ತುಮಕೂರು : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಸದಸ್ಯರು ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ ಜ್ಯೋತಿಗಣೇಶ್ ಅವರಿಗೆ ಮನವಿ ಸಲ್ಲಿಸಿದರು. ತುಮಕೂರು ನಗರದಲ್ಲಿ ಈಗಾಗಲೇ 130 ಅನುದಾನ ರಹಿತ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳ ಹತ್ತಿರದಲ್ಲಿಯೇ ಮತ್ತೊಂದು ಪ್ರಿಸ್ಕೂಲ್ ಶಾಲೆಯನ್ನು ತೆರೆಯಲು ಡಿಡಿಪಿಐ ಹಾಗೂ ಬಿಇಒ ಅನುಮತಿ ನೀಡುತ್ತಿರುವುದು ಸರಿಯಲ್ಲ, ಕಾರ್ಪೋರೇಟ್ ಶಾಲೆಗಳ ವ್ಯಾಮೋಹದಲ್ಲಿ ಅಧಿಕಾರಿಗಳು ಸ್ಥಳೀಯ ಶಾಲಾ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಹಾಲನೂರು ಎಸ್.ಲೇಪಾಕ್ಷಿ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕುವಂತೆ ಕಳೆದ ಜೂನ್‍ನಲ್ಲಿಯೇ ಡಿಡಿಪಿಐ ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸಿದರು, ಅಧಿಕಾರಿಗಳು…
Author: News Desk Benkiyabale
ತುಮಕೂರು: ಫೆ. 12ರಿಂದ ಫೆ.26ರವರೆಗೆ ಸಿದ್ದಗಂಗಾ ಮಠದಲ್ಲಿ ಪ್ರತಿ ವರ್ಷದಂತೆ ಕೃಷಿ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಕಾರ್ಯದರ್ಶಿ ಶಿವಕುಮಾರಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಪ್ರಾರಂಭಗೊಂಡ ನಂತರ ಬರಗಾಲದ ಕಾರಣ 1967ರಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಿರಲಿಲ್ಲ, ನಂತರ ಪ್ರತಿ ವರ್ಷವೂ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದರು. ಮಠದಲ್ಲಿ ನಡೆಯುವ ವಸ್ತುಪ್ರದರ್ಶನ ರಾಜ್ಯದಲ್ಲಿ ಪ್ರತಿಷ್ಠಿತವಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಳಿಗೆಗಳು ಹಾಗೂ ವಿವಿಧ ಪ್ರಮುಖ ಸಂಸ್ಥೆಗಳ ಮಳಿಗೆಗಳು ವಸ್ತುಪ್ರದರ್ಶನದಲ್ಲಿದ್ದು, ಪ್ರತಿ ವರ್ಷದಂತೆ ಕೃಷಿ ಪ್ರದರ್ಶನ ರೈತರಿಗೆ ಅನುಕೂಲವಾಗಿದ್ದು, ಕಳೆದ ಆರು ತಿಂಗಳಿಂದಲೇ ತಯಾರಿ ಮಾಡಲಾಗಿದೆ ಎಂದರು. ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಕೈಗಾರಿಕಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡಲಾಗುತ್ತಿತ್ತು,…
ತುಮಕೂರು : ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ದೇಗುಲಗಳಲ್ಲಿ ಏಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 100 “ಎ” ವರ್ಗದ ಆಯ್ದ ದೇವಾಲಯಗಳಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿ ನವ-ಜೋಡಿಗೆ ಅಗತ್ಯತೆಗನುಣವಾಗಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5000 ರೂ.ಗಳನ್ನು ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ 10,000 ರೂ.ಗಳನ್ನು ಮತ್ತು ವಧುವಿಗೆ ಚಿನ್ನದ ತಾಳಿ, 2 ಚಿನ್ನದ ಗುಂಡು(ಅಂದಾಜು 8 ಗ್ರಾಂ ತೂಕ ಅಂದಾಜು 40,000…
