Author: News Desk Benkiyabale

ತುಮಕೂರು :       ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿ.ಯು.ಸಿ.ಯ ಅರ್ಥಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ 15837 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಅರ್ಥಶಾಸ್ತ್ರ ವಿಷಯಕ್ಕೆ ನೋಂದಣಿಯಾದ 16930 ವಿದ್ಯಾರ್ಥಿಗಳ ಪೈಕಿ 1093 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.       ಜೀವಶಾಸ್ತ್ರ ವಿಷಯದಲ್ಲಿ 7023 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಜೀವಶಾಸ್ತ್ರ ವಿಷಯಕ್ಕೆ ನೋಂದಣಿಯಾದ 7192 ವಿದ್ಯಾರ್ಥಿಗಳ ಪೈಕಿ 169 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.       ಪರೀಕ್ಷೆಯಲ್ಲಿ ಯಾವುದೇ ಡಿಬಾರ್ ಪ್ರಕರಣ ವರದಿಯಾಗಿರುವುದಿಲ್ಲವೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲಲಿತಕುಮಾರಿ ತಿಳಿಸಿದ್ದಾರೆ.

Read More

 ಮಧುಗಿರಿ :        ಗಂಡ-ಹೆಂಡತಿ ಜಗಳವನ್ನು ಬಿಡಿಸಲು ಹೋದ ನಾದಿನಿಯ ಕೈ ಕತ್ತರಿಸಿದ ಘಟನೆ ಭಾನುವಾರ ಜರುಗಿದೆ.       ತಾಲ್ಲೂಕಿನ ಕಸಬಾ ಹೋಬಳಿಯ ಡಿ.ವಿ.ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಹನುಮಂತ (25) ತನ್ನ ಪತ್ನಿ ಅನಿತಾ (23) ಳೊಂದಿಗೆ ಜಗಳವಾಡಿ ಮಚ್ಚಿನಿಂದ ಹಲ್ಲೆಗೆ ಮುಂದಾದಾಗ ಅನಿತಾಳ ತಂಗಿ ಮೇಘನಾ (16) ತಡೆಯಲು ಮುಂದೆ ಬಂದಿದ್ದು, ಆವೇಶದಲ್ಲಿದ್ದ ಹನುಮಂತ ಬೀಸಿದ ಮಚ್ಚು ಅಡ್ಡ ಬಂದ ನಾದಿನಿಯ ಕೈ ತುಂಡರಿಸಿದ್ದು, ಆರೋಪಿ ಹನುಮಂತನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ        ಬೆಂಗಳೂರಿನಲ್ಲಿ ನೆಲಸಿದ್ದ ಹನುಮಂತನ ಕುಟುಂಬದಲ್ಲಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವೆಂದು ಹೇಳಲಾಗುತ್ತಿದ್ದು, ಬೆಂಗಳೂರಿನಲ್ಲಿಯೂ ಸಹಾ ಆರೋಪಿಯ ಮೇಲೆ ಪ್ರಕರಣ ಪ್ರಕರಣವೊಂದು ದಾಖಲಾಗಿತ್ತು ಎನ್ನಲಾಗಿದೆ.       ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಘಟನೆ ನಡೆದ ಕೇವಲ ಒಂದು ಘಂಟೆಯೊಳಗೆ ಪಿಎಸ್‍ಐ ಕಾಂತರಾಜು ಬಂಧಿಸಿರುತ್ತಾರೆ. ಗಾಯಾಳುವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ .

Read More

ತುಮಕೂರು :        ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಗಮನಕ್ಕೆ, ರಾಷ್ಟ್ರ ವ್ಯಾಪ್ತಿ ಹರಡಿರುವ ಕೋವಿಡ್-19 ಸೋಂಕು ರೋಗವನ್ನು ತಡೆಯುವ ಸಂಬಂಧ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2020ರ ಮಾರ್ಚ್ 13ರಂದು ನಡೆದ ಸಭೆಯಲ್ಲಿ ನಿರ್ದೇಶಿಸಿರುವಂತೆ, ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇವರ ಆದೇಶದಲ್ಲಿ ಸೂಚಿಸಿರುವಂತೆ ಮತ್ತು ತುಮಕೂರು ಜಿಲ್ಲಾಧಿಕಾರಿಗಳು ನಿರ್ದೇಶಿಸಿರುವಂತೆ 2020ರ ಮಾರ್ಚ್ 14ರ ಮಧ್ಯರಾತ್ರಿಯಿಂದ ಒಂದು ವಾರಗಳ ಕಾಲ ಅತಿ ಹೆಚ್ಚು ಜನ ಸೇರುವ ಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕಗಳು, ರಂಗಮಂದಿರಗಳು, ಪಬ್‍ಗಳು, ನೈಟ್ ಕ್ಲಬ್‍ಗಳು, ವಸ್ತುಪ್ರದರ್ಶನಗಳು, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಹಾಗೂ ಇತರೆ ಹೆಚ್ಚಾಗಿ ಜನ ಸೇರುವಂತಹ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ತುಮಕೂರು ಮಹಾನಗರ ಪಾಲಿಕೆಯ ಪೂರ್ವಾನುಮತಿ ಪಡೆಯದೇ ಯಾವುದೇ ಬೇಸಿಗೆ ಶಿಬಿರಗಳು, ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.        ಹೆಚ್ಚು ಜನರು ಬಳಸುವ ಜಿಮ್ ಸೆಂಟರ್‍ಗಳು, ಪಿಜಿಗಳು, ಕೋಚಿಂಗ್…

