ ಹೇಮಾವತಿ ನಾಲಾ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಕೆರೆಕೋಡಿ ಮಧ್ಯೆ ಬಿರುಕು ಬಿಟ್ಟಿದ್ದು ಇದನ್ನು ಅಧಿಕಾರಿಗಳು ನೋಡಿದ್ದರೂ…
ತುಮಕೂರು: ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳ ವಾಪಸ್, ವಿದ್ಯುತ್ ಖಾಸಗಿ ಬಿಲ್ ಜಾರಿ ಮಾಡದಂತೆ ಒತ್ತಾಯಿಸಿ ಸೆಪ್ಟಂಬರ್ 12 ರಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರ ಸರಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ರೈತರ ವಿರೋಧದಿಂದ ವಾಪಸ್ ಪಡೆದರೆ, ರಾಜ್ಯ ಸರಕಾರ ಮಾತ್ರ,ಇಂದು,ನಾಳೆ ಎಂದು ಸಬೂಬು ಹೇಳುವ ಮೂಲಕ ದಿನಗಳನ್ನು ದೂಡುತ್ತಿದೆ. ಹಾಗಾಗಿ ಸೆಪ್ಟಂಬರ್ 12 ರಿಂದ ಆರಂಭವಾಗುವ ಅಧಿವೇಶನದಲ್ಲಿಯೇ ರೈತರಿಗೆ ಮಾರಕವಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ,ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಬೇಕೆಂದು ಆಗ್ರಹಿಸಿ, ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು. ಡಬಲ್ ಇಂಜಿನ್ ಸರಕಾರದಿಂದ ರಾಜ್ಯಕ್ಕೆ ಅನುಕೂಲ ಇಲ್ಲದಂತಾಗಿದೆ.ಆದರೆ ಬಿಜೆಪಿ ರಾಜಕೀಯವಾಗಿ ಹೆಚ್ಚು ಅನುಕೂಲ ಪಡೆದುಕೊಳ್ಳುತ್ತಿದೆ.ಕರ್ನಾಟಕವನ್ನು ತಮ್ಮ ಕಾರ್ಯಕ್ರಮಗಳ ಪ್ರಯೋಗಶಾಲೆಯಾಗಿ ಮಾಡಿಕೊಂಡು,ರಾಜ್ಯದ ರೈತರು, ಕಾರ್ಮಿಕರು,ಬಡವರು,ಕೃಷಿಕೂಲಿಕಾರರು ಪರದಾಡುವಂತಹ ಸ್ಥಿತಿ ನಿರ್ಮಾಣ ಮಾಡಿದೆ.ಸಾರ್ವಜನಿಕ ಉದ್ಯಿಮೆಗಳನ್ನು ಖಾಸಗೀ ಕರಣ ಮಾಡಿ,ಯುವಜನರು…
ತುಮಕೂರು: ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ತ್ರೀಯ ಏಳಿಗೆಯನ್ನು ನೋಡಬಹುದು. ಹೆಣ್ಣುಮಕ್ಕಳನ್ನು ಕೀಳು ಮನೋಭಾವನೆಯಿಂದ ಕಡೆಗಣಿಸಬೇಡಿ. ಯಾವ ಹೆಣ್ಣುಮಗಳು ತಂದೆ ತಾಯಿಗೆ ಭಾರವಲ್ಲ. ಅವಳು ಗಂಡನ ಮನೆಗೆ ಹೋಗುತ್ತಿದ್ದಾಳೆ ಎಂದರೆ ಅತ್ತೆ ಮಾವ ತುಂಬು ಹೃದಯದಿಂದ ತಮ್ಮ ಮಗಳೇ ಎಂದು ಬರಮಾಡಿಕೊಳ್ಳಬೇಕು. ನ್ಯಾಯಾಲಯಗಳಲ್ಲಿ ಇಂದು ವೈವಾಹಿಕ ಸಮಸ್ಯೆಗಳು ಹೆಚ್ಚುತ್ತಿದ್ದು ಪರಿಹಾರದ ಒಂದು ನಿಟ್ಟಿನಲ್ಲಿ ನಾನು ಇಂದು ಈ ಸಮಾವೇಶಕ್ಕೆ ಆಗಮಿಸಿದ್ದೇನೆ ಎಂದು ತುಮಕೂರಿನ ಕೆಪಿಟಿಸಿಎಲ್ ನೌಕರರ ಸಭಾ ಭವನದಲ್ಲಿ ಅಭ್ಯುದಯ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕುಂಚಿಟಿಗ ವಧು ವರರ ಸಮಾವೇಶದಲ್ಲಿ ಗೌರವಾನ್ವಿತ ಶ್ರೀ ನಟರಾಜು ರಂಗಸ್ವಾಮಿಯವರು ನ್ಯಾಯಾಧೀಶರು ಉಚ್ಚ ನ್ಯಾಯಾಲಯ, ಬೆಂಗಳೂರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವೈವಾಹಿಕ ಜೀವನವು ಹೊಂದಾಣಿಕೆಯಿಂದ ಕೂಡಿರಬೇಕು ಎಂದು ತಮ್ಮ ಜೀವನದ ಅನುಭವದ ಹಲವು ನಿದರ್ಶನಗಳ ಮೂಲಕ ಮಮತಾ, ಇನ್ಸ್‍ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಅಂಡ್ ಕಮಿಷನರ್ ಆಫ್ ಸ್ಟ್ಯಾಂಪ್ ಇವರು ತಿಳಿಸಿದರು. ವಿವಾಹವೆನ್ನುವುದು ಪವಿತ್ರ ಬಂಧನದ ಜೊತೆ ಬಾಂಧವ್ಯವನ್ನು ಬೆಸೆಯಬೇಕು ಎಂದು ಶ್ರೀಮತಿ…
ತುಮಕೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಭಾರತದ ಮೊದಲ ಸಿಎನ್‍ಜಿ-ಚಾಲಿತ ಮಧ್ಯಮ ಮತ್ತು ಭಾರೀ ವಾಣಿಜ್ಯ ಟ್ರಕ್ ಬಿಡುಗಡೆ ಮಾಡಿದೆ. ಹೊಸ-ಯುಗದ, ಅತ್ಯಾಧುನಿಕ ಚಾಲಕ ಸಹಾಯಕ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಚಾಲನಾ ಸೌಕರ್ಯವನ್ನು ಹೆಚ್ಚಿಸಲು ವಿಶ್ವ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಅದರ ಹೆಚ್ಚು ಮಾರಾಟವಾಗುವ ಪ್ರೈಮಾ, ಸಿಗ್ನಾ ಮತ್ತು ಅಲ್ಟ್ರಾ ಟ್ರಕ್‍ಗಳನ್ನು ಪುಷ್ಟೀಕರಿಸುತ್ತದೆ. ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯ ಕ್ಷೇತ್ರಗಳ ವಿಕಸನಗೊಳ್ಳುತ್ತಿರುವ ಬಹು-ಅಪ್ಲಿಕೇಶನ್ ಅಗತ್ಯಗಳನ್ನು ಪೂರೈಸಲು ಸುಧಾರಿತ ಮಧ್ಯಂತರ ಮತ್ತು ಲಘು ವಾಣಿಜ್ಯ ಟಿಪ್ಪರ್ಗಳು ಮತ್ತು ಟ್ರಕ್‍ಗಳ ಹೊಸ ಸರಣಿಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್‍ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಹೇಳಿದರು. ಅತ್ಯಾಧುನಿಕ ಟ್ರಕ್‍ಗಳು ಹೆಚ್ಚಿನ ಉತ್ಪಾದಕತೆಯನ್ನು ತಲುಪಿಸುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್ ಸ್ಥಾಪಿಸಿದ ‘ಪವರ್ ಆಫ್ 6’ಲಾಭದಾಯಕತೆಯ ಪ್ರತಿಪಾದನೆಯನ್ನು ಇನ್ನಷ್ಟು ಹೆಚ್ಚಿಸಿವೆ, ಮತ್ತು ಮಾಲೀಕತ್ವದ ಕಡಿಮೆ ವೆಚ್ಚ, ಡ್ರೈವಿಂಗ್ ಫ್ಲೀಟ್ ಲಾಭದಾಯಕತೆಯನ್ನು…
