Author: News Desk Benkiyabale

 ತುಮಕೂರು :       ಶಿರಾ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ನವೆಂಬರ್ 10ರಂದು ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ ಎಣಿಕಾ ಕೇಂದ್ರದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿ ಹಾಗೂ ಶಿರಾ ತಾಲ್ಲೂಕಿನಾದ್ಯಂತ ನವೆಂಬರ್ 10ರ ಬೆಳಿಗ್ಗೆ 6 ರಿಂದ ನವೆಂಬರ್ 11ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.       ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಲು ಮೆರವಣಿಗೆ ಮುಖೇನ ಘೋಷಣೆಗಳನ್ನು ಕೂಗುವ ಹಾಗೂ ಪರಾಭವಗೊಂಡ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಜಯಗಳಿಸಿದ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಗಲಾಟೆ ಆಗುವ ಸಾಧ್ಯತೆಗಳು ಇರುವುದರಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.       ನಿಷೇಧಾಜ್ಞೆ ಅವಧಿಯಲ್ಲಿ ಐದು ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಮೆರವಣಿಗೆ,…

Read More

ತುರುವೇಕೆರೆ :       ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಶಾಸಕ ಮಸಾಲಜಯರಾಮ್ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಯನ್ನು ಕಂಡು ಶಾಲಾ ಪ್ರಾಂಶುಪಾಲ ಕೃಷ್ಣಪ್ಪನವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.        ತುರುವೇಕೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗುಡೇನಹಳ್ಳಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾಲೇಜಿಗೆ ಅನಿರೀಕ್ಷಿತವಾಗಿ ಶಾಸಕ ಮಸಾಲಜಯರಾಮ್ ಭೇಟಿನೀಡಿ ಕಾಲೇಜು ಪ್ರಾಂಶುಪಾಲರು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿ ಅಸಮಾಧಾನ ವ್ಯಕ್ತಪಡಿಸಿದರು.        ಕಾಲೇಜಿಗೆ ಭೇಟಿ ನೀಡಿದ ವೇಳೆ ಸಿಬ್ಬಂದಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ನೋಡಲಾಗಿ ಕಾಲೇಜು ಸಿಬ್ಬಂದಿ ಒಂದು ಗಂಟೆ ಮುಂಚಿತವಾಗಿಯೇ ಕಾಲೇಜಿನಿಂದ ಹೊರಟು ಹೋಗಿರುವುದನ್ನು ಗಮನಿಸಿ ಪ್ರಾಶಂಪಾಲರ ವಿರುದ್ದ ಗರಂ ಆದರು, ನಂತರ ಕಾಲೇಜಿನ ಸುತ್ತಲೂ ಪರಿಶೀಲನೆ ನಡೆಸಿ ಕಾಲೇಜಿನ ಪರಿಸರದಲ್ಲಿ ಅಲ್ಲಲ್ಲಿ ಮದ್ಯದ ಬಾಟಲಿಗಳು ಕಂಡು ಬಂದು ಅನೈರ್ಮಲ್ಯ ಸೃಷ್ಟಿಯಾಗಿದ್ದದ್ದನ್ನು ಕಂಡು ಪ್ರಾಂಶುಪಾಲರ ಮೇಲೆ ಕೆಂಡಾಮಂಡಲವಾದರು, ಅಲ್ಲದೆ ನಾಲ್ಕೈದು ವರ್ಷಗಳಿಂದ…

