Author: News Desk Benkiyabale

ತುಮಕೂರು : ಎಐಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಲೆಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಸದ್ಭಾವನಾ ಸಭೆ ಮತ್ತು ಸರ್ವಧರ್ಮ ಪ್ರಾರ್ಥನೆಯನ್ನು ಹಮ್ಜಿಕೊಳ್ಳಲಾಗಿತ್ತು. ರಾಹುಲ್‍ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3570 ಕಿ.ಮಿ.ದೂರದ 12 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗುವ ಭಾರತ ಜೋಡೋ ಯಾತ್ರೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಹುತಾತ್ಮರಾದ ಶ್ರೀಪೆರಂಬೂರಿನಿಂದ ಆರಂಭಗೊಂಡಿದ್ದು,ಇದರ ಯಶಸ್ವಿಗಾಗಿ ಹಿಂದೂ ಧರ್ಮದ ಪರವಾಗಿ ಭದರಿನಾಥ ಧೀಕ್ಷಿತ್, ಇಸ್ಲಾಂ ಧರ್ಮದ ಪರವಾಗಿ ಮೌಲ್ವಿಗಳಾಆದ ನಯಾಜ್,ಕ್ರೈಸ್ತ ಧರ್ಮದ ಪರವಾಗಿ ಪಾಧರ್ ರಜನೀಶ್ ಪ್ರಕಾಶ್ ಅವರುಗಳು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್,ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಐತಿಹಾಸಿಕ ದಿನ. ಭವಿಷ್ಯದ ಪ್ರಧಾನಿ ಎಂದು ಬಿಂಬಿತವಾಗಿರುವ ರಾಹುಲ್‍ಗಾಂಧಿಯವರು ಈ ದೇಶದ ಜನರಿಗಾಗಿ, ಅವರ ಮೇಲಾಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳ ಖಂಡಿಸಿ,ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು…

Read More

ತುಮಕೂರು :     ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾವತಿಸುಧೀಶ್ವರ್ ಮೇಯೆರ್ ಗದ್ದುಗೆ ಏರಿದರೆ ಜೆಡಿಎಸ್ ಪಕ್ಷದ ವತಿಯಿಂದ ಟಿ.ಕೆ ನರಸಿಂಹ ಮೂರ್ತಿ ಉಪ ಮೇಯರ್ ಹುದ್ದೆಯನ್ನು ಅಲಂಕರಿಸಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ಪಕ್ಷವನ್ನು ವಿರೋಧ ಪಕ್ಷವನ್ನಾಗಿಯೆ ಉಳಿಸಿದ ತಂತ್ರಗಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದು. ಬಿಜೆಪಿ ಪಕ್ಷದ ಯಾವುದೇ ತಂತ್ರಗಳು, ರಣತಂತ್ರಗಳು, ಕುತಂತ್ರಗಳು, ನಡೆಯದಂತೆ ಮಾಡಿ ಹಾಲಿ ಬಿಜೆಪಿ ಪಕ್ಷದ ಶಾಸಕರು – ಸಂಸದರು ಸಚಿವರು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಮುಖಕ್ಕೆ ತಣ್ಣೀರು ಎರಚಿದ್ದೇವೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಕುರುಬ ಸಮುದಾಯಗಳ ವ್ಯಾಪಕ ವಿರೋಧಕ್ಕೆ ತುತ್ತಾಗಿದ್ದಾರೆ ಎಂದರೂ ತಪ್ಪಾಗಲಾರದು. ಕಾಂಗ್ರೆಸ್‍ಪಕ್ಷ ಮೇಯರ್ ಪಟ್ಟವನ್ನು ಜೆಡಿಎಸ್ ಉಪಮೇಯರ್ ಪಟ್ಟವನ್ನು ಹರಿದು ಹಂಚಿಕೊಂಡು ವಲ್ಲದ ಮನಸಿನಿಂದ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರು. ಈ ಎರಡು ಪಕ್ಷಗಳ ಆಲಿಂಗನದ ಅಪ್ಪುಗೆ ಬಿಜೆಪಿ ವಿರೋದಿ ಮನಸ್ಥಿಗಳಿಗೆ ಸರಿ ಎನಿಸಿದೆ ಯಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಗೆ ಆಂತರಿಕವಾಗಿ…

Read More

ತುಮಕೂರು : ಮಹಿಳೆ ಕೌಶಲ್ಯಗಳನ್ನು ಕಲಿಯುವ ಮೂಲಕ ಸ್ವಾವಲಂಬಿ ಉದ್ಯೋಗಗಗಳನ್ನು ನಿರ್ವಹಿಸಿ, ಆರ್ಥಿಕ ಸಬಲತೆ ಸಾಧಿಸುವುದರ ಜೊತೆಗೆ ಕುಟುಂಬದ ನಿರ್ವಹಣೆಯಲ್ಲೂ ತನ್ನ ಸಮರ್ಥತೆಯನ್ನು ತೋರಿಸುವುದು ಇಂದಿನ ಅಗತ್ಯವಾಗಿದೆ ಎಂದು ಶ್ರೀ ಸಿದ್ಧಾರ್ಥ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಮತ್ತು ಪ್ರಾಧ್ಯಾಪಕರು ಡಾ.ಎಲ್. ಸಂಜೀವ್‍ಕುಮಾರ್ ಅಭಿಪ್ರಾಯಪಟ್ಟರು. ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಕಂಪ್ಯೂಟರ್, ಹೊಲಿಗೆ ಮತ್ತು ವಸ್ತ್ರವಿನ್ಯಾಸ ತರಬೇತಿ ಶಿಬಿರಾರ್ಥಿಗಳ ಸಮಾರೋಪ ಸಮಾರಂ¨ಭದಲ್ಲಿ ಮಾತನಾಡಿದ ಅವರು, ಮಹಿಳೆ ಇಂದು ಸ್ವತಂತ್ರವಾಗಿ ತನ್ನ ಕಾಲ ಮೇಲೆ ತಾನೆ ನಿಂತು ಮನೆಯನ್ನು ನಿರ್ವಹಿಸುವುದನ್ನು ಕಲಿತಿದ್ದಾಳೆ. ಜೀವನ ನಿರ್ವಹಣೆಗಾಗಿ ವಿವಿಧ ರೀತಿಯ ಕೌಶಲ್ಯ ಕಲಿಕೆಯನ್ನು ಕಲಿತು ಅದನ್ನು ಮುಂದುವರಿಸಿಕೊಂಡು ಸ್ವಯಂ ಉದ್ಯೋಗ ಮಾಡಿಕೊಂಡರೆ ಭವಿಷ್ಯದ ಜೀವನ ಸುಗಮವಾಗಿರುತ್ತದೆ ಎಂದರೆ. ತರಬೇತಿಯಲ್ಲಿ ಪಡೆದಿರುವ ಕೌಶಲ್ಯಗಳನ್ನು ಸರಿಯಾಗಿ ಉಪಯೋಗಿಸಿದರೆ ಆದಾಯವನ್ನು ಗಳಿಸಬಹುದು ಮತ್ತು ಉದ್ಯೋಗಗಳನ್ನು ಸೃಷ್ಟಿಸಬಹುದು. ಆ ಮೂಲಕ ತಾವು ಬೆಳೆದು ಬೆಳೆಯಿರಿ ತಮ್ಮ ಜೊತೆಗಿರುವವರನ್ನು ಬೆಳೆಸಬಹುದು ಎಂದು ಮಹಿಳಾ ಶಿಬಿರಾರ್ಥಿಗಳಿಗೆ ಸಂಜೀವ್‍ಕುಮಾರ್ ಕಿವಿಮಾತು ಹೇಳಿದರು. ಮುಖ್ಯ…

