ಮಧುಗಿರಿ : ಮಧುಗಿರಿ ಪುರಸಭೆ ಅಧ್ಯಕ್ಷರಾಗಿ ತಿಮ್ಮರಾಜು( ತಿಮ್ಮರಾಯಪ್ಪ) ಹಾಗೂ ಉಪಾಧ್ಯಕ್ಷರಾಗಿ ರಾಧಿಕಾ ಆನಂದಕೃಷ್ಣ ರವರುಗಳು “ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ನವರ ಬಲದಿಂದಾಗಿ’ ಬುಧವಾರದಂದು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು.21 ನೇ ವಾರ್ಡಿನಿಂದ ಆಯ್ಕೆಯಾಗಿದ್ದ ತಿಮ್ಮರಾಯಪ್ಪ ಅವರನ್ನು ಲಾಲಪೇಟೆ ಮಂಜುನಾಥ್ ಮತ್ತು ಮಂಜುನಾಥಾಚಾರ್ ರವರು ಸೂಚಿಸಿದರು. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು 20 ನೇ ವಾರ್ಡ್ ನಿಂದ ಆಯ್ಕೆಯಾಗಿದ್ದ ರಾಧಿಕಾ ಅನಂದಕೃಷ್ಣರವರಿಗೆ ಅಲೀಂಮುಲ್ಲಾ ಮತ್ತು ನಟರಾಜು ರವರು ಸಿ. ಸೂಚಿಸಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಿಮ್ಮರಾಯಪ್ಪ ಹಾಗೂ ರಾಧಿಕ ಅನಂದಕೃಷ್ಣರವರನ್ನು ಬಿಟ್ಟರೆ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಡಾ. ಜಿ. ವಿಶ್ವನಾಥ್ ಇವರಿಬ್ಬರನ್ನು ಅವಿರೋಧವಾಗಿ ಬಆಯ್ಕೆಯಾಗಿರುವುದಾಗಿ ಘೋಷಿಸಿದರು. 1998 ರ ಸೆಪ್ಟೆಂಬರ್ 11 ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ವು ಪರಿಶಿಷ್ಟ…
Author: News Desk Benkiyabale
ತುಮಕೂರು : ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ್ದ 15 ಅಭ್ಯರ್ಥಿಗಳ ಭವಿಷ್ಯ ಅಡಕವಾಗಿರುವ ಮತಯಂತ್ರಗಳನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿದ್ದಪಡಿಸಲಾಗಿರುವ 2 ಭದ್ರತಾ ಕೊಠಡಿಗೆ ಸ್ಥಳಾಂತರಿಸಿ ಸೂಕ್ತ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಮತದಾನ ನಿನ್ನೆ ಸಂಜೆ 6 ಗಂಟೆವರೆಗೆ ನಡೆದ ನಂತರ 330 ಮತಗಟ್ಟೆಗಳ ಇವಿಎಂ ಯಂತ್ರಗಳು ಸಿರಾ ಜ್ಯೋತಿನಗರದಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಬಂದು ಸೇರಿದ ನಂತರ ನಿನ್ನ ಬೆಳಗಿನ ಜಾವ ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ತಂದು 2 ಭದ್ರತಾ ಕೊಠಡಿಗಳಲ್ಲಿ ಇಡಲಾಗಿದೆ. ಮತ ಯಂತ್ರಗಳಿರುವ 2 ಭದ್ರತಾ ಕೊಠಡಿಗಳಿಗೆ ಅಭೂತಪೂರ್ವ ಬಿಗಿ ಪೆÇಲೀಸ್ ಬಂದೋಬಸ್ತ್‍ನೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಶಿಕೃಷ್ಣ, ಚುನಾವಣಾ ಸಾಮಾನ್ಯ ವೀಕ್ಷಕರಾದ ಬಿ.ಮಹೇಶ್ವರಿ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಚುನಾವಣಾಧಿಕಾರಿ…
