Author: News Desk Benkiyabale

ತುಮಕೂರು:      ಜಿಲ್ಲೆಯ ಕೊರಟಗೆರೆ ತಾಲ್ಲೂಕು ಬೊಮ್ಮಲದೇವಿಪುರ ಗ್ರಾಮದ ರಂಗನಾಥ್ ಎಂಬ 35 ವರ್ಷದ ಯುವಕ ಕೊರೋನದಿಂದ ಮೃತಪಟ್ಟಿದ್ದು ಮೃತ ದೇಹವನ್ನು ಶವಸಂಸ್ಕಾರ ಮಾಡಲು ಸಂಬಂಧಿಕರು ಭಯದಿಂದ ನಿರಾಕರಿಸಿದ್ದರು.      ಈ ಕಾರಣದಿಂದ ಗುಲಾಮಗಿರಿ ಚಿತ್ರದ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಟೈಗರ್ ನಾಗ್. ಜೆಟ್ಟಿ ಅಗ್ರಹಾರ ನಾಗರಾಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಯಾಜ್ ಅಹಮದ್ ಮತ್ತು ಮುಸ್ಲಿಂ ತಂಡದವರು ಸ್ಧಳಕ್ಕೆ ಆಗಮಿಸಿ ಮೃತ ದೇಹವನ್ನು ಶವಸಂಸ್ಕಾರ ಮಾಡಿ ಮಾನವಿಯತೆ ಮೆರೆದಿದ್ದಾರೆ.      ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ ಮಾಡಲು ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ತಿಳಿಸಿದರು ಯಾರೋಬ್ಬರೂ ಸಹಾಯಕ್ಕೆ ಬಂದಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಎಷ್ಟು ಭಾರಿ ಕರೆ ಮಾಡಿದರೂ ಕರೆಯನ್ನು ನಿರಾಕರಿಸಿದರು. ಇಂತಹ ಅಧಿಕಾರಿಗಳನ್ನ ಅಮಾನತ್ತು ಮಾಡಿ ಕೆಲಸದಿಂದ ವಜಾ ಮಾಡಬೇಕು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಮದ್ ಫಾರೂಕ್,…

Read More

ಚಿಕ್ಕನಾಯಕನಹಳ್ಳಿ :      ಕೊರೊನಾ ಲಾಕ್ ಡೌನ್ ಹಲವಾರು ಜನರ ಬದುಕಿನಲ್ಲಿ ನುಂಗಲಾರದ ತುತ್ತಾಗಿದ್ದು. ಅನೇಕರ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದೆ. ತಾಲೂಕಿನಲ್ಲಿ ಹಲವಾರು ಜನ ಬಡವರು ಒಪ್ಪತ್ತಿನ ಊಟಕ್ಕೂ ಯೋಚನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.        ಅದೇ ರೀತಿ ಪಟ್ಟಣದ ನೆಹರು ಸರ್ಕಲ್ ಬಳಿ ಹಸಿವಿನಿಂದ ಕೂತಿದ್ದ ಅಜ್ಜಿಯನ್ನು ಗಮನಿಸಿದ ಪಿಎಸ್‍ಐ ಹರೀಶ್ ರವರು ಅಜ್ಜಿಗೆ ತಿಂಡಿ ಹಾಗೂ ಬ್ರೆಡ್ ವ್ಯವಸ್ಥೆಯನ್ನು ಮಾಡಿಕೊಟ್ಟರು. ಇವರ ಈ ಕಾರ್ಯಕ್ಕ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ

Read More

ಮಧುಗಿರಿ:       ಬುಧವಾರ ಬೆಳಗಿನ ಜಾವದಲ್ಲಿ ಗುಡುಗು-ಸಿಡಿಲು-ಮಿಂಚಿನ ಸಹಿತ ಸುರಿದ ಮಳೆಗೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹದಿಮೂರನೆಯ ವಾರ್ಡಿನಲ್ಲಿರುವ ಬಹುತೇಕ ಮನೆಗಳಿಗೆ ಮಳೆ ನೀರಿನ ಜೊತೆ ಚರಂಡಿ ನೀರು ಸೇರಿ ನುಗ್ಗಿರುವ ಘಟನೆ ನಡೆದಿದೆ. ಪುರಸಭಾ ಸದಸ್ಯ ನರಸಿಂಹಮೂರ್ತಿರವರ ಮನೆಗೂ ನೀರು ನುಗ್ಗಿದ್ದು ಅಕ್ಕ ಪಕ್ಕದ ಮನೆಗಳಲ್ಲಿ ಇಂತಹ ಅನುಭವವಾಗಿದೆ. ಈ ವಾರ್ಡಿನಲ್ಲಿ ರಘು ಹೋಟೆಲ್ ಸಮೀಪ ನಿರ್ಮಿಸಿರುವ ಡಕ್ ನ ಒಳಭಾಗದಲ್ಲಿ ಕಾಂಕ್ರೀಟ್ ಹಾಕಿ ಎಷ್ಟೋ ದಿನಗಳಾಗಿದ್ದರೂ ನೀರು ಸರಾಗವಾಗಿ ಹರಿಯುವಂತೆ ಮಾಡದ ಕಾಮಗಾರಿಯೇ ಪ್ರಮುಖ ಕಾರಣ ಎನ್ನುತ್ತಾರೆ ಇಲ್ಲಿನ ನಾಗರಿಕರು. ಬೂರ್ಕನಹಟ್ಟಿಯಲ್ಲಿರುವ ಬಹುತೇಕ ಮನೆಗಳ ಸಂಪುಗಳಲ್ಲಿ ಚರಂಡಿ ನೀರು ತುಂಬಿಕೊಂಡು ದುರ್ವಾಸನೆ ಹೆಚ್ಚಾಗಿ ಸಂಪುಗಳ ಸ್ವಚ್ಚಮಾಡಿಕೊಳ್ಳುವುದರಲ್ಲಿ ಸಾಕು ಸಾಕಾಯಿತು ಗೃಹಿಣಿಯರ ಪಾಡು.       ಟೌನ್ ಹಾಲ್ ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಇರುವ ವಾಣಿಜ್ಯ ಮಳಿಗೆಗಳಿಗೆ ಚರಂಡಿ ನೀರು ನುಗ್ಗಿದೆ. ಪೆÇೀಸ್ಟ್ ಆಫೀಸ್‍ನಿಂದ ಬರುವ ರಾಯಗಾಲುವೆ ನೀರು ಸರಾಗವಾಗಿ ಹರಿಯದ ಕಾರಣ ರಾಯಗಾಲುವೆಯಲ್ಲಿ…

Read More

ತುಮಕೂರು :     ಕೋವಿಡ್ ಸೋಂಕಿತರ ಆರೈಕೆಗಾಗಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‍ಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ಕೋವಿಡ್ ಕೇರ್ ಸೆಂಟರ್‍ಗಳಲ್ಲಿಯೂ ನೀರು, ಊಟದ ವ್ಯವಸ್ಥೆ ವ್ಯವಸ್ಥಿತವಾಗಿರಬೇಕು. ಕಾಲ ಕಾಲಕ್ಕೆ ಅನುಗುಣವಾಗಿ ಔಷಧಗಳನ್ನು ಕೊಡಬೇಕು. ಎಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸಬೇಕು ಎಂದು ನಿರ್ದೇಶಿಸಿದರು.       ಅಗತ್ಯ ಇರುವ ಸೋಂಕಿತರಿಗೆ ಮಾತ್ರವೇ ಆಕ್ಸಿಜನ್ ನೀಡಬೇಕು. ಸೋಂಕಿತರು ಕೇಳಿತ್ತಾರೆಂಬ ಕಾರಣಕ್ಕೆ ಆಕ್ಸಿಜನ್ ಕೊಡಬಾರದು.ವೈದ್ಯರು ಪರೀಕ್ಷಿಸಿ ಸೋಂಕಿತರಿಗೆ ಆಕ್ಸಿಜನ್ ನೀಡುವ ಅಗತ್ಯವಿದ್ದರೆ ಕೊಡಬೇಕು.ಅನಗತ್ಯವಾಗಿ ಆಕ್ಸಿಜನ್ ಕೊಡಬಾರದು ಎಂದು ತಿಳಿಸಿದರು. ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಬೇಕು. ಹಾಸಿಗೆ, ಆಮ್ಲಜನಕ ಕೊರತೆ ನೀಗಿಸಲು ಕೋವಿಡ್ ಗೆ ಕಡಿವಾಣ ಹಾಕಲೇಬೇಕು. ಆಸ್ಪತ್ರೆಗಳಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ನರ್ಸ್ ಗಳ ಮೇಲೆ ಬಿಡಬಾರದು.…

