ತುಮಕೂರು : ತುಮಕೂರು ಭಾಜಪ ಜಿಲ್ಲಾ ಅಧ್ಯಕ್ಷರು ಹಾಗೂ ಮಾಜಿ ಜನಪ್ರಿಯ ಶಾಸಕರಾದ ಶ್ರೀ ಬಿ.ಸುರೇಶ್ ಗೌಡ ರವರು ಮದ್ಯ ರಾತ್ರಿ ಸಮಯದಲ್ಲಿ ಕಣಕುಪ್ಪೆಯ ನರಸಿಂಹಮೂರ್ತಿರವರಿಗೆ ಕೋವಿಡ್ ಬಂದಿರುವ ವಿಷಯ ತಿಳಿದು, ಕೊರಟಗೆರೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೇರಿಸಿ, ತದನಂತರ ಬೆಳಗ್ಗೆ ಹೋಗಿ ಬೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ. ವೈದ್ಯರ ಜೊತೆ ಮಾತನಾಡಿ ವೈದ್ಯರಿಗೆ ಪ್ರಶಂಸೆಯನ್ನು ನೀಡಿ, ಇನ್ನು ಏನಾದರೂ ವೆಂಟಿಲೇಟರ್ ಆಕ್ಸಿಜನ್ ಸಮಸ್ಯೆ ಕಂಡಲ್ಲಿ ನನಗೆ ತಕ್ಷಣವೇ ಕರೆ ಮಾಡಿ ತಿಳಿಸಿ, ಅದಕ್ಕೆ ಸೂಕ್ತವಾದ ಸಮಯದಲ್ಲಿ ಒದಗಿಸಿಕೊಡುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ವೈದ್ಯರಾದ ಪ್ರಕಾಶ್ ಸರ್ ಹಾಗೂ ಕೊರಟಗೆರೆ ಮಂಡಲದ ಭಾರತೀ ಯ ಜನತಾ ಪಾರ್ಟಿಯ ಅಧ್ಯಕ್ಷರಾದ ಪವನ್ ಕುಮಾರ್ ರವರು ಹಾಜರಿದ್ದರು.
Author: News Desk Benkiyabale
ತುಮಕೂರು : ಕೊರೋನಾ ವಿರುದ್ಧ ಸೈನಿಕರಂತೆ ದಣಿವರಿಯದೆ ಹೋರಾಡುತ್ತಿರುವ ವೈದ್ಯರು, ಪೆÇಲೀಸರು ಸೇರಿದಂತೆ ಫ್ರಂಟ್ ಲೈನ್ ವರ್ಕರ್ಸ್ ಗಳ ಆರೋಗ್ಯ ರಕ್ಷಣೆಗಾಗಿ ಸ್ಪಿರುಲಿನಾ ಫೌಂಡೇಶನ್ ವತಿಯಿಂದ ಕೊರಟಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿಂದು ಹಮ್ಮಿಕೊಂಡಿದ್ದ ‘ರಕ್ಷಕರನ್ನು ರಕ್ಷಿಸಿ’ ಅಭಿಯಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಚಾಲನೆ ನೀಡಿದರು. ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಯೋಧರ ಆರೋಗ್ಯ ರಕ್ಷಣೆಗಾಗಿ ಸ್ಪಿರುಲಿನಾ ಫೌಂಡೇಶನ್ ಪ್ರಾರಂಭಿಸಿರುವ ಅಭಿಯಾನ ಉತ್ತಮವಾಗಿದೆ. ವೆಂಟಿಲೇಟರ್, ಆಮ್ಲಜನಕ ಸಿಲಿಂಡರ್, ಹಾಸಿಗೆಗಳನ್ನು ಖರೀದಿಸಬಹುದು, ಆದರೆ ಶಕ್ತಿಯುತ ವೈದ್ಯರು, ದಾದಿಯರು ಸೇರಿದಂತೆ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಹೋರಾಡುತ್ತಿರುವವರನ್ನು ವಾರಾಂತ್ಯದಲ್ಲಿ ಬದಲಾಯಿಸಲು ಅಥವಾ ಹೊಸದಾಗಿ ಉತ್ಪನ್ನ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅವರ ಆರೋಗ್ಯ ರಕ್ಷಣೆ ಮುಖ್ಯವಾಗಿದೆ. ಕಳೆದ ಒಂದು ವರ್ಷದಿಂದ ದಣಿವರಿಯದೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ನಾವೆಲ್ಲರೂ ಅವರನ್ನು ಬೆಂಬಲಿಸೋಣ ಎಂದು ಹೇಳಿದರು. …
