Author: News Desk Benkiyabale

 ತುಮಕೂರು:       ತುಮಕೂರು ನಗರವು ಬೆಂಗಳೂರಿನ ಸಮೀಪವಿದ್ದು, ತುಮಕೂರು ನಗರ ಅಭಿವೃದ್ಧಿಗೆ ಕೈಗೊಂಡಿರುವ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ, ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲು ನಗರಾಭಿವೃದ್ಧಿ ಸಚಿವರಾಗಿರುವ ಬಿ.ಎ. ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಅವರು ಇಂದು ಮಹಾನಗರ ಪಾಲಿಕೆಯಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ ಹಾಗೂ ಮಹಾನಗರ ಪಾಲಿಕೆಯ ಸದಸ್ಯರುಗಳ ಸಭೆಯಲ್ಲಿ ಅವರು ಮಾತನಾಡಿದರು. ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಬಗ್ಗೆ ಸಾರ್ವಜನಿಕರಿಂದ ಬಹಳ ದೂರುಗಳು ಬರುತ್ತಿದ್ದು, ರಸ್ತೆ ನಿರ್ಮಾಣ ಕೈಗೊಳ್ಳುವಾಗ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಒನ್ ಬೈ ಒನ್ ರಂತೆ ಕಾಮಗಾರಿ ಕೈಗೊಂಡು ಇರುವ ಸಮಸ್ಯೆಗಳನ್ನು ಪರಿಹರಿಸುತ್ತಾ ಅಭಿವೃದ್ಧಿ ಸಾಧಿಸಲು ಮುಖ್ಯ ಇಂಜಿನಿಯರ್ ಸಿದ್ಧಗಂಗಪ್ಪ ಅವರಿಗೆ ತಿಳಿಸಿದರು.      ತುಮಕೂರು ನಗರಕ್ಕೆ ಸುಮಾರು 22 ಹಳ್ಳಿಗಳು ವಿಲೀನಗೊಂಡಿದ್ದು, ಈ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೂ ಅಧಿಕಾರಿಗಳು ಗಮನಹರಿಸಬೇಕು. ಸಚಿವರಾದ ಮೇಲೆ ಪ್ರಥಮ ಬಾರಿಗೆ ತುಮಕೂರಿನ…

Read More

ಚಿಕ್ಕನಾಯಕನಹಳ್ಳಿ :       ನೀರಾವರಿ ಹೋರಾಟ ಸಮಿತಿ ಹಾಗೂ ರೈತಸಂಘದ ಸದಸ್ಯರೊಂದಿಗೆ ನಾಲಾಕಾಂಗಾರಿ ವೀಕ್ಷಣಗೆ ಜೊತೆಯಲ್ಲಿ ತೆರಳಿದ್ದ ಕನ್ನಡ ಪ್ರಭ ವರದಿಗಾರನ ಮೇಲೆ ಸಚಿವರ ಬೆಂಬಲಿಗರೊಬ್ಬರು ಹಲ್ಲೆಗೆ ಮುಂದಾದ ಘಟನೆ ನಡೆದಿದೆ.       ಕಾಮಗಾರಿ ವೀಕ್ಷಣೆಯ ನಂತರ ಮೇಲ್ಕಂಡ ತಂಡದ ಸದಸ್ಯರನ್ನು ಕನ್ನಡ ಪ್ರಭ ವರದಿಗಾರ ಅಣೇಕಟ್ಟೆ ಸಿದ್ದರಾಮಯ್ಯನವರು ಈ ಹಿಂದೆ ಹೇಮಾವತಿ ನಾಲಾ ಭೂಸ್ವಾಧೀನದ ವಿಚಾರದಲ್ಲಿ ರೈತರಿಗೆ ಪರಿಹಾರ ಕೋಡುವವರೆಗೂ ಕಾಮಗಾರಿ ಮಾಡದಂತೆ ಅಡ್ಡಿಪಡಿಸಲಾಗಿತ್ತು. ಇದಕ್ಕೆ ಅಂದಿನ ಮಾಜಿ ಶಾಸಕರಾಗಿದ್ದ ಜೆ.ಸಿ.ಮಾಧುಸ್ವಾಮಿಯವರು ರೈತರ ನಿಲುವಿಗೆ ಬೆಂಬಲವ್ಯಕ್ತಪಡಿಸಿದ್ದ ಕಾರಣ ಪರಿಹಾರ ದೊರೆತು ಕಾಂಗಾರಿ ಆರಂಭಗೊಂಡಿತು.       ಆದರೆ ಈ ಭಾಗದಲ್ಲಿಯೇ ಎತ್ತಿನಹೊಳೆ ಕಾಮಗಾರಿ ಆರಂಭಗೊಂಡಿದ್ದು ನಾಲೆಗೆ ಭೂಮಿ ಕಳೆದುಕೊಂಡ ರೈತರಿಗೆ ತಿಳುವಳಿಕೆ ಪತ್ರವನ್ನಾಗಲಿ, ಭೂಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಅವಾರ್ಡ್‍ನ್ನಾಗಲಿ, ಅವರು ಕಳೆದುಕೊಳ್ಳುತ್ತಿರುವ ಭೂಮಿಯ ಮೌಲ್ಯವನ್ನು ನಿರ್ಧರಿಸುವ ಯಾವುದೇಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆದರೂ ಏಕಾಏಕಿ ರೈತರ ಜಮೀನಿನಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಈಬಗ್ಗೆ ರೈತಸಂಘ ಮತ್ತು…