Read More

ಚಿಕ್ಕನಾಯಕನಹಳ್ಳಿ :        ರಿಪಬ್ಲಿಕ್ ಟಿವಿ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿ ಮೇಲೆ ಮಹಾರಾಷ್ಟ್ರ ಸರ್ಕಾರದಿಂದ ನಡೆದಿರುವ ದೌರ್ಜನ್ಯವನ್ನು ತಾಲ್ಲೂಕು ಪತ್ರಕರ್ತರ ಸಂಘ ಖಂಡಿಸಿದೆ.      ಪ್ರಜಾ ಪ್ರಭುವತ್ವದ 4ನೇ ಅಂಗವಾದ ಮಾಧ್ಯಮದ ಮೇಲೆ ದ್ವೇಶದ ಹಿನ್ನಲೆಯಿಂದ ಮಹಾರಾಷ್ಟ್ರ ಸರ್ಕಾರ ಅರ್ನಾಬ್ ಗೋಸ್ವಾಮಿಯನ್ನು ದೌರ್ಜನ್ಯದಿಂದ ಬಂಧಿಸಿ ಕರೆದೊಯ್ದಿರುವ ಘಟನೆಯನ್ನು ತಾಲ್ಲೂಕು ಪತ್ರಕರ್ತರ ಸಂಘದ ಸದಸ್ಯರು ಖಂಡಿಸಿ ತಹಸೀಲ್ದಾರ್‍ರಿಗೆ ಮನವಿ ಸಲ್ಲಿಸಿದರು.       ಎರಡುವರ್ಷದ ಹಿಂದೆ ದಾಖಲಾಗಿ ಮುಕ್ತಾಯವಾಗಿರುವ ಪ್ರಕರಣವನ್ನು ನೆಪವಾಗಿರಿಸಿಕೊಂಡು ರಾಷ್ಟ್ರಿಯ ಸುದ್ದಿವಾಹಿನಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ. ಅವರನ್ನು ಬಂಧಿಸಿರುವ ರೀತಿ ಗೂಂಡಾ ಮಾದರಿಯೆನಿಸಿದ್ದು, ಬೆಳಗಿನ ಜಾವ ಎಕೆ-47 ಬಂದೂಕುಗಳೊಂದಿಗೆ ಮನೆಗೆ ನುಗ್ಗಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನು ದೈಹಿಕವಾಗಿ ಹಲ್ಲೆಮಾಡಿ ಬಂಧಿಸಿರುವ ಮಹಾರಾಷ್ಟ್ರ ಪೊಲಿಸರುತಮ್ಮ ಪೌರುಷವನ್ನು ಉಗ್ರಗಾಮಿಗಳು, ರೌಡಿಗಳನ್ನು ಹಿಡಿಯುವಲ್ಲಿ ತೋರಿಸಲಿ.     ಮಹಾರಾಷ್ಟ್ರ ಸರ್ಕಾರದ ಈ ಕೃತ್ಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಕಾನೂನಿಗೆ ಅಗೌರವ ತೋರುವ…

Read More

 ಹುಳಿಯಾರು:       ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹುಳಿಯಾರು ಸಮೀಪದ ಮತಿಘಟ್ಟದ ಯುವಕ ಹಸೀಬುಲ್ಲ (28 ವರ್ಷ) ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.           ಮತಿಘಟ್ಟದಿಂದ ತನ್ನ ತಾಯಿಯನ್ನು ಹೊಸದುರ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಹಿಂದಿರುಗುತ್ತಿದ್ದ ವೇಳೆ ಹೊಸದುರ್ಗದ ಪೆಟ್ರೋಲ್ ಬಂಕ್ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಟ್ರಕ್ ಮುಖಾಮುಖಿಯಾಗಿ ನಡೆದ ಅಪಘಾತದಲ್ಲಿ ಹಸೀಬ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.  ಕಾರಿನಲ್ಲಿದ್ದ ಅವನ ತಂದೆಯ ಕಾಲಿಗೆ ಪೆಟ್ಟಾಗಿದ್ದು, ತಾಯಿ ಹಾಗೂ ಅವನ ಅತ್ತೆಗೂ ಸಹ ಅಪಘಾತದಲ್ಲಿ ಹೆಚ್ಚಿನ ಪೆಟ್ಟಾಗಿದ್ದು ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೆದುಕೊಂಡು ಹೋಗಲಾಗಿದೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ತುಮಕೂರು:        ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮೀಸಲು ಇದ್ದ ಕಾರಣ ಬಿಜೆಪಿಯ ಅಭ್ಯರ್ಥಿ ಒಬ್ಬರೇ ಇದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿಯವರು ಅವಿರೋಧವಾಗಿ ಆಯ್ಕೆ ಯಾಗಿದ್ದು, ಇದರಿಂದ ಪಟ್ಟಣ ಪಂಚಾಯಿತಿಯು ಭಾರತೀಯ ಜನತಾ ಪಾರ್ಟಿಯ ಪಾಲಾಯಿತು.       ಪಟ್ಣ ಪಂಚಾಯಿತಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬಿಜೆಪಿ ಅಧಿಕಾರವನ್ನು ಹಿಡಿದಿದ್ದು, ಇದರಿಂದ ಜೆಡಿಎಸ್ ಪಕ್ಷದ ಶಾಸಕರಿಗೆ ಹಿನ್ನೆಡೆಯಾಗಿದ್ದು, ಇದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸವಿತಾ ಅವರು ಸಾಮಾನ್ಯ ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಥಿಸಿದ್ದರೂ ಸಹ ಒಂದು ಮತವನ್ನು ಪಡೆದು ಸೋಲನ್ನು ಅನುಭವಿಸುವಂತಹ ಸ್ಥಿತಿಯನ್ನು ಸ್ಥಳೀಯ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿ ಪಕ್ಷದ ಅಭ್ಯರ್ಥಿಗೆ ದ್ರೋಹವೆಸಗಿದ್ದಾರೆ ಎಂದು ಸದಸ್ಯೆ ಸವಿತಾ ಅವರು ಆರೋಪಿಸಿದರು.       ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19 ವಾರ್ಡ್‍ಗಳಿದ್ದು, ಬಿಜೆಪಿ…

