ತುಮಕೂರು: ರಾಜ್ಯದಲ್ಲಿ ಕರೋನ ಸೋಂಕು ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಸೋಂಕನ್ನು ನಿಯಂತ್ರಣದಲ್ಲಿಡಲು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ, ಸಾಮಾಜಿಕ ಅಂತರ(6 ಅಡಿ) ಕಾಪಾಡಿಕೊಳ್ಳುವ, ಪದೇ ಪದೇ ಸಾಬೂನಿನಿಂದ ಕೈ ಸ್ವಚ್ಛ ಮಾಡಿಕೊಳ್ಳುವ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಮನವಿ ಮಾಡಿದ್ದಾರೆ. ಸಾರ್ವಜನಿಕರು ಅಗತ್ಯವಿದ್ದಲ್ಲಿ ಮಾತ್ರ ಹೊರಗೆ ಹೋಗಬೇಕು. ಜನಸಂದಣಿ ಪ್ರದೇಶಗಳಿಗೆ ಅನಗತ್ಯವಾಗಿ ಹೋಗಬಾರದು. ಸಭೆ/ಸಮಾರಂಭ, ಧಾರ್ಮಿಕ ಸಮಾರಂಭಗಳಲ್ಲಿ ಹೆಚ್ಚಾಗಿ ಜನ ಸೇರಬಾರದು. ಹೋಗಲೇಬೇಕಾದ ಸಂದರ್ಭದಲ್ಲಿ ಕಡ್ಡಾಯವಾಗಿ ಕೋವಿಡ್-19ರ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ವಿಶೇಷವಾಗಿ ದೀರ್ಘಾವಧಿ ಖಾಯಿಲೆಯಿಂದ ಬಳಲುತ್ತಿರುವವರು, ಬಿ.ಪಿ./ಸಕ್ಕರೆ ಖಾಯಿಲೆ ಉಳ್ಳವರು ಕಡ್ಡಾಯವಾಗಿ ಮನೆಗಳಲ್ಲೆ(ತುರ್ತು ಸಂದರ್ಭ ಹೊರತುಪಡಿಸಿ) ಉಳಿಯಬೇಕು. ಎಲ್ಲಾ 60 ವರ್ಷ ವಯೋಮಾನದವರು ಮತ್ತು 45 ವರ್ಷ ತುಂಬಿದ ದೀರ್ಘಾವಧಿ ಖಾಯಿಲೆ ಉಳ್ಳವರು ಕೋವಿಡ್ ಲಸಿಕೆಯನ್ನು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ತಪ್ಪದೇ ಪಡೆಯಬೇಕು. ಅಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ…
Author: News Desk Benkiyabale
ತುಮಕೂರು : ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಇನ್‍ಪೋಸಿಸ್ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಇನ್‍ಪೋಸಿಸ್ ಹೆಡ್ ಸ್ಟಾರ್ಟ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇನ್‍ಪೋಸಿಸ್ ಹೆಡ್ ಸ್ಟಾರ್ಟ್ ಪ್ರೋಗ್ರಾಂ ಮ್ಯಾನೇಜರ್ ಕಿರಣ್ ತಿಳಿಸಿದರು. ನಗರದ ರೈಲ್ವೇ ಸ್ಟೇಷನ್ ರಸ್ತೆಯ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಎಚ್.ಡಿ.ಎಸ್.ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಇನ್‍ಪೋಸಿಸ್ ಹೆಡ್ ಸ್ಟಾರ್ಟ್ ವಿದ್ಯಾನಿಕೇತನ’ ಎಂಬ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಹಾಗೂ ಬದಲಾವಣೆ ತರುವ ಕಲ್ಪನೆಯೇ ಇನ್‍ಪೋಸಿಸ್ ಸಂಸ್ಥೆಯ ಹೆಡ್ ಸ್ಟಾರ್ಟ್ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ದ್ವಿತೀಯ ಹಾಗೂ ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಈ ಹೆಡ್‍ಸ್ಮಾರ್ಟ್ ಕಾರ್ಯಕ್ರಮವನ್ನು ವಿದ್ಯಾನಿಕೇತನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಹೆಡ್ ಸ್ಟಾರ್ಟ್ ಕಾರ್ಯಕ್ರಮದ ಮೂಲಕ ಮುಂದಿನ ಹತ್ತು ವರ್ಷಗಳಲ್ಲಿ ಒಂದು ಕೋಟಿ…