Read More

 ತುಮಕೂರು :       ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ ಮತ್ತು ಜನಸಂಪರ್ಕ ಸಭೆ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಸಣ್ಣನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಇಂದು ಚಾಲನೆ ನೀಡಿದರು.       ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ಗಡಿ ಗ್ರಾಮವಾದ ದಸೂಡಿಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ ಮತ್ತು ಜನ ಸಂಪರ್ಕ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.       ಜಿಲ್ಲಾಧಿಕಾರಿಗಳ ಈ ವರ್ಷದ ಮೊದಲ ಗ್ರಾಮ ಭೇಟಿ ಮತ್ತು ಜನಸಂಪರ್ಕ ಸಭೆ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಆರಂಭಿಸಲಾಗುತ್ತಿದೆ. ಈ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಆಲಿಸಲಿದ್ದಾರೆ. ಸುಲಭವಾಗಿ ಬಗೆಹರಿಯುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು. ಹೆಚ್ಚಿನ ಅವಧಿ ತೆಗೆದುಕೊಳ್ಳುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು. ಇದರಿಂದ ಜನರು ಅನಗತ್ಯವಾಗಿ ಶ್ರಮ ಪಡುವುದು ತಪ್ಪುತ್ತದೆ ಎಂದರು. ರೈತರಿಗೆ ಸಾಗುವಳಿ ಚೀಟಿಯನ್ನು ವಿತರಿಸಲಾಗುವುದು ಅಲ್ಲದೆ ಸಾಗುವಳಿ…

Read More

ಮಧುಗಿರಿ :       ಬೆಂಗಳೂರಿನ ಜೈಲಿನಲ್ಲಿದ್ದು ಕೊಂಡೆ ಶ್ರೀಮಂತರ ರಿಂದ ಹಣ ವಸೂಲಿ ಮಾಡುವ ದಂದೆಯಲ್ಲಿ ತೊಡಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯದ ಅನುಮತಿ ಮೇರೆಗೆ ಮಧುಗಿರಿ ಕಸಬ ವ್ಯಾಪ್ತಿಯ ಸೋಂಪುರದ ವಾಸಿ ಹಾಗೂ ತುಮಕೂರು ಮಾಜಿ ಮೇಯರ್ ರವಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಲ್ಲೇಶ್‍ನನ್ನು ಬಿಗಿ ಭದ್ರತೆಯಲ್ಲಿ ಕರೆ ತಂದು ಮಧುಗಿರಿ ಪೋಲಿಸರು ಸ್ಥಳ ತನಿಖೆಯನ್ನು ಸೋಮವಾರ ಸಂಜೆ ನಡೆಸಿದರು.       ಇತ್ತೀಚೆಗೆ ಪಟ್ಟಣದ ವೆಂಕಟ ರವಣ ಸ್ವಾಮಿ ದೇವಾಲಯದ ರಸ್ತೆಯ ಸಮೀಪ ಪುರಸಭಾ ಸದಸ್ಯರ ಮನೆಯ ಮುಂದೆ ನಿಲ್ಲಿಸಿದ್ದ ಇನೂವಾ ಕಾರಿಗೆ ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಎಸೆದು ಹಾನಿ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೋಲೀಸರು ಯಶಸ್ವಿಯಾಗಿದ್ದಾರೆ.       ಆರೋಪಿ ಮಲ್ಲೇಶ್ ಕೃತ್ಯ ಎಸಗಲು ಬೆಂಗಳೂರಿನ ಪರಪ್ಪನ ಆಗ್ರಹಾರದ ಜೈಲಿನಲ್ಲಿದ್ದು ಕೊಂಡು ಸಂಚು ರೂಪಿಸಿದ್ದು 3 ಜನ ಆರೋಪಿಗಳ ಮುಖಾಂತರ…