Read More

ತುರುವೇಕೆರೆ : ಹಿಂದೂ ದೇವಾಲಯಗಳ ಸಮುಚ್ಚಯದ ಆವರಣದಲ್ಲಿ ಕೆಲ ಮುಸ್ಲಿಂ ಯುವಕರು ದರ್ಗಾ ನಿರ್ಮಿಸಲು ಮುಂದಾದಾಗ ಗ್ರಾಮಸ್ಥರು ವಿರೊಧಿಸುವ ಮೂಲಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ತುರುವೇಕೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ತಾವರೆಕೆರೆ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಚೌಡೇಶ್ವರಿದೇವಿ, ಚಿಕ್ಕಮ್ಮದೇವಿ, ಆಂಜನೇಯಸ್ವಾಮಿ, ತುಳಸಮ್ಮ ದೇವಿಯ ಹಿಂದೂ ದೇವಾಲಯಗಳಿದ್ದು, ದೇವಾಲಯ ಆವರಣದಲ್ಲಿನ ಖಾಲಿ ಜಾಗದಲ್ಲಿ ರಾತ್ರೊ ರಾತ್ರಿ ದರ್ಗಾ ನಿರ್ಮಿಸಲು ಮಸ್ಲಿಂ ಯುವಕರು ಮುಂದಾದಾಗ ಇದನ್ನು ಕಂಡ ಗ್ರಾಮಸ್ಥರು ಯಾವದೇ ಕಾರಣಕ್ಕೂ ದೇವಗಳ ಜಾಗದಲ್ಲಿ ದರ್ಗಾ ನಿರ್ಮಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಇದನ್ನು ವಿರೋಧಿಸಿದ ಮುಸ್ಲಿಂ ಯುವಕರು ನಾವು ದರ್ಗಾ ನಿರ್ಮಿಸಿಯೇ ತೀರುತ್ತೇವೆಂದು ಮುಂದಾದಾಗ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಗ್ರಾಮದ ಮುಖಂಡ ಬೋರೆಗೌಡ ಮಾತನಾಡಿ ಬಹುಸಂಖ್ಯಾತ ಹಿಂದುಗಳ ಮೇಲೇಯೇ ದಬ್ಬಾಳಿಕೆಯ ಪ್ರವೃತ್ತಿ ಮುಂದುವರೆಸುತ್ತಿರುವ ಮುಸ್ಲಿಂ ಯುವಕರ ದೌರ್ಜನ್ಯ ಖಂಡನೀಯ ಪುರಾತನ ಕಾಲದಿಂದಲೂ ಇಲ್ಲಿನ ಹಿಂದೂ ದೇವಾಲಯಗಳಿವೆ ಹಾಗೂ ವರ್ಷಕ್ಕೊಮ್ಮೆ ಅದ್ದೂರಿ ಜಾತ್ರ ಮಹೋತ್ಸವವನ್ನು ಸುತ್ತಲಿನ ಹತ್ತು ಹಳ್ಳಿ ಗ್ರಾಮಸ್ಥರು ಎಲ್ಲರೂ ಸೇರಿ ಮಾಡುತ್ತೇವೆ…