ವರದಿ ರವಿ ಚಿ ನಾ ಹಳ್ಳಿ ನಾವು ಬಾಲ್ಯದಿಂದಲೂ ಇಂತಹ ರಣ ಮಳೆಗಳನ್ನು ಹಲವಾರು ಬಾರಿ ಕಂಡಿದ್ದೇವೆ. ರಾತ್ರೋರಾತ್ರಿಯೇ ದೊಡ್ಡ ದೊಡ್ಡ ಕೆರೆಗಳೂ ಸಹ ಕೋಡಿ ಬಿದ್ದುವುದನ್ನು ಸಹ ನೋಡಿದ್ದೇವೆ. ಅಂದು ಇಂತಹ ಮಳೆಯು ಧರೆಗೆ ಬಿದ್ದು ಕೆರೆ ಕಟ್ಟೆಗಳು ತುಂಬಿದಾಗ ಊರ ಹಿರಿಯರು ತುಂಬಿದ ಕೆರೆಗಳಲ್ಲಿ ಗಂಗಮ್ಮ ಎಂದು ಪೂಜಿಸುತ್ತಿದ್ದರು. ಆಗೆಲ್ಲವೂ ಊರ ಹಿರಿಯರ ನೇತೃತ್ವದಲ್ಲಿಯೇ ಕೆರೆಕಟ್ಟೆಗಳ ಅಭಿವೃದ್ದಿ, ತೂಬುಗುಂಡಿಯ ಸುಸ್ಥಿರತೆ, ಕೋಡಿ ಜಾಗದಲ್ಲಿಯ ನೀರು ಹರಿದು ಹೋಗಲು ಉತ್ತಮವಾಗಿ ಯಾವುದೇ ಅಡೆತಡೆಯಾಗದಂತೆ, ಕೆರೆಗಳ ಅಂಗಳದಲ್ಲಿ ಯಾವುದೇ ಗಿಡ ಗಂಟೆಗಳು ಬೆಳೆಯದಂತೆ ನೀಟಾಗಿ ಇಟ್ಟುಕೊಳ್ಳುತ್ತಿದ್ದರು. ನಾಡಿನಾದ್ಯಂತ ಇದ್ದ ಬಹುತೇಕ ಕೆರೆಗಳನ್ನು ಆಯಾ ಕೆರೆಯ ನೀರಿನ ಫಲಾನುಭವಿಗಳೇ ನಿರ್ವಹಿಸುತ್ತಿದ್ದರು. ಜನರೇ ನೇಮಿಸಿಕೊಂಡ ನೀರುಗಂಟಿ ಎಲ್ಲರ ಗದ್ದೆಗಳಿಗೂ ಸಮಾನವಾಗಿ ನೀರು ಹಂಚುವ ಕೆಲ್ಸ ಮಾಡುತ್ತಿದ್ದರು. ರಾಜಕಾಲುವೆಗಳನ್ನು ಸುಸ್ಥಿರವಾಗಿ ಇಡುವುದು, ಏರಿಯ ಬಿರುಕುಗಳನ್ನು ಗಮನಿಸುವುದು, ಏರಿಯ ಮೇಲಿನ ಗಿಡ ಗಂಟೆ ಸವರುವುದು, ಕಾಲ ಕಾಲಕ್ಕೆ ತೂಬಿನ ನಿರ್ವಹಣೆ ಮಾಡುವುದು .. ಹೀಗೆ ಹಲವು ಕೆಲ್ಸಗಳನ್ನು…
ಕೊರಟಗೆರೆ: ಶಿಕ್ಷಣವು ಬೃಹತ್ ಕ್ರಾಂತಿಕಾರಕ ಶಕ್ತಿಯಾಗಿದ್ದು ಸಮಾಜವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಕೊರಟಗೆರೆ ತಾಲೂಕಿನಲ್ಲಿ ಇಂದಿನ ಶಿಕ್ಷಕ ದಿನಾಚರಣೆ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ಅವರು ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಕೃಷ್ಣನ್ ರವರ 135 ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತದಲ್ಲಿ ಶಿಕ್ಷಣವು ಸನಾತನ ಐತಿಹಾಸಿಕ ಸಂಸ್ಕøತಿಯ ಗುರು ಪರಂಪರೆಯಲ್ಲಿ ಗುರುಕುಲದಲ್ಲಿ ನೀಡಲಾಗುತ್ತಿತ್ತು, ಆ ಕಾಲದಲ್ಲಿ ಗುರುವಿಗೆ ದೇವರಿಗಿಂತಲೂ ಹೆಚ್ಚಿನ ಸ್ಥಾನವಿತ್ತು, ಬ್ರಿಟೀಷರ ಆಳ್ವಿಕೆಯಲ್ಲಿ ಶೇ.1.5 ರಷ್ಟು ಇದ್ದ ಶಿಕ್ಷಣವು ಸ್ವತಂತ್ರ್ಯ ಭಾರತದ ಆರಂಭದಲ್ಲಿ ಶೇ.12 ರಷ್ಟು ಇದ್ದು ದೇಶದಲ್ಲಿ ಇಂದು ಸಾಕ್ಷರತೆಯ ಶೇ.80 ರಷ್ಟು ಅಕ್ಷರಸ್ಥರಿದ್ದಾರೆ, ಇದು ದೇಶದ ಬಹುದೊಡ್ಡ ಶಿಕ್ಷಣ ಕ್ರಾಂತಿಯಾಗಿದ್ದು ಇದಕ್ಕೆ ಕಾರಣ ಶಿಕ್ಷಕರಾಗಿದ್ದಾರೆ, ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಕೃಷ್ಣನ್ ಶಿಕ್ಷಕರ ಪ್ರತಿ ಬಿಂಬವಾಗಿದ್ದು, ಶಿಕ್ಷಣ ಕ್ರಾಂತಿಯ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ…






