ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆಯ ಪ್ರಚಾರಕ್ಕೆ ತೆರಳುವ ಮುನ್ನ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು, ನಗರದ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದ ನಂತರ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು ಶಿರಾಕ್ಕೆ ಪ್ರಯಾಣ ಬೆಳೆಸಿದರು. ನಗರಕ್ಕೆ ಆಗಮಿಸಿದ ಬಿ.ವಿ.ಶ್ರೀನಿವಾಸ್ ಅವರನ್ನು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಈ ದೇಶ ಮತ್ತು ಈ ರಾಜ್ಯ ಉಳಿಯಬೇಕೆಂದರೆ ಕಾಂಗ್ರೆಸ್ ಪಕ್ಷ ಗೆಲ್ಲಬೇಕು, ಬಿಜೆಪಿಯವರು ದೊಡ್ಡ ದೊಡ್ಡ ಆಶ್ವಾನೆಗಳನ್ನು ನೀಡಿ ಅಧಿಕಾರಕ್ಕೆ ಬಂದರೂ ಯಾವುದೇ ಆಶ್ವಾಸನೆಯನ್ನೂ ಈಡೇರಿಸಲಿಲ್ಲ, ಈಗ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಕೇಳಲು ಮತ್ತೊಂದು ಸುಳ್ಳಿನ ಆಶ್ವಾನೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕೋವಿಡ್ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸದ ಕಾರಣ…
Author: News Desk Benkiyabale
ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಮತಿ ಇಲ್ಲದೆ ಕಾರ್ಯಕ್ರಮ ಹಾಗೂ ಸಭೆ ಮಾಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು. ಶಿರಾ ಮಿನಿ ವಿಧಾನಸೌಧದಲ್ಲಿಂದು ನಡೆದ ಎಫ್ಎಸ್ಟಿ ತಂಡಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಫ್ಎಸ್ಟಿ ತಂಡಗಳು ಮಾಡುವ ಮನೆ ಮನೆಯ ಹತ್ತಿರ ಹೋಗಿ ಪ್ರಚಾರ ಮಾಡುವುದನ್ನೂ ಕೂಡ ವಿಡಿಯೋ ಮಾಡಬಹುದು. ಸ್ತ್ರೀಶಕ್ತಿ ಸಂಘಗಳ ಸಭೆ ನಡೆಸಬಹುದು. ಆದರೆ ಸಭೆ ನಡೆಸುವ ಸ್ಥಳದಲ್ಲಿ ರಾಜಕೀಯ ವ್ಯಕ್ತಿಗಳಿದ್ದರೆ ಅಂತಹ ಸಭೆಗಳಿಗೆ ಅನುಮತಿಯನ್ನು ಪಡೆಯಬೇಕೆಂದು ಅವರು ತಿಳಿಸಿದರು. ಚುನಾವಣಾ ಸಂಬಂಧ ಹೆಚ್ಚು ಜನರಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿ ಪೊಲೀಸ್ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಯಾವುದಾದರೂ ಅಹಿತಕರ ಘಟನೆ ನಡೆದ ತಕ್ಷಣವೇ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೂ ಚುನಾವಣಾಧಿಕಾರಿಗಳಿಗೆ…
ತುಮಕೂರು : ತುಮಕೂರಿನ ಜಿಲ್ಲಾಸ್ಪತ್ರೆಯ ಕೊರೊನಾ ತೀವ್ರ ನಿಗಾ ಘಟಕಕ್ಕೆ ಬೆಂಗಳೂರಿನ ಯುನೈಟೆಡ್ ವೇ ಸಂಸ್ಥೆ ವತಿಯಿಂದ 4 ಎಚ್.ಎಫ್.ಎನ್.ಸಿ. ಯಂತ್ರಗಳನ್ನು ನೀಡಲಾಯಿತು. ಬೆಂಗಳೂರಿನ ಯುನೈಟೆಡ್ ವೈ ಸಂಸ್ಥೆಯು ಜಿಲ್ಲಾಡಳಿತ ಮೂಲಕ ಜಿಲ್ಲಾಸ್ಪತ್ರೆಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಉಪವಿಭಾಗಾಧಿಕಾರಿ ಅಜಯ್ ಅವರಿಗೆ ನೀಡಲಾಯಿತು. ಜಿಲ್ಲಾಡಳಿತದ ಕಡೆಯಿಂದ ಪಡೆದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಅವರು, ಈ ಸಾಧನಗಳು ಐಸಿಯುನಲ್ಲಿರುವ ಕೊರೊನಾ ರೋಗಿಗಳಿಗೆ ಉಪಯೋಗಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಾಧನಗಳು ಕೊರೊನಾ ರೋಗಿಗಳಿಗೆ ಆಕ್ಸಿಜನ್‍ನ್ನು ಅತಿ ಸಾಂಧ್ರತೆಯಲ್ಲಿ ವೇಗವಾಗಿ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ. 