Read More

ತುಮಕೂರು : ಶ್ರೀದೇವಿ ಫಿಸಿಯೋಥೆರಪಿ ಕಾಲೇಜಿನ ವತಿಯಿಂದ ವಿಶ್ವ ಭೌತಚಿಕಿತ್ಸಾ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ಅದರ ಅಂಗವಾಗಿ ಜನಸಾಮಾನ್ಯ ಭೌತಚಿಕಿತ್ಸಾ ಪದ್ದತಿಯಲ್ಲಿರುವ ವಿವಿಧ ಚಿಕಿತ್ಸಾ ವಿಧಾನಗಳ ಬಗ್ಗೆ ಅರಿವುವನ್ನು ಮೂಡಿಸಲು ನಮ್ಮ ಶಿಕ್ಷಣ ಸಂಸ್ಥೆಯಿಂದ ಜಾಥಾವನ್ನು ಏರ್ಪಡಿಸಲಾಗಿದೆ. ಭೌತಚಿಕಿತ್ಸಾ ಪದ್ದತಿಯಲ್ಲಿ ವಿವಿಧ ವಿಭಾಗಗಳಿದ್ದು ಮುಖ್ಯವಾಗಿ ನರರೋಗಗಳಿಗೆ ಸಂಬಂಧಪಟ್ಟ ಭೌತಚಿಕಿತ್ಸಾ ವಿಧಾನ, ಕೀಲು ಮತ್ತು ಮೂಳೆ ರೋಗಗಳಿಗೆ ಸಂಬಂಧಪಟ್ಟ ವಿಧಾನ ಮತ್ತು ಶ್ವಾಸಕೋಶ ಹಾಗೂ ಹೃದಯರೋಗ ಸಂಬಂಧಪಟ್ಟ ಚಿಕಿತ್ಸೆಗಳು ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಹಾಗೂ ವೃದ್ದರ ಆರೋಗ್ಯ, ಔದ್ಯೋಗಿಕ ಆರೋಗ್ಯ, ಮಹಿಳೆಯರ ಆರೋಗ್ಯ, ಗರ್ಭೀಣಿ ಮತ್ತು ಬಾಣಂತಿಯರ ಆರೈಕೆ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಸಂಬಂಧಪಟ್ಟ ಕಾಯಿಲೆಗಳಿಗೆ ವಿವಿಧ ಭೌತಚಿಕಿತ್ಸಾ ಪದ್ದತಿಗಳನ್ನು ವಿಶೇಷ ಸಮಲೋಚನೆಯ ಮೂಲಕ ನೀಡಲಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ಫಿಸಿಯೋಥೆರಪಿ ಪದವಿ ಶಿಕ್ಷಣ (ಬಿ.ಪಿ.ಟಿ.)ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ (ಎಂ.ಪಿ.ಟಿ.) ನಮ್ಮ ಕಾಲೇಜಿನಲ್ಲಿ ವ್ಯಾಸಂಗಕ್ಕಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಅಂಗೀಕೃತ ಅನುಮತಿ ದೊರಕಿರುತ್ತದೆ ಎಂದು ಶ್ರೀದೇವಿ…

Read More

ತುಮಕೂರು : ನಗರದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಸಹಕರಿಸಿದ ಪಾಲಿಕೆ ಸದಸ್ಯರು, ಅಧಿಕಾರಿ ವರ್ಗ, ನಾಗರಿಕರಿಗೆ ಪಾಲಿಕೆಯ ಮೇಯರ್ ಬಿ.ಜಿ.ಕೃಷ್ಣಪ್ಪ ಅವರು ಕೃತಜ್ಞತೆ ಸಲ್ಲಿಸಿದರು. ತಮ್ಮ ಒಂದೂವರೆ ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಲೋಪದೋಷಗಳು ಬರದಂತೆ ನಗರದಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆ, ಬೀದಿದೀಪ ವ್ಯವಸ್ಥೆ, ಮತ್ತಿತರ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ನಗರದ ಚಿತ್ರಣವನ್ನು ಬದಲಿಸಲಾಗಿದೆ ಎಂದರು. ತಮ್ಮ ಅಧಿಕಾರಾವಧಿಯಲ್ಲಿ ನಗರದ ಸೌಂದರ್ಯೀಕರಣಕ್ಕೆ ಆದ್ಯತೆಯನ್ನು ನೀಡಲಾಗಿದೆ ಎಂದರಲ್ಲದೇ ಜೆ.ಸಿ ರಸ್ತೆ, ಬೆಳಗುಂಬ, ಸಾಬರಪಾಳ್ಯ ರಸ್ತೆಗಳ ಅಗಲೀಕರಣದ ಜೊತೆಗೆ ಮೇಳೆಕೊಟೆ, ಚಾಮುಂಡೇಶ್ವರಿ ದೇವಿ ರಸ್ತೆಯನ್ನು 40 ಅಡಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗಿದೆ ಎಂದರು. ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್‍ಇಡಿ ದೀಪಗಳನ್ನು ಅಳವಡಿಸುವುದರ ಮೂಲಕ ತುಮಕೂರು ಪಾಲಿಕೆ ಮೊದಲನೇ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದಲ್ಲಿ “ಸಿಲ್ವರ್ ಮೆಡಲ್” ಪ್ರಶಸ್ತಿ ಪಡೆದಿದೆ. ಸ್ವಚ್ಛ ಸರ್ವೇಕ್ಷಣೆಯಲ್ಲಿ ದೇಶದಲ್ಲಿಯೇ 27ನೇ ಸ್ಥಾನ ಗಳಿಸುವುದರೊಂದಿಗೆ ತುಮಕೂರು ದೇಶದ…

