ಕೊರಟಗೆರೆ : ಗುಡಿಸಲು ಮುಕ್ತ ಕೊರಟಗೆರೆ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಪ್ರಮುಖಗುರಿ.. ಕೊರಟಗೆರೆಯ 24ಗ್ರಾಪಂ ವ್ಯಾಪ್ತಿಯ 3669 ಜನರಿಗೆ ಮನೆಗಳ ಮಂಜೂರಾತ್ರಿ ಆದೇಶ ಪತ್ರ ನೀಡಿದ್ದೇನೆ. 10 ವಿವಿಧ ಸರಕಾರಿ ಇಲಾಖೆ ಯಿಂದ 5186ಜನ ಗ್ರಾಮೀಣ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ವಿತರಣೆ ಮಾಡಿದ್ದೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು. ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊರಟಗೆರೆ ಆಡಳಿತ, ತಾಪಂ, 24ಗ್ರಾಪಂ ಮತ್ತು ಪಂಚಾಯತ್‍ರಾಜ್ ಇಲಾಖೆ ಯಿಂದ ಶನಿವಾರ ಏರ್ಪಡಿಸ ಲಾಗಿದ್ದ ವಸತಿ ಯೋಜನೆಯ ಮನೆ ಮಂಜೂರಾತಿ ಪತ್ರ, ಸ್ತ್ರೀಶಕ್ತಿ ಸಂಘಗಳಿಗೆ ಸಿಐಎಫ್ ಸಾಲದಚೆಕ್ ಮತ್ತು ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೊರಟಗೆರೆಯ ಬಡಜನರಿಗೆ ದೇವರಾಜುಅರಸು ಯೋಜನೆಯಡಿ 770 ಮನೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್‍ಯೋಜನೆಯಡಿ 722ಮನೆ, ಬಸವ ವಸತಿ ಯೋಜನೆಯಡಿ 2177ಮನೆ ಸೇರಿ ಒಟ್ಟು ಕೊರಟಗೆರೆಗೆ 3669 ಮನೆಗಳು ಮಂಜೂರಾಗಿವೆ. ತೋಟಗಾರಿಕೆ-35, ಕಂದಾಯ ಇಲಾಖೆ-600, ಮೀನುಗಾರಿಕೆ-9, ರೇಷ್ಮೆ-12, ಅರಣ್ಯ ಇಲಾಖೆ-4, ಪಶು ಇಲಾಖೆ-46, ಮಹಿಳಾ ಮತ್ತು ಮಕ್ಕಳ ಕಲ್ಯಾಣ…
Author: News Desk Benkiyabale
ತುಮಕೂರು : ಸೆಪ್ಟಂಬರ್ 2 2018 ರಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕರ್ಯರ್ತನಾಗಿ ಕೆಲಸ ಮಾಡಿಕೊಂಡಿದ್ದು ಕ್ಷೇತ್ರದ ಜನರ ವಿಶ್ವಾಸ ಗಳಿಸಿದ ಕಾರಣಕ್ಕಾಗಿ ಈ ಬಾರಿ ಪಕ್ಷ ನನಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವ ಹಂಬಲದಿಂದ ಪ್ರಬಲ ಆಕಾಂಕ್ಷಿ ಯಾಗಿದ್ದೇನೆ ಎಂದು ತುಮಕೂರು ನಗರದ ಸರ್ಯ ಆಸ್ಪತ್ರೆಯ ಮುಖ್ಯಸ್ಥ ಡಾ ಲಕ್ಷ್ಮಿಕಾಂತ್ ಅವರು ತಿಳಿಸಿದರು. ನಗರದ ವಿನೋಬನಗರ ದಲ್ಲಿರುವ ಸರ್ಯ ಆಸ್ಪತ್ರೆಯಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕರ್ಯರ್ತರು ಹಾಗೂ ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸಿ ಕರ್ಯರ್ತರ ಕುಶಲೋಪರಿ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕರ್ಯರ್ತನಾಗಿ ಹಲವು ರ್ಷಗಳಿಂದ ಬಿಜೆಪಿ ಪಕ್ಷಕ್ಕೆ ದುಡಿದಿದ್ದು ಈ ಬಾರಿ ಪಕ್ಷ ನನಗೆ ಮನ್ನಣೆ ನೀಡಿ ಆಕಾಂಕ್ಷಿ ಸ್ಥಾನಕ್ಕೆ ಟಿಕೆಟ್ ನೀಡಿದರೆ ಈ ಬಾರಿ ಕ್ಷೇತ್ರದಲ್ಲಿ ಸ್ರ್ಧಿಸಿ ಗೆದ್ದು ಸಮಾಜಸೇವೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ನಾನು ವೃತ್ತಿಯಲ್ಲಿ ವೈದ್ಯನಾಗಿದ್ದು ವೈದ್ಯ ಸೇವೆಯ ಜೊತೆಗೆ ಸಮಾಜ ಸೇವೆ…
ತುರುವೇಕೆರೆ: ತಾಲೂಕಿನ ಮಾಯಸಂದ್ರ- ಟಿ.ಬಿ. ಕ್ರಾಸ್ ನಲ್ಲಿರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಎಸ್.ಬಿ.ಜಿ ವಿದ್ಯಾ ಶಾಲೆಯ 7ನೇ ತರಗತಿ ವಿದ್ಯಾರ್ಥಿ ನಿಹಾಲ್ ಎಂ, ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದು ಶಾಲೆಗೆ ಮತ್ತು ಪೆÇೀಷಕರಿಗೆ ಕೀರ್ತಿ ತಂದಿದ್ದಾನೆ. ತಾಲೂಕಿನ ಟಿ.ಬಿ.ಕ್ರಾಸ್ ನವಾಸಿ ಡಾ.ಮಂಜುನಾಥ್ ಆರಾಧ್ಯ, ಮಹಾಲಕ್ಷ್ಮಿ ದಂಪತಿಗಳ ಪುತ್ರ ನಿಹಾಲ್ ಎಂ,ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ಓಪನ್ ಮೂರನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ 2022 ರಲ್ಲಿ ಅಶೋಕ್ ಮಾರ್ಟಿಯಲ್ ಆಟ್ರ್ಸ್ ಅಕಾಡೆಮಿ (ರಿ) ತುರುವೇಕೆರೆ ಬ್ರಾಂಚ್, ಕರಾಟೆ ಮಾಸ್ಟರ್ ಆನಂದ್ ಕುಮಾರ್ ನೇತೃತ್ವದಲ್ಲಿ ಭಾಗವಹಿಸಿದ್ದ ನಿಹಾಲ್ ಎಂ, ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾನೆ. ಪಂದ್ಯಾವಳಿಯಲ್ಲಿ ಹೊರದೇಶದಿಂದ ಸಾಕಷ್ಟು ಸ್ಪರ್ದಿಗಳು ಭಾಗವಹಿಸಿ ಸ್ಪರ್ಧಿಸಿದ್ದರು, ಪೈಪೆÇೀಟಿ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿರುವ ನಿಹಾಲ್ ಉತ್ತಮ ಸಾಧನೆ ಮಾಡಿದಿರುವುದಾಗಿ ಅಭಿನಂದಿಸಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಪ್ರಸನ್ನನಾಥ ಸ್ವಾಮೀಜಿ ಅವರು…
ತುಮಕೂರು: ನಗರದ ಬನಶಂಕರಿಯಲ್ಲಿ ಹಿಂದೂ-ಮುಸ್ಲೀಮರು ಗಣೇಶೋತ್ಸವವನ್ನು ಆಚರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಬಹಳ ಹಿಂದಿನಿಂದಲೂ ಇಲ್ಲಿ ಹಿಂದೂ-ಮುಸ್ಲೀಮರು ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು ಶಾಂತಿ ಸೌಹಾರ್ದತೆಗೆ ನಾಂದಿ ಹಾಡಿದ್ದಾರೆ. ಸಮಾಜ ಸೇವಕ ನಜರಾಬಾದ್ ನ ಶಬ್ಬೀರ್ ಮತ್ತು ಅವರ ಸ್ನೇಹಿತರು ಪ್ರತಿ ವರ್ಷವೂ ಬನಶಂಕರಿಯಲ್ಲಿಡುವ ಗಣೇಶೋತ್ಸವದಲ್ಲಿ ಪಾಲ್ಗೊಂಡು ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ತಿಕ್ ಇಲ್ಲಿ ಗಣೇಶ ಹಬ್ಬ ಆಚರಣೆಯನ್ನು ಹಿಂದು-ಮುಸ್ಲಿಮರು ಆಚರಿಸುತ್ತಿದ್ದೇವೆ. ಹಿಂದಿನಿಂದಲೂ ನಾವು ಇದನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ. ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ಮುಂದಿನ ದಿನಗಳಲ್ಲಿಯೂ ಹೀಗೆಯೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶಬ್ಬೀರ್ ಅವರು ಹಿರಿಯರು ನಮ್ಮಂತಹ ಯುವಕರ ಜೊತೆ ಸ್ನೇಹದಿಂದ ಇದ್ದಾರೆ ಎಂದರು. ಮುಖಂಡ ಶಬ್ಬೀರ್ ಅವರು ಮಾತನಾಡಿ, ಕೊರೊನ ಕಾರಣದಿಂದ 2 ವರ್ಷದಿಂದ ಗಣೇಶ ಹಬ್ಬವನ್ನು ಆಚರಿಸಿರಲಿಲ್ಲ. ಈಗ ಆಚರಿಸಲಾಗುತ್ತಿದೆ. ಹಿಂದೂ ?ಮುಸ್ಲೀಮರು ಒಗ್ಗಟ್ಟಾಗಿ ಗಣೇಶೋತ್ಸವನ್ನು ಆಚರಿಸುತ್ತಿದ್ದೇವೆ. ಇದು ಸೌಹಾರ್ದತೆಯ ಸಂಕೇತವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಬಾರಕ್ ಪಾಷಾ, ವಳಿಬ, ಸೂರಿ, ಮಂಜು,…
ತುಮಕೂರು: ಡಬಲ್ ಎಂಜಿನ್ ಸರ್ಕಾರ ಜನರ ಭಾವನೆ ಕೆರಳಿಸಿ, ರಾಜಕೀಯ ಲಾಭ ಪಡೆದುಕೊಳ್ಳಲು ಹೊರಟಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಇಲ್ಲಿ ಶನಿವಾರ ಆರೋಪಿಸಿದರು. ಸ್ವಾತಂತ್ರ್ಯದ ನಂತರ ದೇಶದಲ್ಲಿ ಹಲವಾರು ಕಂಪನಿಗಳ ಕಾರ್ಯಾರಂಭಕ್ಕೆ ಕಾಂಗ್ರೆಸ್ ಸಹಕಾರ ನೀಡಿತ್ತು. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಐಐಟಿ ಸಂಸ್ಥೆಗಳ ವರೆಗೆ ಬೆಳವಣಿಗೆಯಾಗಿವೆ. ಇವೆಲ್ಲ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿದ್ದೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಆಹಾರ ಉತ್ಪಾದನೆ, ಆರೋಗ್ಯ ಇಲಾಖೆಯಲ್ಲಿ ಬೆಳವಣಿಗೆ, ಕಾರ್ಖಾನೆಗಳ ಸ್ಥಾಪನೆ, ರೈಲ್ವೆ, ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸ ಮಾಡಲಾಗಿದೆ. ದೇಶದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳಿದ್ದು, ಅದರಲ್ಲಿ 1900ಕ್ಕೂ ಹೆಚ್ಚು ಅಣೆಕಟ್ಟುಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಿರ್ಮಾಣವಾಗಿವೆ. ಇದೆಲ್ಲ ನರೇಂದ್ರ ಮೋದಿ ಕಾಲದಲ್ಲಿ ಆಗಿದ್ದೇ? ಎಂದು ಕುಟುಕಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉದ್ಯೋಗ ಸೃಷ್ಟಿಯ ಭರವಸೆ ಹುಸಿಯಾಯಿತು. ಸರ್ಕಾರಗಳ ತಪ್ಪು ನಿರ್ಣಯಗಳಿಂದ ಹಲವರು ಉದ್ಯೋಗ ಕಳೆದುಕೊಂಡರು. ನೋಟು ರದ್ದತಿ, ಕೋವಿಡ್…
