Author: News Desk Benkiyabale

ತುಮಕೂರು:       ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳದ ಸಹಕಾರದೊಂದಿಗೆ ನಗರದ ವಿವಿಧಡೆ ಸಾನಿಟೈಜರ್ ಸಿಂಪಡಿಸುವ ಕಾರ್ಯ ನಡೆದಿದ್ದು, ಬುಧವಾರ 15ನೇ ವಾರ್ಡಿನ ಸಿಎಸ್‍ಐ ಲೇಔಟ್‍ನಲ್ಲಿ ರಸ್ತೆಗಳಿಗೆ ಸಾನಿಟೈಜರ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.       ಬೆಂಗಳೂರು ನಗರಕ್ಕೆ ಹತ್ತಿರವಾಗಿರುವ ತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಪಾಲಿಕೆ ಆರೋಗ ಸ್ಥಾಯಿ ಸಮಿತಿಯ ಸಭೆಯಲ್ಲಿ ಪ್ರಕರಣ ಹೆಚ್ಚಿರುವ ಬಡಾವಣೆಗಳಿಗೆ ಸಾನಿಟೈಜರ್ ನಡೆಸಲು ತೀರ್ಮಾನ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ, ನಗರಪಾಲಿಕೆಗಳಿಗೆ ಹತ್ತಿರದಲ್ಲಿಯೇ ಇರುವ, ವ್ಯಾಪಾರಸ್ಥರ ಕುಟುಂಬಗಳೇ ವಾಸವಾಗಿರುವ ಸಿಎಸ್‍ಐ ಬಡಾವಣೆಗೆ ಸಾನಿಟೈಜರ್ ಸಿಂಪಡಿಸುವ ಕಾರ್ಯ ಕೈಗೊಳ್ಳಲಾಯಿತು.        ಈ ವೇಳೆ ಮಾತನಾಡಿದ ನಗರಪಾಲಿಕೆ 15ನೇ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಮಾತನಾಡಿ, ಸಿಎಸ್‍ಐ ಲೇಔಟ್‍ನಲ್ಲಿ 9 ರಸ್ತೆಗಳಿಂದ 600ಕ್ಕು ಹೆಚ್ಚು ಮನೆಗಳಿವೆ. ನಗರದ ಹೃದಯ ಭಾಗದಲ್ಲಿರುವ ಈ ಬಡಾವಣೆಯಲ್ಲಿ ಕೋವಿಡ್…

Read More

 ಹುಳಿಯಾರು :          ಕೊರೊನಾ ನಿಯಂತ್ರಣಕ್ಕೆ ಹುಳಿಯಾರು ಪಟ್ಟಣ ಪಂಚಾಯಿತಿ ವತಿಯಿಂದ ವ್ಯಾಪ್ತಿಯಲ್ಲಿ ರೋಗ ನಿರೋಧಕ ಸಿಂಪಡಣೆ ಮತ್ತು ಅಂಗಡಿಗಳಲ್ಲಿ ಖರೀದಿಗೆ ಅಂತರ ಕಾಯ್ದುಕೊಳ್ಳಲು ಗುರುತು ಮಾಡಲಾಯಿತು.       ಹುಳಿಯಾರು ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ವಾರದಿಂದ ಹೆಚ್ಚಾಗಿರುವುದರಿಂದ ನಿವಾಸಿಗಳು ಭಯಭೀತರಾಗಿದ್ದಾರೆ. ಹಾಗಾಗಿ ಪ್ರಥಮ ಹಂತದಲ್ಲಿ ಸೋಂಕು ತಗುಲಿರುವ ವ್ಯಕ್ತಿಯ ಮನೆಯ ಸುತ್ತ ಸ್ಯಾನಿಟೈಸರ್ ಮಾಡಲಾಗಿತ್ತು.       ಎರಡನೇ ಹಂತವಾಗಿ ಹುಳಿಯಾರು ಪಟ್ಟಣದಲ್ಲಿನ ಅಂಗಡಿ, ಮುಂಗಟ್ಟು, ದೇವಸ್ಥಾನ ಆವರಣ, ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಯಿತು. ನಂತರ ಬಡಾವಣೆಗಳಲ್ಲಿ ಸಿಂಪಡಣೆ ಮಾಡಲಾಗುವುದು.        ಬೆಳಗ್ಗೆ 6 ರಿಂದ 10 ಗಂಟೆಯವರೆವಿಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಪಟ್ಟಣದಲ್ಲಿ ಜನಸಂದಣೆ ಹೆಚ್ಚಾಗುತ್ತದೆ. ಹಾಗಾಗಿ ವ್ಯಾಪಾರಕ್ಕೆ ಬರುವ ಜನರಲ್ಲಿ ಅಂತರ ಕಾಯ್ದುಕೊಳ್ಳಲು ಅಂಗಡಿಗಳ ಮುಂದೆ 6 ಅಡಿ ಅಂತರದ ಬಣ್ಣ ಬಳಿದು ಗುರುತು ಮಾಡುವ…