Read More

ಕೊರಟಗೆರೆ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಲೆಚಂದ್ರು ರವರು ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ ಪರಮೇಶ್ವರ್ ಅವರ ಸೇವೆಗಳು ಅಪಾರ. ಅವರು ಡಿಸಿಎಂ ಆಗಿದ್ದಾಗಿನಿಂದಲೂ ಇಲ್ಲಿಯವರೆಗೂ ಕೂಡ ಕ್ಷೇತ್ರದ ಜನತೆ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಅನೇಕ ಅನುದಾನಗಳನ್ನು ತಂದು ಕ್ಷೇತ್ರದ ಅಭಿವೃದ್ಧಿ ಪಡಿಸಿದ್ದಾರೆ. ಅಂತಹ ವ್ಯಕ್ತಿಯನ್ನು ನಾವು ಮತ್ತೊಮ್ಮೆ ಕೈಹಿಡಿಯಬೇಕಾದ್ದು ನಮ್ಮ ಕರ್ತವ್ಯ. ಅವರಿಗೆ ಯಾವುದೇ ಜಾತಿ ಭೇದವಿಲ್ಲ. ಎಲ್ಲಾ ಜನಾಂಗದವರು ನಮ್ಮವರೇ ಎಂದು ಕ್ಷೇತ್ರದ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ ಎಂದು ವಾಲೆಚಂದ್ರು ತಿಳಿಸಿದರು. ಡಾ.ಜಿ ಪರಮೇಶ್ವರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವುದು ಕೊರಟಗೆರೆ ಕ್ಷೇತ್ರದ ಎಲ್ಲಾ ಜನಾಂಗದ ಜನರ ಆಶಯ. ಅದರಂತೆ ಅವರು ಗೆಲ್ಲುವುದು ನಿಶ್ಚಯ. ಸಿಎಂ ಪಟ್ಟಕ್ಕೆ ಏರುತ್ತಾರೋ ಇಲ್ಲವೋ.. ಅದು ದೇವರಿಗೆ ಬಿಟ್ಟಿದ್ದು. ಸಚಿವರಂತೂ ಆಗೋದು ನಿಶ್ಚಯ. ಇದು ಕೊರಟಗೆರೆ ಕ್ಷೇತ್ರದ ಜನತೆಯ ಆಶಯ. ನಾನು ಕ್ಷೇತ್ರದ ಪ್ರತಿ ಗ್ರಾಮಕ್ಕೂ ಪ್ರತಿ ಮನೆಗೂ ಭೇಟಿ ನೀಡಿದ್ದೇನೆ. ಎಲ್ಲರ ಮನೆಯಲ್ಲಿ ಪ್ರತಿಯೊಬ್ಬರ ಬಾಯಲ್ಲಿ ಬರುವುದು ಡಾ.ಜಿ…

Read More

ತುಮಕೂರು :  ನಾಡಪ್ರಭು ಕೆಂಪೇಗೌಡರ 512ನೇ ಜನ್ಮ ಜಯಂತಿ,12ನೇ ವರ್ಷದ ಪ್ರತಿಭಾಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸೆಪ್ಟಂಬರ್ 10ಶನಿವಾರ ಕುಂಚಟಿಗ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಕೆಂಪೇಗೌಡ ಜಯಂತೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದ್ದಾರೆ. ನಗರದ ಕುಂಚಿಟಿಗ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆ ಸಂಬಂಧ ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕರಾದ ಹನುಮಂತರಾಯಪ್ಪ ಹಾಗೂ ಲೋಕೇಶ್ ಡಿ.ನಾಗರಾಜಯ್ಯ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ(ರಿ), ತುಮಕೂರು ಜಿಲ್ಲೆಯ ಸಮಸ್ತ ಒಕ್ಕಲಿಗ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು. ನಾಡಪ್ರಭು ಕೆಂಪೇಗೌಡ ಅವರ 512ನೇ ಜಯಂತೋತ್ಸವದ ಅಂಗವಾಗಿ ನಗರದ ಬಿ.ಜಿ.ಎಸ್ ವೃತ್ತ(ಟೌನ್‍ಹಾಲ್)ದಿಂದ ಎಂ.ಜಿ.ರಸ್ತೆ, ಹೊರಪೇಟೆ ರಸ್ತೆಯ ಮೂಲಕ ಕುಂಚಟಿಗ ಭವನಕ್ಕೆ ಕೆಂಪೇಗೌಡ ಮೂರ್ತಿಯನ್ನು ಬೆಳ್ಳಿಯ ರಥದಲ್ಲಿ, 10ಕ್ಕೂ ಹೆಚ್ಚು ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಮೆರವಣಿಗೆಯಲ್ಲಿ…

