ತುಮಕೂರು : ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ಜ. 9 ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿ ಹಮ್ಮಿಕೊಂಡಿರುವುದಾಗಿ ವಾಟಾಳ್ ನಾಗರಾಜ್ ತಿಳಿಸಿದರು. ರಾಜ್ಯದಲ್ಲಿ ಮರಾಠ ಪ್ರಾಧಿಕಾರವನ್ನು ರಚನೆ ಮಾಡಿರುವ ಸರ್ಕಾರ ಹಿಂದಕ್ಕೆ ಪಡೆಯುವ ಸೂಚನೆಯನ್ನು ತೋರಿಸುತ್ತಿಲ್ಲ. ಹೀಗಾಗಿ ರಾಜ್ಯದ ಎಲ್ಲ ಕಡೆ ಚಳವಳಿ ನಡೆಸಲಾಗುತ್ತಿದೆ ಎಂದರು. ನಗರದ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ. 9 ರಂದು ರಾಜ್ಯದ 500 ಸ್ಥಳಗಳಲ್ಲಿ ರೈಲು ಸಂಚಾರ ಬಂದ್ ಮಾಡಿ ರೈಲ್ವೆ ಹಳಿಗಳ ಮೇಲೆ ಕುಳಿತು ಸತ್ಯಾಗ್ರಹ ನಡೆಸುವುದಾಗಿ ಹೇಳಿದರು. ಜ. 9 ರಂದು ರೈಲುಗಳನ್ನು ಓಡಿಸುವಾಗ ಎಚ್ಚರದಿಂದ ಓಡಿಸಬೇಕು. ಈಗ ನಿಗದಿಪಡಿಸಿರುವ 500 ಸ್ಥಳಗಳು ಮುಂದೆ 1 ಸಾವಿರ ಸ್ಥಳಗಳಾಗಬಹುದು. ಹಾಗಾಗಿ ಅಂದು ರೈಲುಗಳನ್ನು ಚಾಲಕರು ಎಚ್ಚರಿಕೆಯಿಂದ ಓಡಿಸಬೇಕು ಎಂದು ಅವರು ಒತ್ತಾಯಿಸಿದರು. …
Author: News Desk Benkiyabale
ಹುಳಿಯಾರು : ಹುಳಿಯಾರು ಪಟ್ಟಣದಲ್ಲಿ ಅವರೆಕಾಯಿ ವ್ಯಾಪಾರ ಜೋರಾಗಿದ್ದು ದಿನದಿಂದ ದಿನಕ್ಕೆ ಅವಕ ಹೆಚ್ಚಾಗುತ್ತಿದೆ. ಸಮತೋಷಕರ ಸಂಗತಿಯೆಂದರೆ ಖುದ್ದು ರೈತರೇ ನಿತ್ಯ ತಾಜಾ ಕಾಯಿಗಳನ್ನು ತಂದು ಮಾರುತ್ತಿದ್ದಾರೆ. ಹುಳಿಯಾರು ಸುತ್ತಮುತ್ತ ಸಾಂಪ್ರದಾಯಿಕ ರಾಗಿ ಹೊಲಗಳು ಹಾಗೂ ಪ್ರತ್ಯೇಕವಾಗಿ ಅವರೆ ಕಾಯಿ ಬೆಳೆಯಲಾಗಿದೆ. ಈಗ ಮೊದಲ ಬಿತ್ತನೆಯ ಫಸಲು ಮಾರಾಟಕ್ಕೆ ಬರುತ್ತಿದೆ. ಒಂದು ಕೆ.ಜಿ ಅವರೆ ಕಾಯಿಗೆ 35 ರೂನಂತೆ ಮಾರಾಟವಾಗುತ್ತಿದೆ. ಅವರೆ ಕಾಯಿ ಆವಕ ಈಗಷ್ಟೇ ಪ್ರಾರಂಭವಾಗಿದ್ದು ದಿನಕಳೆದಂತೆ ಅವಕ ಹೆಚ್ಚಾಗಿ ಬೆಲೆಯೂ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಾರಿ ಹದವಾಗಿ ಮಳೆಯಾದ ಪರಿಣಾಮವಾಗಿ ತಾಲ್ಲೂಕಿನಾದ್ಯಂತ ಉತ್ತಮ ಇಳುವರಿ ಬಂದಿದೆ. ಹುಳಿಯಾರಿನ ಡೈಲಿ ಮಾರುಕಟ್ಟೆಗಿಂತ ಕರವೇ ಸರ್ಕಲ್‍ನಲ್ಲಿ ಸ್ಥಳೀಯ ರೈತರ ಸೊಗಡು ಅವರೆಕಾಯಿ ಮಾರಾಟಕ್ಕೆ ತರುತ್ತಿದ್ದಾರೆ. ನಿತ್ಯ ಹತ್ತನ್ನೆರಡು ರೈತರು ರಾಶಿ ಹಾಕಿ ಮಾರುತ್ತಿದ್ದು ಅವರೆಕಾಯಿಯ ಸೊಗಡಿನ ಘಮಲು ದಾರಿಹೋಕರನ್ನು ಸೆಳೆಯುತ್ತಿದೆ. ತಾಲ್ಲೂಕಿನಲ್ಲಿ…
ತುಮಕೂರು: ಜಿಲ್ಲೆಯಲ್ಲಿ ಪೊಕ್ಸೊ ಕಾಯ್ದೆ-2012ರಡಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 11 ಪ್ರಕರಣಗಳಿಗೆ ಸಂಬಂಧಿಸಿದಂತೆ 2019-20 ಹಾಗೂ 2020-21ನೇ ಸಾಲಿನಲ್ಲಿ 18 ಆರೋಪಿಗಳಿಗೆ ಶಿಕ್ಷೆ ನೀಡಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ. ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಒಂದು ವರ್ಷದಿಂದ ಜೀವಾವಧಿಯವರೆಗೂ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಪೊಕ್ಸೊ ಕಾಯ್ದೆ ಸಹಕಾರಿಯಾಗಿದ್ದು, ಈ ಕಾಯ್ದೆಯಡಿ 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾದಾಗ ದೂರನ್ನು ದಾಖಲಿಸಲು ಅವಕಾಶವಿರುತ್ತದೆ. ಇಂತಹ ದೂರುಗಳ ವಿಚಾರಣೆಗಾಗಿ ರಾಜ್ಯದಲ್ಲಿ “ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯ”ವನ್ನು ಸ್ಥಾಪಿಸಲಾಗಿದ್ದು, ತುಮಕೂರಿನಲ್ಲಿಯೂ ಸದರಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯವನ್ನು…
ಮಧುಗಿರಿ : ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಸಾರ್ವತ್ರಿಕ ಚುನಾವಣೆಗೆ 324 ಮತಗಟ್ಟೆಗಳಲ್ಲಿ 42 ಮತಗಟ್ಟೆಗಳು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಮತದಾನದ ಸಂಪೂರ್ಣ ವಿಡಿಯೋ ಚಿತ್ರಿಕರಣ ಮಾಡಲಾಗುವುದು ಎಂದು ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ತಿಳಿಸಿದರು. ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನಕ್ಕೆ ಪೂರ್ವ ಸಿದ್ದತೆ ಕೈಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1,95,548 ಮತದಾರರು ಮತದಾನ ಮಾಡಬಹುದಾಗಿದ್ದು, 900 ಕ್ಕೂ ಹೆಚ್ಚು ಮತದಾರರೊಂದಿರುವ ಮತಗಟ್ಟೆಗಳಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುವುದು ತಾಲ್ಲೂಕಿನಲ್ಲಿ 33 ಹೆಚ್ಚುವರಿ ಮತಗಟ್ಟೆ ತೆರೆಯಲಾಗಿದೆ ಎಂದರು. ಶಾಂತಿ ಮತ್ತು ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ಪೊಲೀಸ್ ಬಂದೋಬಸ್ತು ಮಾಡಲಾಗಿದೆ. ಡಿವೈಎಸ್‍ಪಿ ಒಬ್ಬರು, ಸಿಪಿಐ ನಾಲ್ವರು, ಪಿಎಸ್‍ಐ ಏಳು ಹಾಗೂ ಎಎಸ್‍ಐ 17 ಪೊಲೀಸ್ ರೊಂದಿಗೆ ಜೊತೆಗೆ ಗೃಹರಕ್ಷಣಕದಳದವರು ಸೇರಿ 378 ಸಿಬ್ಬಂದಿಯನ್ನು ಮತ್ತು 17 ಮೀಸಲು ಶಸಸ್ತ್ರ ಪಡೆಯ ತುಕ್ಕಡಿಗಳನ್ನು ಸಹ ನಿಯೋಜಿಸಲಾಗಿದೆ…
ತುಮಕೂರು : ಕುರುಬ ಸಮುದಾಯಕ್ಕೆ ಎಸ್‍ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ 340 ಕಿಲೋ ಮೀಟರ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು. ನಗರದ ಬೀರೇಶ್ವರ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕುರುಬರ ಎಸ್.ಟಿ.ಮೀಸಲಾತಿ ಹೋರಾಟ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಗಿನೆಲೆಯಿಂದ ಜ.15ರಂದು ಆರಂಭಗೊಳ್ಳಲಿರುವ ಪಾದಯಾತ್ರೆ ಫೆ.2ರಂದ ಬೆಂಗಳೂರು ತಲುಪಲಿದ್ದು, ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸುವ ಮೂಲಕ ಪಕ್ಷಾತೀತವಾಗಿ ಕುರುಬ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದರು. ಕುರುಬ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಹೋರಾಟಕ್ಕಾಗಿ ಈಗಾಗಲೇ ರಾಜ್ಯದಲ್ಲಿ ಜನಪ್ರತಿನಿಧಿಗಳು, ಮಹಿಳಾ ಪ್ರತಿನಿಧಿಗಳು ಸೇರಿಸಂತೆ ಸಮುದಾಯದ ಮುಖಂಡರ ಸಭೆಯನ್ನು ನಡೆಸಲಾಗಿದೆ, ಬಾಗಲಕೋಟೆಯಲ್ಲಿ ಬೃಹತ್ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸಲಾಗಿದ್ದು, ಬೃಹತ್ ಹೋರಾಟವನ್ನು ಹಮ್ಮಿಕೊಳ್ಳುವ ಮೂಲಕ ಹಕ್ಕೋತ್ತಾಯ ಮಂಡಿಸಲಾಗುವುದು ಎಂದರು. 1976ರಲ್ಲಿ ದೇವರಾಜ…