Read More

ಪಾವಗಡ :       ಪಟ್ಟಣದ ಪುರಸಭೆಯ 2020-21 ನೇ ಸಾಲಿನ ಆಯ-ವ್ಯಯ ಮಂಡನೆಯಾಗಿದ್ದು, 58 ಲಕ್ಷದ 87 ಸಾವಿರದ ಉಳಿತಾಯ ಬಜೆಟ್‍ನ್ನು ಪುರಸಭಾ ಆಡಳಿತಾಧಿಕಾರಿ ಹಾಗೂ ಮಧುಗಿರಿ ಉಪ ವಿಭಾಗಾಧಿಕಾರಿ ಡಾ.ನಂದಿನಿ ದೇವಿ ಮಂಡಿಸಿದರು.       ಗುರುವಾರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ವಾರ್ಷಿಕವಾಗಿ 569.72 ಕೋಟಿ ಬಜೆಡ್ ಮಂಡಿಸಿ, ಇದರಲ್ಲಿ 510.85 ಕೋಟಿ ವೆಚ್ಚವಾಗಿ 58.87 ಲಕ್ಷ ಪುರಸಭೆಯ ಉಳಿತಾಯವಾಗಿದೆ ಎಂದು ತಿಳಿಸಿ ಮಾತನಾಡಿದ ಅವರು, ಸ್ವಯಂ ಘೋಷಿತ ಆಸ್ತಿ, ಕಟ್ಟಡ ಬಾಡಿಗೆ, ನೀರಿನ ತೆರಿಗೆ, ದಿನವಹಿ, ಮಾರ್ಕೆಟ್‍ವಹಿ ಲೇಔಟ್‍ಗಳ ಅಭಿವೃದ್ಧಿ ಸೇರಿದಂತೆ ಪುರಭೆಗೆ ವಿವಿಧ ಆದಾಯ ಮೂಲಗಳಿಂದ 5.ಕೋಟಿ 69 ಲಕ್ಷ್ಮ 72 ಸಾವಿರ ಆದಾಯ ಬಂದಿದ್ದು, ಕಚೇರಿ ನಿರ್ವಹಣಿ, ಆರೋಗ್ಯ, ಶುದ್ಧ ಕುಡಿಯುವ ನೀರು, ವಿದ್ಯುತ್, ಬೀದಿ ದ್ವೀಪ ನಿರ್ವಹಣಿ, ಅದ್ಯಕ್ಷ ಉಪಾಧ್ಯಕ್ಷರ ಗೌರವಧನ, ವಾಹನ ಬಾಡಿಗೆ, ಪೌರ ಕಾರ್ಮಿಕರ ವಿಶೇಷ ಭತ್ಯೆ, ಕಛೇರಿಯ ವೆಚ್ಚ, ಪರಿಶಿಷ್ಠ ಜಾತಿ ಮತ್ತು ಪಂಗಡ, ಹಿಂದುಳಿದ…