Read More

ಗುಬ್ಬಿ:       ಕರೋನಾ ಮಹಾಮಾರಿಯು ಗುಬ್ಬಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಇರುವುದು ಒಂದೆಡೆಯಾದರೆ ಕಸಬಾ ಹೋಬಳಿಯ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮೊದಲು ಗ್ರಾಮದಲ್ಲಿ ಸುಮಾರು 35 ಜನ ಕೋವಿಡ್ ಖಾಯಿಲೆಗೆ ತುತ್ತಾಗಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ತಿಳಿಸಿದ್ದಾರೆ.       ಹೇರೂರು ಗ್ರಾಮ ಪಂಚಾಯ್ತಿಗೆ ಎಂಟು ಗ್ರಾಮಗಳು ಸೇರಿದ್ದು ಸುಮಾರು 8216 ಜನಸಂಖ್ಯೆಯುಳ್ಳ ಈ ಗ್ರಾಮ ಪಂಚಾಯ್ತಿಗೆ ಮದಲೂರು ಗ್ರಾಮವು ಸೇರಿದ್ದು 1035 ಜನಸಂಖ್ಯೆಯುಳ್ಳ ಗ್ರಾಮವಾಗಿದ್ದು ಪ್ರತಿ ಮನೆಗೆ ಮೂರು ಬಾರಿ ಸ್ಯಾನಿಟೈಸರ್ ಮಾಡಿಸಲಾಗಿತ್ತು. ಬೇರೆ ಬೇರೆ ನಗರಗಳಿಂದ ಈ ಗ್ರಾಮಕ್ಕೆ ಬಂದಂತಹ ವ್ಯಕ್ತಿಗಳಿಂದ ರೋಗವು ಹೆಚ್ಚಾಗುತ್ತಿದ್ದು ಪ್ರತಿಯೊಂದು ಮನೆಯ ಎಲ್ಲಾ ವ್ಯಕ್ತಿಗಳಿಂದ ಗಂಟಲು ದ್ರವವನ್ನು ತೆಗೆಯುತ್ತಿದ್ದೇವೆ. ಅವಶ್ಯಕತೆ ಇರುವ ವ್ಯಕ್ತಿಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಿ ಹಾಗೂ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು ರೋಗವು ಉಲ್ಬಣಗೊಂಡ ಕಾರಣ ಈ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ ಎಂದರು. ಗ್ರಾಮ ಸುತ್ತಮುತ್ತಲಿನ ಪ್ರದೇಶದ ಜನರು ನಿರ್ಬಂಧಿತ…

