ತುಮಕೂರು: ನಗರದ ಹೊರ ವಲಯದಲ್ಲಿರುವ ವಸಂತನರಸಾಪುರ 1ನೇ ಹಂತದ ಕೈಗಾರಿಕಾ ನಿವೇಶನಗಳ ಅಂತಿಮ ದರವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿರುವುದನ್ನು ಕಡಿಮೆ ಮಾಡುವಂತೆ ಹಾಗೂ ಹೆಚ್ಚುವರಿ ಜಾಗಕ್ಕೆ ಮಾರ್ಗಸೂಚಿ ಬೆಲೆ ಜತೆಗೆ ಶೇ. 10 ರಷ್ಟು ದಂಡ ವಿಧಿಸುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ವಸಂತನರಸಾಪುರ ಇಂಡಸ್ಟ್ರೀಯಲ್ ಅಸೋ ಸಿಯೇಷನ್ ಪದಾಧಿ ಕಾರಿಗಳು ಸಂಸದ ಜಿ.ಎಸ್. ಬಸವರಾಜು ಅವರಿಗೆ ಮನವಿ ಸಲ್ಲಿಸಿದ್ದಾರೆ. ನಗರದ ಸಂಸದರ ಕಚೇರಿಯಲ್ಲಿ ಸಂಸದ ಜಿ.ಎಸ್. ಬಸವರಾಜು ಅವರನ್ನು ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್. ಶಿವಶಂಕರ್ ನೇತೃತ್ವದಲ್ಲಿ ಭೇಟಿ ಮಾಡಿದ ಪದಾಧಿಕಾರಿಗಳು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತಲೆದೋರಿರುವ ಸಮಸ್ಯೆಗಳ ಕುರಿತು ಎಳೆಎಳೆಯಾಗಿ ಬಿಡಿಸಿಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್. ಶಿವಶಂಕರ್, ಕರ್ನಾಟಕದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. 2009 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ನಿವೇಶನ ನೀಡಲಾಗಿದ್ದು, ರಾಷ್ಟ್ರದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…
Author: News Desk Benkiyabale
ಹುಳಿಯಾರು: ಜನವರಿ 16 ರಿಂದ ಪ್ರಸಕ್ತ ಸಾಲಿನ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಆದರೆ ಕಳೆದ ವರ್ಷ ಖರೀದಿಸಿದ್ದ ರಾಗಿಗೆ ಹಣ ನೀಡದೆ ಸತಾಯಿಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಹೌದು ಕಳೆದ ವರ್ಷ ಸರ್ಕಾರ 3150 ರೂ. ಬೆಂಬಲ ಬೆಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರಿಂದ 50850 ಕ್ವಿಂಟಲ್ ರಾಗಿ ಖರೀದಿಸಿತ್ತು. ಇದರ ಬಾಬ್ತು ಹಣವನ್ನು ಕೊವಿಡ್ ಸಂದರ್ಭದಲ್ಲಿ ಪಾವತಿಸಿ ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಿತ್ತು. ಉಳಿದ ರೈತರಿಗೆ ನಂತರದ ದಿನಗಳಲ್ಲಿ ಪಾವತಿಸಿತ್ತು. ಆದರೆ ಇವರಲ್ಲಿ 18 ಮಂದಿ ರೈತರಿಗೆ ಮಾತ್ರ ಹಣ ಪಾವತಿ ಮಾಡದೆ ನಿರ್ಲಕ್ಷ್ಯಿಸಿತ್ತು. ಪರಿಣಾಮ ವರ್ಷದಿಂದ ಈ ರೈತರು ತಮ್ಮ ಪಾಲಿನ ಹಣಕ್ಕಾಗಿ ಅಲೆಯುವಂತ್ತಾಗಿದೆ. ಹಣ ಪಾವತಿಯಾಗದ ರೈತರ ಅಕೌಂಟ್ ಮತ್ತು ಆಧಾರ್ ಕಾರ್ಡ್ ಮ್ಯಾಚ್ ಆಗದೆ ಪೇಮೆಂಟ್ ರಿಟರ್ನ್ ಆಗಿದೆ ಎಂಬುದು ಅಧಿಕಾರಿಗಳ ಸಬೂಬು. ಹಾಗಾಗಿ ರೈತರು ತಮ್ಮ ಖಾತೆಯ ಬ್ಯಾಂಕ್‍ಗಳಿಗೆ…