ತುಮಕೂರು: ಕೊರೋನಾ ಮುನ್ನೆಚ್ಚರಿಕೆ ನಡುವೆ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನವು ಇಂದು ಶಾಂತಿಯುತವಾಗಿ ಮುಕ್ತಾಯಗೊಂಡಿತು. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಮತದಾರರು ಮಾಸ್ಕ್ ಧರಿಸಿ, 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಎಲ್ಲೆಡೆ ಕಂಡು ಬಂತು. ಪ್ರತಿ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಮತದಾನ ಮಾಡಲು ಆಗಮಿಸುವ ಮತದಾರರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸ್ಯಾನಿಟೈಸ್ ಮಾಡಿದ ನಂತರ ಮತ ಕೇಂದ್ರವನ್ನು ಪ್ರವೇಶಿಸಿದ ಮತದಾರರರಿಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಿಸಿಕೊಂಡು ಬಲಗೈಗೆ ಕೈಗವಸು ಧರಿಸಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಕ್ಷೇತ್ರದಲ್ಲಿ ಒಟ್ಟು 330 ಮತ ಕೇಂದ್ರಗಳಲ್ಲಿ ಚುನಾವಣಾ ಮತದಾನವು ಪೊಲೀಸ್ ಭದ್ರತೆಯಲ್ಲಿ ಶಾಂತಿಯುತವಾಗಿ…
ತುಮಕೂರು : ಸಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆ ನಂತರ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಸಿರಾ ವಿಧಾನಸಭಾ ಕ್ಷೇತ್ರದ ಕೋವಿಡ್ ನೋಡಲ್ ನಿಯಂತ್ರಣಾಧಿಕಾರಿ ಡಾ. ಸನತ್ ತಿಳಿಸಿದರು. 71 ಕೋವಿಡ್ ರೋಗಿಗಳ ಮತದಾನಕ್ಕೆ ಅವಕಾಶ ನೀಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎರಡು ಆಂಬ್ಯುಲೆನ್ಸ್‍ನಲ್ಲಿ ಕೋವಿಡ್ ರೋಗಿಗಳನ್ನು ಮತಗಟ್ಟೆಗೆ ಕರೆ ತಂದು ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದರು. ಕೋವಿಡ್ ಸೋಂಕಿತ ಮತದಾರರು ಮತಗಟ್ಟೆಗೆ ಬರುವ ಮುನ್ನ ಮತಗಟ್ಟೆ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಸಿದ್ದರಿದ್ದು, ಸೋಂಕಿತರ ಮತದಾನಕ್ಕೆ ಅನುವು ಮಾಡಿಕೊಟ್ಟರು ಎಂದರು. ಮತದಾನ ಮಾಡಿದ ಕೋವಿಡ್ ಸೋಂಕಿತರನ್ನು ಮತ್ತೆ ಆಂಬ್ಯುಲೆನ್ಸ್‍ನಲ್ಲೇ ಮನೆಗಳಿಗೆ ವಾಪಸ್ ಕರೆದೊಯ್ಯಲಾಯಿತು ಎಂದರು. ಆರೋಗ್ಯ ದೃಷ್ಠಿಯಿಂದ ಕೆಲ ಕೋವಿಡ್ ಸೋಂಕಿತರು ಮತಗಟ್ಟೆಗಳಿಗೆ ಬರಲು ನಿರಾಕರಿಸಿದ್ದು, ಅಂತಹವರ ವಾಯ್ಸ್ ರೆಕಾರ್ಡ್ ಮಾಡಿಕೊಳ್ಳಲಾಗಿದೆ…
