ಮಧುಗಿರಿ: ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ಶಿವನಗೆರೆಯ. ಕೆರೆ ಕೋಡಿ ಬಿದ್ದಿದ್ದು ಕೋಡಿಯ ನೀರು ಸಾರ್ವಜನಿಕ ರಸ್ತೆಗೆ ಹರೀದಿದ್ದು ರಸ್ತೆಯಲ್ಲಿ ಎರಡು ಅಡಿ.ನೀರು ನಿಂತಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ರಸ್ತೆಯಲ್ಲಿ ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಭೇಟಿ ನೀಡಿ ಪರಿಶೀಲಿಸಿ ನೀರಿನ ಹಾನಿಯ ಬಗ್ಗೆ ಮತ್ತು ಬೆಳೆ ಹಾನಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು ನಂತರ ಶಿವನ ಗೆರೆಯ. ಭೂತರಾಯನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ನಾಗೇಶ್ ಬಾಬು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿನ್ನಪ್ಪ ಮುಖಂಡರುಗಳಾದ.ಬಸವನಹಳ್ಳಿ ನಾಗರಾಜಪ್ಪ .ಗುಟ್ಟೆ ರಮೇಶ್. ಕಾರ್ಪೆನಹಳ್ಳಿ ರಂಗನಾಥ್.ಗ್ರಾಮಪಂಚಾಯಿತಿ ಸದಸ್ಯರಾದ .ರಮೇಶ್ ಗೌಡ.ಮಹೇಶ್. ಮತ್ತಿತರರು ಹಾಜರಿದ್ದರು.
Author: News Desk Benkiyabale
ಕೊರಟಗೆರೆ: ದರ್ಪ ದೌರ್ಜನ್ಯಗಳಿಲ್ಲದ ಸ್ವಚ್ಛ ಪ್ರಾಮಾಣಿಕವಾದ ಗೌರವ ಘನತೆಯುಳ್ಳ ಸರ್ಕಾರಿ ಸೇವೆಗಳನ್ನು ಪಡೆಯುವುದು ಸ್ವಾಭಿಮಾನಿ ಕನ್ನಡಿಗರ ಹಕ್ಕು ಅದನ್ನು ಸಕಾರಗೊಳಿಸಲೆಂದೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯದಾದ್ಯಂತ “ಕರುನಾಡು ಕಟ್ಟೋಣ” ಅಭಿಯಾನವನ್ನು ನಡೆಸುತ್ತಿದ್ದು ಕಳೆದ ಎರಡು ದಿನದಿಂದ ಕೊರಟಗೆರೆ ತಾಲೂಕಿನಲ್ಲಿ ರೈತರ ಮಹಿಳೆಯರ ಸಾರ್ವಜನಿಕರ,ಯುವಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಕೊರಟಗೆರೆ ಜಿಲ್ಲಾ ಪಂಚಾಯತಿ ಕ್ಷೇತ್ರಗಳು, ತಾಲ್ಲೂಕು ಪಂಚಾಯತಿ ಕ್ಷೇತ್ರಗಳು, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಒಳಗೊಂಡಂತೆ ಕ್ರಿಯಾ ಯೋಜನಾ ಸಮಿತಿ ರಚಿಸುತ್ತಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕನ್ನಡ ನಾಡಿನ ಪ್ರಣಾಳಿಕೆಗಳನ್ನು ಈ ತಾಲ್ಲೂಕಿಗೆ ಅನ್ವಯಿಸುವಂತೆ ಕಾರ್ಯಚರಣೆ ಮಾಡುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನ ಸಿಂಧೂ ಸ್ವಾಮಿ ಕೊರಟಗೆರೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಕೊರಟಗೆರೆ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಪ್ಲೆಕ್ಸ್ ರಾಜಕಾರಣ ರಾರಾಜಿಸುತ್ತಿದ್ದು, ಈ ದೇಶದ ಸುಪ್ರೀಂ ಕೋರ್ಟ್, ಹೈ ಕೋರ್ಟ್ ನೀಡಿರುವ ಅದೇಶಗಳನ್ನು ಇವರುಗಳೇ ಮುರಿಯುತ್ತಿದ್ದು ,…