ತುಮಕೂರು: ಕಡುಬಡತನದಲ್ಲಿ ಹುಟ್ಟಿ, ತಮ್ಮ ಅಜ್ಜಿಯಿಂದ ಕಲಿತ ಸೂಲಗಿತ್ತಿ ಕಸುಬಿನಿಂದ ಬರುವ ಯಾವುದೇ ಪ್ರತಿಫಲಕ್ಕೆ ಆಸೆ ಪಡದೆ, ಸಾವಿರಾರು ಹೆರಿಗೆಗಳನ್ನು ಮಾಡಿ ತಾಯಿ ಮತ್ತು ಮಗುವಿಗೆ ಜೀವ ನೀಡಿದ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಗದ್ದುಗೆಯನ್ನು ಒಳಗೊಂಡಂತೆ ಇದೊಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಹಾಗೂ ಸರಕಾರ ಮುಂದಾಗುವಂತೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಸಲಹೆ ನೀಡಿದ್ದಾರೆ. ನಗರದ ಗಂಗಸಂದ್ರ ಬಳಿ ಇರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ.ಸೂಲಗಿತ್ತಿ ನರಸಮ್ಮ ಅವರ ಜನ್ಮ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಗದ್ದುಗೆಗೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದ ಅವರು, ಡಾ.ಸೂಲಗಿತ್ತಿ ನರಸಮ್ಮ ಅವರು, ಅತ್ಯಂತ ಕುಗ್ರಾಮದಲ್ಲಿ ಹುಟ್ಟಿ,ತನ್ನ ಕಾಯಕದ ಮೂಲಕವೇ ದೆಹಲಿಯವರಗೂ ಹೆಸರು ಮಾಡಿದರು. ಸಮಾಧಿಯ ಪಕ್ಕದಲ್ಲಿಯೇ ಇರುವ ಕೆರೆಯನ್ನು ಸ್ವಚ್ಚಗೊಳಿಸಿ,ಇದೊಂದು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುವ ಕೆಲಸ ಆಗಬೇಕು. ಈಗಾಗಲೇ ಸ್ಥಳೀಯ ಶಾಸಕರು, ಸಂಸದರು ಈ ನಿಟ್ಟಿನಲ್ಲಿ ಪ್ರಯತ್ನ…
ತುಮಕೂರು : ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್‍ಮಸ್ ಹಬ್ಬವನ್ನು ನಗರದಲ್ಲಿ ಸಡಗರ ಸಂಭ್ರಮ ಇಲ್ಲದೆ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಕ್ರಿಸ್‍ಮಸ್ ಎಂದಾಕ್ಷಣ ಕ್ರಿಸ್‍ಮಸ್ ಟ್ರೀ ಅಲಂಕಾರ, ಕ್ರಿಸ್ಮಸ್ ಕೇಕ್‍ಗಳು, ಸಂತಕ್ಲಾಸ್ ಕ್ಯಾಂಡಲ್‍ಗಳು, ವಿವಿಧ ಅಲಂಕಾರಗಳು ನೆನಪಿಗೆ ಬರುತ್ತವೆ. ಪಟಾಕಿ ಸಿಡಿಸುವುದು, ಗುಂಪು ಸೇರುವುದು, ಸಾಮೂಹಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಂಭ್ರಮದ ಮನೆ ಮಾಡಿರಲಿಲ್ಲ. ನಗರದ ಚರ್ಚ್ ಸರ್ಕಲ್‍ನಲ್ಲಿರುವ ಸಿಎಸ್‍ಐ ಮಹಾದೇವಾಲಯದಲ್ಲಿ ಸರಳವಾಗಿ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಲಾಯಿತು. ಸಿಎಸ್‍ಐ ವೆಸ್ಲಿ ಮಹಾದೇವಾಲಯದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದೇವಾಲಯಕ್ಕೆ ಬಂದ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗುತ್ತಿತ್ತು. ಹಾಗೆಯೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗಿತ್ತು. ಕ್ರೈಸ್ತ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಈ ಕೊರೊನಾ ಮಹಾಮಾರಿ ಜಗತ್ತಿನಿಂದ…