Read More

ತುಮಕೂರು : ನಗರದ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಕಾನೂನು ಕಾಲೇಜು ಮತ್ತು ಕಾನೂನು ವಿದ್ಯಾರ್ಥಿಗಳ ಸಹಯೋಗದಲ್ಲಿ ಸೋಮವಾರ ಭಾರತರತ್ನ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಮತ್ತು ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಿಗೆ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ. ಮರಿಚನ್ನಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಡಾ|| ರಾಧಾಕೃಷ್ಣನ್ ಅವರು ಭಾರತದ ಅತ್ಯುನ್ನತ ಪ್ರಶಸ್ತಿ ಭಾರತರತ್ನ ಪುರಸ್ಕøತರಾಗಿ, ಮೊದಲ ಉಪರಾಷ್ಟ್ರಪತಿ, ಎರಡನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಶಿಕ್ಷಕ ವೃತ್ತಿ ಅತ್ಯಂತ ಪ್ರಿಯವಾಗಿತ್ತು ಎಂದು ಸ್ಮರಿಸಿದರು. ಇಡೀ ಶಿಕ್ಷಕ ಸಮುದಾಯಕ್ಕೆ ಅವರು ಆದರ್ಶಪ್ರಾಯರಾಗಿದ್ದರು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳುವ ಮೂಲಕ ಶಿಕ್ಷಕ ವೃತ್ತಿ ಬದುಕನ್ನು ಗೌರವಿಸಬೇಕು. ವಿದ್ಯಾರ್ಥಿಗಳು ಭೋಧನ ವೃತ್ತಿಯಲ್ಲಿರುವ ಎಲ್ಲಾ ಶಿಕ್ಷಕರಿಗೆ ಪ್ರೀತಿ ಪಾತ್ರರಾಗುವುದರ ಮೂಲಕ ಗುರುಗಳನ್ನು ಗೌರವಿಸಬೇಕು. ವಿದ್ಯಾರ್ಥಿಗಳ ಗುರಿ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ಗುರುಗಳ ಮಹತ್ವವನ್ನು ತಿಳಿಸಿದರು. ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ವಿನೆಟ್ ವಿಮಲ ಅವರು…

Read More

ತುಮಕೂರು : 2022-23ನೇ ಮುಂಗಾರು ಹಂಗಾಮಿನಲ್ಲಿ ಬೆಳೆದ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು, ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು, ಈ ಆಪ್ ಬಳಸಿಕೊಂಡು ರೈತರು ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಛಾಯಾಚಿತ್ರ ಮತ್ತು ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ. ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್‍ನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ತಮ್ಮ ಜಮೀನುಗಳ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನಲ್ಲಿ ಕೂಡಲೇ ಅಪ್‍ಲೋಡ್ ಮಾಡಲು ಕೋರಿದೆ. ಬೆಳೆ ಸಮೀಕ್ಷೆ ಅಪ್‍ಲೋಡ್ ವಿವರವನ್ನು ಬೆಳೆ ವಿಸ್ತೀರ್ಣ, ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಸಾಲ, ಬೆಂಬಲ ಬೆಲೆ ಖರೀದಿ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಉಪಯೋಗಿಸಲಾಗುವುದು. ರೈತರು ಬೆಳೆ ವಿವರಗಳನ್ನು ತಾವೇ ಸ್ವತಃ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ…

Read More