ತುಮಕೂರು: ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರದ ಅಮಾನಿಕೆರೆ ಕೋಡಿಹಳ್ಳದ 30 ಬಡಕುಟುಂಬಗಳಿಗೆ ಪುನರ್‍ವಸತಿ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ, 3ರಲ್ಲಿ ಬರುವ ಶಿರಾಗೇಟ್ ತುಮಕೂರು ಅಮಾನಿಕೆರೆ ಕೋಡಿಹಳ್ಳದಲ್ಲಿ ಸುಮಾರು 70 ವರ್ಷಗಳಿಗೂ ಮೇಲ್ಪಟ್ಟು 30 ಕುಟುಂಬಗಳು ಹಿಂದುಳಿದ ಮತ್ತು ದಲಿತ ಜನಾಂಗದ ಮಡಿವಾಳ, ಕುರುಬ, ಮೊದಲಿಯರ್ಸ್ ಮತ್ತು ಎಸ್‍ಸಿ/ಎಸ್‍ಟಿ ಇತರೆ ಜಾತಿಯ ಬಡಜನರು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು ಇತ್ತೀಚೆಗೆ ಭಾರಿ ಮಳೆಯಿಂದ ತುಮಕೂರು ಅಮಾನಿಕೆರೆ ಕೋಡಿ ಹೊಡೆದಿರುವುದರಿಂದ ಇಲ್ಲಿರುವ ಎಲ್ಲಾ ಮನೆಗಳಿಗೂ ನೀರು ನುಗ್ಗಿ ದಿನಾಂಕ:30-7-2022 ರ ಮಧ್ಯರಾತ್ರಿ ಇಲ್ಲಿದ್ದ ಎಲ್ಲಾ ಕುಟುಂಬಗಳನ್ನು ಜಿಲ್ಲಾಡಳಿತ ತುಮಕೂರು ಮಹಾನಗರ ಪಾಲಿಕೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ ಕಳೆದ 8 ತಿಂಗಳಿಂದ 2ನೇ ಬಾರಿ ಇಂತಹ ಘಟನೆ ಸಂಭವಿಸಿದ್ದು ಕೋಡಿ ಹಳ್ಳದಲ್ಲಿ ಈ ಕುಟುಂಬಗಳು ವಾಸಿಸುತ್ತಿರುವುದರಿಂದ ಪದೇ ಪದೇ ಇಂತಹ ಘಟನೆಗಳಾಗುವ ಸಂಭವವಿದ್ದು ಜೀವ ಹಾನಿಯಾಗುವ ಮುನ್ಸೂಚನೆಯಿರುವುದರಿಂದ ಸದರಿ ಕುಟುಂಬಗಳಿಗೆ ಜಿಲ್ಲಾಡಳಿತ ಪುನರ್‍ವಸತಿ ಕಲ್ಪಿಸಿ ಪರ್ಯಾಯ…
Author: News Desk Benkiyabale
ತುಮಕೂರು: ಕೇಂದ್ರ ಸರಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತರುವ ಮೂಲಕ ನೈಲಾನ್ ಮತ್ತು ಪಾಲಿಸ್ಟರ್ ವಸ್ತುಗಳಿಂದ ತಯಾರಿಸಿದ ರಾಷ್ಟ್ರದ್ವಜ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ, ನೇಕಾರರ ಹೊಟ್ಟೆಯ ಮೇಲೆ ಒಡೆದಿದೆ ಎಂದು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲ್‍ನಲ್ಲಿ ಆಗಸ್ಟ್ 17 ರಂದು ನಡೆಸಲು ಉದ್ದೇಶಿಸಿರುವ 8ನೇ ಅಂತರರಾಷ್ಟ್ರೀಯ ನೇಕಾರರ ದಿವಸ ಕಾರ್ಯಕ್ರಮದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ನೇಕಾರರ ಸಮುದಾಯದÀ ಕುರುಹಿನ ಶೆಟ್ಟಿ, ತೋಗಟವೀರ, ಪದ್ಮಶಾಲಿ, ದೇವಾಂಗ ಸಮುದಾಯದ ಮುಖಂಡರಾದ ರಾಮಕೃಷ್ಣಯ್ಯ, ಧನಿಯಕುಮಾರ್, ಅನಿಲ್‍ಕುಮಾರ್, ಎಸ್.ವಿ.ವೆಂಕಟೇಶ್, ಎಸ್.ಎನ್.ರಂಗಸ್ವಾಮಿ, ಯೋಗಾನಂದ, ಕರಿಯಪ್ಪ ಮತ್ತಿತರರು ಸರಕಾರದ ನಡೆಯನ್ನು ಖಂಡಿಸಿದರು. ಜಿಲ್ಲಾ ನೇಕಾರರ ಸಮುದಾಯದ ಕಾರ್ಯದರ್ಶಿ ಧನಿಯಕುಮಾರ್, ರಾಷ್ಟ್ರಧ್ವಜಕ್ಕೆ ತನ್ನದೇ ಆದ ಘನತೆ,ಗೌರವವಿದೆ.ಹತ್ತಿಯ ಬಟ್ಟೆಯಿಂದ ತಯಾರಿಸಿದ ರಾಷ್ಟ್ರದ್ವಜವನ್ನು ಮಾತ್ರ ಬಳಕೆ ಮಾಡಬೇಕೆಂಬ ನಿಯಮವಿದ್ದ ಕಾರಣ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ನೇಕಾರರಿಗೆ ಧ್ವಜ ನೇಯ್ಗೆ ಮಾಡಲು ಆಡರ್‍ಗಳು ಬರುತ್ತಿದ್ದವು.ಇದರಿಂದ ಸಾವಿರಾರು ನೇಕಾರರ ಕುಟುಂಬಗಳು ಜೀವನ ನಡೆಸುತ್ತಿದ್ದರು. ಆದರೆ ಸರಕಾರ…