Read More

ಕೊರಟಗೆರೆ :        ಕರುನಾಡಿನ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರವಾದ ಕೊರಟಗೆರೆ ಪಪಂಯ ಆಡಳಿತ ಚುಕ್ಕಾಣಿ ಜೆಡಿಎಸ್ ಪಕ್ಷದ ಪಾಲಾಗಿದೆ. ಗುರುವಾರ ನಿಗದಿಯಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತ ಮಂಜುಳ ಅಧ್ಯಕ್ಷೆ ಮತ್ತು ಕೆ.ವಿ.ಭಾರತಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಘಟನೆ ನಡೆದಿದೆ.       ಪಟ್ಟಣದ ಪಪಂಯ ಪರಿಶಿಷ್ಟ ಪಂಗಡದ ಮಹಿಳಾ ಮೀಸಲು ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡಿನ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯೆ ಮಂಜುಳ ಸತ್ಯನಾರಾಯಣ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ 15ನೇ ವಾರ್ಡಿನ ಕೆ.ವಿ.ಭಾರತಿ ಸಿದ್ದಮಲ್ಲಪ್ಪ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಮಾತ್ರ ನಾಮಪತ್ರ ಸಲ್ಲಿಸಿರುವ ಪರಿಣಾಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.       ಕೊರಟಗೆರೆ ಪಟ್ಟಣ ಪಂಚಾಯಿತಿ ಪರಿಮಿತಿಯಲ್ಲಿ ಪ್ರಸ್ತುತ ಒಟ್ಟು 14ಜನ ಚುನಾಯಿತ ಸದಸ್ಯರಿದ್ದಾರೆ. ಅದರಲ್ಲಿ 8ಜನ ಜೆಡಿಎಸ್, 4ಜನ ಕಾಂಗ್ರೇಸ್, ಬಿಜೆಪಿ-1, ಪಕ್ಷೇತರ-1 ಸೇರಿದಂತೆ ಸಂಸದ ಮತ್ತು ಶಾಸಕರ ಮತವನ್ನು…