Read More

ತುಮಕೂರು:      ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ 121 ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಸೋಂಕಿನ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ.       ತುಮಕೂರು ತಾಲೂಕಿನ ಬೆಳಗುಂಬ, ಕೆಸ್ತೂರ್, ತಿಮ್ಮರಾಜನಹಳ್ಳಿ, ಕೋರಾ, ಅರಕೆರೆ, ಸ್ವಾಂದೇನಹಳ್ಳಿ, ಊರುಕೆರೆ, ಬೆಳ್ಳಾವಿ, ದೊಡ್ಡನಾರವಂಗಲ, ಬುಗುಡನಹಳ್ಳಿ, ಮಲ್ಲಸಂದ್ರ, ಸೀತಕಲ್ಲು, ಹಿರೇಹಳ್ಳಿ, ಮೈದಾಳ, ಕೆಸರುಮಡು, ಹೊನ್ನುಡಿಕೆ, ಹೊಳಕಲ್, ಪಾಲಸಂದ್ರ, ಹರಳೂರು, ಹೆತ್ತೇನಹಳ್ಳಿ, ಹೆಬ್ಬೂರು, ಕನಕೊಪ್ಪೆ, ಗಂಗೋನಹಳ್ಳಿ,ಸಿರಿವರ, ಬಳ್ಳಗೆರೆ, ನಾಗವಲ್ಲಿ, ಹೆಗ್ಗೆರೆ ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಘೋಷಿಸಲಾಗಿದೆ. ಅದರಂತೆಯೇ, ಗುಬ್ಬಿ ತಾಲೂಕಿನ ಹಾಗಲವಾಡಿ, ಮಂಚಲದೊರೆ, ಹೊಸಕೆರೆ, ಚೇಳೂರು, ಬಿದರೆ, ಮೂಗನಾಯಕನಕೋಟೆ, ದೊಡ್ಡಗುಣಿ, ಮಾರಶೆಟ್ಟಿಹಳ್ಳಿ, ನಿಟ್ಟೂರು, ಅಮ್ಮನಗಟ್ಟ, ಎಂಎಚ್.ಪಟ್ನ, ಹಡಗೂರು, ಹೇರೂರು, ಕಡಬ, ಜಿ.ಹೊಸಹಳ್ಳಿ, ಸಿ.ಎಸ್.ಪುರ. ಶಿರಾ ತಾಲೂಕಿನ ತಡಕಲೂರು, ದೊಡ್ಡಬಣಗೆರೆ, ಹುಲಿಕುಂಟೆ, ದ್ವಾರನಕುಂಟೆ, ಬೇವಿನಹಳ್ಳಿ, ಬರಗೂರು, ಹಂದಿಕುಂಟೆ, ನಾದೂರು, ಹೆಂದೊರೆ, ಹುಣಿಸೇಹಳ್ಳಿ, ತಾವರೇಕೆರೆ, ಗೌಡಗೆರೆ, ಭುವನಹಳ್ಳಿ, ಲಕ್ಷ್ಮಿ ಸಾಗರ, ಕೊಟ್ಟ, ಮೇಲುಕುಂಟೆ,…

Read More

ತುಮಕೂರು:       ಕೋವಿಡ್-19 ಸೋಂಕಿತರಿಗೆ ಹಾಸಿಗೆಗಳನ್ನು ಕಾಯ್ದಿರಿಸುವ ಸಂಬಂಧ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ವೈದ್ಯರನ್ನು ನಿಯೋಜಿಸಿದ್ದಾರೆ.       ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿದಿನ 2000- 2500 ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಹೆಚ್ಚಿನ ಸೋಂಕಿತರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಸದರಿ ಸೋಂಕಿತರನ್ನು ವೈದ್ಯಕೀಯ ವಿದ್ಯಾಲಯ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಸರ್ಕಾರದ ನಿರ್ದೇಶನದಂತೆ ಪ್ರತ್ಯೇಕವಾಗಿ ವಿಭಾಗವಾರು ಹಾಸಿಗೆಗಳನ್ನು ಕಾಯ್ದಿರಿಸಬೇಕು. ವೈದ್ಯಕೀಯ ವಿದ್ಯಾಲಯಗಳಲ್ಲಿ ಒಟ್ಟು ಹಾಸಿಗೆಗಳ ಪೈಕಿ ಶೇ.75% ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ.50% ರಷ್ಟು ಹಾಸಿಗಗಳನ್ನು ಕಾಯ್ದಿರಿಸಬೇಕು. ಜಿಲ್ಲಾ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಅಧಿಕಾರಿಗಳು ಖಾಸಗಿ ವೈದ್ಯಕೀಯ ವಿದ್ಯಾಲಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರಿಗೆ ಹಾಸಿಗೆಗಳನ್ನು ಕಾಯ್ದಿರಿಸುವ ಬಗ್ಗೆ ಕ್ರಮವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.      …

