ತುಮಕೂರು: ನಗರದ ಹಳೆಯ ಪ್ರದೇಶವಾದ ಚಿಕ್ಕಪೇಟೆ ವೃತ್ತಕ್ಕೆ “ವಿಶ್ವಕರ್ಮ ವೃತ್ತ” ಎಂದು ನಾಮಕರಣ ಮಾಡುವ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಕೈಗೊಂಡ ನಿರ್ಧಾರಕ್ಕೆ ಚಿಕ್ಕಪೇಟೆ ನಾಗರೀಕರ ಹಿತ ಸಂರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸಿದೆ. ಈ ಬಗ್ಗೆ ಜು. 25 ರಂದು ಪಾಲಿಕೆ ಪ್ರಕಟಿಸಿರುವ ಸಾರ್ವಜನಿಕ ಪ್ರಕಟಣೆ ಗೆ ಚಿಕ್ಕಪೇಟೆ ನಾಗರೀಕರು ಆಕ್ಷೇಪ ವ್ಯಕ್ಕಪಡಿಸಿ ತಮ್ಮ ತಕರಾರು ಪತ್ರವನ್ನು ಪಾಲಿಕೆಗೆ ಸಲ್ಲಿಸಿದ್ದಾರೆ. ತುಮಕೂರು ಪ್ರಾರಂಭವಾಗಿ ಹಳೆಯ ಕಾಲದಿಂದಲೂ ಚಿಕ್ಕಪೇಟೆಯ ಈ ವೃತ್ತಕ್ಕೆ ಚಿಕ್ಕಪೇಟೆ ವೃತ್ತ ಎಂದೇ ಪ್ರಖ್ಯಾತಿ ಹೊಂದಿದೆ. ಸಾರ್ವಜನಿಕ ಸರ್ಕಾರಿ ದಾಖಲೆಗಳಲ್ಲೂ ಸಹ ನಮೂದಾಗಿರುತ್ತದೆ. ಮುಖ್ಯವಾಗಿ ಚಿಕ್ಕಪೇಟೆ ವೃತ್ತವು ಹಳೆಯ ವ್ಯವಹಾರಿಕ ವ್ಯಾಪಾರ ಸ್ಥಳವಾಗಿದ್ದು ಇದು ಚಿಕ್ಕಪೇಟೆ ಎಂಬ ಹೆಸರಿನಿಂದ ಪ್ರಖ್ಯಾತವಾಗಿರುತ್ತದೆ. ಈ ಚಿಕ್ಕಪೇಟೆ ವೃತ್ತವು ಮುಖ್ಯವಾಗಿ ಮಂಡಿಪೇಟೆ ಚಿಕ್ಕಪೇಟೆ ರಸ್ತೆ, ಚಿಕ್ಕಪೇಟೆ ಅಗ್ರಹಾರ ರಸ್ತೆ, ಚಿಕ್ಕಪೇಟೆ-ಆಚಾರ್ಯರ ಬೀದಿ ರಸ್ತೆ, ಚಿಕ್ಕಪೇಟೆ-ಅರಸಿಂಗರ ಬೀದಿ, ಚಿಕ್ಕಪೇಟೆ-ಗಾರ್ಡನ್ ರಸ್ತೆ, ಚಿಕ್ಕಪೇಟೆ-ಯಜಮಾನರ ಬೀದಿ ಎಂದು ಪ್ರಖ್ಯಾತ ಹೊಂದಿರುತ್ತದೆ. ಚಿಕ್ಕಪೇಟೆ ವೃತ್ತದ ಹಾಜು-ಬಾಜುವಿನ ಲಿಂಕ್‍ರಸ್ತೆಗಳಲ್ಲಿ ಹೊಂದಿಕೊಂಡಂತೆ ಶ್ರೀಲಕ್ಷ್ಮೀಕಾಂತಸ್ವಾಮಿ…
Author: News Desk Benkiyabale
ತುಮಕೂರು: ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮಳೆಯು ತೀವ್ರಗತಿಯನ್ನು ಪಡೆದುಕೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಯೆಲ್ಲೋ ಆಲರ್ಟ್ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ಬಹುತೇಕ ಕೆರೆಕಟ್ಟೆ ಹಾಗೂ ಇತರೆ ಜಲಕಾಯಗಳು ಭರ್ತಿಯಾಗಿರುವುದರಿಂದ ಸಾರ್ವಜನಿಕರು ಜಲಕಾಯಗಳ ಬಳಿ ತೆರಳದಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮನವಿ ಮಾಡಿರುತ್ತಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಕೆರೆ-ಕಟ್ಟೆ ಹಾಗೂ ಇತರೆ ಜಲಕಾಯಗಳು ಭರ್ತಿಯಾಗಿರುವುದರಿದ ವೀಕ್ಷಣೆಗೆಂದು ಪ್ರವಾಸಿಗರು/ಸಾರ್ವಜನಿಕರು ಹೋಗುತ್ತಿರುವುದು ಕಂಡುಬರುತ್ತಿದ್ದು, ಕೆರೆಯ ಪಕ್ಕದ ರಸ್ತೆಯನ್ನು ಬಂದ್ ಮಾಡಿ ಪರ್ಯಾಯ ರಸ್ತೆ ಮಾರ್ಗದಲ್ಲಿ ಸಂಚರಿಸುವಂತೆ ಅನುವು ಮಾಡಿಕೊಡಬೇಕು ಎಂದು ತಾಲ್ಲೂಕು ಆಡಳಿತಗಳಿಗೆ ಅವರು ಸೂಚಿಸಿದರು. ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯ ನದಿ/ಕೆರೆ/ಕುಂಟೆ/ಹಳ್ಳ/ಜಲಕಾಯಗಳ ದಡದಲ್ಲಿ ಸಾರ್ವಜನಿಕರು ಬಟ್ಟೆ ತೊಳೆಯುವುದು, ಈಜಾಡುವುದು, ದನ-ಕರುಗಳನ್ನು ಮೈ ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತು ಇತರೆ ಚಟುವಟಿಕೆಗಳನ್ನು ಮಾಡುವುದು ಸಂಪೂರ್ಣವಾಗಿ ನಿರ್ಭಂದಿಸಬೇಕು ಎಂದರು. ಮಳೆಯಿಂದಾಗುವ ಅವಘಡಗಳನ್ನು…