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಯ ನಾಮಪತ್ರ ಪರಿಶೀಲನೆ ವೇಳೆ ಚುನಾವಣಾಧಿಕಾರಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ನಡೆದಿದೆ. 3 ನೇ ವಾರ್ಡ್‍ನ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಂ.ಗಣೇಶ್ ಹಾಗೂ 5 ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿ ಪುಟ್ಟಮ್ಮ ಅವರು ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದಡಿ ಪ್ರಕರಣ ದಾಖಲಾಗಿರುವ ಕಾರಣ ನಾಮಪತ್ರಗಳನ್ನು ತಿರಸ್ಕೃತಗೊಳಿಸುವಂತೆ ಜಿಲ್ಲಾಧಿಕಾರಿಗಳು ಇ ಮೇಲೆ ಸಂದೇಶ ಕಳುಹಿಸಿದ್ದು ಈ ಮಾತಿನ ಚಕಮಕಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳ ಪತ್ರದಂತೆ ಇಬ್ಬರ ನಾಮಪತ್ರವನ್ನು ತಿರಸ್ಕರಿಸುವುದಾಗಿ ಚುನಾವಣಾಧಿಕಾರಿ ಹೊನ್ನಪ್ಪ ಅವರು ಇವರಿಬ್ಬರಿಗೆ ತಿಳಿಸಿದರು. ಚುನಾಣಾಧಿಕಾರಿಗಳ ಈ ಅನಿರಿಕ್ಷಿತ ನಡೆಯಿಂದ ವಿಚಲಿತರಾದ ಗಣೇಶ್ ಮತ್ತು ಪುಟ್ಟಮ್ಮ ತಮ್ಮ ಬೆಂಬಲಿಗರೊಂದಿಗೆ ಪಪಂ ಕಛೇರಿಗೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳಿಂದ ಬಂದಿರುವ ಪತ್ರದಲ್ಲಿ ಸಹಿ ಮತ್ತು ಮೊಹರಿಲ್ಲ. ಅಲ್ಲದೆ ಈ ಪ್ರಕರಣದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು ತೀರ್ಪು ಬರುವವರೆವಿಗೂ ನಾವು ಅಪರಾಧಿಗಳಲ್ಲ,…
ತುಮಕೂರು : ಪಾವಗಡದ ಶ್ರೀರಾಮಕೃಷ್ಣ ಸೇವಾ ಆಶ್ರಮದವತಿಯಿಂದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲೂಕುಗಳ 7 ರಿಂದ 10ನೇ ತರಗತಿಯ ಮಕ್ಕಳಿಗಾಗಿ ದೂರ ತರಂಗ ಶಿಕ್ಷಣ ಹಾಗೂ ಕೌಶಲ್ಯ ನೈಪುಣ್ಯ ಯೋಜನೆ ಗಳನ್ನು ಆರಂಭಿಸಲಾಗಿದೆ ಎಂದು ಸ್ವಾಮೀ ಜಪಾನಂದ ಜೀ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ, ಸ್ವಾಮೀ ವಿವೇಕಾನಂದ ಗ್ರಾಮೀಣ ಆರೋಗ್ಯ ಕೇಂದ್ರ ಹಾಗೂ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದವತಿಯಿಂದ ಕೇಂದ್ರದ ಸುತ್ತಮುತ್ತಲ 500 ಹಳ್ಳಿಗಳ ಆರೋಗ್ಯ,ಅಕ್ಷರ,ಆಸರೆ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ 27 ಯೋಜನೆಗಳನ್ನು ಹಮ್ಮಿ ಕೊಂಡಿದ್ದು, ಆನ್‍ಲೈನ್ ತರಗತಿಗಳಿಂದ ವಂಚಿತರಾಗುತ್ತಿದ್ದ ಗಡಿನಾಡಿನ ಮಕ್ಕಳನ್ನು ಗಮನದಲ್ಲಿಸಿಕೊಂಡು ದೂರ ತರಂಗ ಶಿಕ್ಷಣ ಮತ್ತು ಕೌಶಲ್ಯ ನೈಪುಣ್ಯ ಯೋಜನೆ ಜಾರಿಗೆ ತರಲಾಗಿದೆ ಎಂದರು. 