Read More

ತುಮಕೂರು :         ಕೋವಿಡ್-19 ತಡೆಗಟ್ಟಲು ಹಿನ್ನೆಲೆಯಲ್ಲಿ ಸರ್ಕಾರದ ನೂತನ ಮಾರ್ಗ ಸೂಚಿಗಳಂತೆ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ 40ಕ್ಕಿಂತ ಹೆಚ್ಚಿನ ಜನ ಸೇರದಂತೆ ಈಗಾಗಲೇ ನಿಗಧಿಯಾಗಿರುವ ಮದುವೆ ಕಾರ್ಯವನ್ನು ನೆರವೇರಿಸಿಕೊಳ್ಳಲು ಮಾತ್ರ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರ್ ಗಳಿಗೆ ಸೂಚಿಸಿದ್ದಾರೆ.        ಮದುವೆ ಕಾರ್ಯ ನೆರವೇರಿಸಿಕೊಳ್ಳು ಸರ್ಕಾರದ ನಿರ್ದೇಶನದಂತೆ ಷರತ್ತುಗಳಿಗೊಳಪಡಿಸಿಯೇ ಅನುಮತಿ ನೀಡಬೇಕು. ಅನುಮತಿ ಪತ್ರ ಮತ್ತು ಗರಿಷ್ಠ 40 ಪಾಸ್ ಗಳನ್ನು ವಿತರಿಸಬೇಕು. ಸದರಿ ಪಾಸ್‍ಗಳು ದುರ್ಬಳಕೆಯಾಗದಂತೆ ಅಗತ್ಯ ಕ್ರಮವಹಿಸಲು ಆಗಿಂದಾಗ್ಗೆ ತಮ್ಮ ವ್ಯಾಪ್ತಿಯಲ್ಲಿ ಪರಿವೀಕ್ಷಣೆ ಕೈಗೊಳ್ಳಬೇಕು. ಕೋವಿಡ್-19 ನಿಯಂತ್ರಣ ಮಾರ್ಗಸೂಚಿಯನ್ನು ಪಾಲಿಸದೇ ಇರುವವರ ವಿರುದ್ಧ ವಿಪತ್ತು ನಿರ್ವಹಣ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ತಡೆ ಅಧಿನಿಯಮಗಳ ಅನ್ವಯ ಶಿಸ್ತು ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿದ್ದಾರೆ.         ಸರ್ಕಾರದ ಆದೇಶದಂತೆ, ಕೋವಿಡ್-19 ನಿಯಂತ್ರಣ ಸಂಬಂಧ ಮದುವೆ ಕಾರ್ಯಗಳಿಗೆ 40 ಜನಕ್ಕಿಂತ ಹೆಚ್ಚಿನ…

Read More

ಹುಳಿಯಾರು:       ಪತ್ರಿಕೆಯ ವರದಿಯ ಫಲಶೃತಿಯಾಗಿ ಹುಳಿಯಾರು ಮುಕ್ತಿಧಾಮಕ್ಕೆ ಬೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.        ಹುಳಿಯಾರಿನ ಮುಕ್ತಿಧಾಮದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲಿ ಅಂತ್ಯಕ್ರಿಯೆ ನಡೆಸುವ ಅನಿವಾರ್ಯ ಕರ್ಮ ದಶಕಗ ಳಿಂದಲೂ ಇತ್ತು. ಟಿ.ಬಿ.ಜಯಚಂದ್ರ ಅವರೊಮ್ಮೆ, ಜೆ.ಸಿ.ಮಾಧುಸ್ವಾಮಿ ಅವರೊ ಮ್ಮೆ ಮುಕ್ತಿಧಾಮದ ಅಭಿವೃದ್ಧಿಗೆ ಹಣ ಕೊಟ್ಟರಾದರೂ ವಿದ್ಯುತ್ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಪರಿಣಾಮ ಟಾರ್ಚ್, ಚಾರ್ಜರ್ ಲೈಟ್, ಮೊಬೈಲ್ ಲೈಟ್, ಕಾರು, ಬೈಕ್ ಹೆಡ್‍ಲೈಟ್ ಬೆಳಕಲ್ಲಿ ರಾತ್ರಿವೊತ್ತು ಅಂತ್ಯಕ್ರಿಯೆ ನಡೆಸುತ್ತಿದ್ದರು.        ಮುಕ್ತಿಧಾಮದ ಸುತ್ತ ಕಾಂಪೌಂಡ್ ವ್ಯವಸ್ಥೆ ಯಿಲ್ಲದೆ ತಂತಿಬೇಲಿ ಮಾತ್ರ ಹಾಕಲಾಗಿತ್ತು. ಬೇಲಿಯ ಸುತ್ತಲೂ ಜಾಲಿಗಿಡಗಳು ಸೇರಿದಂತೆ ಅನಗತ್ಯ ಗಿಡ ಗಂಟೆಗಳು ಬೆಳದಿದ್ದು ರಾತ್ರಿ ಅಂತ್ಯಕ್ರಿಯೆಗೆ ಬರುವವರು ವಿಷಜಂತುಗಳ ಭಯದಲ್ಲಿ ಗಂಟೆಗಟ್ಟಲೆ ನಿಂತು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ಕೆಲ ಸಮುದಾಯದವರು ರಾತ್ರಿ ಕತ್ತಲೆಯಲ್ಲೇ ಸ್ನಾನ, ಸೇರಿದಂತೆ ಇತರೆ ಕಾರ್ಯಗಳನ್ನೂ ಮಾಡುತ್ತಿದ್ದರು. ಮುಕ್ತಿಧಾಮದ ಈ ಸಮಸ್ಯೆಗಳ ಬಗ್ಗೆ ಪತ್ರಿಕೆ ವಿಸ್ಕøತಿ ವರದಿ…