ತುಮಕೂರು: ಕಾಯಕ ಸಮಾಜವಾದ ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಈ ವರ್ಷ ನಿಗಮಕ್ಕೆ ನೀಡಿರುವ 110 ಕೋಟಿ ರೂ. ಅನುದಾನವನ್ನು ಸಮರ್ಪಕವಾಗಿ ಬಳಸಿ ಕಾರ್ಯಕ್ರಮ ರೂಪಿಸಿದರೆ ಮುಂದಿನ ವರ್ಷ ನಿಗಮಕ್ಕೆ 175 ಕೋಟಿ ರೂ. ಅನುದಾನ ನೀಡುವುದಾಗಿ ತಿಳಿಸಿದರು. ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರ ಓಡ್ಸ್ (ಭೋವಿ) ಯುವ ವೇದಿಕೆ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಭೋವಿ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭೋವಿ ಅಭಿವೃದ್ಧಿ ನಿಗಮಕ್ಕೆ ದೊಡ್ಡ ಮೊತ್ತದ ಅನುದಾನ ನೀಡುವ ಯೋಜನೆ ರೂಪಿಸಿದ ಮೇಲೆ ಈ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕಾದರೆ ದಕ್ಷ ಅಧ್ಯಕ್ಷರ ನೇಮಕ ಅಗತ್ಯವಿದೆ. ಹಾಗಾಗಿ ಇನ್ನೊಂದು ವಾರದೊಳಗೆ ನಿಗಮಕ್ಕೆ ದಕ್ಷ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು. ಬದುಕಿನಲ್ಲಿ ಕಷ್ಟಕಾರ್ಪಣ್ಯ ಬಹಳ ಸಹಜ. ಯಾರ ಬದುಕಿನಲ್ಲಿ ಕಷ್ಟಕಾರ್ಪಣ್ಯ, ಸವಾಲು, ದುಡಿಮೆ ಇರುವುದಿಲ್ಲವೋ ಅಂತಹ ಬದುಕು ಬದುಕೇ ಅಲ್ಲ. ಕಷ್ಟಪಟ್ಟು…
ತುಮಕೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಮೀಷನ್ ದಂಧೆ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್ ಸಚಿವರ್ಯಾರೂ ಕಮೀಷನ್ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ದಿ. ಸೂಲಗಿತ್ತಿ ನರಸಮ್ಮನವರ 102ನೇ ಜಯಂತ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಪರ್ಸಂಟೆಜ್ ದಂಧೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಬಗ್ಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಈಗ ಹೇಳಿದ್ದರೆ ಯಾವ ಸಚಿವಾಲಯದಲ್ಲಿ, ಯಾವ ಸಚಿವರು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ. ಏಕೆಂದರೆ ಮುಖ್ಯಮಂತ್ರಿಯಾಗಿದ್ದವರು ಅವರು, ಹಾಗಾಗಿ ಜವಾಬ್ದಾರಿಯಿಂದ ಈ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತದೆ. ಆದರೆ ನಮ್ಮ ಕಾಂಗ್ರೆಸ್‍ನ ಸಚಿವರು ಯಾರೂ ಸಹ ಈ ಪರ್ಸಂಟೆಜ್ ದಂಧೆಯಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ 40 ಪರ್ಸಂಟೆಜ್ ಕಮೀಷನ್…