30 ವರ್ಷಗಳ ನಿರಂತರ ಸೇವೆಯ ಪಕ್ಷಿನೋಟ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಸ್ಥೆಯ ಬಗ್ಗೆ ಬರೆದ ಮೆಚ್ಚುಗೆಯ ಪತ್ರವನ್ನು ಕುರಿತು…
ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು. ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಹಾಗೂ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾದರೆ, ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿಯು ಬಿಜೆಪಿ ಮತ್ತು ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಯಿತು. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ-1ನೇ ವಾರ್ಡ್ ನಳಿನಾ ಇಂದ್ರಕುಮಾರ್, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡ್‍ನ ಸೈಯದ್ ನಯಾಜ್, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ 28 ನೇ ವಾರ್ಡ್‍ನ ಧರಣೇಂದ್ರ ಕುಮಾರ್(ರಾಜು), ಲೆಕ್ಕಪತ್ರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ 18ನೇ ಮುಜಿದಾ…
ಮಧುಗಿರಿ: 2021-22ನೇ ಸಾಲಿನ ಆಯವ್ಯಯ ( ಬಜೆಟ್ ) ಕುರಿತು ಮೇಲ್ಮನೆಯಲ್ಲಿ ಚರ್ಚಿಸಲು ಸಾರ್ವಜನಿಕರಿಂದ ಸಲಹೆ ಸೂಚನೆ ನೀಡುವಂತೆ ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ. 2021-22ನೇ ಸಾಲಿನ ಆಯವ್ಯಯ ( ಬಜೆಟ್ ) ಮೇಲಿನ ಚರ್ಚೆಯು ಮೇಲ್ಮನೆಯಲ್ಲಿ ನಡೆಯುತ್ತಿದ್ದು ಶಿರಾ ತಾಲ್ಲೂಕು ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಶಾಸಕನಾದ ನಾನು , ನನ್ನ ಕ್ಷೇತ್ರದ ಕುಂದು ಕೊರತೆಗಳನ್ನು ಗುರುತಿಸಿ , ಸರ್ಕಾರದ ಗಮನಕ್ಕೆ ತರುವುದು ನನ್ನ ಜವಾಬ್ದಾರಿ , ಆದ್ದರಿಂದ ಈ ಭಾಗದ ಶಿಕ್ಷಣ , ಕೃಷಿ , ಆರೋಗ್ಯ , ನಿರುದ್ಯೋಗ , ನೀರಾವರಿ , ಪಡಿತರ ಚೀಟಿ , ತೋಟಗಾರಿಕೆ , ವಸತಿ , ಪಶುಸಂಗೋಪನೆ , ಅರಣ್ಯ ಹಾಗೂ ಕಛೇರಿಗಳಲ್ಲಿನ ಭ್ರಷ್ಟಾಗೆಚಾರ , ಅಧಿಕಾರಿಗಳ ಬೇಜವಾಬ್ದಾರಿತನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಬಗ್ಗೆ ಸರ್ಕಾರದ…