Read More

ತುಮಕೂರು:          ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಏಪ್ರಿಲ್ 27ರ ರಾತ್ರಿ 9 ಗಂಟೆಯಿಂದ ಮಾರ್ಚ್ 12ರ ಬೆಳಿಗ್ಗೆ 6ಗಂಟೆಯವರೆಗೆ ಜಾರಿಗೊಳಿಸಿರುವ ಕಫ್ರ್ಯೂ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.          ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಮೂಲಕ ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕಿನ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಅವರು ಸೂಚನೆಗಳನ್ನು ನೀಡಿದರು.          ಕಫ್ರ್ಯೂ ಅವಧಿಯಲ್ಲಿ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಯಾವ್ಯಾವ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆಯೋ ಅವುಗಳಿಗೆ ಅವಕಾಶ ಮಾಡಿಕೊಡಿ. ಅನಗತ್ಯವಾಗಿ ತಿರುಗಾಡುವವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಿದರು.        ಯಾವುದೇ ಕಾರಣಕ್ಕೂ ಯಾವುದಕ್ಕೂ ಯಾರಿಗೂ ಪಾಸ್ ವಿತರಿಸುವುದಿಲ್ಲ. ಹಾಗಾಗಿ ಅನುಮತಿ ಕಲ್ಪಿಸಲಾಗಿರುವ ಚಟುವಟಿಕೆಗಳಿಗೆ ತೆರಳುವವರಿಗೆ ಅವರ ಐಡಿ ಕಾರ್ಡ್…

Read More

ಹುಳಿಯಾರು:       ಹೋಬಳಿ ವ್ಯಾಪ್ತಿಯ ಅಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲಿ ಸಂತೋಷ ಮೂಡಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.      ಈಗಾಗಲೆ ಬಂದಿರುವ ಮಳೆಗೆ ರೈತರು ತಮ್ಮ ಕೃಷಿ ಭೂಮಿಯನ್ನ ಸಿದ್ದಪಡಿಸಿಕೊಂಡಿದ್ದು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈಗ ಬಿತ್ತನೆಗೆ ಅಗತ್ಯವಾದ ಹೆಸರು, ಉದ್ದು, ಜೋಳ, ತೊಗರಿ ಬೀಜಗಳನ್ನ, ರಸಗೋಬ್ಬರವನ್ನ ಖರೀಧಿಸಲು ರೈತಸಂಪರ್ಕ ಕಚೇರಿ ಹಾಗೂ ಖಾಸಗಿ ರಸಗೊಬ್ಬರದ ಅಂಗಡಿಗಳಿಗೆ ಅಲೆದಾಡುತ್ತಿದ್ದಾರೆ.        ಬಿತ್ತನೆಗೆ ಅಗತ್ಯವಾದ ಡಿಐಪಿ, 20-20 ರಸಗೋಬ್ಬರವನ್ನ ಖರೀಧಿಸಲು ಖಾಸಗಿ ರಸಗೋಬ್ಬರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ರಸಗೋಬ್ಬರವನ್ನ ತೆಗೆದುಕೊಂಡು ಹೊಗಲು ಮುಂದಾಗಿದ್ದಾರೆ.