ಕುಣಿಗಲ್ : ಕಿಡಿಗೇಡಿಗಳು ತಮ್ಮ ಸ್ವಾರ್ಥಕ್ಕಾಗಿ ಕೆರೆಯ ಕೋಡಿಯನ್ನು ಹೊಡೆದು, ನೀರನ್ನು ಹೊರಬಿಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಬೇಗೂರು ಕೆರೆಯಲ್ಲಿ ಗುರುವಾರ ನಡೆದಿದೆ. ಈ ಭಾರಿ ಸತತವಾಗಿ ಸುರಿದ ನಿರಂತರ ಮಳೆಯಿಂದ್ದಾಗಿ ಕಳೆದ ೨೨ ವರ್ಷಗಳ ಬಳಿಕ ಬೇಗೂರು ಕೆರೆ ತುಂಬಿ ಕೆರೆ ಕೋಡಿ ಬಿದ್ದಿದೆ, ಇದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಸಂತಸಕ್ಕೆ ಕಾರಣವಾಗಿದೆ, ಸಂತಸದಲ್ಲಿ ಇದ್ದ ರೈತರಿಗೆ ದುಷ್ಟಕರ್ಮಿಗಳು ಕೆರೆಯ ಕೋಡಿ ಹೊಡೆದು ನೀರು ಹೊರ ಬಿಟ್ಟಿರುವುದರಿಂದ ಅಘಾತಕ್ಕೆ ಕಾರಣವಾಗಿದೆ. ದುಷ್ಕರ್ಮಿಗಳು ಕೆರೆಯ ಕೋಡಿಯ ಸುಮಾರು ನಾಲ್ಕು ಅಡಿಗೂ ಅಧಿಕ ಕಲ್ಲು ತೆಗೆದು ಸುಮಾರು ಎರಡು ಅಡಿ ಅಳ ತೆಗೆದು ನೀರನ್ನು ಹೊರಗೆ ಬಿಟ್ಟಿದ್ದಾರೆ, ಇದನ್ನು ನೋಡಿದ ಗ್ರಾಮಸ್ಥರು ಹೇಮಾವತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ, ತಕ್ಷಣ ಕಾರ್ಯಪ್ರವೃತರಾದ ಹೇಮಾವತಿ ಎಇಇ ರವಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದರು, ದುಷ್ಟಕರ್ಮಿಗಳು ಹೊಡೆದು ಹಾಕಿರುವ ಕೆರೆಯ ಕೋಡಿಯನ್ನು ಪರಿಶೀಲಿಸಿದರು, ಬಳಿಕ ಸ್ಥಳೀಯ ಜನರ ಸಹಕಾರದೊಂದಿಗೆ ಹಾಳಾಗಿರುವ ಕೆರೆಯ ಕೋಡಿ ಜಾಗಕ್ಕೆ ಕಲ್ಲುಗಳನ್ನು…
ತುಮಕೂರು : ಗಣೇಶೋತ್ಸವ ಅಂಗವಾಗಿ ನಗರದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅಳವಡಿಸಿದ್ದ ವಿ.ಡಿ ಸಾವರ್ಕರ್ ಫ್ಲೆಕ್ಸ್ ಅನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಹಿಂದೂ ಏಕತಾ ಗಣೇಶೋತ್ಸವ ಅಂಗವಾಗಿ ವಿ.ಎಚ್.ಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಜಯನಗರದ ಅನ್ನಪೂರ್ಣೇಶ್ವರಿ ದೇವಾಲಯದ ಬಳಿ ಗುರುವಾರ ರಾತ್ರಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅನುಮತಿ ಇಲ್ಲದೇ ಫ್ಲೆಕ್ಸ್ ಅಳವಡಿಸಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು ಬಳಿಕ ಫ್ಲೆಕ್ಸ್ ತೆರವುಗೊಳಿಸಿದರು. ಈ ವೇಳೆ ಭಜರಂಗದಳ ಸಂಚಾಲಕ ಮಂಜುಭಾರ್ಗವ್, ಫ್ಲೆಕ್ಸ್ ಅಳವಡಿಸಲು ಈಗಾಗಲೇ ಪಾಲಿಕೆಗೆ ಅನುಮತಿ ಕೋರಿ ಪತ್ರ ನೀಡಲಾಗಿದೆ. ಆದರೆ ಇನ್ನೂ ಅನುಮತಿ ಸಿಕ್ಕಿಲ್ಲ. ಸಾವರ್ಕರ್ ಫ್ಲೆಕ್ಸ್ ತೆರವು ಮಾಡುವುದಾದರೆ ಅನುಮತಿ ಇಲ್ಲದೇ ಕಟ್ಟಿರುವ ಇತರೆ ಫ್ಲೆಕ್ಸ್’ಗಳನ್ನು ಕೂಡ ತೆರವುಗೊಳಿಸಬೇಕು ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ತುಮಕೂರು : ಬಾಲ ಭವನ ಸೊಸೈಟಿ, ಬೆಂಗಳೂರು ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇವರುಗಳು ಸಹಭಾಗಿತ್ವದಲ್ಲಿಂದು ಗಣೇಶ ಚತುರ್ಥಿ ಅಂಗವಾಗಿ ಪರಿಸರ ಮಿತ್ರ ಗಣಪತಿ ರಚನೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯದರ್ಶಿಗಳು ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಂ. ಎಸ್. ಶ್ರೀಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ವಿದ್ಯಾ ಗಣಪತಿ ಹಬ್ಬದ ಆಚರಣೆ ಮಕ್ಕಳಲ್ಲಿ ತುಂಬಾ ಸಂತೋಷ ಮತ್ತು ಆಸಕ್ತಿದಾಯಕ ಹಬ್ಬ. ಈ ಹಬ್ಬವನ್ನು ಆಚರಣೆ ಮಾಡುವಾಗ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ವಿವಿಧ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಳಸಿ ಸಿದ್ಧಪಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದರಿಂದ ಭೂಮಂಡಲದ ಇಡೀ ಜೀವರಾಶಿಗೆ ಹಾನಿಯುಂಟಾಗುತ್ತದೆ. ಆದ್ದರಿಂದ ಪರಿಸರ ಮಿತ್ರ ಗಣಪನ ಯಾವುದೇ ವಿಷಕಾರಿ ಬಣ್ಣಗಳನ್ನು ಬಳಸದೆ ತಯಾರಿಸುವುದರಿಂದ ಇಡೀ ಮಾನವ ಸಂಕುಲವನ್ನು ಅನಾರೋಗ್ಯದಿಂದ ರಕ್ಷಿಸಬಹುದಾಗಿದೆ ಎಂದು ತಿಳಿಸಿದರು. ಶ್ರೀ ಗಣೇಶನ…
ತುಮಕೂರು : ಸಿದ್ದಗಂಗಾ ಸಂಸ್ಥೆಯ ವೈದ್ಯಕೀಯ ಮತ್ತು ಸಂಶೋಧನಾ ಮಹಾವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ ಅಭಿನಂದಿಸಿದ್ದಾರೆ. ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಮೂರನೇ ಕಾಲೇಜು ಸ್ಥಾಪನೆಗೆ ಈ ಹಿಂದೆ ರಾಜ್ಯ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಶಿಫಾರಸ್ಸು ಮಾಡಿದ್ದರ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳ ಪರಿಶೀಲನೆ ಮಾಡಿದ ನಂತರ, ಆಯೋಗವು ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿದ್ದು ವೈದ್ಯಕೀಯ ವಿದ್ಯಾರ್ಜನೆ ಮಾಡುವ ವಿಧ್ಯಾರ್ಥಿಗಳು ಹಾಗೂ ಶ್ರೀ ಸಿದ್ದಗಂಗಾ ಕ್ಷೇತ್ರದ ಭಕ್ತ ಸಮೂಹಕ್ಕೆ ಸಂತಸ ಮೂಡಿಸಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿನ ಆದಿಚುಂಚನಗಿರಿ ಮಹಾಸಂಸ್ಥಾನ, ಚಿತ್ರದುರ್ಗದ ಬೃಹನ್ಮಠ, ಮೈಸೂರಿನ ಜೆಎಸ್ಎಸ್, ಸಿರಿಗೆರೆಯ ತರಳಬಾಳು ಮುಂತಾದ ಪ್ರತಿಷ್ಠಿತ ಮಠಗಳು ವೈದ್ಯಕೀಯ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು , ಈ ಸಾಲಿಗೆ ಸಿದ್ದಗಂಗಾ ವೈದ್ಯಕೀಯ ಕಾಲೇಜಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ಸೇರ್ಪಡೆಗೊಂಡಿದೆ ಎಂದು ಕೆ.ಪಿ.ಮಹೇಶ ಹೇಳಿದ್ದಾರೆ.