ತುಮಕೂರು: ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ಆಂತರಿಕ ಗುಣಮಟ್ಟದ ಭದ್ರತಾ ಘಟಕವು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಯುಕ್ತಾಶ್ರಯದಲ್ಲಿ ಆ. 16 ಮತ್ತು 17 ರಂದು ‘ಆರೋಹ’ ಎಂಬ ಶೀರ್ಷಿಕೆಯಡಿಯಲ್ಲಿ ‘ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಎರಡು ದಿನಗಳ ಅಂತಾರಾಷ್ಟ್ರೀಯ ಯುವ ಸಮ್ಮೇಳನವನ್ನು ಗಂಗಸಂದ್ರ ರಸ್ತೆಯ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ತಿಳಿಸಿದರು. ರಾಮಕೃಷ್ಣ ಮಠ ಮತ್ತು ಮಿಷನ್‍ನ ಉಪಾಧ್ಯಕ್ಷರಾದ ಸ್ವಾಮಿ ಗೌತಮಾನಂದಜೀ ಮಹಾರಾಜ್ ರವರು ಯುವ ಸಮ್ಮೇಳನವನ್ನು ಉದ್ಘಾಟಿಸುವರು. ಕರ್ನಾಟಕ-ಕೇರಳ ವಿಭಾಗದ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಾದೇಶಿಕ ನಿರ್ದೇಶಕರಾದ ಎಸ್.ಎನ್. ಗಿರೀಶ್, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೆ ಪಿ. ಕೃಷ್ಣ, ತುಮಕೂರು ವಿಭಾಗದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಡಬ್ಲ್ಯೂ.ಡಿ. ಅಶೋಕ್ ಅಂತಾರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕಾರ್ಯಕ್ರಮವು ಒಟ್ಟು…
ತುಮಕೂರು: ಸತತ ಮಳೆಯಿಂದ ಜಿಲ್ಲೆಯ ವಿವಿಧ ಕೆರೆ ಕಟ್ಟೆಗಳು, ಅಣೆಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಸತತವಾಗಿ ಮುಂಗಾರು ಮಳೆಯಾಗುತ್ತಿರುವ ಹಾಗೆಯೇ ತುಮಕೂರು ಜಿಲ್ಲೆಯಲ್ಲಿಯೂ ನಿರಂತರವಾಗಿ ಮಳೆಯಾಗುತ್ತಿದ್ದು,ಜಿಲ್ಲೆಯಲ್ಲಿ ಹುಟ್ಟುವ ಶಿಂಸಾ,ಜಯಮಂಗಲಿ, ಗರುಡದ್ವಜ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳು ತುಂಬಿ ಹರಿದ್ದ ಪರಿಣಾಮ ನದಿಪಾತ್ರಗಳ ಕೆರೆ, ಕಟ್ಟೆಗಳು ಸಹ ತುಂಬಿ ಕೋಡಿ ಬಿದ್ದಿವೆ.ಶಿಂಷಾ ನದಿ ನೀರಿನಿಂದ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯ ಮಂಗಳ ಜಲಾಶಯ ತುಂಬಿದ್ದು, ಜಲಾಶಯದಿಂದ ನದಿ ಪಾತ್ರಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ಮಳೆಯಿಂದ ಜನಜೀವನದ ಮೇಲಾಗಿರುವ ದುಷ್ಪರಿಣಾಮಗಳ ಅಧ್ಯಯನದಲ್ಲಿ ಸರಕಾರ ತೊಡಗಿದೆ.ಈ ಹಿನ್ನೆಲೆಯಲ್ಲಿ ಸರಕಾರದ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಇಂದು ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ,ಹೇಮಾವತಿ ನಾಲಾವಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಗೋವಿಂದ ಎಂ.ಕಾರಜೋಳ,ಈ ವರ್ಷ…
ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯಂತೆ, 75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಆಗಸ್ಟ್ 13 ರಿಂದ 15, 2022ರವರೆಗೆ “ಹರ್ ಘರ್ ತಿರಂಗಾ” ಅಭಿಯಾನ ಕಾರ್ಯಕ್ರಮವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ರಾಜ್ಯದಲ್ಲಿರುವ ಎಲ್ಲಾ ಮನೆಗಳು, ಸರ್ಕಾರಿ ಕಟ್ಟಡಗಳು, ಅರೆ ಸರ್ಕಾರಿ ಕಟ್ಟಡಗಳು, ಸಂಘ-ಸಂಸ್ಥೆಗಳ ಕಟ್ಟಡಗಳು ಹಾಗೂ ಇತರೆ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಪ್ರೇಮವನ್ನು ಅಭಿವ್ಯಕ್ತಗೊಳಿಸಬೇಕಿದೆ. ಈ ಹಿನ್ನಲೆಯಲ್ಲಿ ದಿನಾಂಕ:12-08-2022ರಂದು ಜಿಲ್ಲಾಡಳಿತ, ತುಮಕೂರು ವತಿಯಿಂದ ತುಮಕೂರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ “ಶ್ರೀ ನುಲಿಯ ಚಂದಯ್ಯ” ಜಯಂತಿಯಲ್ಲಿ “ಹರ್ ಘರ್ ತಿರಂಗಾ ಅಭಿಯಾನ” ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾನ್ಯ ಉಪಕಾರ್ಯದರ್ಶಿಗಳಾದ ಶ್ರೀ ಗೋಪಾಲ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಡಿ.ಎಂ.ರವಿಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ.ಎಸ್.ಸಿದ್ಧಲಿಂಗಪ್ಪ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿಬ್ಬಂದಿಗಳಾದ ಶ್ರೀ ಡಿ.ವಿ.ಸುರೇಶ್…
ತುಮಕೂರು: ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ. ವೀರಭದ್ರಯ್ಯ ಮತ್ತು ಎಫ್.ಡಿ.ಎ ಹರೀಶ್ ಇಬ್ಬರೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು, ಇವರಿಬ್ಬರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಗೌರವಾಧ್ಯಕ್ಷ ಬಿ.ಬಿ.ಮಹದೇವಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿರುವ ಕರುನಾಡ ವಿಜಯಸೇನೆ ಗೌರವಾಧ್ಯಕ್ಷ ಬಿ.ಬಿ.ಮಹದೇವಪ್ಪ ಅವರು, ದಿನನಿತ್ಯ ರೋಗಿಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಖಾತೆಗೆ ಜಮಾ ಮಾಡದೇ 2018 ನೇ ಸಾಲಿನಿಂದ 2025 ರವರೆಗೆ ಒಟ್ಟು ರೂ.4,32,00,000 ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ರೂ.3,75,00,000 ಮಾತ್ರ ಸಂದಾಯ ಮಾಡಿರುತ್ತಾರೆ. ಇನ್ನುಳಿದ ರೂ. 