Read More

ತುಮಕೂರು :      ಮಾರಕ ಕೊರೊನಾ ವೈರಸ್ ನಿಂದ ತುಮಕೂರು ಸುರಕ್ಷಿತವಾಗಿದ್ದು ಸಾರ್ವಜನಿಕರು ಭಯ ಪಡಬೇಕಿಲ್ಲ ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ಡಿಹೆಚ್ ಒ ಶಶಿಕಲಾ ಮನವಿ ಮಾಡಿದರು.        ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗಾಗಿ ತೆರೆದಿರುವ ವಿಶೇಷ ಕೊಠಡಿಗೆ ಭೇಟಿ ನೀಡಿದ ನಂತರ ಮಾತನಾಡಿ ರಾಜ್ಯದಲ್ಲಿ ಬೆರಳಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಕೊರೊನಾ ವೈರಸ್ ಪತ್ತೆಯಾಗಿದ್ದು ನಮ್ಮ ಜಿಲ್ಲೆಗೆ ಕೊರೊನಾದಿಂದ ಸುರಕ್ಷಿತವಾಗಿದ್ದು ಒಂದುವೇಳೆ ಪತ್ತೆಯಾದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.       ತುಮಕೂರಿನ ಸಿದ್ಧಗಂಗಾ ಆಸ್ಪತ್ರೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ್ದು ಒಂದುವೇಳೆ ಕೊರಾನಾ ಸೊಂಕಿತರು ಆಸ್ಪತ್ರೆಗೆ ದಾಖಲಾದರೆ ಅವರಿಗೆ ಚಿಕಿತ್ಸೆ ನೀಡಲೆಂದೇ ಐಸೋಲೇಟೆಡ್ ಘಟಕ ತೆರೆದಿರುವುದು ಆಸ್ಪತ್ರೆಯ ಜನತ ಮೇಲಿಟ್ಟಿರುವ ಕಾಳಜಿಯನ್ನ ತೋರಿಸುತ್ತದೆ ಎಂದರು.       ಸಿದ್ಧಗಂಗಾ ಆಸ್ಪತ್ರೆ ಎಂ.ಡಿ. ಡಾ.ಎಸ್.ಪರಮೇಶ್ ಮಾತನಾಡಿ ಕೊರೊನವೈರಸ್ ವಿರುದ್ಧ ಹೋರಾಡಲು ನಾವು ಸಜ್ಜಾಗಿದ್ದು ನಮ್ಮ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ…

Read More

ಮಧುಗಿರಿ:       ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ 19 ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ಜಾತ್ರಾ ಮಹೋತ್ಸವವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಡಾ.ಕೆ.ನಂದಿನಿ ದೇವಿ ತಿಳಿಸಿದರು.       ಪಟ್ಟಣದ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರಕಾರವು ಈಗಾಗಲೇ ಒಂದು ವಾರದವರೆವಿಗೂ ಎಲ್ಲಾ ರೀತಿಯ ಸಭೆ ಸಮಾರಂಭ ಜಾತ್ರೆ, ವಿವಾಹ ಮತ್ತಿತರ ಜನ ಸೇರುವ ಸಮಾರಂಭಗಳನ್ನು ರದ್ಧುಪಡಿಸುವಂತೆ ಆದೇಶಿಸಿದೆ. ಈ ಆದೇಶದ ಆನ್ವಯ 10 ದಿನಗಳ ಕಾಲ ನಡೆಯಬೇಕಾಗಿದ್ದ ಜಾತ್ರ ಮಹೋತ್ಸವನ್ನು ಹಾಗೂ ತಾಲ್ಲೂಕಿನಲ್ಲಿ ನಡೆಯುವ ಸಂತೆಗಳನ್ನು ಸಹ ರದ್ಧುಪಡಿಸಲಾಗಿದೆ.       ಆದರೆ ದಂಡಿನ ಮಾರಮ್ಮನ ಜಾತ್ರೆಯಲ್ಲಿ ಸಾವಿರಾರು ಜನ ಸೇರಿ ವಿಶೇಷವಾಗಿ ಆಚರಿಸುವ ಬೆಳ್ಳಿ ಪಲ್ಲಕ್ಕಿ ಮತ್ತು ಆಗ್ನಿಕುಂಡ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಸಹ ರದ್ಧುಪಡಿಸಲಾಗಿದೆ. ದೇವಸ್ಥಾನದಲ್ಲಿ ಎಂದಿನಂತೆ…