ತುರುವೇಕೆರೆ: ಪಟ್ಟಣದ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ವತಿಯಿಂದ ಸೆ 4 ರ ಭಾನುವಾರ ರಂದು ಐದನೇ ವರ್ಷದ ಗಣಿತ, ವಿಜ್ಞಾನ ಕಮ್ಮಟವನ್ನು ಏರ್ಪಡಿಲಾಗಿದೆ ಎಂದು ಸಂಸ್ಥೆಯ ಚೈತನ್ಯ ತಿಳಿಸಿದ್ದಾರೆ. ಪಟ್ಟಣದ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಗರ ಪ್ರದೇಶದ ಮಕ್ಕಳಿಗೆ ವಿವಿಧ ಸಂಘ ಸಂಸ್ಥೆಗಳು ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಹತ್ತು ಹಲವಾರು ತರಬೇತಿ ಶಿಬಿರಗಳನ್ನು ಆಯೋಜಿಸುತ್ತವೆ. ಆದರೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಕುರಿತು ಯಾವುದೇ ತರಬೇತಿಗಳು ಲಭ್ಯವಿರುವುದಿಲ್ಲ. ಅದನ್ನು ಮನಗಂಡ ತಮ್ಮ ಚಿದಂಬರೇಶ್ವರ ಉಚಿತ ಗ್ರಂಥಾಲಯದ ವತಿಯಿಂದ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು 5 ನೇ ವರ್ಷದ ಕಾರ್ಯಕ್ರಮವಾಗಿದ್ದು ಸೆ 4 ಭಾನುವಾರ ಗಣಿತ ಮತ್ತು ವಿಜ್ಞಾನ ಕಮ್ಮಟವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು. ಸೆ 04 ರ ಭಾನುವಾರ ಬೆಳಗ್ಗೆ 9.45 ರಿಂದ ಸಾಯಂಕಾಲ 4.30 ರ ವರೆಗೆ ಪಟ್ಟಣದ ಶ್ರೀ ಗಾಯತ್ರಿ ಭವನದಲ್ಲಿ ಕಮ್ಮಟವನ್ನು ಏರ್ಪಡಿಸಲಾಗಿದೆ. ಇಸ್ರೋದಲ್ಲಿ…
ತುರುವೇಕೆರೆ: ಪಟ್ಟಣದತಾಲ್ಲೂಕು ಆರೋಗ್ಯ ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರದಿನ ಮತ್ತು ಸಪ್ತಾಹಕ್ಕೆ ಗೌರವಾನ್ವಿತ ಹಿರಿಯ ನ್ಯಾಯಾಧೀಶರಾದ ಶ್ರೀ ಪಿ.ಎಂ.ಬಾಲಸುಬ್ರಮಣಿರವರು ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ, ಭಾರತದೇಶದಲ್ಲಿ ಗರ್ಭಿಣಿಯರು, ತಾಯಂದಿರು ಮತ್ತು ಮಕ್ಕಳು ಕುಪೋಷಣೆಯಿಂದ ಬಳಲುತ್ತಿದ್ದಾರೆ. ಅಂಗನವಾಡಿ ಶಿಕ್ಷಕಿಯರು ಪೌಷ್ಟಿಕ ಆಹಾರವನ್ನು ಫಲಾನುಭವಿಗಳಿಗೆ ತಲುಪಿಸಿ ಪೌಷ್ಟಿಕಾಂಶ ಕೊರತೆಯಿಂದಾಗುವ ರಕ್ತಹೀನತೆ ಮತ್ತು ಪ್ರೋಟಿನ್ ಎನರ್ಜಿ ಮಾಲ್ ನ್ಯೂಟ್ರಿಷನ್ ಅನ್ನು ತಡೆಗಟ್ಟಲು ಕರೆ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಸುಪ್ರಿಯಾರವರು ಆರ್.ಬಿ.ಎಸ್.ಕೆ. ವೈದ್ಯರ ಪಾತ್ರ, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಪಾತ್ರವನ್ನು ಶ್ಲಾಘಿಸಿದರು. ಮತ್ತು ಕಾರ್ಯಕ್ರಮಕ್ಕೆ ಶುಭಕೋರಿದರು. ಸಿಡಿಪಿಒ ಅರುಣ್‍ಕುಮಾರ್ ಮಾತನಾಡಿ ತಮ್ಮ ಇಲಾಖೆಯಲ್ಲಿ ದೊರೆಯುವ ಪುಷ್ಟಿ ಸ್ಪೈರುಲಿನಾದ ಜೊತೆ ಆಹಾರ ಪದಾರ್ಥಗಳನ್ನು ಸೇವಿಸಲು ಫಲಾನುಭವಿಗಳಿಗೆ ತಿಳಿಸಿದರು. ಆರ್.