57,46,000 ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಆಡಿಟ್‍ಗೆ ಬಂದಂತಹವರನ್ನು ಲಂಚದ ಆಮಿಷ ತೋರಿಸಿ ಸದರಿ ವಿಚಾರವನ್ನು ಮುಚ್ಚಿ ಹಾಕಲಾಗಿದೆ. ಸದರಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಇರುವ ಡಿ.ವಿ.ಡಿ ಹಾಗೂ ಮಾಹಿತಿ ಇರುವ ನಕಲು ಪ್ರತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸದರಿ ಪ್ರಕರಣವನ್ನು ಹೆಚ್ಚಿನ ಆಸಕ್ತಿ ವಹಿಸಿ…
ತುರುವೇಕೆರೆ: ಶರಣ ಕುಳುವ ನುಲಿಯ ಜಯಂತಿಯನ್ನ ಮುಂದೂಡುವಂತೆ ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಕುಳುವ ಸಮಾಜ ಮನವಿ ಸಲ್ಲಿಸಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಶಾಂತಿಯುವಾಗಿ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂಘದ ಪದಾದಿಕಾರಿಗಳಿ ತಾಲ್ಲೂಕು ಕಚೇರಿ ಆವರಣದಲ್ಲಿ ಶರಣ ನುಲಿಯ ಚಂದ್ರಯ್ಯನವರಿಗೆ ಜಯಕಾರ ಕೂಗುತ್ತಾ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ರವರ ಮಾತನಾಡಿ ದಿನಾಂಕ 12/08/22 ರಂದು ನೆಡೆಯಬೇಕಿದ್ದ ಶರಣ ಕುಳುವ ನುಲಿಯ ಚಂದಯ್ಯನವರ ಜಯಂತಿಯನ್ನು ನೂಲಿನ ಹುಣ್ಣಿಮೆಯ ದಿನದಂದು (ಆಗಸ್ಟ್ 12) ಸರ್ಕಾರಿ ರಜಾ ರಹಿತವಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆ 05/08/22 ರಂದು ತುಮಕೂರಿನಲ್ಲಿ ಪೂರ್ವ ಭಾವಿ ಸಭೆಯ ತೀರ್ಮಾನದಂತೆ ಜಿಲ್ಲಾ ಕೇಂದ್ರದಲ್ಲಿ ಅದ್ದೂರಿ ಜಯಂತಿ ಆಚರಣೆಗೆ (ಅಖಿಲ ಕರ್ನಾಟಕ ಕುಳುವ ಮಹಾಸಂಘ) ಜಿಲ್ಲಾ ಘಟಕ ಎಲ್ಲ ತಾಲ್ಲೂಕು ಘಟಕಗಳಿಗೆ ಕರೆಕೊಟ್ಟಿದ್ದು ಆದ್ದರಿಂದ ತಾಲ್ಲೂಕಿನಲ್ಲಿ ಜಯಂತಿ ಆಚರಣೆ ಸಾಧ್ಯವಾಗುತ್ತಿಲ್ಲ ಮತ್ತೊಂದು ದಿನಾಕವನ್ನು ನಿಗದಿ ಪಡಿಸಲು ಸಮಾಜದ ಮುಖಂಡರ ಪೂರ್ವ ಭಾವಿ…
ತುಮಕೂರು: ಕಳೆದ ಎರಡರ ದಶಕಗಳಿಂದ ಬಿಹಾರ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ನಿತೀಶ್ ಕುಮಾರ್ ಅವರು ಬಿಜೆಪಿ ಸಖ್ಯ ತೊರೆದಿರುವುದಕ್ಕೆ ರಾಜ್ಯ ಜೆಡಿಯು ಬೆಂಬಲ ನೀಡಲಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು. ಇತ್ತಿಚೆಗೆ ಅಪಘಾತಕ್ಕೀಡಾಗಿ ಚೇತರಿಸಿಕೊಳ್ಳುತ್ತಿರುವ ಜೆಡಿಯು ಜಿಲ್ಲಾಧ್ಯಕ್ಷ ಕೆಜಿಎಲ್ ರವಿ ಅವರ ಮನೆಗೆ ಭೇಟಿ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರವನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತಿಸುವಲ್ಲಿ, ಶೂನ್ಯ ಸಹಿಷ್ಣುತೆಯ ಮೂಲಕ ಸುಭದ್ರ ಆಡಳಿತವನ್ನು ನೀಡುತ್ತಿರುವ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ನಿತೇಶ್ ಕುಮಾರ್ ಪಕ್ಷಕ್ಕೆ ಆಗಿರುವ ಅವಮಾನವನ್ನು ವಿರೋಧಿಸಿ ಸಖ್ಯವನ್ನು ತೊರೆದುಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು. ನಿತೇಶ್‍ಕುಮಾರ್ ಅವರ ನಡೆಯನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ ಕೇಂದ್ರ ಸಚಿವ ಆರ್.