8 ಲಕ್ಷ ರೂ. ಮೌಲ್ಯದ ಸಾಧನಗಳನ್ನು ನೀಡಿದ ಯುನೈಟೆಡ್ ವೇ ಸಂಸ್ಥೆಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಡಾ. ಸನತ್, ಯುನೈಟೆಡ್ ವೇ…
ಮಧುಗಿರಿ: ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನ-4 ರಂದು ಪುರಸಭೆ ಕಾರ್ಯಾಲಯದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಡಾ. ಜಿ. ವಿಶ್ವನಾಥ್ ತಿಳಿಸಿದ್ದಾರೆ. ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು ಪುರಸಭೆಯ ಯಾವುದೇ ಚುನಾಯಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಚುನಾಯಿಸುವ ಬಗ್ಗೆ ಚುನಾವಣಾಧಿಕಾರಿಗಳಾದ ಮಧುಗಿರಿ ತಹಶೀಲ್ದಾರ್ ರವರಿಗೆ ತಿಳಿಸಿ ಬೆಳಗ್ಗೆ 10 ರಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸ್ಪರ್ಧಿಸುವವರು ತಮ್ಮ ಲಿಖಿತ ಒಪ್ಪಿಗೆಯನ್ನು ನಮೂನೆಯಲ್ಲಿ ಸಲ್ಲಿಸಬೇಕು. ಚುನಾಯಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಲು ತಮ್ಮ ಹೆಸರನ್ನು ತಾವೇ ಸೂಚಿಸಿಕೊಳ್ಳಬಾರದು. ನಾಮ ನಿರ್ದೇಶನ ಪತ್ರವನ್ನು ಬೇರೆಯವರು ಸಲ್ಲಿಸುವಂತಿಲ್ಲ. ಸೂಚಕರಾಗಲಿ ಅಥವಾ ಅಭ್ಯರ್ಥಿ ಯಾಗಲಿ ಖುದ್ದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಮಧ್ಯಾಹ್ನ 1 ರಿಂದ 1.15 ರೊಳಗೆ ನಾಮಪತ್ರ ಪರಿಶೀಲನೆ ನಡೆಸಲಿದ್ದು,…
ತುಮಕೂರು : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರ ವ್ಯಾಪ್ತಿಯಲ್ಲಿ 10 ಹಾಗೂ ಗ್ರಾಮಾಂತರದಲ್ಲಿ 6 ಸೇರಿ ತುಮಕೂರು ತಾಲ್ಲೂಕಿನಲ್ಲಿ 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್ ಮೋಹನ್‍ಕುಮಾರ್ ತಿಳಿಸಿದರು. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯನ್ನು ಆಯೋಗದ ನಿರ್ದೇಶನದ ಮೇರೆಗೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಯೇ ನಡೆಸಲಾಗುತ್ತಿದೆ ಎಂದರು. ತುಮಕೂರು ತಾಲ್ಲೂಕಿನಲ್ಲಿ ಪ್ರತ್ಯೇಕವಾಗಿ ಮಸ್ಟರಿಂಗ್ ಮತ್ತು ಡಿಮಸ್ಟರಿಗೆ ಕೌಂಟರ್‍ಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. . ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸಲಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪಿ.ಪಿ.ಇ. ಕಿಟ್, ಮಾಸ್ಕ್, ಸ್ಯಾನಿಟೈಸರ್ ಎಲ್ಲವನ್ನು ಚುನಾವಣಾ ಆಯೋಗದಿಂದ ವ್ಯವಸ್ಥೆ ಮಾಡಲಾಗಿದೆ ಎಂದರು.