Read More

ತುಮಕೂರು:       ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಆಮ್ಲಜನಕ ಉತ್ಪಾದನೆ ಪೂರೈಕೆ ಘಟಕಕ್ಕೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆಮ್ಲಜನಕದ ಬೇಡಿಕೆ ಹಾಗೂ ಪೂರೈಕೆ ಕುರಿತು ಪರಿಶೀಲನೆ ನಡೆಸಿದರು. ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಅಮೋಘ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿರುವ ಆಮ್ಲಜನಕದ ಮಾಹಿತಿ ಪಡೆದರು. ಬಳಿಕ ಹಂಚಿಕೆದಾರರಾದ ಶ್ರೀದೇವಿ ಹಾಗೂ ಪದ್ಮಶ್ರೀ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಅಕ್ರಮ ದಾಸ್ತಾನು ಇಟ್ಟುಕೊಂಡು ಆಮ್ಲಜನಕ ಕೊರತೆ ಸೃಷ್ಟಿ ಉಂಟು ಮಾಡಬಾರದು. ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು ಎಂದು ನಿರ್ದೇಶನ ನೀಡಿದರು. ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಆಮ್ಲಜನಕ ಬೇಡಿಕೆ ಕುರಿತಂತೆ ಪರಿಶೀಲನೆ ನಡೆಸಿದರು. ತದನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆಮ್ಲಜನಕ ಹಾಗೂ ರೆಮಿಡಿಸಿಯರ್ ಪೂರೈಕೆಯನ್ನು ಪರಿಶೀಲಿಸಿ, ಕೋವಿಡ್ ಸೋಂಕಿತರಿಗೆ…

Read More

ತುಮಕೂರು      ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ವಾರಂತ್ಯದ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಅವರು ನಗರದಲ್ಲಿಂದು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ವಿಕೇಂಡ್ ಕಫ್ರ್ಯೂ ಪರಿಶೀಲನೆ ನಡೆಸಿದರು. ನಗರದ ಟೌನ್‍ಹಾಲ್, ಅಶೋಕ ರಸ್ತೆ, ಬಿಹೆಚ್ ರಸ್ತೆ, ಶಿವಕುಮಾರ ಸ್ವಾಮೀಜಿ ಸರ್ಕಲ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಕಫ್ರ್ಯೂ ಅನುಷ್ಠಾನದ ಪರಿಶೀಲಿಸಿ,ಅನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಸರ್ಕಾರದ ಆದೇಶದಂತೆ ವಿಕೇಂಡ್ ಕಫ್ರ್ಯೂ ಜಾರಿಮಾಡಲಾಗಿದೆ. ಸಾರ್ವಜನಿಕರು ಸಹಕರಿಸಿ ಇದರ ಸದೋಪಯೋಗ ಪಡಿಸಿಕೊಂಡು ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಅನಗತ್ಯವಾಗಿ ಹೊರಗಡೆ ಓಡಾಡದೇ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದರು.       ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿಯವರು ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್‍ಗಳೊಂದಿಗೆ ಇಂದು ವಿಡೀಯೋ ಕಾನ್ಪರೇನ್ಸ್ ಮೂಲಕ ಕೋವಿಡ್ ನಿಯಂತ್ರಣ ಸಭೆ ನಡೆಸಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶೀಘ್ರ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿ,…