Read More

ಚಿಕ್ಕನಾಯಕನಹಳ್ಳಿ :       ಭಾವೈಕ್ಯತೆ ಸಂಕೇತವಾಗಿರುವ ಪಟ್ಟಣದ ಶ್ರೀ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ (ತಾತಯ್ಯ)ನವರ 60 ನೇವರ್ಷದ ಉರುಸ್ (ಜಾತ್ರೆ) ಸೋಮವಾರದಿಂದ ಆರಂಭಗೊಂಡಿತು.      ಹಜರತ್ ಸೈಯದ್ ಷಾ ಖಾದ್ರಿಯವರು ಈ ಪ್ರಾಂತ್ಯದಲ್ಲಿ ತಾತಯ್ಯನವರೆಂದೆ ಪ್ರಸಿದ್ದಿಯೆನಿಸಿದ್ದು, ಅವರ ಕಾಲಮಾನದಲ್ಲಿ ಸಮಾಜಕ್ಕೆ ಪೂರಕವಾಗಿ ಲೆಕ್ಕವಿಲ್ಲದಷ್ಟು ಪವಾಡಗಳನ್ನು ನಡೆಸಿದ ಕಾರಣ ತಾತಯ್ಯನವರ ಬಗ್ಗೆ ನಂಬಿಕೆಗಳು ಅಂದಿನಿಂದ ಇಂದಿನವರೆಗೂ ಎರಡೂ ಧರ್ಮಿಯರ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಪೂರಕವಾಗಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ದಿ ಪಡಿಸಿದ ಹಿಂದಿನವರು ಈ ಗೋರಿ ನಿರ್ಮಾಣದ ಸ್ಥಳಕ್ಕೆ ತಾತಯ್ಯನವರ ಮಠವೆಂದೆ À ಕಲ್ಲಿನಲ್ಲಿ ಕೆತ್ತಿಸಲಾಗಿದೆ.       ಹಿಂದೂ-ಮುಸ್ಲಿಂ ಧಾರ್ಮಿಕಭಾವವನ್ನು ಬೆಸೆಯುವಲ್ಲಿ ಪಟ್ಟಣದ ತಾತಯ್ಯನವರ ಗೋರಿ ಎರಡೂ ಧರ್ಮದವರ ಏಕೈಕ ಸಂಕೇತವೆನಿಸಿದ್ದು ಈವರೆಗೂ ಯಾವುದೇ ಕಳಂಕವಿಲ್ಲದೆ ಮುಂದುವರೆದಿರುವುದು ಇಲ್ಲಿನ ವಿಶೇಷವೆನಿಸಿದೆ. ಈ ಉರುಸ್ ಕಾರ್ಯಕ್ರಮಗಳು ಹಿಂದೂ ಮುಖಂಡರಿಂದಲೇ ಅದ್ದೂರಿಯಿಂದ ನಡೆದುಕೊಂಡು ಬರುತ್ತಿದೆ. ಇದಕ್ಕೆ ಉದಾಹರಣೆಯಂತೆ ಗೋರಿ ಕಮಿಟಿಯಲ್ಲಿರುವ 14 ಸದಸ್ಯರಲ್ಲಿ 6 ಮಂದಿ…