ಬಿ.ಎಸ್.ಕೆ.ವೈದ್ಯರಾದ ಡಾ.ವಿಂದ್ಯ ಮತ್ತು ಡಾ.ಶ್ರೀಧರ್ ರವರು ಮುಕ್ತ ಎದೆಹಾಲು ಸೇವನೆ, ಪೂರಕ ಆಹಾರ, ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್‍ರವರು ಸ್ಥಳೀಯವಾಗಿ ದೊರೆಯುವ ಹಣ್ಣು, ತರಕಾರಿ, ಸೂಕ್ಷ್ಮ ಮತ್ತು ಸಮಗ್ರಪೌಷ್ಟಿಕಾಂಶದ…
ತುಮಕೂರು : ಯುವ ಜನರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆಯಲು ನೆರವಾಗಲೆಂದು ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಂಸದ ಜಿ.ಎಸ್ ಬಸವರಾಜು ತಿಳಿಸಿದರು. ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ನಡೆದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪಿ.ಎಂ.ಕೆ.ವಿ.ವೈ 3.0 ಅಡಿ ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಮತ್ತು ನೇರ ನೇಮಕಾತಿ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್-19 ಸೋಂಕು ಜಗತ್ತನ್ನೇ ಅಲುಗಾಡಿಸಿದ ಹಾಗೇ ಭಾರತವನ್ನೂ ಸಹ ತಲ್ಲಣಗೊಳಿಸಿತ್ತು. ಭಾರತವು ಲಸಿಕೆಯನ್ನು ಕಂಡುಹಿಡಿದು ಮುಂಜಾಗ್ರತಾ ಡೋಸ್ ಸೇರಿ 3 ಲಸಿಕೆಗಳನ್ನು ಭಾರತದ ನಾಗರೀಕರಿಗೆ ನೀಡಲಾಗಿದೆ ಎಂದ ಅವರು ಕೋವಿಡ್ ಮಹಾಮಾರಿಯನ್ನು ತಡೆಗಟ್ಟಲು ತರಬೇತಿಯನ್ನು ಪಡೆದ ಆರೋಗ್ಯ ರಕ್ಷಕರನ್ನು ಭಾರತ ಬಯಸುತ್ತಿದೆ ಎಂದರು. ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಕೋವಿಡ್ ಕ್ರ್ಯಾಶ್ ಕೋರ್ಸ್‍ಗೆ ಸಂಬಂಧಿಸಿದ ಕೌಶಲ್ಯವನ್ನು ಪಡೆದಿರುವ…
ತುಮಕೂರು: ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಪದವೀಧರರಿಗೆ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ವಿಶಾಲವಾದ ಮಾಗೋಪಾರ್ಯಗಳಿವೆ. ಅಧ್ಯಯನಶೀಲತೆಯಲ್ಲಿ ತೊಡಗಿಸುತ್ತಾ ವ್ಯಕ್ತಿತ್ವ ರೂಪಿಸಿಕೊಂಡರೆ ವಿದ್ಯಾರ್ಥಿಗಳಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಹಾಗೂ ಈ ಸ್ಪರ್ಧಾತ್ಮಕ ಯುಗದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿವೆ. ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ ಮತ್ತು ಏಕಾಗ್ರತೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು ಎಂದು ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥರಾದ ಡಾ. ಎಂ.ಆರ್.ಹುಲಿನಾಯ್ಕರ್‍ರವರು ಕರೆ ನೀಡಿದರು. ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ದೀಕ್ಷಾಂತ್ ಪದವಿ ಪ್ರದಾನ ಸಮಾರಂಭವನ್ನು 2022 ಕಾರ್ಯಕ್ರಮವನ್ನು ಸೆ.03 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ಮಾತನಾಡುತ್ತಾ ಅವರು ಪದವೀಧರರು ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಯಾರಿಗೂ ಸುಗಮವಾದ ಹಾದಿ ಸುಲಭವಾಗಿ ಸಿಗದೆ ತನ್ನ ಶ್ರದ್ಧೆ, ಇರುವಿಕೆಯನ್ನು ಸತತವಾಗಿ ಸ್ಥಾಪಿಸಿಕೊಂಡರೆ ನಂತರ ಯಶಸ್ಸು ಸಿಗುವುದೆಂದು ನುಡಿದ ಅವರು ಅತ್ಯಂತ ಕಠಿಣ ಪರಿಸ್ಥಿತಿಯಿಂದ ಬಂದ ಮಕ್ಕಳು ತಮ್ಮ ಸಂಸ್ಥೆಗಳಲ್ಲಿ ಉತ್ತಮ ವ್ಯಾಸಂಗದಿಂದ…
ತುಮಕೂರು : ನಾಡೋಜ ಪ್ರ್ರೊ.ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ಕೊಟ್ಟಿರುವ ದೂರನ್ನು ರದ್ದು ಪಡಿಸುವಂತೆ ಒತ್ತಾಯಿಸಿ ತುಮಕೂರು ಅಪರಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು. ಪ್ರೊ.ಬರಗೂರುರಾಮಚಂದ್ರಪ್ಪನವರು ತಮ್ಮ ‘ಭರತನಗರಿ’ ಎಂಬ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಮತ್ತು ಗಂಗಾ ಮತಸ್ಥರ ದೇವತೆ ಗಂಗಾ ಮಾತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ತಿನ ಸದಸ್ಯರಾದ(ಬಿ.ಜೆ.ಪಿ) ಶ್ರೀ ರವಿಕುಮಾರ್ ಮತ್ತು ಶ್ರೀ ಚಲವಾದಿ ನಾರಾಯಣಸ್ವಾಮಿಯವರು ಪೊಲೀಸ್ ಆಯುಕ್ತರಿಗೆ ದೂರು ನೀಡಿರುವುದನ್ನು ಪತ್ರಿಕೆಗಳಲ್ಲಿ ಓದಿದ್ದೇವೆ. ಈ ಸಂಬಂಧದಲ್ಲಿ ಪ್ರೊ.ಬರಗೂರುರಾಮಚಂದ್ರಪ್ಪನವರು ಕೂಡ ಪತ್ರಿಕೆಗಳಲ್ಲಿ ಸ್ವಷ್ಟನೆ ನೀಡಿದ್ದಾರೆ. ಪ್ರೊ.ಬರಗೂರುರಾಮಚಂದ್ರಪ್ಪನವರು ನಮ್ಮ ನಾಡು ಕಂಡ ಸಾಂಸ್ಕøತಿಕ ಅನನ್ಯತೆಯನ್ನು ಪಡೆದ ಪ್ರಸಿದ್ಧ ಲೇಖಕರು. ರಾಜ್ಯ, ರಾಷ್ಟ್ರ ಮತ್ತು ಅಂತರ್‍ರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾದವರು. ಜೊತೆಗೆ ತುಮಕೂರು ಜಿಲ್ಲೆಯನ್ನು ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮೇರು ವ್ಯಕ್ತಿತ್ವವುಳ್ಳ ಪ್ರಜಾಪ್ರತಿಭೆಯ ಮೇಲೆ ಕೊಟ್ಟಿರುವ ದೂರಿನಲ್ಲಿ ಸತ್ಯಾಂಶವಿಲ್ಲ.ನಾಲ್ಕು…