ತುಮಕೂರು: ತುಮಕೂರು ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು, ಸಾಕಷ್ಟು ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ,ಜನಾಂದೋಲನ ರೂಪಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಹೋರಾಟ ರೂಪಿಸುವುದಾಗಿ ಮಾಜಿ ಮಂತ್ರಿ ಸೊಗಡು ಶಿವಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಾಲಿಕೆಯಲ್ಲಿ ನಾಗರಿಕರಿಗೆ ಯಾವ ಕೆಲಸಗಳು ಆಗುತ್ತಿಲ್ಲ. ಬದಲಾಗಿ ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಹಣವಿಲ್ಲದೆ ಯಾವುದೇ ಕೆಲಸಗಳು ಆಗುವುದೇ ಇಲ್ಲ ಎಂಬ ಸ್ಥಿತಿಗೆ ನಗರಪಾಲಿಕೆ ಆಡಳಿತ ತಲುಪಿದೆ ಎಂದು ಶಿವಣ್ಣ ಆರೋಪಿಸಿದರು. ನಗರಪಾಲಿಕೆ ಆಡಳಿತದಲ್ಲಿ ಅಧಿಕಾರಿಗಳು ನರಭಕ್ಷಕರಂತೆ ವರ್ತಿಸುತ್ತಿದ್ದು, ಖಾತೆ ಬದಲಾವಣೆ,ಆಸ್ತಿ ತೆರಿಗೆ ಪಾವತಿ, ಮನೆ ನಿರ್ಮಾಣಕ್ಕೆ ಲೇಸನ್ಸ್ ನೀಡುವುದು ಸೇರಿದಂತೆ ಯಾವುದೇ ಕೆಲಸ ಆಗಬೇಕೆಂದು ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳೇ ನಾಗರಿಕರು ನೀಡಿದ ಅರ್ಜಿಗಳಲ್ಲಿನ ಕೆಲ ದಾಖಲೆ ಕಿತ್ತು,ದಾಖಲೆಗಳನ್ನು ತಂದು ಕೊಡಿ ಎಂದು ಸತಾಯಿಸಿ, ಹಣ…
ತುಮಕೂರು: ದಿನಪತ್ರಿಕೆಗಳು ಸಮಾಜಮುಖಿಯಾಗಿದ್ದರೆ ಮಾತ್ರ ಜನಮನ್ನಣೆ ಸಿಗಲು ಸಾಧ್ಯ ಈ ನಿಟ್ಟಿನಲ್ಲಿ ಬೆಂಕಿಯಬಲೆ ಪತ್ರಿಕೆ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಮಸಾಲೆ ಜಯರಾಂ ಅಭಿಪ್ರಾಯಪಟ್ಟರು. ನಗರದ ಕೆಇಬಿ ಇಂಜನಿಯರ್ಸ್ ಸಂಘ ಕಚೇರಿಯಲ್ಲಿ ನಡೆದ ಬೆಂಕಿಯ ಬಲೆ ಪತ್ರಿಕೆಯ 17 ನೇ ವಾರ್ಷಿಕೋತ್ಸವ ಹಾಗೂ ಹಿಂಗ್ಯಾಕೆ ಕಿರುಚಿತ್ರ ಬಿಡುಗಡೆ ಮತ್ತು ಬಡ ಮಕ್ಕಳಿಗೆ ವಸ್ತ್ರ ವಿಸ್ತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸದಾ ಚಟುವಟಿಕೆಯಿಂದ ಇರುವ ಧನಂಜಯ ಅವರು, ಈ ಹಿಂದೆ ತುರುವೇಕೆರೆಯಲ್ಲಿ ಮಹಿಳೆಯರಿಗಾಗಿ ಕಾರ್ಯಕ್ರಮ ನಿರ್ವಹಿಸಿ, ತೇಜು ಮಸಾಲೆಯನ್ನು ಪರಿಚಯಿಸಿದ್ದರು, ಶಾಸಕನಾಗಿ ಉತ್ತಮ ಕಾರ್ಯಗಳನ್ನು ನಿರ್ವಹಿಸಲು ಸಲಹೆ ನೀಡುವ ಮೂಲಕ ಪರೋಕ್ಷವಾಗಿ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಪತ್ರಿಕೋಧ್ಯಮದಲ್ಲಿ ಯಾವುದಕ್ಕೂ ಅಂಜದೆ ದಿಟ್ಟತನದಿಂದ ಸುದ್ದಿ ಬರೆಯುವಲ್ಲಿ ಧನಂಜಯವರ ಸಾಧನೆ ಮೆಚ್ಚುವಂತಹದ್ದು. ಪ್ರತಿ ಕ್ಷಣ ಒಂದಿಲ್ಲೊಂದು ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪತ್ರಿಕಾ ರಂಗದಲ್ಲಿ ತನ್ನದೆ ಆದ ಮೌಲ್ಯವನ್ನು ಉಳಿಸಿಕೊಂಡು ಬರವಣಿಗೆಯಲ್ಲಿ ಭಿನ್ನತೆ…