ತುಮಕೂರು : ಮಹಾತ್ಮ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಮೇಯರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದ ಭದ್ರಮ್ಮ ಛತ್ರದ ಸರ್ಕಲ್‍ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಮೇಯರ್ ಫರಿದಾ ಬೇಗಂ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಂಸದ ಅನಂತ್‍ಕುಮಾರ್ ಹೆಗಡೆಯವರು ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಬಗ್ಗೆ ಅವಹೇಳನವಾಗಿದೆ ಹೇಳಿಕೆ ನೀಡಿರುವುದು ತಪ್ಪು. ಅನಂತ್ ಕುಮಾರ್ ಹೆಗಡೆ ಕೇವಲ ನಾಲ್ಕು ವರ್ಷಕ್ಕೆ ಮನೆಗೆ ಹೋಗುವವರು ಆದರೆ ಮಹಾತ್ಮ ಗಾಂಧಿ ಈ ಭೂಮಂಡಲ ಇರುವವರೆಗೂ ಅಜರಾಮರವಾಗಿರುವವರು. ಅವರ ವಿರುದ್ಧ ಹೇಳಿಕೆ ಮಾತನಾಡುವುದು ಖಂಡನೀಯ ಎಂದರು. ಒಂದು ಪಕ್ಷ ಸಿಕ್ಕದೆ, ಸ್ಥಾನ ಸಿಕ್ಕದೆ ಎಂದು ಮನಸ್ಸಿಗೆ ಬಂದಂತೆ ಸಿಎಎ, ಎನ್‍ಆರ್ಸಿ ತಂದರೂ ನಮಗೆ ಭಯವಿಲ್ಲ. ನಾವೆಲ್ಲಾ ಭಾರತೀಯರು ಒಂದೇ, ನಮ್ಮನ್ನು ಬೇರೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಸಂವಿಧಾನದ ಬಗ್ಗೆ ಅವಹೇಳನ ಮಾಡುವುದು, ಗಾಂಧಿ…
ತುಮಕೂರು : ನಗರದ ಶಿರಾಗೇಟ್‍ನ ಐ.ಡಿ.ಎಸ್.ಎಂ.ಟಿ. ಲೇಔಟ್‍ನಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಇವುಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿದೆ. ಸಮಿತಿಯ ಹಿಂದಿನ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್-ಅರಳಿಮರದ ಪಾಳ್ಯ-ಜೆಡಿಎಸ್) ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದ್ದು, ಪ್ರತ್ಯೇಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಐ.ಡಿ.ಎಸ್.ಎಂ.ಟಿ. ಯೋಜನೆಗಾಗಿ 108 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನಗೊಂಡ ಜಮೀನಿನ ಮಾಲೀಕರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಖಾಲಿನಿವೇಶನಗಳನ್ನು ಪರಿಶೀಲಿಸಿ, ಭೂಮಾಲೀಕರಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸರೋಜಮ್ಮ ಎಂಬುವವರ ಹೆಸರಿನಲ್ಲಿ 2.38 ಎಕರೆ-ಗುಂಟೆ ಜಮೀನಿದ್ದು, ಅದರಲ್ಲಿ 2.35 ಎಕರೆ-ಗುಂಟೆ ಜಮೀನನ್ನು ಐಡಿಎಸ್‍ಎಂಟಿ ಯೋಜನೆಗೆ ಭೂಸ್ವಾಧಿನಪಡಿಸಿದ್ದು, ಉಳಿದ 0,3 ಗುಂಟೆ ಜಮೀನು ಈ ಲೇಔಟ್ ವ್ಯಾಪ್ತಿಯಲ್ಲಿ ಸೇರಿಕೊಂಡಿದೆ. ಇದನ್ನು ಗುರುತಿಸಿ…