Read More

ಹುಳಿಯಾರು:       ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆ ಸರ್ಕಲ್‍ನಿಂದ ಗವಿರಂಗಾಪುರ ಪುಣ್ಯ ಕ್ಷೇತ್ರಕ್ಕೆ ಹೋಗುವ ರಸ್ತೆಯು ಸಂಪೂರ್ಣ ಹಾಳಾಗಿದ್ದು ತಕ್ಷಣ ದುರಸ್ಥಿ ಮಾಡಿಸುವಂತೆ ದೊಡ್ಡಎಣ್ಣೇಗೆರೆಯ ಜ್ಞಾನಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಮನವಿ ಮಾಡಿದ್ದಾರೆ.       ತಿಪಟೂರಿನಿಂದ ಹಂದನಕೆರೆ ಮಾರ್ಗವಾಗಿ ಇದೇ ರಸ್ತೆಯಲ್ಲಿ ಹೊಸದುರ್ಗಕ್ಕೆ ಪ್ರತಿದಿನ ಅನೇಕ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಸಂಚರಿಸುತ್ತವೆ. ಅಲ್ಲದೆ ಗಂವಿರಂಗಾಪುರದ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿತ್ಯ ಅಪಾರ ಸಂಖ್ಯೆಯಲ್ಲಿ ಬೈಕ್, ಕಾರುಗಳಲ್ಲಿ ಭಕ್ತರು ಬಂದೋಗುತ್ತಾರೆ. ಈ ಭಾಗದಲ್ಲಿ ಜಮೀನುಳ್ಳ ರೈತರು ಸಹ ನಿತ್ಯ ಇಲ್ಲಿ ಓಡಾಡುತ್ತಾರೆ.       ಆದರೆ ಈ ರಸ್ತೆ ಅನೇಕ ವರ್ಷಗಳಿಂದ ಗುಂಡಿಗಳು ಬಿದ್ದು ರಸ್ತೆಯ ಜಲ್ಲಿಗಳು ಮೇಲೆದ್ದು ಸುಗಮ ಸಂಚಾರಕ್ಕೆ ತೊಡಕಾಗಿದೆ. ಬೈಕ್ ಸವಾರರಂತೂ ಬಿದ್ದು ಪೆಟ್ಟು ಮಾಡಿಕೊಂಡಿರುವ ನಿದರ್ಶನಗಳು ಬಹಳಷ್ಟಿವೆ. ಮಳೆಗಾಲದಲ್ಲಂತೂ ಗುಂಡಿಯಾವುದು ರಸ್ತೆಯಾವುದು ಎಂದು ತಿಳಿಯದೆ ಅಪಘಾತಗಳು ಸಹ ಆಗಿವೆ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.…

Read More

ಗುಬ್ಬಿ:     ಚಿರತೆ ದಾಳಿಗೆ ಮಹಿಳೆಯೊಬ್ಬಳು ಬಲಿಯಾದ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಮಾವಿನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮಣಿಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.       ತಾಲ್ಲೂಕಿನ ಗಡಿಭಾಗದಲ್ಲಿ ಚಿರತೆ ದಾಳಿಯು ಹೆಚ್ಚಾಗುತ್ತಿದ್ದು ಮಣಿಕುಪ್ಪೆ ಗ್ರಾಮದ ಭಾಗ್ಯಮ್ಮ (35) ತನ್ನ ರಾಸುಗಳನ್ನು ಮೇಯಿಸಲು ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಗೆ ತೆರಳಿದ್ದು ಸುಮಾರು 3.30ರ ಸಮಯದಲ್ಲಿ ಚಿರತೆಯು ಮಂಜಮ್ಮನ ಮೇಲೆ ದಾಳಿ ನಡೆಸಿದ ವೇಳೆ ಸ್ಥಳದಲ್ಲೇ ಮಂಜಮ್ಮ ಮೃತಪಟ್ಟಿರುತ್ತಾಳೆ.       ಗುಬ್ಬಿ, ಕುಣಿಗಲ್ ಹಾಗೂ ತುಮಕೂರಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಮಣಿಕುಪ್ಪೆ ಗ್ರಾಮದ ಜನರು ಭಯಭೀತರಾಗಿದ್ದು ಒಂದು ವರ್ಷದ ಹಿಂದೆ ಮೊಟ್ಟಮೊದಲ ಬಾರಿಗೆ ಸಮರ್ಥ್ ಎಂಬ ಬಾಲಕನ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ‘ಆಪರೇಷನ್ ಸಮರ್ಥ್’ ಎಂಬ ಯೋಜನೆಯನ್ನು ತಂದು ಇಲ್ಲಿಯವರೆಗೂ ಗಡಿಭಾಗದಲ್ಲೇ ಸುಮಾರು 6ಕ್ಕೂ ಹೆಚ್ಚು ಚಿರತೆ ದಾಳಿಯಿಂದ ರೈತರುಗಳು ಮರಣ ಹೊಂದಿದ್ದು ಇದರಿಂದ ಅರಣ್ಯ ಇಲಾಖೆಯ…