ತುಮಕೂರು: ಜಿಲ್ಲೆಯಲ್ಲಿನ ಶೈಕ್ಷಣಿಕ ಸಂಸ್ಥೆಗಳು ಹಾಗು ಸರ್ಕಾರಿ ಕಛೇರಿಗಳನ್ನು ತಂಬಾಕು ಮುಕ್ತಮಾಡುವುದರ ಮೂಲಕ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ವೈ.ಎಸ್. ಪಾಟೀಲ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ (ಕೋಟ್ಪಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಲಾ ಕಾಲೇಜುಗಳ 100 ಗಜಗಳ ಅಂತರದಲ್ಲಿ ತಂಬಾಕು ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಮಕ್ಕಳು ತಂಬಾಕು ಮುಕ್ತ ಸ್ವಸ್ಥ್ಯ ಜೀವನ ನಡೆಸಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗ್ರಾಮಪಂಚಾಯಿತಿ, ಪಟ್ಟಣಪಂಚಾಯಿತಿ, ನಗರಸಭೆಗಳು, ಪುರಸಭೆಗಳು ಹಾಗೂ ಮಹಾ ನಗರಪಾಲಿಕೆಗಳ ವತಿಯಿಂದ ಅಂತಹ ವರ್ತಕರ ಮೇಲೆ ಕ್ರಮ ತೆಗೆದುಕೊಂಡು, ಉಲ್ಲಂಘನೆಯನ್ನು ಪುನರಾವರ್ತನೆ ಮಾಡಿದ್ದಲ್ಲಿ ಉದ್ದಿಮೆ ಪರವಾನಗಿಯನ್ನು ರದ್ದುಮಾಡಬೇಕು ಎಂದರು. ನಿಯಮಿತವಾಗಿ ಕೋಟ್ಪಾ ಕಾಯಿದೆಯ ಕಾರ್ಯಾಚರಣೆಯನ್ನು ನಡೆಸಬೇಕು. ಜಿಲ್ಲೆಯಲ್ಲಿನ ಪ್ರತೀ ಶೈಕ್ಷಣಿಕ ಸಂಸ್ಥೆಯನ್ನು ತಂಬಾಕುಮುಕ್ತ ಮಾಡಬೇಕಾಗಿದೆ ಎಂದು ತಿಳಿಸಿದರು. ತಂಬಾಕು…
ಮಧುಗಿರಿ : ಪಟ್ಟಣದ ಶಂಕರ ಟಾಕೀಸ್ ಮುಂಭಾಗವಿರುವ ಶೇವಿಂಗ್ ಶಾಪ್ ಮುಂದೆ ಪತ್ರಿಕೆ ಓದುತ್ತಿದ್ದ ಯುವಕನ ಮೇಲೆ ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಯುವಕರ ಗುಂಪೊಂದು ಹಾಡಹಗಲೇ ಭರ್ಜಿ, ಚಾಕು ,ರಾಡು ಗಳಿಂದ ಏಕಾಏಕಿ ದಾಳಿ ನಡೆಸಿ ತಿವಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ. ತುಮಕೂರಿನ ಮಂಜುನಾಥ ನಗರದ ವಾಸಿ ವೀರಭದ್ರಯ್ಯ(26) ಕೊಲೆಯಾದ ಯುವಕನಾಗಿದ್ದು, ಈತ ಪತ್ರಿಕೆಯನ್ನು ಓದುತ್ತ ಶೇವಿಂಗ್ ಶಾಪ್ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದಾಗ ನಾಲ್ವರು ಯುವಕರು ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬಂದು ರಾಡ್ ನಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ದರದರನೆ ರಸ್ತೆಯವರೆಗೂ ಎಳೆದುಕೊಂಡು ಹೋಗಿ ಎಸೆದು ಪರಾರಿಯಾಗಿದ್ದಾರೆ. ಶಿವರಾತ್ರಿ ಹಬ್ಬದಂದು ಸಾಯಂಕಾಲ ಶಿರಾ ಗೇಟ್ ಬಳಿ ಎರಡು ಯುವಕರ ಗುಂಪಿನ ನಡುವೆ ನಡೆದ ಘರ್ಷಣೆ ಈ ಗಲಾಟೆಗೆ ಕಾರಣವೆನ್ನಲಾಗುತ್ತಿದೆ. ಗಾಯಳಿಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ…