ತುಮಕೂರು: ಕೊರಟಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ಮಹಾತ್ಮಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಕೆ.ವಿದ್ಯಾಕುಮಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಮನೆ ತೋಟ ಗ್ರಾಮದ ಸಂಜೀವಮ್ಮ ಕೋಂ ವೆಂಕಟಗಿರಯಪ್ಪನವರ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಕೃಷಿಹೊಂಡ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿಗಧಿತ ಸಮಯಕ್ಕೆ ಕೂಲಿ ಹಣ ಪಾವತಿಯಾಗಿರುವ ಬಗ್ಗೆ ಕೂಲಿ ಕಾರ್ಮಿಕರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ ಗ್ರಾಮೀಣ ಭಾಗಕ್ಕೆ ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶದಿಂದ ಯಾರಾದರೂ ಗ್ರಾಮಗಳಿಗೆ ಬಂದಿದ್ದರೆ, ಅವರಿಗೆ ಉದ್ಯೋಗ ಚೀಟಿ ಇದ್ದಲಿ ಅವರಿಗೂ ನರೇಗಾ ಅಡಿ ಕೆಲಸ ನೀಡಲಾಗುವುದು. ಇದನ್ನು ಗ್ರಾಮೀಣ ಭಾಗದ ಜನ ಸದುಪಯೋಗ ಪಡಿಸಿಕೊಳ್ಳುವಂತೆ ಸಿಇಓ ರವರು ಸಲಹೆ ನೀಡಿದರು. ಬಳಿಕ ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ…
ಚಿಕ್ಕನಾಯಕನಹಳ್ಳಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿ ಬಿದ್ದಿದ್ದು, ಸಾಮಾಜಿಕ ಅಂತರವಿಲ್ಲದೆ ಲಸಿಕೆ ನೀಡಲಾಗುತ್ತಿತ್ತು. ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜನರಿಗೆ ಲಸಿಕೆ ಪಡೆಯುವ ಬಗ್ಗೆ ಆಸಕ್ತಿಬಂದಿದೆ. ಈ ಕಾರಣದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ದಿನದಿಂದ ದಿನಕ್ಕೆ ಹೆಚ್ಚು ಜನ ಬರಲಾರಂಭಿಸಿದ್ದಾರೆ. ಬುಧವಾರವೂ ಸಹ ಸಾರ್ವಜನಿಕ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯಲು ಆಗಮಿಸಿದ್ದರು. ಒಬ್ಬರಿಗೆ ಲಸಿಕೆ ಹಾಕುವುದಕ್ಕೆ ಸಮಯ ಹಿಡಿಯುತ್ತದೆ, ಹೆಸರು, ವಿಳಾಸ, ವಿವರ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿಕೊಂಡು ಲಸಿಕೆ ನೀಡಲು ಕನಿಷ್ಠ 15 ನಿಮಿಷವಾದರೂ ಬೇಕಾಗುತ್ತದೆ. ಅದರಂತೆ ಇಂದು ಲಸಿಕಾ ಕೊಠಡಿಯಲ್ಲಿ ಜನರ ಒತ್ತಡ ಜಾಸ್ತಿಯಿತ್ತು, ಇಲ್ಲಿ ಸಮಾಜಿಕ ಅಂತರವೂ ಇರಲಿಲ್ಲ, ಅಲ್ಲಿ ನಿರ್ವಹಣೆಗೆ ಇದ್ದ ಒಬ್ಬರೇ ಪೊಲೀಸ್ ಸಿಬ್ಬಂದಿ ಅಸಹಾಯಕರಂತೆ ಇದ್ದರು. ಆರೋಗ್ಯಸಿಬ್ಬಂದಿಗಳೂಸಹ ಇದರ ಬಗ್ಗೆ ಗಮನಹರಿಸಿರಲಿಲ್ಲ, ಸಾರ್ವಜನಿಕ ಆಸ್ಪತ್ರೆಗಳಲ್ಲಿಯೇ ಈ…