ತುಮಕೂರು: ತುಮಕೂರು ನಗರದ ಹೊಸ ಬಡಾವಣೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಮಾಡಿದ್ದ 10 ಜನ ಆರೋಪಿಗಳನ್ನ ಬಂಧಿಸುವಲ್ಲಿ ತುಮಕೂರು ಪೊಲೀಸ್ ತಂಡ ಯಶಸ್ವಿಯಾಗಿದೆ. ದಿನಾಂಕ: 20-10-2020 ರಂದು ತುಮಕೂರು ನಗರದ ಹೊಸಬಡಾವಣೆಯ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ವಾಲ್ಮೀಕಿ ನಗರದ ವಾಸಿ ವಿಶ್ವೇಶ್ವರ್ ಆರಾಧ್ಯರವರ ಮನೆಗೆ ಹಾಡುಹಗಲೇ ನುಗ್ಗಿದ 6 ಜನ ಅಪರಿಚಿತರ ತಂಡ ಮನೆಯೊಳಗೆ ನುಗ್ಗಿ ವಿಶ್ವೇಶ್ವರ ಆರಾಧ್ಯ ಮತ್ತು ಅವರ ಪತ್ನಿ ಪೇಮಾಕುಮಾರಿರವರನ್ನು ಮಚ್ಚು, ಚಾಕು, ಡ್ರ್ಯಾಗನ್‍ಗಳನ್ನು ತೋರಿಸಿ ಬೆದರಿಸಿ 5.87 ಲಕ್ಷ ಬೆಲೆ ಬಾಳುವ ಚಿನ್ನದ ಆಭರಣಗಳು 22000 ರೂ ಹಣ, ಎರಡು ಮೊಬೈಲ್ ಫೋನ್‍ಗಳನ್ನು ದರೋಡೆ ಮಾಡಿದ್ದರು ಈ ವಿಚಾರವಾಗಿ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿತ್ತು. ಈ ಪ್ರಕರಣ ಭೇದಿಸಲು ತಿಲಕ್ ಪಾರ್ಕ್ ಸಿಪಿಐ ಮುನಿರಾಜು, ನಗರ ವೃತ್ತ ನಿರೀಕ್ಷಕ ನವೀನ್‍ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ರೋಹಿತ,…
ಸಿರಾ : ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನಕ್ಕೆ ಬಳಸಲಾಗಿರುವ ಇವಿಎಂ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಈ ಚುನಾವಣೆ ನನಗೆ 10ನೇ ಚುನಾವಣೆಯಾಗಿದೆ. ಆದರೆ ಹಿಂದೆಂದೂ ಕಾಣದಂತಹ ಭ್ರಷ್ಟಾಚಾರ ಈ ಚುನಾವಣೆಯಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಪಕ್ಷವೊಂದರ ಏಜೆಂಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಸಿರಾದಲ್ಲಿ ಮತದಾನದ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು. ನಿನ್ನೆ ಬೆಳಿಗ್ಗೆಯಿಂದ ಸಂಜೆವರೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಹಾಸನ ಮೂಲದವರು ಮತದಾರರಿಗೆ ಹಣ ಹಂಚುವಾಗ ಸಿಕ್ಕಿ ಬಿದ್ದಿದ್ದಾರೆ. ಜನರು ಅವರನ್ನು ಕೂಡಿ ಹಾಕಿದ್ದರು. ಆದರೆ ಮಾನವೀಯತೆ ದೃಷ್ಟಿಯಿಂದ ಅವರನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಚುನಾವಣಾ ಆಯೋಗದ…
ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಚುನಾವಣಾ ಮತದಾನವು ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಪೊಲೀಸ್ ಬಿಗಿಭದ್ರತೆಯಲ್ಲಿ 330 ಮತಗಟ್ಟೆಗಳಲ್ಲಿ ನಡೆಯಲಿದೆ. ಕ್ಷೇತ್ರದಲ್ಲಿ ಪುರುಷರು 1,10,281 ಮಹಿಳೆಯರು 105434, ಇತರೆ 10 ಒಟ್ಟು 215725 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮತದಾನ ಮಾಡುವ ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತದೆ. ಮುಕ್ತ ಮತ್ತು ಶಾಂತಿಯುತ ಮತದಾನವನ್ನು ನಡೆಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಆದೇಶವು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಮತದಾನ ಕೇಂದ್ರಗಳ ಸ್ಥಳಕ್ಕೆ ಅನ್ವಯಿಸುವುದಿಲ್ಲ. ಶಿರಾ ವಿಧಾನ ಸಭಾ ಉಪ ಚುನಾವಣೆಯನ್ನು ಶಾಂತಿಯುತವಾಗಿ ನೆರವೇರಿಸಲು 10 ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ. 5 ಎಫ್‍ಎಸ್‍ಟಿ…
ತುಮಕೂರು : ಮಂದಾರಗಿರಿಯ ಜೈನ ಬಸದಿ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಅಗತ್ಯ ಇರುವ ಅನುದಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಒದಗಿಸಿಕೊಡುವುದಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಭರವಸೆ ನೀಡಿದರು. ನಗರದ ಹೊರವಲಯದಲ್ಲಿರುವ ಮಂದಗಿರಿಯ ಬಸದಿ ಬೆಟ್ಟಕ್ಕೆ ಭೇಟಿ ನೀಡಿ ಮುನಿಶ್ರೀಗಳ ಆಶೀರ್ವಾದ ಪಡೆದ ನಂತರ ಜೈನ ಸಮಾಜದ ಅಧ್ಯಕ್ಷರು ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲ ಸಮುದಾಯ, ಎಲ್ಲ ಧರ್ಮಗಳಿಗೂ ಅನುದಾನದ ನೆರವು ಒದಗಿಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತ್ತಾ ಬಂದಿದ್ದಾರೆ. ಹಾಗೆಯೇ ಹುಬ್ಬಳ್ಳಿ ಭಾಗದಲ್ಲೂ ಜೈನ ಸಮುದಾಯಕ್ಕೆ 2009 ರಲ್ಲಿ ಆರ್ಥಿಕ ನೆರವು ನೀಡಿದ್ದರು ಎಂದರು. ಮಂದರಗಿರಿ ಬೆಟ್ಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಪವಿತ್ರ ಕ್ಷೇತ್ರವಾಗಿರುವ ಈ ಸ್ಥಳಕ್ಕೆ ಇಷ್ಟು ವರ್ಷವಾದರೂ ಒಮ್ಮೆಯೂ ಬರಲು ಸಾಧ್ಯವಾಗಿರಲಿಲ್ಲ. ಇಂದು ಈ ಕ್ಷೇತ್ರಕ್ಕೆ ಬಂದು ಮುನಿಶ್ರೀಗಳ ದರ್ಶನಾಶೀರ್ವಾದ ಪಡೆದಿದ್ದೇನೆ. ಇದೊಂದು ಶಕ್ತಿ ಪೀಠ…