Read More

ತುಮಕೂರು:        ಜಿಲ್ಲೆಯಲ್ಲಿ ಹೋಂ ಐಸೋಲೇಷನ್/ಹೋಂ ಕ್ವಾರಂಟೈನಲ್ಲಿರುವ ಸೋಂಕಿತರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‍ಗಳಿಗೆ ಸ್ಥಳಾಂತರಿಸಬೇಕು ಹಾಗೂ ಸೋಂಕಿತರ ಸೋಂಕಿನ ಮೂಲವನ್ನು ಪತ್ತೆ ಹಚ್ಚಬೇಕು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.        ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವಿಕೆ, ನಿರ್ವಹಣೆ ಕುರಿತಂತೆ ಚಿಕ್ಕನಾಯಕನಹಳ್ಳಿಯ ತಾಲೂಕು ಕಚೇರಿಯ ಕೆಸ್ವಾನ್ ಮೂಲಕ ಕಂದಾಯ, ಆರೋಗ್ಯ, ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು.       ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕು. ಹೋಂ ಐಸೋಲೇಷನ್ ಹಾಗೂ ಹೋಂ ಕ್ವಾರಂಟೈನ್‍ನಲ್ಲಿರುವವರು ಎಲ್ಲೆಂದರೆಲ್ಲೆ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅಲ್ಲದೆ, ಅವರು ಪ್ರತ್ಯೇಕವಾಗಿರಲು ಸೌಲಭ್ಯಗಳು ಇಲ್ಲದಿರಬಹುದು. ಆದ್ದರಿಂದ ಹೋಂ ಐಸೋಲೇಷನ್ ಹಾಗೂ ಹೋ ಕ್ವಾರಂಟೈನ್‍ನಲ್ಲಿರುವವರನ್ನು…

Read More

ತುಮಕೂರು:       ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಕೋವಿಡ್-19 ಮಹಾಮಾರಿ ರೋಗ ದಿನೇ ದಿನೇ ಹೆಚ್ಚಾಗುತ್ತಿದ್ದು. ಮರಣ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.      ಸೊಗಡು ಶಿವಣ್ಣ ಮಾಜಿ ಸಚಿವರು ಆದ ನಾನು ಸಹ ಇಂತಹ ಸೇವೆ ಮಾಡುತ್ತಿರುವ ತುಮಕೂರು ನಗರ ಜನಸೇವಾ ಸಮಿತಿ (ರಿ) ಸಿ.ಜಿ.ಲೇಔಟ್, ತುಮಕೂರು ನಗರ ದೂರವಾಣಿ ಸಂಖ್ಯೆ 7204618217 ಈ ಸಂಸ್ಥೆಯ ಸದಸ್ಯನಾಗಿ ಸೇರ್ಪಡೆಯಾಗಿದ್ದು. ನನ್ನೊಂದಿಗೆ ಶ್ರೀ ಸುಭಾನ್ ಟಿಂಬರ್ ಮರ್ಚೆಂಟ್ ಇವರು ಸಹ ಇಂದು ಸೇರ್ಪಡೆಗೊಂಡಿರುತ್ತಾರೆ. ಈ ಸಂಸ್ಥೆಯು ಕಳೆದ ವರ್ಷ ಕೋವಿಡ್ ಬಂದಾಗಿನಿಂದಲೂ ಹೆಚ್ಚು ಸಕ್ರಿಯವಾಗಿದ್ದು ಕೋವಿಡ್ ರೋಗಿಗಳ ಆರೈಕೆಗೆ ರಕ್ತ ಒದಗಿಸುವುದು, ಅಸ್ಪತ್ರೆಗೆ ಸಾಗಿಸಲು ಉಚಿತ ಅಂಬುಲೆನ್ಸ್ ವ್ಯವಸ್ಥೆ, ಶವಗಳನ್ನು ಸಾಗಿಸುವುದು ಅವರವರ ಧರ್ಮಗಳ ಪದ್ಧತಿ ಅನುಸಾರ ಅಂತ್ಯಕ್ರಿಯೆ ನಡೆಸಿಕೊಡುವುದು. ಇಂತಹ ಧರ್ಮ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಇದರೊಂದಿಗೆ ಈಗ ಈ ಸಂಸ್ಥೆಯ ಸಕ್ರಿಯ ಸದಸ್ಯರಾಗಿರುವ ಶ್ರೀ ಸುಭಾನ್‍ರವರು ಟಿಂಬರ್ ವ್ಯಾಪಾರಿಗಳನ್ನು ಸಂಪರ್ಕಿಸಿ ಶವಾಗಾರಕ್ಕೆ ಸೌದೆÉ ಒದಗಿಸಲು ಈಗಾಗಲೇ ಸಂಗ್ರಹಿಸಿ ಇಟ್ಟಿರುತ್ತಾರೆ.…