ಕೊರಟಗೆರೆ : ದೊಡ್ಡಬಳ್ಳಾಪುರ ಪಟ್ಟಣದ ಖಾಸಗಿ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳರ ತಂಡ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ತಂಗುದಾಣದ ಬಳಿ ಚಿನ್ನ-ಬೆಳ್ಳಿ ಮತ್ತು ಹಣವನ್ನು ಹಂಚಿಕೊಳ್ಳುವ ವೇಳೆ ಕೋಳಾಲ ಕ್ರೈಂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ. ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ತಂಗುದಾಣದ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಗಳೇ ದೊಡ್ಡಬಳ್ಳಾಪುರದ ಮನೆಯ ಕಳ್ಳತನದ ಆರೋಪಿಗಳು. ಕೋಳಾಲ ಪೊಲೀಸ್ ಠಾಣೆಯ ಮುಖ್ಯಪೇದೆ ಮೋಹನಕುಮಾರ್ ಮತ್ತು ಜಯಸಿಂಹ ಆರೋಪಿಗಳನ್ನು ಪ್ರಶ್ನಿಸಿ ಪರಿಶೀಲನೆ ನಡೆಸಿದಾಗ ಬ್ಯಾಗಿನಲ್ಲಿದ್ದ ಬೆಳ್ಳಿಯ ಒಡವೆಗಳು ಪತ್ತೆಯಾಗಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಮಾವಿನಕೆರೆ ಗ್ರಾಮದ ಅನಿಲ್, ಕೊರಟಗೆರೆ ತಾಲೂಕು ದೊಡ್ಡಸಾಗ್ಗೆರೆ ಗ್ರಾಮದ ಆನಂದ ಬಂಧಿತರು. ಇನ್ನೋರ್ವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕೃಷ್ಣನ ಪತ್ತೇಗಾಗಿ ಈಗಾಗಲೇ ಕೋಳಾಲ ಪಿಎಸೈ ನವೀನಕುಮಾರ್ ನೇತೃತ್ವದ ಪೊಲೀಸರ ತಂಡ ಬಲೆ ಬಿಸಿದೆ. ದೊಡ್ಡಸಾಗ್ಗೆರೆ ತಂಗುದಾಣದ ಬಳಿ ಆರೋಪಿಗಳಿಂದ 440ಗ್ರಾಂನ ಒಂದು…
ಕೊರಟಗೆರೆ: ತುಮಕೂರಿನ ಎವಿಎಲ್ ರಾಕ್ ಡ್ರೀಲ್ಸ್ ಬೊರ್‍ವೇಲ್ ವಾಹನದ ಕಾರ್ಮಿಕರಿಗೆ ಚಾಕು ತೊರಿಸಿ ಕೂಲೆ ಮಾಡುವ ಬೆದರಿಕೆಯೊಡ್ಡಿ ಲಕ್ಷಾಂತರ ರೂ ಮೌಲ್ಯದ ಬೀಟ್‍ಗಳ ಜೊತೆ 2ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಕೊರಟಗೆರೆ ಪಟ್ಟಣದ ಬೈಪಾಸ್-ಮಲ್ಲೇಶಪುರ ರಸ್ತೆಯ ಬಳಿ ಮಂಗಳವಾರ ತಡರಾತ್ರಿ ಸಿನಿಮೀಯ ರೀತಿಯಲ್ಲಿ ಕಳ್ಳರತಂಡ ಕಳ್ಳತನ ಮಾಡಿದ್ದಾರೆ. ಕಾರಿನಲ್ಲಿ ಬಂದಿದ್ದ ಮೂರು ಜನ ಕಳ್ಳರತಂಡ ಕೆಲಸಗಾರರಿಗೆ ಚಾಕು ತೊರಿಸಿ ಮಾತನಾಡಿದರೇ ಕೂಲೆ ಮಾಡುವ ಬೇದರಿಕೆ ಹಾಕಿದ್ದಾರೆ. ತುಮಕೂರು ನಗರದ ಎವಿಎಲ್ ರಾಕ್ ಡ್ರೀಲ್ಸ್‍ಗೆ ಸೇರಿದ ಬೋರ್‍ವೇಲ್ ವಾಹನದಲ್ಲಿದ್ದ ಸುಮಾರು 6ಲಕ್ಷ ಮೌಲ್ಯದ ಡ್ರೀಲ್ಲಿಂಗ್ ಬೀಟ್ ಮತ್ತು ಸಹಾಯಕ ವಾಹನದಲ್ಲಿದ್ದ 2ಲಕ್ಷ ನಗದು ಹಣ ಕಳ್ಳತನ ಆಗಿದೆ. ಕಳ್ಳರತಂಡ ಕೆಲಸಗಾರರ ದ್ವೀಚಕ್ರ ವಾಹನದ ವೈರ್‍ಗಳನ್ನು ಕಡಿತಗೊಳಿಸಿ ಪರಾರಿ ಆಗಿದ್ದಾರೆ. ವ್ಯವಸ್ಥಾಪಕ ಸುನೀಲ್‍ಕುಮಾರ್ ಮಾತನಾಡಿ ಕಳೆದ ಎರಡು ವರ್ಷದಿಂದ…