Read More

ತುಮಕೂರು :        ಮಹಾನಗರ ಪಾಲಿಕೆ, ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘ ಹಾಗೂ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಂಟಿಯಾಗಿ ನಗರದ 19 ಮತ್ತು 20ನೇ ವಾರ್ಡಿನ ಮುಖಂಡರ ಸಭೆಯನ್ನು ಎನ್,ಆರ್ ಕಾಲೋನಿ ಶೈಕ್ಷಣಿಕ ಭವನದಲ್ಲಿ ಕರೆದು ಕೋವಿಡ್ 2ನೇ ಅಲೆಯ ಮುಂಜಾಗ್ರತೆ ಹಾಗೂ ಲಸಿಕೆ ಜಾಗೃತಿಗೆ ಸಂಬಂಧಿಸಿದಂತೆ ಮೇಯರ್ ಮತ್ತು ಆಯುಕ್ತರಿಂದ ಅರಿವಿನ ಕಾರ್ಯಕ್ರಮ ಮಾಡಲಾಯಿತು.       ಸಭೆಯಲ್ಲಿ ಮೊದಲಿಗೆ ಕೋತಿತೋಪಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮಹೇಶ್ ಮತ್ತು ಪಾವನ ಆಸ್ಪತ್ರೆಯ ಡಾ. ಮುರುಳೀಧರ್ ಮಾತನಾಡಿ ಪ್ರತಿನಿತ್ಯ 2 ವಾರ್ಡ್‍ಗಳಿಂದ 50 ರಿಂದ 60 ಸೋಂಕಿತರು ಪತ್ತೆಯಾಗುತ್ತಿದ್ದು ಕೋವಿಡ್ 2ನೇ ಅಲೆಯಲ್ಲಿನ ಅಪಾಯದ ಬಗ್ಗೆ ತಿಳಿವಳಿಕೆಯಿಲ್ಲದ ಬಹುತೇಕ ಈ ಭಾಗದ ಬಡವರಿಗೆ ಚಿಕಿತ್ಸೆ ಪಡೆಯಲು ಕಷ್ಟವಾಗಿದೆ. ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬಂದಾಗ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಕೃತಕವಾಗಿ ಬೆಡ್ ಅಭಾವವನ್ನು ಸೃಷ್ಟಿಸಿ ಅಗತ್ಯವಿದ್ದವರು ಅಡ್ಮಿಟ್ ಆಗಲು ಒತ್ತಡ ಏರುತ್ತಿದ್ದು ಅಗತ್ಯವಿರುವವರಿಗೆ ಬೆಡ್…

Read More