ತುಮಕೂರು : ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಇರುವ ನಿಯಮಗಳನ್ನು ಸಡಿಲಗೊಳಿಸಬೇಕು. ಈ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಗೊಳಿಸದಿದ್ದರೆ ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆಯಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದರು. ಸಿದ್ದಗಂಗಾ ಮಠದಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ತಮ್ಮನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಜತೆ ಜತೆಯಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಅಷ್ಟೇ ಮಹತ್ವಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ನಾಡಿನ ಶೈಕ್ಷಣಿಕ ಪ್ರಗತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆಯೂ ಅಪಾರವಾಗಿದೆ. ಮಠಮಾನ್ಯಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಅಷ್ಟೇ ಪ್ರಮುಖವಾಗಿ…
ಹುಳಿಯಾರು : ಟಿವಿಎಸ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಸವಾರ ರೈತನೋರ್ವ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಮುಕ್ತಿಧಾಮದ ಬಳಿ ಜರುಗಿದೆ. ಅಪಘಾತದಲ್ಲಿ ಮೃತನಾದ ದುರ್ಧೈವಿಯನ್ನು ಹುಳಿಯಾರು ಹೋಬಳಿಯ ಕುರಿಹಟ್ಟಿಯ ಮೈಲಾರಪ್ಪ (51) ಎಂದು ಗುರುತಿಸಲಾಗಿದೆ. ಇವರು ಹುಳಿಯಾರಿನಿಂದ ಮಾರ್ನಿಂಗ್ ಮಾರ್ಕೆಟ್‍ನಲ್ಲಿ ಟಮೋಟೊ ಮಾರಿಕೊಂಡು ಸ್ವಗ್ರಾಮ ಕುರಿಹಟ್ಟಿಗೆ ಹಿಂದಿರುಗುವಾಗ ಹಿರಿಯೂರು ಮಾರ್ಗವಾಗಿ ಬಂದ ತಮಿಳುನಾಡು ಮೂಲಕ ಲಾರಿ ಡಿಕ್ಕಿ ಹೊಡೆದು ಆತನ ಎರಡೂ ಕಾಲಿನ ಮೇಲೆ ಹರಿದಿದೆ. ಪರಿಣಾಮ ರೈತ ಮೈಲಾರಪ್ಪನ ಎರಡೂ ಕಾಲುಗಳು ನಜ್ಜುಗುಜ್ಜಾಗಿ ತೀರ್ವ ರಕ್ತಸ್ತ್ರಾವ ಆಗಿದೆ. ದಾರಿಹೋಕರು ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಕುಟುಂಬ ವರ್ಗದವರು ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದು ಲಾರಿಯನ್ನು ಹುಳಿಯಾರು ಪೊಲೀಸರು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಮೃತ ಮೈಲಾರಪ್ಪನಿಗೆ…
ತುಮಕೂರು : ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠಕೂಲಿ ನಿಗಧಿ ಪಡಿಸಬೇಕು,ಡಿಸೆಂಬರ್ ತಿಂಗಳ ವೇತನ ಬಿಡುಗಡೆ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಐಟಿಯುಸಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡಿದ್ದ ನೂರಾರು ಬಿಸಿಯೂಟ ತಯಾರಕರು,ನಮಗೆ ಸೇವಾ ಭದ್ರತೆ ಒದಗಿಸಬೇಕು, ಬಿಸಿಯೂಟ ತಯಾರಕರ ಕಲ್ಯಾಣಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್,ಕಳೆದ 18 ವರ್ಷಗಳಿಂದ ಸರಕಾರ ಅಕ್ಷರ ದಾಸೋಹ ಯೋಜನೆಯಲ್ಲಿ ದುಡಿಯುತ್ತಿರುವ ನೌಕರರನ್ನು ಅತ್ಯಂತ ಕೀಳಾಗಿ ಕಾಣುತ್ತಿದೆ. ಅವರಿಗೆ ಕನಿಷ್ಠ ವೇತನ ಜಾರಿ ಮಾಡದೆ, ಸೇವಾ ಭದ್ರತೆಯನ್ನು ನೀಡಿದೆ, ಅತ್ಯಂತ ಕಡಿಮೆ ಕೂಲಿಗೆ ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡುತ್ತಿದೆ.ಕೋವಿಡ್-19 ಲಾಕ್‍ಡೌನ್‍ನಿಂದ ಶಾಲೆಗಳು ಮುಚ್ಚಿದ ಪರಿಣಾಮ ಕಳೆದ…