ಹುಳಿಯಾರು : ಕೊರೊನಾ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಘೋಷಿಸಿರುವ ಲಾಕ್‍ಡೌನ್ ನಿಯಮಗಳನ್ನು ಮೀರಿ, ಅನಾವಶ್ಯಕವಾಗಿ ರಸ್ತೆಗಿಳಿದ ಸುಮಾರು 50 ಕ್ಕೂ ಹೆಚ್ಚು ಬೈಕ್‍ಗಳನ್ನು ಹುಳಿಯಾರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾಕ್‍ಡೌನ್ ಮಾರ್ಗಸೂಚಿಯಂತೆ ಬೆಳಿಗ್ಗೆ 6 ಗಂಟೆಯಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಜನರು 10 ಗಂಟೆ ನಂತರವೂ ರಸ್ತೆಗಳಲ್ಲಿ ಓಡಾಡುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಯುವಕರು ಬೈಕ್ ಏರಿ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಔಷಧ ಮಾತ್ರೆ ಖರೀದಿ, ಆಸ್ಪತ್ರೆಗೆ ಹೋಗುವ ಸಬೂಬು ಹೇಳುತ್ತಾ ಮನೆಯಿಂದ ಹೊರ ಬಂದು ಪಟ್ಟಣ ಸುತ್ತುವುದು ಸಾಮಾನ್ಯವಾಗಿತ್ತು. ಪರಿಣಾಮ ಬೆಳಿಗ್ಗೆ 10ರ ನಂತರ ಠಾಣಾಧಿಕಾರಿ ಕೆ.ಟಿ.ರಮೇಶ್ ಮತ್ತು ಸಿಬ್ಬಂದಿ ಪಟ್ಟಣದಲ್ಲಿ ಗಸ್ತು ತಿರುಗುವಾಗ ಸರ್ಕಾರದ ನಿಯಮಗಳನ್ನು ಮೀರಿ ಮತ್ತು ಅನವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿದ್ದ ಹಲವರ ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದಾರೆ. ಲಾಕ್‍ಡೌನ್ ವೇಳೆ ಮನೆಯಿಂದ…
ತುಮಕೂರು : ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಗಾಗಿ ಸಿದ್ಧಗಂಗಾ ಮಠದ ವತಿಯಿಂದ ಸಿದ್ಧಗಂಗಾ ಆಸ್ಪತ್ರೆ ಸಹಯೋಗದೊಂದಿಗೆ ಶ್ರೀ ಸಿದ್ಧಗಂಗಾ ಮಠ ಕೋವಿಡ್ ಕೇರ್ ಸೆಂಟರ್ ಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಹಾಗೂ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಚಾಲನೆ ನೀಡಿದರು. ಸದರಿ ಕೋವಿಡ್ ಕೇರ್ ಸೆಂಟರ್ ಅನ್ನು ಸಿದ್ಧಗಂಗಾ ಮಠದ ಮುಖ್ಯರಸ್ತೆಯಲ್ಲಿರುವ ಯಾತ್ರಿ ನಿವಾಸದಲ್ಲಿ ತೆರೆಯಲಾಗಿದ್ದು 80 ಹಾಸಿಗೆಯುಳ್ಳದ್ದಾಗಿದೆ. ಜಿಲ್ಲಾ ಆಸ್ಪತ್ರೆಯಿಂದ ಸೂಚಿತಗೊಳ್ಳುವ ಕೋವಿಡ್ ಸೋಂಕಿತರಿಗೆ ಐಸೋಲೇಶನ್ ವ್ಯವಸ್ಥೆ ಮಾಡಲಾಗಿದ್ದು ಇಲ್ಲಿ ನೀಡಲಾಗುವ ಊಟ,ಔಷಧಿ ಸೇರಿದಂತೆ ಪ್ರತಿಯೊಂದು ಸೌಲಭ್ಯವೂ ಉಚಿತವಾಗಿರಲಿದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಬಳಕೆಯಾಗುವಂತೆ ಸೀಮಿತ ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಲಾಗಿದ್ದು ಸೋಮವಾರದಿಂದಲೇ ಸೋಂಕಿತರಿಗೆ ಲಭ್ಯವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಓ ಡಾ.ಕೆ.ವಿದ್ಯಾಕುಮಾರಿ, ಡಿಹೆಚ್ ಓ ಡಾ.ನಾಗೇಂದ್ರಪ್ಪ, ಎಸಿ ಅಜಯ್, ಸಿದ್ಧಗಂಗಾ…