ಗುಬ್ಬಿ; ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತೇನೆ ಎಂದು ಮತ ಪಡೆದ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು ವಿಷಾದನೀಯ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು. ಗುಬ್ಬಿ ತಾಲೂಕಿನ ಎಂ.ಎಚ್. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೂಹ ಸಂಪನ್ಮೂಲ ಕೇಂದ್ರ ನವೀಕೃತ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಭೂ ಹಗರಣವು ಬಗೆದಷ್ಟು ಆಳವಾಗುತ್ತಾ ಇದ್ದು,ರಾಜಕೀಯ ವ್ಯಕ್ತಿಗಳೇ ಈ ದಂಧೆಯ ವ್ಯವಹಾರದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಇದನ್ನು ಸರಿಪಡಿಸಲು ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮೀಸಲಾಗಿದೆ ಎಂದು ತಿಳಿಸಿದ ಅವರು ಈ ವಿಷಯದಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ನಡೆಸುವುದಿಲ್ಲ, ಇದರಿಂದ ತಾಲೂಕಿನ ಬಡ ರೈತಾಪಿ ವರ್ಗದವರ ಶಾಪ ತಟ್ಟುತ್ತದೆ ಎಂದು ತಿಳಿಸಿದರು. ಬಾಗರು ಹೂಕ್ಕುಮ್ ಸಮಿತಿಯಲ್ಲಿ ಅನ್ಯಾಯ ನಡೆದಿದೆ ಎಂದು ಬೊಬ್ಬೆ ನೀಡುತ್ತಿರುವ ವಿರೋಧಿಗಳು ಸಾಕಷ್ಟು ಇದ್ದರೂ ಸರಿಯಾದ ಮಾಹಿತಿಯನ್ನು ಪಡೆಯದೇ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕೆಲ ವ್ಯಕ್ತಿಗಳಿಗೆ ಸಮಯವೇ ಪಾಠ ಕಲಿಸುತ್ತದೆ ಎಂದ…
ಮಧುಗಿರಿ: ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ಶಿವನಗೆರೆಯ. ಕೆರೆ ಕೋಡಿ ಬಿದ್ದಿದ್ದು ಕೋಡಿಯ ನೀರು ಸಾರ್ವಜನಿಕ ರಸ್ತೆಗೆ ಹರೀದಿದ್ದು ರಸ್ತೆಯಲ್ಲಿ ಎರಡು ಅಡಿ.ನೀರು ನಿಂತಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ರಸ್ತೆಯಲ್ಲಿ ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಭೇಟಿ ನೀಡಿ ಪರಿಶೀಲಿಸಿ ನೀರಿನ ಹಾನಿಯ ಬಗ್ಗೆ ಮತ್ತು ಬೆಳೆ ಹಾನಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು ನಂತರ ಶಿವನ ಗೆರೆಯ. ಭೂತರಾಯನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ನಾಗೇಶ್ ಬಾಬು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿನ್ನಪ್ಪ ಮುಖಂಡರುಗಳಾದ.ಬಸವನಹಳ್ಳಿ ನಾಗರಾಜಪ್ಪ .ಗುಟ್ಟೆ ರಮೇಶ್. ಕಾರ್ಪೆನಹಳ್ಳಿ ರಂಗನಾಥ್.ಗ್ರಾಮಪಂಚಾಯಿತಿ ಸದಸ್ಯರಾದ .ರಮೇಶ್ ಗೌಡ.ಮಹೇಶ್. ಮತ್ತಿತರರು ಹಾಜರಿದ್ದರು.