Read More

ತುಮಕೂರು :       2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಜಿಲ್ಲೆಯಲ್ಲಿ 34 ಇಲಾಖೆಗಳ ಮೂಲಕ ಕೈಗೊಳ್ಳಲಿರುವ ಪ್ರಸ್ತಾಪಿತ ಕಾರ್ಯಕ್ರಮಗಳು/ ಯೋಜನೆಗಳಿಗೆ ಅಗತ್ಯವಿರುವ 395504.50 ಲಕ್ಷ ರೂ.ಗಳ ಅನುದಾನದ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು.       ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ, ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾಯ ಇಲಾಖೆಗಳ ಮೂಲಕ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮ/ ಯೋಜನೆಗಳು ಹಾಗೂ ಕೈಗೊಂಡಿರುವ ಯೋಜನೆಗಳ ಸಂಪೂರ್ಣ ಅನುಷ್ಟಾನಕ್ಕಾಗಿ ಅಗತ್ಯವಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕ್ಷೇತ್ರ ನೀರು ನಿರ್ವಹಣೆಯ ಕಾರ್ಯಕ್ರಮದಡಿ ತುಂತುರು ನೀರಾವರಿ ಘಟಕಗಳ ವಿತರಣೆಗೆ…

Read More

ತುಮಕೂರು :      ವೇತನಕ್ಕಾಗಿ ಬಾಕಿ ಇರುವ 382 ಕೋಟಿ ರೂ ಬಜೆಟ್‍ನಲ್ಲಿ ಸೇರಿಸಬೇಕು. ಬಾಕಿ ಇರುವ ಸಿಬ್ಬಂದಿಯನ್ನು ಇಎಫ್‍ಎಂಎಸ್‍ಗೆ ಸೇರಿಸಬೇಕು. ಬಾಕಿ ವೇತನ ಪಾವತಿಸಬೇಕು. ಬಿಲ್‍ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್ ಬಡ್ತಿ ಕೋಟಾ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ತುಮಕೂರಿನಲ್ಲಿ ಫೆ.24ರಂದು ನೌಕರರು ಪ್ರತಿಭಟನೆ ನಡೆಸಿದರು.       ನಗರದ ಟೌನ್‍ಹಾಲ್‍ನಲ್ಲಿ ಸಮಾವೇಶಗೊಂಡ ಸಾವಿರಾರು ಮಂದಿ ಗ್ರಾಮ ಪಂಚಾಯಿತಿ ನೌಕರರು ಧರಣಿ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಇಓ ಶುಭ ಕಲ್ಯಾಣ್ ಅವರಿಗೆ ಮನವಿ ಸಲ್ಲಿಸಲಾಯಿತು.       ಧರಣಿಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಗೋಪಾಲಕೃಷ್ಣ ಅರಳಳ್ಳಿ, ರಾಜ್ಯಾದ್ಯಂತ 65,000 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು ಇವರ ವೇತನಕ್ಕೆ ವಾರ್ಷಿಕ 900 ಕೋಟಿ ರೂ ಬೇಕಾಗಿದೆ. ಹಿಂದಿನ ಸರ್ಕಾರ 518 ಕೋಟಿ ಮಂಜೂರು ಮಾಡಿದೆ. ಇದು ಸಂಬಳಕ್ಕೆ ಸಾಕಾಗುವುದಿಲ್ಲ.…

Read More

ಮಧುಗಿರಿ :       ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಹಾಗೂ ಯುವತಿ ಆದ್ರ್ರಾ ರನ್ನು ಕೂಡಲೇ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ, ಕನ್ನಡ ಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.       ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ಹಾಗೂ ಎನ್ ಆರ್ ಸಿ ವಿರುದ್ದ ನಡೆಯುತ್ತಿದ್ದ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಹಿನ್ನಲೆಯಲ್ಲಿ ನಮ್ಮ ದೇಶದ ಐಕ್ಯತೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ತಕ್ಷಣ ಇಬ್ಬರನ್ನು ನಮ್ಮ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ, ದೇಶ ದ್ರೋಹಿ ಕೃತ್ಯಗಳಲ್ಲಿ ಭಾಗಿಯಾದವರನ್ನು ಕಠಿಣ ಶಿಕ್ಷೆಗೆ ಶೀಘ್ರವಾಗಿ ಒಳಪಡಿಸಬೇಕೆಂದು ಪ್ರತಿಭಟಿಸಿದರು.       ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಚಿ.ಸೂ.ಕೃಷ್ಣಮೂರ್ತಿ, ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ, ವರದಾಯಿನಿ…