ತುಮಕೂರು : ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ರೆಮಿಡಿಸಿವಿರ್ ಮಾರಾಟ ಮಾರುತ್ತಿದ್ದ ಸಿದ್ದಗಂಗಾ ಆಸ್ಪತ್ರೆಯ ಇಬ್ಬರು ಸಿಬ್ಬಂದಿ ಸೇರಿ ಮೂವರನ್ನು ಪೆÇಲೀಸರು ಬಂಧಿಸಿದ್ದಾರೆ. ಸಿದ್ದಗಂಗಾ ಆಸ್ಪತ್ರೆಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಹರ್ಷದ್, ಸಿದ್ದಗಂಗಾ ಆಸ್ಪತ್ರೆಯಲ್ಲಿ ಸಿಟಿ ಎಕ್ಸ್‍ರೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಖೀಬ್, ಸೂರ್ಯ ಆಸ್ಪತ್ರೆಯಲ್ಲಿ ಒಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಂಗನಾಥ ಬಂಧಿತರು. ಸೋಂಕಿತರಿಗೆ ಅಗತ್ಯವಿರುವ ರೆಮಿಡಿಸಿವಿರ್ ಇಂಜೆಕ್ಷನ್ ಅನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತುಮಕೂರು ಪೆÇಲೀಸರು ದಾಳಿ ನಡೆಸಿದ್ದರು. ನಗರದ ಗುಂಚಿ ವೃತ್ತದಲ್ಲಿ ಆರೋಪಿಗಳನ್ನು ಬಂಧಿಸಿ 3 ರೆಮಿಡಿಸಿವರ್ ಇಂಜೆಕ್ಷನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು 4700 ರೂ. ಬೆಲೆ ಬಾಳುವ ಇಂಜೆಕ್ಷನ್‍ಗಳನ್ನು 17 ಸಾವಿರ ರೂ. ಗೆ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು : ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲಾ ಕ್ಷೇತ್ರಗಳ ಶಾಸಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ಕೈಗೊಂಡಿರುವ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದರು. ತಾಲೂಕುಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ, ಆಮ್ಲಜನಕ ಮತ್ತು ರೆಮಿಡಿಸಿವರ್ ಸಮರ್ಪಕವಾಗಿ ಲಭ್ಯವಾಗುತ್ತಿರುವ ಮತ್ತು ಕೊರತೆಗಳ ಬಗ್ಗೆ ಮಾಹಿತಿ ಪಡೆದರು. ಹಳ್ಳಿಗಳಲ್ಲಿ ಕೋವಿಡ್ ವ್ಯಾಪಕವಾಗುವುದಕ್ಕೆ ಕಡಿವಾಣ ಹಾಕಬೇಕು. ಹಾಗಾಗಿ ಹೋಂ ಕ್ವಾರಂಟೈನ್‍ನಲ್ಲಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್‍ಗೆ ಸ್ಥಳಾಂತರಿಸಬೇಕು. ಹೋಂ ಕ್ವಾರಂಟೈನ್‍ನಲ್ಲಿರುವ ಸೋಂಕಿತರ ಮನೆಯವರ ಸ್ವಾಬ್ ಸಂಗ್ರಹ ಮಾಡಿ ವರದಿ ಬರುವವರೆಗೂ ಅವರನ್ನು ಕ್ವಾರಂಟೈನ್ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಆರ್ ಟಿಪಿಸಿಆರ್ ವರದಿ ಇಲ್ಲದೇ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಇತರೆ ಕಾಯಿಲೆಗಳಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಆಸ್ಪತ್ರೆಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು ಎಂದು ತಾಲೂಕು…