Read More

ತುಮಕೂರು:        ರಾಜ್ಯದಲ್ಲಿ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿರುವ ಕೋವಿಡ್-19 ಸೋಂಕು ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಲಾಕ್‍ಡೌನ್‍ಗೆ ಕಲ್ಪತರುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರ ಸೇರಿದಂತೆ ಜಿಲ್ಲೆಯ 10 ತಾಲ್ಲೂಕುಗಳು ಸಂಪೂರ್ಣ ಸ್ತಬ್ದವಾಗಿದ್ದವು.         ಕೋವಿಡ್ ಕರ್ಫ್ಯೂ ಹೇರಿರುವ ರಾಜ್ಯ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಕೆಲ ನಿಯಮಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳಾದ ಹಾಲು, ಮೊಸರು, ತರಕಾರಿ ಮತ್ತು ದಿನಸಿ ಪದಾರ್ಥಗಳಿಗೆ ಸಂಬಂಧಿಸಿದ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದ್ದವು. ಈ ಅವಧಿಯಲ್ಲಿ ಸಾರ್ವಜನಿಕರು ಸಹ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗಳತ್ತ ತೆರಳಿದ ದೃಶ್ಯಗಳು ಕಂಡು ಬಂದವು.      ಮಾಂಸಪ್ರಿಯರು ಕೋಳಿ, ಮಟನ್, ಮೀನಿನ ಅಂಗಡಿಗಳಿಗೆ ತೆರಳಿ ತಮಗಿಷ್ಟವಾದ ಮಾಂಸವನ್ನು ಖರೀದಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. 10 ಗಂಟೆ ಬಳಿಕ ಮಾಂಸ ಮಾರಾಟದ ಅಂಗಡಿಗಳು ಸಹ ಬಾಗಿಲು…

Read More

 ತುಮಕೂರು :        ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊರಡಿಸಿರುವ ವಾರಾಂತ್ಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಜಿಲ್ಲೆಯಲ್ಲಿ ಇಂದೇ ಕೋವಿಡ್ ಕೇರ್ ಸೆಂಟರ್‍ಗಳು ಕಾರ್ಯಾರಂಭ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.       ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಮೂಲಕ ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕಿನ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಅವರು ಸೂಚನೆಗಳನ್ನು ನೀಡಿದರು.       ವಾರಾಂತ್ಯದ ಕಪ್ರ್ಯೂ ಅವಧಿಯಲ್ಲಿ ಯಾವ್ಯಾವ ಚಟುವಟಿಕೆಗಳಿಗೆ ನಡೆಸಲು ಅವಕಾಶ ನೀಡಲಾಗಿದೆಯೋ ಅವುಗಳಿಗೆ ಅವಕಾಶ ಮಾಡಿಕೊಡಿ. ವಾರಾಂತ್ಯದ ಕಪ್ರ್ಯೂ ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಕೊವೀಡ್ ಕೇರ್ ಸೆಂಟರ್ ಗಳಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು. ಪ್ರತಿನಿತ್ಯ ಕ್ಲಿನಿಂಗ್ ಮಾಡಬೇಕು ಎಂದರು.       ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಆರಂಭಿಸುವ ಕೋವಿಡ್ ಕೇರ್ ಸೆಂಟರ್ ಗಳಲ್ಲಿ…

Read More