ತುಮಕೂರು : ಇಂದು ಬೆಳೆಗಿನಜಾವ ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸ್ಗೂರು ಮೂಲದ 9 ಜನರ ದುರ್ಮರಣ ಸಂಭವಿಸಿರುವ ಘಟನೆ ಕುರಿತು ತೀವ್ರ ಆತಂಕ ಹಾಗೂ ಸಂತಾಪವನ್ನು ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಅವರು ಕೂಡಲೇ ಸಾವನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಬೇಕು ಮತ್ತು ಸಾವನಪ್ಪಿದ ಪ್ರತಿ ಕುಟುಂಬಕ್ಕೆ ರೂ 25ಲಕ್ಷ ಪರಿಹಾರವನ್ನ ಸರ್ಕಾರ ಮತ್ತು ಕಲ್ಯಾಣ ಮಂಡಳಿಯಿಂದ ಘೋಷಿಸಬೇಕು ಮತ್ತು ಗಾಯಾಳುಗಳಿಗೂ ಸೂಕ್ತ ಪರಿಹಾರ ಹಾಗೂ ಸಂಪೂರ್ಣ ಚಿಕಿತ್ಸಾವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ಎಂದು ಆಗ್ರಹಿಸಿದೆ. ರಾಯಚೂರು ಜಿಲ್ಲೆಯ ಸಿರವಾರ, ಮಾನ್ವಿ, ಮತ್ತು ಸಿಂಧನೂರಿನಿಂದ ವಾಹನದಲ್ಲಿ 20 ಜನರು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ದುಡಿಯಲು ಹೊರಟಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ.…
ತುಮಕೂರು: ಕಳೆದ ಸೋಮವಾರ ತುಮಕೂರಿನಲ್ಲಿ ಸುರಿದ ಭಾರಿ ಮಳೆಗೆ ಕ್ಯಾತ್ಸಂದ್ರ ಸರ್ವಿಸ್ ರಸ್ತೆಯ ಗೋಕುಲ ಬಡಾವಣೆ ರೈಲ್ವೆ ಗೇಟ್ ಹತ್ತಿರ ಚಲಿಸುತ್ತಿದ್ದ ಆಟೋ ಮೇಲೆ ಬಾರಿ ಗಾತ್ರದ ಮರದ ರಂಬೆ ಬಿದ್ದು ಭಾರತಿ ನಗರದ ಆಟೋ ಚಾಲಕನಾದ ಮೋಹನ್ ಕುಮಾರ್ ರವರಿಗೆ ಗಂಭೀರ ಗಾಯವಾಗಿದ್ದು ಘಟನೆಯಲ್ಲಿ ಆಟೋ ಚಾಲಕನ ಬೆನ್ನು ಮೂಳೆ ಮುರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಪ್ರಾಣಪಯವಾಗದೆ ಪಾರಾಗಿದ್ದಾರೆ. ಆದರೆ ಘಟನೆಯಲ್ಲಿ ಗಾಯಗೊಂಡ ಆಟೋ ಚಾಲಕ ಹಲಗೂ ವರ್ಷದಿಂದ ಸಮಾಜ ಸೇವೆ ಮಾಡುತ್ತಿದ್ದು ಘಟನೆಯಿಂದ ಆಟೋ ಸಂಪೂರ್ಣ ಜಖಂಗೊಂಡಿದ್ದು ಆಟೋ ಚಾಲಕನ ಜೀವನ ಅತಂತ್ರ ಸ್ಥಿತಿಯಲ್ಲಿದ್ದ ಕಾರಣ ಇಂದು ಮಾಜಿ ಸಚಿವ ಸೊಗಡು ಶಿವಣ್ಣ ಮಾಹಿತಿ ತಿಳಿದು ಕೂಡಲೇ ಆಟೋ ಚಾಲಕ ಮೋಹನ್ ಕುಮಾರ್ ರವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ದ ಅವರು ತುಮಕೂರು ತಾಸಿಲ್ದಾರ್ ರವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿ ಪ್ರಕೃತಿ ವಿಕೋಪದಡಿ ಇಂದ ಘಟನೆ ಜರುಗಿದ್ದು ಆಟೋ…