ತುಮಕೂರು: ನ.3 ರಂದು ನಡೆಯಲಿರುವ ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜ್ಯೋತಿನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆರೋಗ್ಯ ತಪಾಸಣೆ ಮಾಡಿ ಮತಯಂತ್ರಗಳೊಂದಿಗೆ ಬೂತ್‍ಗಳಿಗೆ ಕಳುಹಿಸಿ ಕೊಡಲಾಯಿತು. ಸಿರಾ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರ ಮಾರ್ಗದರ್ಶನದಲ್ಲಿ ಥರ್ಮಲ್ ಸ್ಕ್ರೀನಿಂಗ್, ಬಿ.ಪಿ., ಶುಗರ್ ಸೇರಿದಂತೆ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ಮತಯಂತ್ರಗಳನ್ನು ನೀಡಿ ಬಸ್‍ನಲ್ಲಿ ಮತಗಟ್ಟೆಗಳಿಗೆ ತೆರಳಲು ಅನುವು ಮಾಡಿಕೊಡಲಾಯಿತು. ಬಸ್ ವ್ಯವಸ್ಥೆ: ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ತುಮಕೂರು ನಗರ ಹಾಗೂ ಗುಬ್ಬಿ ಪಟ್ಟಣದಿಂದ ಬೆಳಿಗ್ಗೆ 6.30ಕ್ಕೆ ಬಸ್‍ನಲ್ಲಿ ಸಿರಾ ಜ್ಯೋತಿನಗರದಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ತೆರಳಿ ಅಲ್ಲಿನ ಆರೋಗ್ಯ ತಪಾಸಣೆಗೆ ಒಳಪಟ್ಟರು. ನಂತರು ಮತಯಂತ್ರಗಳನ್ನು…
ಚಿಕ್ಕನಾಯಕನಹಳ್ಳಿ: ಕೂಲಿ ಮಾಡಿ ಜೀವಿಸುವ ಬಡ ಕುಟುಂಬದ ಮಹಿಳೆಯೊಬ್ಬರಿಗೆ ಮಾಡದ ಸಾಲಕ್ಕೆ ಬ್ಯಾಂಕ್‍ನಿಂದ ರೂ.25ಲಕ್ಷದ ನೋಟೀಸ್ ನೀಡಿದ್ದು ಬಡ ಕುಟುಂಬಕ್ಕೆ ಆಘಾತ ನೀಡಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಹೋಬಳಿ ಕುಪ್ಪೂರು ಗ್ರಾಮದ ಎ.ಕೆ. ಕಾಲೋನಿವಾಸಿ ಜಯಮ್ಮ ಎಂಬ ಕೂಲಿಮಾಡುವ ಮಹಿಳೆಗೆ ರೂ.25ಲಕ್ಷದ ಸಾಲದ ನೋಟೀಸ್‍ನ್ನು ಚಿಕ್ಕನಾಯಕನಹಳ್ಳಿಯ ಕೆನರಾಬ್ಯಾಂಕ್ ನಿಂದ ನೀಡಲಾಗಿದೆ. ಅಂಚೆ ಮೂಲಕ ಬುಧವಾರ ಈ ನೊಟೀಸನ್ನು ಜಾರಿಮಾಡಲಾಗಿದೆ. ಸದರಿ ಸಾಲದ ನೋಟೀಸಿನಲ್ಲಿ ಈಕೆಯ ಹೆಸರಿನಲ್ಲಿ ಕೃಷಿಸಾಲವನ್ನು 31-3-2014ರಂದು ನೀಡಲಾಗಿದ್ದು ಇದುವರೆಗೂ ನೀವು ಯಾವುದೇ ಕಂತು, ಬಡ್ಡಿ ಹಾಗೂ ಇತರೆಖರ್ಚುಗಳನ್ನು ಕಟ್ಟದಕಾರಣ ರೂ.25ಲಕ್ಷ ವಾಗಿದ್ದು ಅಸಲು ಮತ್ತು ಇತರೆವೆಚ್ಚವನ್ನು ಕಟ್ಟಿದರೆ ಪೂರ್ತಿ ಬಡ್ಡಿಮನ್ನಾಮಾಡುವುದಾಗಿ ತಿಳಿಸಿದ್ದಾರೆ. ಆದರೆ ಒಂದು ಗುಂಟೆ ಜಮೀನುಸಹ ಇಲ್ಲದ ಜಯಮ್ಮನವರಿಗೆ ರೂ.25ಲಕ್ಷಸಾಲ ನೀಡಲಾಗಿದೆ, ಅಸಲನ್ನು ಕಟ್ಟಿ ಎಂಬ ನೋಟೀಸ್ ನೀಡಿರುವುದನ್ನು ಕಂಡು ಆಕೆಗೆ ದಿಕ್ಕೇತೋಚದಂತಾಗಿದೆ. ಪಶುಇಲಾಖೆಯಿಂದ ಕುರಿಸಾಕಾಣಿಕೆಗಾಗಿ ಹಲವು ವರ್ಷಗಳಹಿಂದೆ ಹತ್ತು ಸಾವಿರ ಸಾಲಮಾಡಿ ತೀರಿಸಿದ್ದು ಬಿಟ್ಟರೆ ನಾನು ಬ್ಯಾಂಕ್‍ಕಡೆ ಹೋಗಿಲ್ಲ. ಆದರೆ…