ತುಮಕೂರು : ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಬಿಜೆಪಿ ಪಕ್ಷ ಸವಾಲಾಗಿ ಸ್ವೀಕರಿಸಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಬಾರಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಗೆಲುವು ಸಾಧಿಸಿದ್ದರೂ ಅಭಿವೃದ್ಧಿ ಎಂಬುದು ಕುಂಠಿತವಾಗಿದೆ. ಕುಡಿಯುವ ನೀರು, ರಸ್ತೆಯಂತಹ ಮೂಲಭೂತ ಸೌಕರ್ಯಗಳು ಇಂದಿಗೂ ಮರೀಚಿಕೆಯಾಗಿವೆ. ಹಾಗಾಗಿ ಜನತೆ ಬದಲಾವಣೆ ಬಯಸಿದ್ದು, ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜೇಶಗೌಡ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಲಿದೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ.ಹಣ, ಹೆಂಡ ಹಂಚುವ ಸಂಸ್ಕøತಿ ನಮ್ಮದಲ್ಲ. ಅದು ಕಾಂಗ್ರೆಸ್ ಪಕ್ಷದ್ದು, ನಮ್ಮದೆನಿದ್ದರೂ ಸಂಘಟನೆ ಮತ್ತು ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತವೆ.ಅಡ್ಡದಾರಿ ಹಿಡಿಯುವುದಿಲ್ಲ. ನೀರಾವರಿ ಹೆಚ್ಚಿನ…
ಹುಳಿಯಾರು: ನಾಡ ಹಬ್ಬ ದಸರಾ ಇರುವುದರಿಂದ ಹಬ್ಬದ ತಯಾರಿಗಾಗಿ ಪಟ್ಟಣದಲ್ಲಿ ಜನರು ವಿವಿಧ ವಸ್ತುಗಳನ್ನು ಖರೀದಿಯಲ್ಲಿ ತೊಡಗಿಕೊಂಡಿದ್ದರು. ದಿನಸಿ, ಹೂವು, ಹಣ್ಣಿನ ಬೆಲೆ ಏರಿಕೆಯ ಬಿಸಿಗಿಂತ ಹಬ್ಬದ ಸಂಭ್ರಮದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮರೆತು ಇನರು ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು. ಪಟ್ಟಣದಲ್ಲಿ ಈ ಬಾರಿ ಹಿಂದಿಗಿಂತಲೂ ಹೆಚ್ಚಾಗಿ ಹೂವು, ಹಣ್ಣು, ಕುಂಬಳಕಾಯಿ, ಬಾಳೆಕಂದಿನ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಬೆಲೆಯೂ ಸಹ ದುಪ್ಪಟ್ಟಾಗಿದ್ದರೂ ಹಬ್ಬ ಮಾಡಲೇಬೇಕೆಂಬ ಆಶಯದಿಂದ ಚೌಕಾಸಿ ವ್ಯಾಪಾರ ಮಾಡಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆ, ಕರವೇ ಸರ್ಕಲ್‍ನಲ್ಲಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡು ಬಂದಿತಲ್ಲದೆ ಸೋಂಕಿನ ಪ್ರಮಾಣ ಇಳಿಮುಖವಾಗಿಯೇ ಬಿಟ್ಟಿದೆ ಎಂಬಂತೆ ಹಲವು ಅಂಗಡಿಗಳಲ್ಲಿ ಸಾರ್ವಜನಿಕರು ಸಾಮಾ ಜಿಕ ಅಂತರವನ್ನು ಮರೆತಂತಿದ್ದರು. ವ್ಯಾಪಾರಿಗಳೂ ಸಹ ಸ್ಯಾನಿಟೈಸರ್, ಸಾಮಾಜಿಕ ಅಂತರ ಗಾಳಿಗೆ ತೂರಿ ವ್ಯಾಪಾರ ಮಾಡುತ್ತಿದ್ದರು.…