ಸಿ.ಪಿ.ಸಿಂಗ್ ಅವರು ರಾಜಕೀಯ ದುರುದ್ದೇಶದಿಂದ ಪಕ್ಷದ ಬಗ್ಗೆ ಹಾಗೂ ನಾಯಕರುಗಳ ಬಗ್ಗೆ ಅನುಚಿತ ಮಾತನಾಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು. ಬಿಹಾರದ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸುವ…
ತುಮಕೂರು: ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 48 ವರ್ಷದ ರಮೇಶ್ ಎಂಬ ವ್ಯಕ್ತಿಯು ಕಾಣೆಯಾಗಿದ್ದಾನೆ ಎಂದು ಪತ್ನಿ ಪುಟ್ಟಮ್ಮ ಆಗಸ್ಟ್ 4 ರಂದು ಠಾಣೆಗೆ ದೂರು ನೀಡಿದ್ದಾಳೆ. ಕಾಣೆಯಾದ ವ್ಯಕ್ತಿಯು ಅನಾರೋಗ್ಯದಿಂದ ಆರೋಗ್ಯದಲ್ಲಿ ಏರುಪೇರಾಗಿ ಬುದ್ದಿ ಕಡಿಮೆಯಾಗಿತ್ತು ಎಂದು ದೂರಿನಲ್ಲಿ ದಾಖಲಾಗಿದೆ. ಈತನು 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ತಿಳಿ ನೀಲಿ ಬಣ್ಣದ ಚಡ್ಡಿ, ಬಿಳಿ ಅಂಗಿ ಧರಿಸಿದ್ದನು. ಈತನ ಬಗ್ಗೆ ಸುಳಿವು ಸಿಕ್ಕವರು ಮೊ.ಸಂ. 9480802900/ 30/ 45ನ್ನು ಸಂಪರ್ಕಿಸಬಹುದಾಗಿದೆ.
ತುಮಕೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಗಸ್ಟ್ 13ರಂದು ರಾಷ್ಟ್ರೀಯ ಲೋಕ್ ಅದಾಲತ್ (ಜನತಾ ನ್ಯಾಯಾಲಯ) ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. “ಸರ್ವರಿಗೂ ನ್ಯಾಯ” ಎಂಬುದು ಭಾರತದ ಕಾನೂನು ಸೇವೆಗಳ ಧ್ಯೇಯವಾಗಿದೆ. ಯಾವೊಬ್ಬ ಪ್ರಜೆಯು ತನ್ನ ಅರ್ಥಿಕ ಅಥವಾ ಇತರೆ ದೌರ್ಬಲ್ಯಗಳ ಕಾರಣಗಳಿಂದಾಗಿ ನ್ಯಾಯ ಪಡೆಯುವುದರಿಂದ ವಂಚಿತನಾಗಬಾರದೆಂದು, ಉಚಿತ ಮತ್ತು ಸಕ್ಷಮ ಕಾನೂನು ಸೇವೆಗಳನ್ನು ಸಮಾಜದ ದುರ್ಬಲ ವರ್ಗಗಳಿಗೆ ಒದಗಿಸುವ ಸಲುವಾಗಿ ಜನತಾ ನ್ಯಾಯಾಲಯಗಳನ್ನು ವ್ಯವಸ್ಥೆಗೊಳಿಸಲು ಹಾಗೂ ಸಮಾನ ಅವಕಾಶಗಳ ಆಧಾರದ ಮೇಲೆ ನ್ಯಾಯಾಂಗ ವ್ಯವಸ್ಥೆ ಕಾರ್ಯ ನಿರ್ವಹಿಸಿ ನ್ಯಾಂiÀi ಒದಗಿಸುವಂತೆ ಮಾಡುವ ಶ್ರೇಷ್ಠ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅತೀ ತ್ವರಿತ ಹಾಗೂ ವೆಚ್ಚವಿಲ್ಲದೆ ರಾಜೀ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸಿ ನ್ಯಾಯ ದೊರಕಿಸಲು ಆಗಸ್ಟ್ 13ರಂದು ರಾಷ್ಟ್ರೀಯ ಲೋಕ್ ಅದಾಲತ್ ಏರ್ಪಡಿಸಲಾಗಿದೆ. ಈ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಎಲ್ಲಾ ರೀತಿಯ ರಾಜಿಯಾಗಬಹುದಾದ ವ್ಯಾಜ್ಯ ಪೂರ್ವ…