ಕೊರಟಗೆರೆ: ದರ್ಪ ದೌರ್ಜನ್ಯಗಳಿಲ್ಲದ ಸ್ವಚ್ಛ ಪ್ರಾಮಾಣಿಕವಾದ ಗೌರವ ಘನತೆಯುಳ್ಳ ಸರ್ಕಾರಿ ಸೇವೆಗಳನ್ನು ಪಡೆಯುವುದು ಸ್ವಾಭಿಮಾನಿ ಕನ್ನಡಿಗರ ಹಕ್ಕು ಅದನ್ನು ಸಕಾರಗೊಳಿಸಲೆಂದೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯದಾದ್ಯಂತ “ಕರುನಾಡು ಕಟ್ಟೋಣ” ಅಭಿಯಾನವನ್ನು ನಡೆಸುತ್ತಿದ್ದು ಕಳೆದ ಎರಡು ದಿನದಿಂದ ಕೊರಟಗೆರೆ ತಾಲೂಕಿನಲ್ಲಿ ರೈತರ ಮಹಿಳೆಯರ ಸಾರ್ವಜನಿಕರ,ಯುವಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಕೊರಟಗೆರೆ ಜಿಲ್ಲಾ ಪಂಚಾಯತಿ ಕ್ಷೇತ್ರಗಳು, ತಾಲ್ಲೂಕು ಪಂಚಾಯತಿ ಕ್ಷೇತ್ರಗಳು, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಒಳಗೊಂಡಂತೆ ಕ್ರಿಯಾ ಯೋಜನಾ ಸಮಿತಿ ರಚಿಸುತ್ತಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕನ್ನಡ ನಾಡಿನ ಪ್ರಣಾಳಿಕೆಗಳನ್ನು ಈ ತಾಲ್ಲೂಕಿಗೆ ಅನ್ವಯಿಸುವಂತೆ ಕಾರ್ಯಚರಣೆ ಮಾಡುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನ ಸಿಂಧೂ ಸ್ವಾಮಿ ಕೊರಟಗೆರೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಕೊರಟಗೆರೆ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಪ್ಲೆಕ್ಸ್ ರಾಜಕಾರಣ ರಾರಾಜಿಸುತ್ತಿದ್ದು, ಈ ದೇಶದ ಸುಪ್ರೀಂ ಕೋರ್ಟ್, ಹೈ ಕೋರ್ಟ್ ನೀಡಿರುವ ಅದೇಶಗಳನ್ನು ಇವರುಗಳೇ ಮುರಿಯುತ್ತಿದ್ದು ,…
ಕುಣಿಗಲ್ : ಕಿಡಿಗೇಡಿಗಳು ತಮ್ಮ ಸ್ವಾರ್ಥಕ್ಕಾಗಿ ಕೆರೆಯ ಕೋಡಿಯನ್ನು ಹೊಡೆದು, ನೀರನ್ನು ಹೊರಬಿಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಬೇಗೂರು ಕೆರೆಯಲ್ಲಿ ಗುರುವಾರ ನಡೆದಿದೆ. ಈ ಭಾರಿ ಸತತವಾಗಿ ಸುರಿದ ನಿರಂತರ ಮಳೆಯಿಂದ್ದಾಗಿ ಕಳೆದ ೨೨ ವರ್ಷಗಳ ಬಳಿಕ ಬೇಗೂರು ಕೆರೆ ತುಂಬಿ ಕೆರೆ ಕೋಡಿ ಬಿದ್ದಿದೆ, ಇದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಸಂತಸಕ್ಕೆ ಕಾರಣವಾಗಿದೆ, ಸಂತಸದಲ್ಲಿ ಇದ್ದ ರೈತರಿಗೆ ದುಷ್ಟಕರ್ಮಿಗಳು ಕೆರೆಯ ಕೋಡಿ ಹೊಡೆದು ನೀರು ಹೊರ ಬಿಟ್ಟಿರುವುದರಿಂದ ಅಘಾತಕ್ಕೆ ಕಾರಣವಾಗಿದೆ. ದುಷ್ಕರ್ಮಿಗಳು ಕೆರೆಯ ಕೋಡಿಯ ಸುಮಾರು ನಾಲ್ಕು ಅಡಿಗೂ ಅಧಿಕ ಕಲ್ಲು ತೆಗೆದು ಸುಮಾರು ಎರಡು ಅಡಿ ಅಳ ತೆಗೆದು ನೀರನ್ನು ಹೊರಗೆ ಬಿಟ್ಟಿದ್ದಾರೆ, ಇದನ್ನು ನೋಡಿದ ಗ್ರಾಮಸ್ಥರು ಹೇಮಾವತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ, ತಕ್ಷಣ ಕಾರ್ಯಪ್ರವೃತರಾದ ಹೇಮಾವತಿ ಎಇಇ ರವಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದರು, ದುಷ್ಟಕರ್ಮಿಗಳು ಹೊಡೆದು ಹಾಕಿರುವ ಕೆರೆಯ ಕೋಡಿಯನ್ನು ಪರಿಶೀಲಿಸಿದರು, ಬಳಿಕ ಸ್ಥಳೀಯ ಜನರ ಸಹಕಾರದೊಂದಿಗೆ ಹಾಳಾಗಿರುವ ಕೆರೆಯ ಕೋಡಿ ಜಾಗಕ್ಕೆ ಕಲ್ಲುಗಳನ್ನು…