ತುಮಕೂರು : ತುಮಕೂರು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಪೊಕ್ಸೊ ಕಾಯ್ದೆಯಡಿ 105 ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ 11 ಖುಲಾಸೆಯಾಗಿದ್ದು, 2 ಶಿಕ್ಷೆಯಾಗಿದೆ ಉಳಿದ 92 ಪ್ರಕರಣಗಳು ಬಾಕಿಯಿವೆ. ಒಮ್ಮೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಆಗಬೇಕು ಆಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್‍ಕುಮಾರ್ ತಿಳಿಸಿದರು. ಅವರು ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಹಾಗೂ ಜಿಲ್ಲಾಮಟ್ಟದ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪೊಕ್ಸೊ ಕಾಯ್ದೆಯಡಿ ಪ್ರಕರಣಗಳ ಸರಿಯಾದ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮತ್ತು ತೊಂದರೆಗೊಳಗಾದವರಿಗೆ ನ್ಯಾಯ ದೊರಕಿಸಬೇಕೆಂದು ಅವರು ಹೇಳಿದರು. ಬಾಲಕಿಯರ ಬಾಲಮಂದಿರಗಳಲ್ಲಿ ಗೃಹಪಾಲಕರ ಪುರುಷ ಸಿಬ್ಬಂದಿಯ ಬದಲು ಮಹಿಳಾ ಸಿಬ್ಬಂದಿಯರವನ್ನು ನೇಮಿಸಬೇಕು ಹಾಗೂ ರಾತ್ರಿ ಕಾವಲುಗಾರರಾಗಿ ಗೃಹರಕ್ಷದಳದ ಸೇವೆಯನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. …
ತುಮಕೂರು: ಚುನಾವಣೆ ಮುಂಚೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಟ್ಟಿದ್ದ ಮಾತಿನಂತೆ 10 ಮಂದಿಯನ್ನು ಮೊದಲನೇ ಹಂತದಲ್ಲಿ ಸಚಿವರನ್ನಾಗಿ ಮಾಡಿದ್ದಾರೆ, ಉಳಿದವರನ್ನು ಮುಂದಿನ ದಿನಗಳಲ್ಲಿ ಸಚಿವರನ್ನಾಗಿ ಮಾಡುತ್ತಾರೆ ಎಂದು ನೂತನ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ನಂತರ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆರ್ಶೀವಾದ ಪಡೆದ ಅವರು, ಪ್ರತಿ ಸಂದರ್ಭದಲ್ಲಿಯೂ ಶ್ರೀಗಳ ಆರ್ಶೀವಾದ ಪಡೆಯುತ್ತಿದ್ದೇನೆ, ಚುನಾವಣೆ ಮುಂಚೆಯೂ ಮಠಕ್ಕೆ ಆಗಮಿಸಿ, ಶ್ರೀಗಳ ಆರ್ಶೀವಾದವನ್ನು ಪಡೆದಿದ್ದೇ, ಈಗ ಸಚಿವನಾಗಿ ಬಂದು ಶ್ರೀಗಳ ಆರ್ಶೀವಾದವನ್ನು ಪಡೆದಿದ್ದೇನೆ ಎಂದು ಹೇಳಿದರು. ಬಿಜೆಪಿ ಸರ್ಕಾರ ರಚನೆಯಾಗಲು ಸಹಕರಿಸಿದವರಿಗೆ ಸಿಎಂ ನೀಡಿದ್ದ ಮಾತಿನಂತೆ ನಡೆದುಕೊಂಡಿದ್ದಾರೆ, 17 ಮಂದಿಯಲ್ಲಿ 10 ಮಂದಿಗೆ ಈಗ ಸಚಿವ ಸ್ಥಾನ ಸಿಕ್ಕಿದ್ದು, ಉಳಿದವರಿಗೆ ಮೇ-ಜೂನ್‍ಗೆ ಸಚಿವ ಸ್ಥಾನ ದೊರಕಲಿದೆ, ಸಚಿವ ಸ್ಥಾನ ತಡವಾಗಲು ಹಲವಾರು ಕಾರಣಗಳಿದ್ದು, ನಮ್ಮ ರಾಜಕೀಯ ಭವಿಷ್ಯ ಹಾಳಾಯಿತು ಎಂದು ಟೀಕಿಸುತ್ತಿದ್ದವರಿಗೆ ಇಂದು ಉತ್ತರ ಸಿಕ್ಕಿದೆ…