ತುಮಕೂರು: ಶ್ರೀಮತಿ ಡಿ.ಎಸ್.ಜಯಲಕ್ಷ್ಮಮ್ಮ ಗ್ರಾಮೀಣಾಭಿವೃದ್ದಿ ಸಂಸ್ಥೆ(ರಿ) ತುಮಕೂರು ಜಿಲ್ಲೆಯ ಇವರವತಿಯಿಂದ ಸಂಸ್ಥೆಯ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಭವನದಲ್ಲಿ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪೂರ್ತಿ ಡೆವಲ್ಪರ್ಸ್‍ನ ಮಾಲೀಕರು ಹಾಗೂ ಸಮಾಜ ಸೇವಕರಾದ ಎಸ್.ಪಿ.ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್,ವಿದ್ಯಾರ್ಥಿಗಳು ಡಾ.ಅಬ್ದುಲ್ ಕಲಾಂ ಅವರು ಹೇಳಿರುವಂತೆ ದೊಡ್ಡ ಕನಸುಗಳನ್ನು ಕಾಣಬೇಕು.ನಮ್ಮ ಮುಂದೆ ಐಎಎಸ್, ಐಪಿಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿದ್ದು,ಕೀಳಿರಿಮೆ ಬಿಟ್ಟು, ಅಗತ್ಯವಾದ ಮಾರ್ಗದರ್ಶನ ಮತ್ತು ಸತತ ಪರಿಶ್ರಮದಿಂದ ಜಯಗಳಿಸದರೆ, ಭವಿಷ್ಯವೇ ನಿಮ್ಮದಾಗಲಿದೆ. ಈ ನಿಟ್ಟಿನಲ್ಲಿ ನಿಮ್ಮೇಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪೂರ್ತಿ ಡೆವಲ್ಪರ್ಸ್‍ನ ಎಸ್.ಪಿ.ಚಿದಾನಂದ ಮಾತನಾಡಿ,ಒಂದು ಕಾಲದಲ್ಲಿ ನಾನು ಕೂಡ ಓದು, ಬರಹಕ್ಕೆ ದುಡ್ಡು ಹೊಂದಿಸಲಾಗದ ಸ್ಥಿತಿಯಿಂದ ಕಷ್ಟಪಟ್ಟು ಇಂದಿನ ಸ್ಥಿತಿಗೆ…
ಮಧುಗಿರಿ :- ಪಟ್ಟಣಕ್ಕೆ ಹೊಂದಿಕೊಂಡಿರುವ ಸಿದ್ದಾಪುರ ಗೇಟ್ ನಲ್ಲಿ ನೆಲೆಸಿರುವ ಶ್ರೀ ನಂಜುಂಡೇಶ್ವರ ಸ್ವಾಮಿಯ ಅನುಗ್ರಹದಿಂದ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಹಾಗೂ ಪಂಚಮುಖಿ ಆಂಜನೇಯ ಮತ್ತು ಶ್ರೀ ಕಾರ್ತ ವೀರಾರ್ಜುನ ದೇವರುಗಳ ಸ್ಥಿರಬಿಂಬ ಪ್ರತಿಷ್ಠಾಪನೆಯನ್ನು ನಂಜನಗೂಡಿನ ಪ್ರಧಾನ ಆಗಮಿಕ ವೇದಬ್ರಹ್ಮ ಶ್ರೀ ನಾಗಚಂದ್ರ ದೀಕ್ಷಿತರು ಮತ್ತು ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ಕೃಷ್ಣ ದೀಕ್ಷಿತರ ಸಮ್ಮುಖದಲ್ಲಿ ಗುರುವಾರದಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ಎಂ. ಎಸ್. ವಿನಯ್ ಶರ್ಮಾ ಈ ವೇಳೆ ಮಾತನಾಡಿ, ಜಗತ್ತಿಗೆ ಗುರುಗಳಾದ ಗುರು ದತ್ತಾತ್ರೇಯರನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೇವರಿಗೆ ಯಾವುದೇ ಜಾತಿ ಮತ ಭೇದ ಇಲ್ಲದೆ ಸದ್ಗುರುವಿನ ಸ್ಥಾನ ಪಡೆದಿದ್ದು ಸರ್ವರಿಗೂ ದರ್ಶನ ಪ್ರಾಪ್ತಿ ವಾಗಲಿದೆ. ಅದು ನಂಜುಂಡೇಶ್ವರನ ಪ್ರಾಕಾರದಲ್ಲೇ ಸ್ಥಿರ ಬಿಂಬ ಪ್ರತಿಷ್ಠಾಪನೆ ಆಗಿರುವುದು ಸಂತಸ ತಂದಿದೆ ಎಂದರು. ತುಮಕೂರು ಜಿಲ್ಲೆಯಲ್ಲಿಯೇ ಶ್ರೀ ಕಾರ್ತ ವೀರ್ಯಾರ್ಜುನ ದೇವರು ಎಲ್ಲೂ ಪ್ರತಿಷ್ಠಾಪನೆ ಆಗಿಲ್ಲ. ಈ ದೇವರಲ್ಲಿ ಮನುಷ್ಯ ನ…