Read More

ತುಮಕೂರು :       ಇತಿಹಾಸ ಪ್ರಸಿದ್ದ ಸಿದ್ದಗಂಗೆಯಲ್ಲಿಂದು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.       ಶ್ರೀಕ್ಷೇತ್ರ ಸಿದ್ದಗಂಗೆಯ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಶ್ರೀಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.       ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಭಾಗವಹಿಸಿದ್ದರು.         ಇದಕ್ಕೂ ಮುನ್ನ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕಚೇರಿ ಮುಂಭಾಗದಿಂದ ವೀರಗಾಸೆ, ನಂದಿಧ್ವಜ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿ ರಥ ಪ್ರದಕ್ಷಿಣೆ ಹಾಕಿ ರಥಕ್ಕೆ ಶ್ರೀ ಸಿದ್ದಲಿಂಗೇಶ್ವರಸ್ವಾಮಿಯನ್ನು ಕೂರಿಸಲಾಯಿತು. ನಂತರ ರಾಜಯೋಗ 12…

Read More

ಗುಬ್ಬಿ :       ಕಬ್ಬಿನ ಆಲೆಮನೆಯಿಂದ ಕಾಕಂಬಿ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ಲಾರಿ ರಸ್ತೆ ಡಿವೈಡರ್ ಮಧ್ಯೆ ನುಸುಳಿ ಪಲ್ಟಿಯಾಗಿ ಟ್ಯಾಂಕರ್‍ನಲ್ಲಿದ್ದ ಕಾಕಂಬಿ ಪೂರ್ತಿ ರಸ್ತೆಗೆ ಚೆಲ್ಲಿದ ಘಟನೆ ತಡರಾತ್ರಿ ತಾಲ್ಲೂಕಿನ ಚಿಕ್ಕೋನಹಳ್ಳಿ ಗ್ರಾಮದ ಬಳಿ ಕೇಶಿಪ್ ರಸ್ತೆಯಲ್ಲಿ ನಡೆದಿದೆ.       ಮಂಡ್ಯದಿಂದ ದಾವಣಗೆರೆಯತ್ತ ಸಾಗಿದ್ದ ಬೃಹತ್ ಟ್ಯಾಂಕರ್ ಲಾರಿ ಕೇಶಿಪ್ ರಸ್ತೆ ಮೂಲಕ ಗುಬ್ಬಿ ತಲುಪಿ ರಾಷ್ಟ್ರೀಯ ಹೆದ್ದಾರಿ 4 ರ ರಸ್ತೆಗೆ ಸಂಪರ್ಕಿಸಬೇಕಿತ್ತು. ಮಾರ್ಗಮಧ್ಯೆ ಚಿಕ್ಕೋನಹಳ್ಳಿ ಗ್ರಾಮದ ಬಳಿ ರಸ್ತೆಗೆ ಇಡಲಾದ ಕಾಂಕ್ರಿಟ್ ಡಿವೇಡರ್‍ಗಳು ಲಾರಿ ಚಾಲಕನಿಗೆ ಗಲಿಬಿಲಿ ಮಾಡಿದೆ. ನೇರ ಡಿವೇಡರ್ ಮಧ್ಯೆ ನುಗ್ಗಿದ ಲಾರಿ ಕೊಂಚ ದೂರ ಚಲಿಸಿ ಪಲ್ಟಿಯಾಗಿದೆ. ಈ ವೇಳೆ ಟ್ಯಾಂಕರ್‍ನಲ್ಲಿದ್ದ ಕಾಕಂಚಿ ಪೂರ್ತಿ ರಸ್ತೆಯಲ್ಲಿ ಹರಿದಿದೆ.       ಯಾವುದೇ ಪ್ರಾಣಪಾಯ ಸಂಭವಿಸಿದ ಈ ಅಪಘಾತದಿಂದ ರಾತ್ರಿ ಪೂರ್ತಿ ಸಂಚಾರ ಅಸ್ತವ್ಯಸ್ತವಾಯಿತು. ಕಾಕಂಬಿ ರಸ್ತೆಯಲ್ಲಿ ಚೆಲ್ಲಿದ್ದು ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ಮುಂಜಾನೆ ವೇಳೆಗೆ ಆಗಮಿಸಿದ…

Read More