ತುಮಕೂರು : ಶಿರಾ ಕ್ಷೇತ್ರದ ಐದು ಸಾವಿರ ಮತದಾರರಿಗೆ ಮನೆ ಬಾಗಿಲಿಗೆ ಬರುವ ಮತಗಟ್ಟೆಯಲ್ಲಿ ಮತದಾನ ಮಾಡುವ ಅವಕಾಶ ಸಿಗಲಿದೆ. ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಸಲ ಇವರ ಮನೆ ಬಾಗಿಲಿಗೆ ಮತಗಟ್ಟೆ ಹೋಗುತ್ತಿದೆ, ಅದೂ ಚುನಾವಣೆ ಮತದಾನ ದಿನಾಂಕ ಇನ್ನೂ ವಾರ ಇರುವ ಮೊದಲೇ ಇವರೆಲ್ಲ ಅವರಿಗೆ ಬೇಕಾದವರಿಗೆ ಮತ ಹಾಕಲಿದ್ದಾರೆ. ಇದು ಅಂಚೆ ಮತದಾನಕ್ಕಿಂತಲು ಭಿನ್ನವಾಗಿದೆ ಎಂಬುದು ಕುತೂಹಲಕಾರಿ ವಿಷಯ. ಪ್ರತಿ ಮನೆಗೂ ಮತಗಟ್ಟೆಯೊಂದಿಗೆ ಚುನಾವಣಾ ಸಿಬ್ಬಂದಿ ತೆರಳಿ ಮತ ಹಾಕಿಸಿಕೊಂಡು ಬರಲಿದ್ದಾರೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಈ ನಿರ್ಧಾರಕ್ಕೆ ಬಂದಿದೆ. ಕೋವಿಡ್-19 ಸಂಕಷ್ಟದಲ್ಲಿ ಮೊದಲಬಾರಿಗೆ ರಾಜ್ಯದಲ್ಲಿ ಎದುರಾಗಿರುವ ಉಪಚುನಾವಣೆಯಲ್ಲಿ ಕೋವಿಡ್ ಪಾವಿಟಿವ್ ವ್ಯಕ್ತಿ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಸುಗಮವಾಗಿ ಮತ ಚಲಾಯಿಸಲು ಚುನಾವಣಾ ಆಯೋಗ ಇಂತಹ ಅವಕಾಶ ನೀಡಿರುವುದು ಮತದಾರರ ಮೆಚ್ಚುಗೆಗೆ…
ಚಿಕ್ಕನಾಯಕನಹಳ್ಳಿ : ಘನತ್ಯಾಜ್ಯ ವಸ್ತು ನಿರ್ವಹಣೆ ವಿಧಿಯನ್ನು ಪಾಲಿಸದವರಿಗೆ ಪುರಸಭಾ ಸಿಬ್ಬಂದಿ ದಂಡಹಾಕುವ ಪ್ರಕ್ರಿಯೆಯನ್ನು ಪಟ್ಟಣದಲ್ಲಿ ನಡೆಸಲಾಯಿತು. ಪಟ್ಟಣವನ್ನು ಕಸಮುಕ್ತಗೊಳಿಸುವ ದಿಸೆಯಲ್ಲಿ ಪುರಸಭಾ ಸಿಬ್ಬಂದಿಯವರು ಅಂಗಡಿಗಳ ಮುಂಭಾಗದಲ್ಲಿ ಕಸಗಳನ್ನು ತಂದುಹಾಕಿದಕ್ಕಾಗಿ ಅಂಗಡಿ ಮಾಲಿಕರಿಂದ ದಂಡವಸೂಲಿ ಕಾರ್ಯನಡೆಸಲಾಯಿತು. ಕರ್ನಾಟಕಪೌರಸಭೆ ಅಧಿನಿಯಮ 1964ರ ಸಂಖ್ಯೆ 22ರ ಪ್ರಕರಣ 325ರ ಪ್ರಕಾರ ಘನತ್ಯಾಜ್ಯವಸ್ತು ನಿರ್ವಹಣೆ 2016ರ ಸೇವೆಯ ಪಾಲನೆ ಮಾಡದಿರುವ ಮನೆ, ಅಂಗಡಿ, ಟೀಶಾಪ್, ಹೋಟೆಲ್ ಮುಂತಾದ ಮುಂಗಟ್ಟುಗಳ ಮಾಲಿಕರಿಗೆ ಪ್ರಥಮವಾಗಿ ರೂ.50ನ್ನು ದಂಡಹಾಕಲಾಗುತ್ತಿದೆ ಎಂದು ಪುರಸಭೆಯ ಸಿಬ್ಬಂದಿ ವಿದ್ಯಾ ಮಾಹಿತಿ ನೀಡಿದರು. ಸಾರ್ವಜನಿಕವಾಗಿ ಈ ಬಗ್ಗೆ ಈಗಾಗಲೇ ಧ್ವನಿವರ್ಧಕಗಳ ಮೂಲಕ ಪ್ರಚಾರ ನಡೆಸಿದ್ದು, ಅಂಗಡಿಮಾಲಿಕರು ತಮ್ಮ ದಿನನಿತ್ಯದ ಕಸಗಳನ್ನು ಸಂಗ್ರಹಿಸಿ ಪುರಸಭೆಯ ವಾಹನದಲ್ಲಿಯೇ ಹಾಕಬೇಕೆಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು, ಇಂತಹ ಕಸ ಸಂಗ್ರಹಣೆಗಾಗಿ ದಿನನಿತ್ಯಕಸದವಾಹನ ಎಲ್ಲಾ ರಸ್ತೆಗಳಲ್ಲೂ ಸಂಚರಿಸುತ್ತಿದೆ. ಇಷ್ಟೆಲ್ಲಾ ವ್ಯವಸ್ಥೆಯಿದ್ದರೂ ಕಸಗಳನ್ನು ಬೇಕಾಬಿಟ್ಟಿಹಾಕುವ ಮಂದಿಗೆ ದಂಡಹಾಕುವ ಪ್ರಕ್ರಿಯೆ ಮುಂದಿವರೆಯುವುದೆಂದರು. ಆದರೆ ಪಟ್ಟಣದ…
ತುಮಕೂರು : ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾಡಹಬ್ಬ ದಸರಾ ಆಚರಣೆಯಲ್ಲಿ ಕೋವಿಡ್-19ರ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್-19 ವೈರಾಣು ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ನಾಡಹಬ್ಬ ದಸರಾವನ್ನು ಅತ್ಯಂತ ಸರಳವಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವುದು, ದಸರಾ ಆಚರಣೆಯ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರವಿಲ್ಲದೆ ನಡೆಸಲಾದ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರಪಾಲಿಕೆ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆ/ಪ್ರಾಧಿಕಾರಗಳಿಂದ ಹೊರಡಿಸಲಾಗುವ ಎಲ್ಲಾ ಆದೇಶ/ ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ದಸರಾ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯದಿಂದ ಆಚರಿಸುವ ಮೂಲಕ ಸಮಾಜದ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡುವುದು. ದಸರಾ ಹಬ್ಬದ ತಯಾರಿ ಮತ್ತು ಚಟುವಟಿಕೆಗಳ ಕುರಿತು ಸಂಬಂಧಿಸಿದ ಪ್ರಾಧಿಕಾರಗಳು ಆಗ್ಗಿಂದಾಗ್ಗೆ…