ತುಮಕೂರು: ದೇವರಾಜ ಅರಸು ಅಭಿವೃದ್ದಿ ನಿಗಮದ ಫಲಾನುಭವಿಗಳ ಆಯ್ಕೆ ಸಂಬಂಧ ಮತ್ತಷ್ಟು ಪಾರದರ್ಶಕತೆ ಕಾಯ್ದೆಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕಚೇರಿಯನ್ನು ಒಳಗೊಂಡಂತೆ ಸಿಸಿಟಿವಿ ಅಳವಡಿಕೆ ಹಾಗೂ ನಿಗಾವಣೆ ಸಮಿತಿಯನ್ನು ನೇಮಿಸುವ ಚಿಂತನೆ ಇದೆ ಎಂದು ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಹೋರಾಟ ನಡೆಸಿದ ಪ್ರಮುಖರಲ್ಲಿ ಅರಸು ಒಬ್ಬರು,ಅವರ ಹೆಸರಿನಲ್ಲಿರುವ ನಿಗಮವನ್ನು ಮತ್ತಷ್ಟು ಜನಪರಗೊಳಿಸುವ, ವಿಸ್ತರಿಸುವ,ಶಕ್ತಿ ತುಂಬುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು. ಕೋರೋನಾ ಮಹಾಮಾರಿಯಿಂದಾಗಿ ಕಳೆದ ಸಾಲಿನಲ್ಲಿ ಅಂದರೆ 2019-20ಕ್ಕೆ ಹೊಲಿಕೆ ಮಾಡಿದರೆ 2020-21ರಲ್ಲಿ ನಿಗಮಕ್ಕೆ ನೀಡಿದ್ದ 80 ಕೋಟಿ ರೂ ಅನುದಾನದಲ್ಲಿ 206 ಜಾತಿಗಳಿಗೆ ಸೇರಿದ ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡ ಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆಗಿರುವ ವೆತ್ಯಾಸವನ್ನು 2021-22ನೇ ಸಾಲಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಿ,ಮತ್ತಷ್ಟು ಜನರನ್ನು ತಲುಪಲು ಪ್ರಯತ್ನಿಸಲಾಗುವುದು ಎಂದು ರಘು ಕೌಟಿಲ್ಯ ಭರವಸೆ…
ಚಿಕ್ಕನಾಯಕನಹಳ್ಳಿ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮುಂದಿನ ಪ್ರಕ್ರಿಯೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಮಾಣ ವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗಿರುವ 448 ಸದಸ್ಯರ ಪ್ರಮಾಣಕ್ಕೆ ತಕ್ಕಂತೆ ಮೀಸಲು ನಿಗದಿಗೊಳಿಸಿದ್ದು 27 ಪಂಚಾಯಿತಿಗಳಲ್ಲಿ ಒಟ್ಟಾರೆಎಲ್ಲಾ ವರ್ಗದಿಂದ 14 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಇದರಲ್ಲಿ ಅನುಸೂಚಿತ ಜಾತಿ 6 ಸ್ಥಾನಗಳನ್ನು ಮೀಸಲಿರಿಸಿದ್ದು ಈ 6ರಲ್ಲಿ 3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಅನುಸೂಚಿತ ಪಂಗಡಕ್ಕೆ 3 ಸ್ಥಾನಗಳನ್ನು ಮೀಸಲಿರಿಸಿದ್ದು ಈ 3ರಲಿ 2 ಸ್ಥಾನಗಳು ಮಹಿಳೆಗೆ ಮೀಸಲಿರಿಸಿದೆ. ಹಿಂದುಳಿದವರ್ಗ(ಎ) ಗೆ 3 ಸ್ಥಾನಗಳನ್ನು ಮೀಸಲಿರಿಸಿದ್ದು ಈ 3ರಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಹಿಂದುಳಿದವರ್ಗ(ಬ) 1 ಸ್ಥಾನ ಮೀಸಲಿರಿಸಿದೆ. ಸಾಮಾನ್ಯ ಸ್ಥಾನಗಳಿಗೆ 14 ಸ್ಥಾನಗಳನ್ನು ಮೀಸಲಿರಿಸಿದ್ದು ಈ 14 ರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ತಾಲ್ಲೂಕುವಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಆಯ್ಕೆ…