Read More

ತುಮಕೂರು :       ಕಾನೂನು ಉಲ್ಲಂಘಿಸದೇ ಕಾರ್ಯನಿರ್ವಹಿಸುವ ಮೂಲಕ ಸಾವಿರಾರು ಜನರಿಗೆ ಸಹಾಯ ಮಾಡಿರುವ ತಹಶೀಲ್ದಾರ್ ಎಂ.ಮಮತಾ ಅವರನ್ನು ಗುಬ್ಬಿ ತಾಲ್ಲೂಕಿಗೆ ಮರು ನಿಯೋಜನೆಗೊಳಿಸದಿದ್ದರೆ ತುಮಕೂರು ಬಂದ್ ಮಾಡಲಾಗುವುದು ಎಂದು ದಲಿತ ಮುಖಂಡ ಕೊಡಿಯಾಲ ಮಹದೇವ್ ಆಗ್ರಹಿಸಿದರು.       ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನು ಮರು ನಿಯೋಜನೆಗೊಳಿಸುವಂತೆ ಒತ್ತಾಯಿಸಿ ದಲಿತರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಿಪ್ಪೂರಿನ ಜಮೀನು ಒತ್ತುವರಿಯಾಗಿದ್ದು, ರಾಜಕಾರಣಿಗಳು ಆರ್ ಐ, ವಿಎ ಅವರನ್ನು ಬಳಸಿಕೊಂಡು ಕುತಂತ್ರ ರೂಪಿಸಿ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.       ಹೊದಲೂರು ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಸಂಸದರ ಜಮೀನನ್ನು ತೆರವುಗೊಳಿಸಲು ಮುಂದಾಗಿದ್ದ ಮಮತಾ ಅವರನ್ನು, ಅಲ್ಲಿನ ಗ್ರಾಮ ಲೆಕ್ಕಿಗ ಮುರುಳಿ, ರಾಜಸ್ವ ನಿರೀಕ್ಷಕ ರಮೇಶ್ ಅವರನ್ನು ಬಳಸಿಕೊಂಡು, ಕುಮ್ಮಕ್ಕು ನೀಡಿ ತಹಶೀಲ್ದಾರ್ ಅವರನ್ನು ಕುತಂತ್ರದಿಂದ ವರ್ಗಾವಣೆ ಆಗುವಂತೆ ಮಾಡಿದ್ದಾರೆ ಎಂದು ದೂರಿದ ಅವರು, ಆರ್…

Read More

ತುಮಕೂರು :       ತಾಲ್ಲೂಕಿನ ಗೂಳೂರು ಹೋಬಳಿ ಕೈದಾಳ ಶ್ರೀ ಚನ್ನಕೇಶವ ಸ್ವಾಮಿಯ ಬ್ರಹ್ಮ ರಥೋತ್ಸವವು ಮಾರ್ಚ್ 15ರಂದು ನಡೆಯಲಿದೆ.       ರಥೋತ್ಸವದ ಪ್ರಯುಕ್ತ ಮಾರ್ಚ್ 13 ರಿಂದ 19ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಮಾರ್ಚ್ 13ರಂದು ಅಂಕುರಾರ್ಪಣೆ, ದ್ವಜಾರೋಹಣ; 14ರಂದು ಗಜೇಂದ್ರ ಮೋಕ್ಷ, ಪ್ರಹ್ಲಾದೋತ್ಸವ, ಕಲ್ಯಾಣೋತ್ಸವ; 15ರಂದು ಬ್ರಹ್ಮರಥೋತ್ಸವದ ಅಂಗವಾಗಿ ಯಾತ್ರಾದಾನ ಸೇವೆ, ಹರಿವಾಣದ ಸೇವೆ, ಹೂವಿನ ಅಲಂಕಾರ ತಿರುಪಾವಡೈ ಸೇವೆ, ಬ್ರಾಹ್ಮಣ ಅನ್ನಸಂತರ್ಪಣೆ, ಪಾನಕ ಪೂಜಾದಿಗಳು, ಶೇಷೋತ್ಸವ; 16ರಂದು ಕುದುರೆ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ; 17ರಂದು ಗರುಡೋತ್ಸವ, ತೀರ್ಥಸ್ನಾನ, ಧ್ವಜ ಅವರೋಹಣ, ಪಲ್ಲಕ್ಕಿ ಉತ್ಸವ, ಶಯನೋತ್ಸವ; 18ರಂದು ಉಯ್ಯಾಲೋತ್ಸವ, ಬೃಂದಾವನೋತ್ಸವ; 19ರಂದು ದವನೋತ್ಸವ, ಮಂಟಪೋತ್ಸವ, ಹೆಜ್ಜೆ ಮಂಗಳಾರತಿ, ಮಹಮಜ್ಜನ ಸೇವೆ, ಮತ್ತಿತರ ಪೂಜಾ ಕಾರ್ಯಗಳು ನಡೆಯಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.