ಹುಳಿಯಾರು : ಗ್ರಾಮ ಪಂಚಾಯಿತಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಕಣದಲ್ಲಿರುವ ಅಭ್ಯರ್ಥಿಗಳು ಮತದಾರರ ಮನೆ, ಮನ ತಲುಪಲು ತರಹೇವಾರಿ ಕಸರತ್ತು ಶುರುವಿಟ್ಟುಕೊಂಡಿದ್ದಾರೆ. ಅದರಲ್ಲೂ ಈ ಬಾರಿ ತಮ್ಮ ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಸಂಪರ್ಕ ಸೇತುಗಳಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕೆ ಇಳಿದಿದ್ದು, ಆನ್‍ಲೈನ್ ಪ್ರಚಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ವಾಟ್ಸಾಪ್, ಫೇಸ್‍ಬುಕ್‍ಗಳಲ್ಲಿ ಕರಪತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಕೆಲ ಅಭ್ಯರ್ಥಿಗಳು ತಮ್ಮ ಬೆಂಬಲಿಗರು ಮತ್ತು ಆತ್ಮೀಯರಿಗೆ ಟ್ಯಾಗ್ ಮಾಡಿ ಮತ ಕೇಳುತ್ತಿದ್ದಾರೆ. ಇನ್ನೂ ಕೆಲವರು ಕೈ ಮುಗಿದು ಮತ ಕೇಳುವ ವಿಡಿಯೋ ತುಣುಕುಗಳನ್ನು ಹಾಕಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಕರಪತ್ರಗಳಷ್ಟೇ ಅಲ್ಲದೇ, ಸಿನಿಮಾ ಹಾಡುಗಳಿಗೆ ತಮ್ಮ ವಿಡಿಯೊಗಳನ್ನು ಮಿಕ್ಸ್ ಮಾಡಿ, ಪ್ರಚಾರ ನಡೆಯುತ್ತಿದ್ದಾರೆ. ಸ್ಟಾರ್ ನಟರ ಹಾಡುಗಳ ತುಣುಕುಗಳಿಗೆ ತಮ್ಮ…
ತುಮಕೂರು : ಗ್ರಾಮಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ ಎಣಿಕಾ ದಿನದಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ನಿಷೇಧಾಜ್ಞೆಯನ್ವಯ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮುಚ್ಚಿಸಿ, ಮದ್ಯ ಮಾರಾಟ/ಶೇಖರಣೆಯನ್ನು ನಿಷೇಧಿಸಿ ಒಣದಿನವೆಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ : ಡಿ.27 ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತಗಟ್ಟೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಪಟ್ಟಣದ ತೀನಂಶ್ರಿ ಸ್ಮಾರಕ ಭವನ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ಚುನಾವಣಾ ಸಿಬ್ಬಂದಿಗಳಾದ 278 ಮತಗಟ್ಟೆ ಅಧಿಕಾರಿಗಳು ಹಾಗೂ 278 ಮಂದಿ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಹಾಗೂ ಎಲ್‍ಇಡಿ ಮೂಲಕ ತರಬೇತಿ ನೀಡಲಾಯಿತು. ಈ ತರಬೇತಿ ಕೆಂದ್ರಗಳಿಗೆ ಜಿಲ್ಲಾಧಿಕಾರಿ ಕೆ. ರಾಕೇಶ್‍ಕುಮಾರ್ ಹಾಗೂ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ ಭೇಟಿ ನೀಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ನಂತರ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಬಿ. ತೇಜಸ್ವಿನಿ, ಸಿಪಿಐ ವೀಣಾ ಮತ್ತು ಸಿಬ್ಬಂದಿಗಳು ಹಾಜರಿದ್ದರು.