ಚಿಕ್ಕನಾಯಕನಹಳ್ಳಿ: 2020-21 ನೇ ಶೈಕ್ಷಣಿಕ ವರ್ಷವನ್ನು ವಿಶೇಷ ರೀತಿಯಲ್ಲಿ ಸ್ವಾಗತಕೋರುವ ಮೂಲಕ ಸರ್ಕಾರಿ ಶಾಲೆಗಳು ಆರಂಭಗೊಂಡವು. ಕೊರೋನಾ ಸೋಂಕಿನ ಭೀತಿಯಿಂದ ಕಳೆದ ಎಂಟು ತಿಂಗಳಿಂದ ಮುಚ್ಚಿದ್ದ ಶಾಲೆಗಳಿಗೆ ಜ.1 ರಿಂದ ವಿವಿಧ ಸುರಕ್ಷತಾ ನಿಯಮಗಳ ಕಡ್ಡಾಯ ಪಾಲನೆಯೊಂದಿಗೆ ಶಾಲೆಗಳನ್ನು ತೆರೆಯಲು ಆದೇಶಬಂದ ಕಾರಣ ವಿವಿಧ ಶಾಲೆ ಹಾಗೂ ಕಾಲೇಜುಗಳಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು. ಪೋಷಕರು ಹಾಗೂ ವಿದ್ಯಾರ್ಥಿಗಳಿಂದಲೂ ಹೆಚ್ಚಿನ ಬೆಂಬಲ ವ್ಯಕ್ತವಾದ ಹಿನ್ನಲೆಯಲ್ಲಿ ಶಾಲಾ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ಬರಮಾಡಿಕೊಂಡರು. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಕಲ್ಲುಬಾವಿ ಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾಗಮ ಕಾರ್ಯಕ್ರಮದ ಬೋದನೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೆಂಬಾಳ್ ರಮೇಶ್ ಗುಲಾವಿ ಹೂ ನೀಡುವ ಮೂಲಕ ಬರಮಾಡಿಕೊಂಡರು. ಶಾಲೆಯನ್ನು ಹಿಂದಿನ ದಿನಸ್ವಚ್ಚಗೊಳಿಸಿ, ಎಲ್ಲಾ ಕೊಠಡಿ, ಪ್ರಾಂಗಣ, ಊಟದ ಕೋಣೆ ಹಾಗೂ ಶೌಚಾಲಯವನ್ನು ಸ್ಯಾನಿಟೈಸರ್ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಉಷ್ಣತೆ ತಪಾಸಣೆ, ಹ್ಯಾಂಡ್…
ತುಮಕೂರು : ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜನವರಿ 7ರಂದು ನಡೆಯಲಿರುವ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ನೀಡುವ ಅಂಕಿ-ಅಂಶಗಳು ನಿಖರ ಹಾಗೂ ಸ್ಪಷ್ಟವಾಗಿರಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಇಲಾಖಾ ಪ್ರಗತಿ ಕಡಿಮೆಯಿದ್ದರೆ ಸ್ವಷ್ಟ ಕಾರಣ ನೀಡಬೇಕು ಹಾಗೂ ಅದನ್ನು ಷರಾದಲ್ಲಿ ನಮೂದಿಸಬೇಕು ಎಂದು ಸೂಚನೆ ನೀಡಿದರು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 249590 ರೈತರಿಗೆ 3ನೇ ತ್ರೈಮಾಸಿಕದಲ್ಲಿ ಮೊತ್ತ ಪಾವತಿ ಬಾಕಿಯಿದೆ. ಈಗಾಗಲೇ ಎಫ್‍ಟಿಒ ಜನರೇಟ್ ಆಗಿದ್ದು, ಅವರಿಗೆ ಶೀಘ್ರದಲ್ಲೇ ಮೊತ್ತ ಪಾವತಿಯಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಸಭೆಗೆ…
ತುಮಕೂರು : ಬೆವಿಕಂ ನಗರ ಉಪವಿಭಾಗ-1 ವ್ಯಾಪ್ತಿಯಲ್ಲಿ ಕೇಬಲ್ ಅಳವಡಿಸುವ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಜನವರಿ 4 ರಿಂದ 22ರವರೆಗೆ ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ಗಂಟೆಯವರೆಗೆ (ಜನವರಿ 9, 10 ಮತ್ತು 17ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ) ಕೋತಿತೋಪು, ಹೊರಪೇಟೆ, ಶ್ರೀರಾಮನಗರ, ಆರ್.ವಿ.ಕಾಲೋನಿ, ಕೆ.ಆರ್.ಬಡಾವಣೆ, ಎಮ್.ಜಿ.ರಸ್ತೆ, ವಿವೇಕಾನಂದ ರಸ್ತೆ, ಬಾರ್ ಲೈನ್, ಅರಳೆಪೇಟೆ, ಬಿದಿರುಮಳೆ ತೋಟ, ಆರ್.ಟಿ.ನಗರ, ಬಿ.ಹೆಚ್.ರಸ್ತೆ, ದೊಡ್ಡಮನೆ ನರ್ಸಿಂಗ್ ಹೋಮ್, ಎಸಿ/ಎಸ್‍ಟಿ ಹಾಸ್ಟೇಲ್, ಹೊಸಹಳ್ಳಿ, ಹಾರೋನಹಳ್ಳಿ, ನರಸಾಪುರ, ಕುಪ್ಪುರು, ಕಾಳಮ್ಮನ ಪಾಳ್ಯ, ಮರಿಹುಚ್ಚಯ್ಯನ ಪಾಳ್ಯ, ಬಿ.ಎಚ್.ಪಾಳ್ಯ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.