Read More

ಚಿಕ್ಕನಾಯಕನಹಳ್ಳಿ :       ಕಳೆದ ಎರಡುವರ್ಷದಿಂದ ಸ್ಥಳೀಯ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷಸ್ಥಾನಗಳ ಮೀಸಲಾತಿ ವಿವಾದಕ್ಕೆ ತೆರೆ ಎಳೆದಿರುವ ಸರ್ಕಾರ ಈಗ ನೂತನ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರೂ ಇಲ್ಲಿನ ಪುರಸಭೆಯ ಅಧ್ಯಕ್ಷಸ್ಥಾನ ಮತ್ತೆ ಕಗ್ಗಂಟಾಗಿದೆ.       ಕಳೆದ ಎರಡುವರ್ಷದಲ್ಲಿ ನಡೆದ ಪುರಸಭೆ ಚುನಾವಣೆಯನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಘೋಷಿಸಿದ್ದ ಮೀಸಲಾತಿ ಪಟ್ಟಿಯಲ್ಲಿ ನಿಯಮಗಳು ಪರಿಪಾಲನೆಯಾಗಿಲ್ಲವೆಂಬ ಕಾರಣಕ್ಕೆ ಪ್ರಕರಣ ನ್ಯಾಯಾಲಯಕ್ಕೆ ಎಡೆತಾಗಿದ್ದ ಪರಿಣಾಮ ಚುನಾಯಿತ ಸದಸ್ಯರು ಗೆದ್ದರೂ ಪುರಸಭೆಯೊಳಗೆ ತಮ್ಮ ಅಧಿಕಾರ ಚಲಾಯಿಸಲು ಅವಕಾಶವಿರಲಿಲ್ಲ.       ಈಗ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನೂತನ ಮೀಸಲಾತಿಪಟ್ಟಿಯನ್ನು ಬಿಡುಗಡೆಮಾಡುವ ಮೂಲಕ ಚುನಾಯಿತ ಸದಸ್ಯರ ಅಧಿಕಾರ ಚಲಾವಣೆಗೆ ಹಾಕಲಾಗಿದ್ದ ದಿಗ್ಬಂದನ ತೆರವಾಗುವ ಸಂದರ್ಭ ಬಂದೊದಗಿದೆ.       ಆದರೆ ಪಟ್ಟಣದ ಪುರಸಭೆಗೆ ಈಗ ಸರ್ಕಾರ ಅಧಿಕೃತವಾಗಿ ಘೋಷಿಸಿರುವ ಪಟ್ಟಿಯಂತೆ ಅಧ್ಯಕ್ಷಸ್ಥಾನಕ್ಕೆ ಎಸ್‍ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ ಮಹಿಳೆ ಎಂದು…

Read More

ತುಮಕೂರು:       ಜಿಲ್ಲೆಯಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಸಾರ್ವಜನಿಕರಿಗೆ ತಿಳಿದಲ್ಲಿ ಕೂಡಲೇ ಸಹಾಯವಾಣಿ ಸಂಖ್ಯೆ-0816-2278387/2251414ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಸೂಚನೆ ನೀಡಿದ್ದಾರೆ.       ತಾಲ್ಲೂಕು ಮಟ್ಟದಲ್ಲಿ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲೂ ಕರೋನ ಸೋಂಕು ಹರಡುವ ಬಗ್ಗೆ ಜನಜಾಗೃತಿ ಮೂಡಿಸಿ ಮುಂಜಾಗ್ರತಾ ಕ್ರಮವಾಗಿ ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು, ಬಾಯಿ, ಕಣ್ಣು, ಮೂಗು ಇವುಗಳನ್ನು ಮುಟ್ಟದೇ ಇರುವುದು ಹಾಗೂ ಕೆಮ್ಮು/ಸೀನು ಬಂದಾಗ ರಕ್ಷಣಾತ್ಮಕವಾಗಿ ತಮ್ಮ ಕೈತೋಳುಗಳನ್ನು ಬಳಸಿಕೊಳ್ಳುವಂತೆ ಅರಿವು ಮೂಡಿಸಬೇಕೆಂದು ಅವರು ತಿಳಿಸಿದರು.       ಕೆಮ್ಮು, ಜ್ವರ, ನೆಗಡಿ ಬಂದರೆ ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಆದರೆ ಎಲ್ಲಾ ಜ್ವರ, ಕೆಮ್ಮು, ನೆಗಡಿ ಕರೋನಾ ವೈರಸ್‍ನಿಂದ ಬಂದಿರುವುದಿಲ್ಲ ಇದರ ಬಗ್ಗೆ ಸಾರ್ವಜನಿಕರು ಗಮನಹರಿಸಿ ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕವಾಗಿ ಬಳಸುವ ವಸ್ತುಗಳ ಮತ್ತು ಶಾಲೆ/ಮನೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಆದ್ಯ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ…

Read More