ತುಮಕೂರು : ಗಣೇಶೋತ್ಸವ ಅಂಗವಾಗಿ ನಗರದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅಳವಡಿಸಿದ್ದ ವಿ.ಡಿ ಸಾವರ್ಕರ್ ಫ್ಲೆಕ್ಸ್ ಅನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಹಿಂದೂ ಏಕತಾ ಗಣೇಶೋತ್ಸವ ಅಂಗವಾಗಿ ವಿ.ಎಚ್.ಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಜಯನಗರದ ಅನ್ನಪೂರ್ಣೇಶ್ವರಿ ದೇವಾಲಯದ ಬಳಿ ಗುರುವಾರ ರಾತ್ರಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅನುಮತಿ ಇಲ್ಲದೇ ಫ್ಲೆಕ್ಸ್ ಅಳವಡಿಸಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು ಬಳಿಕ ಫ್ಲೆಕ್ಸ್ ತೆರವುಗೊಳಿಸಿದರು. ಈ ವೇಳೆ ಭಜರಂಗದಳ ಸಂಚಾಲಕ ಮಂಜುಭಾರ್ಗವ್, ಫ್ಲೆಕ್ಸ್ ಅಳವಡಿಸಲು ಈಗಾಗಲೇ ಪಾಲಿಕೆಗೆ ಅನುಮತಿ ಕೋರಿ ಪತ್ರ ನೀಡಲಾಗಿದೆ. ಆದರೆ ಇನ್ನೂ ಅನುಮತಿ ಸಿಕ್ಕಿಲ್ಲ. ಸಾವರ್ಕರ್ ಫ್ಲೆಕ್ಸ್ ತೆರವು ಮಾಡುವುದಾದರೆ ಅನುಮತಿ ಇಲ್ಲದೇ ಕಟ್ಟಿರುವ ಇತರೆ ಫ್ಲೆಕ್ಸ್’ಗಳನ್ನು ಕೂಡ ತೆರವುಗೊಳಿಸಬೇಕು ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ತುಮಕೂರು : ಬಾಲ ಭವನ ಸೊಸೈಟಿ, ಬೆಂಗಳೂರು ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇವರುಗಳು ಸಹಭಾಗಿತ್ವದಲ್ಲಿಂದು ಗಣೇಶ ಚತುರ್ಥಿ ಅಂಗವಾಗಿ ಪರಿಸರ ಮಿತ್ರ ಗಣಪತಿ ರಚನೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯದರ್ಶಿಗಳು ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಂ. ಎಸ್. ಶ್ರೀಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ವಿದ್ಯಾ ಗಣಪತಿ ಹಬ್ಬದ ಆಚರಣೆ ಮಕ್ಕಳಲ್ಲಿ ತುಂಬಾ ಸಂತೋಷ ಮತ್ತು ಆಸಕ್ತಿದಾಯಕ ಹಬ್ಬ. ಈ ಹಬ್ಬವನ್ನು ಆಚರಣೆ ಮಾಡುವಾಗ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ವಿವಿಧ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಳಸಿ ಸಿದ್ಧಪಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದರಿಂದ ಭೂಮಂಡಲದ ಇಡೀ ಜೀವರಾಶಿಗೆ ಹಾನಿಯುಂಟಾಗುತ್ತದೆ. ಆದ್ದರಿಂದ ಪರಿಸರ ಮಿತ್ರ ಗಣಪನ ಯಾವುದೇ ವಿಷಕಾರಿ ಬಣ್ಣಗಳನ್ನು ಬಳಸದೆ ತಯಾರಿಸುವುದರಿಂದ ಇಡೀ ಮಾನವ ಸಂಕುಲವನ್ನು ಅನಾರೋಗ್ಯದಿಂದ ರಕ್ಷಿಸಬಹುದಾಗಿದೆ ಎಂದು ತಿಳಿಸಿದರು. ಶ್ರೀ ಗಣೇಶನ…