Read More

ತುಮಕೂರು :        ಕೇಂದ್ರದ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದಾಗ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.       ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದಪಟೇಲ್ ನೇತೃತ್ವದಲ್ಲಿ ನೂರಾರು ರೈತರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ತಡೆ ಕಾರ್ಯಕ್ರಮದ ಅಂಗವಾಗಿ, ಕ್ಯಾತ್ಸಂದ್ರದಿಂದ ಜಾಸ್ ಟೋಲ್ ವರೆಗೂ ಮೆರವಣಿಗೆ ಹೊರಟ ರೈತರನ್ನು ಕ್ಯಾತ್ಸಂದ್ರ ಸರ್ಕಲ್ ನಲ್ಲಿ ತಡೆದ ಪೊಲೀಸರು, ಅವರನ್ನು ಬಂಧಿಸಿ, ಸಂಜೆಯವರೆಗೆ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಮೈದಾನದಲ್ಲಿರಿಸಿ, ಸಂಜೆಯ ವೇಳೆಗೆ ಬಿಡುಗಡೆ ಮಾಡಿದರು.       ಕ್ಯಾತ್ಸಂದ್ರ ಬಳಿ ಸಮಾವೇಶಗೊಮಡಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಆನಂದಪಟೇಲ್, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ…

Read More

ಹುಳಿಯಾರು :        ಅತಿಥಿಗಳು ಮನೆಗೆ ಬಂದಾಗ ಜ್ಯೂಸ್, ಚಹ, ಹಣ್ಣು, ಹೂವು, ಸ್ನ್ಯಾಕ್ಸ್ ನೀಡುವುದು ಸಾಮಾನ್ಯ ಪದ್ಧತಿ. ಅದರಲ್ಲೂ ಸ್ವಾಮೀಜಿಗಳು ಬಂದರಂತೂ ಪಾದಪೂಜೆ ಮಾಡಿ ಡ್ರೈಪ್ರೂಟ್ಸ್, ಹಣ್ಣುಗಳನ್ನು ನೀಡುವುದು ವಾಡಿಕೆ. ಆದರೆ ಕೊರೊನಾದಿಂದಾಗಿ ಸತ್ಕಾರದ ಶೈಲಿ ಬದಲಾಗಿದ್ದು ಮಾಸ್ಕ್ ನೀಡುವ ಟ್ರೆಂಡ್ ಸೃಷ್ಠಿಯಾಗಿದೆ.       ಹೌದು, ಹುಳಿಯಾರಿನ ಶ್ರೀಶಕ್ತಿ ಫರ್ನೀಚರ್ಸ್‍ನ ಮಾಲೀಕ ಎಚ್.ಎಸ್.ಪುಟ್ಟರಾಜು ಅವರು ಮಾಸ್ಕ್ ನೀಡುವ ಸಂಪ್ರದಾಯ ಆರಂಭಿಸಿದ್ದಾರೆ. ತಮ್ಮ ಅಂಗಡಿಗೆ ಬರುವ ಎಲ್ಲಾ ಸಾರ್ವಜನಿಕರಿಗೂ ಮಾಸ್ಕ್ ನೀಡಿ ಕಡ್ಡಾಯವಾಗಿ ಧರಿಸಿ ಕೊರೊನಾ ಓಡಿಸಿ ಎನ್ನುವ ಸಂದೇಶ ನೀಡುವ ಮೂಲಕ ಸುತ್ತಳ್ಳಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.        ಲಾಕ್‍ಡೌನ್ ತೆರವಾದ ದಿನದಿಂದಲೂ ಪುಟ್ಟರಾಜು ಅವರು ತಮ್ಮ ಅಂಗಡಿಗೆ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ಜೊತೆಗೆ ಉಚಿತವಾಗಿ ಮಾಸ್ಕ್ ನೀಡುತ್ತಿದ್ದಾರೆ. ಇವರ ಮಾಸ್ಕ್ ಅಭಿಯಾನದಲ್ಲಿ ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಸಹ ಭಾಗಿಯಾಗಿದ್ದಾರೆ. ಪ್ರಯಾಣದ ಮರ್ಗ ಮದ್ಯೆ ಅಂಗಡಿಗೆ…

Read More