ತುಮಕೂರು: ನಗರಕ್ಕೆ ದಿನದ 24 ಗಂಟೆಗಳೂ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನೀರು ಶುದ್ಧೀಕರಣ ಘಟಕದಿಂದ ನೇರವಾಗಿ ನೀರು ಪೂರೈಸಲಾಗುವುದು ಎಂದು ಶಾಸಕ ಬಿ.ಜಿ.ಜ್ಯೋತಿಗಣೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 196 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ 2 ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಶೇ 90ರಷ್ಟು ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ’ ಎಂದರು. 44 ಓವರ್‍ಹೆಡ್ ಟ್ಯಾಂಕ್‍ಗಳನ್ನು ತುಂಬಿಸಿ ಅಲ್ಲಿಂದ ವಾಲ್‍ಮೆನ್‍ಗಳ ಸಹಾಯವಿಲ್ಲದೆ ನೀರು ಹರಿಸಲಾಗುವುದು. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಅಗತ್ಯ ಇಲ್ಲದಂತೆ ಆಗುತ್ತದೆ. ಪಾಲಿಕೆ ಎಂಜಿನಿಯರ್‍ಗಳು ಈ ಬಗ್ಗೆ ನಿಗಾವಹಿಸಬೇಕು ಎಂದರು. ಸ್ಮಾರ್ಟ್‍ಸಿಟಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾ ಸಂಕೀರ್ಣ, ಅಂಗನವಾಡಿ, ಅಮಾನಿಕೆರೆಯ ಗಾಜಿನ ಮನೆ ಪಕ್ಕದಲ್ಲಿ ತುಮಕೂರು ಸಿಟಿ ಸಂತೆ ನಡೆಸಲು ಯೋಜನೆ…
ತುಮಕೂರು: ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಎಸ್.ಎಸ್.ಎಲ್.ಸಿ./ಪಿ.ಯುಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ, ಭಾನುವಾರ ವಿಶೇಷ ಭೋದನಾ ತರಗತಿಗಳನ್ನು ನಡೆಸಿ ಶೇ. 90ರಷ್ಟು ಫಲಿತಾಂಶ ಹೆಚ್ಚಿಸಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ಆರ್.ಎಸ್. ಪೆದ್ದಪ್ಪಯ್ಯ ತಿಳಿಸಿದರು. ತುಮಕೂರಿನ ಬಾಲಭವನದಲ್ಲಿಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸಮಾಜಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳು ಅನ್ನ, ವಸತಿ ನೀಡುವ ಗಂಜಿಕೇಂದ್ರಗಳಾಗದೇ ವಿದ್ಯಾರ್ಥಿಗಳಿಗೆ ಕಠಿಣ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ಕೇಂದ್ರಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಯಾ ವಿದ್ಯಾರ್ಥಿನಿಲಯಗಳ ಮೇಲ್ವೀಚಾರಕರ ನೇತೃತ್ವದಲ್ಲಿ ನಡೆಸಿ ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಫಲಿತಾಂಶ ಕೇವಲ ಪಾಸ್ ಆಗಿ ಶೇ. ಇಷ್ಟು ಫಲಿತಾಂಶ ಬಂದಿದೆ ಎಂದು ಘೋಷಿಸುವ…
ತುಮಕೂರು : ಜಿಲ್ಲೆಯಲ್ಲಿ ಈವರೆಗೂ ಯಾವುದೇ ನೋವಲ್ ಕರೋನಾ ವೈರಸ್ ಪ್ರಕರಣಗಳು ಧೃಢಪಟ್ಟಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಬಿ.ಆರ್. ಚಂದ್ರಿಕಾ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಚೀನಾ ದೇಶದಿಂದ ಬಂದಿದ್ದ ಯುವಕನಿಗೆ ಗಂಟಲು ದ್ರಾವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‍ಐವಿ)ಗೆ ಕಳುಹಿಸಲಾಗಿದ್ದು, ಸದರಿ ರಕ್ತದ ಮಾದರಿಯ ಫಲಿತಾಂಶದಲ್ಲಿ ಕರೋನಾ ವೈರಸ್ ಕಂಡುಬಂದಿರುವುದಿಲ್ಲ ಎಂದು ಬೆಂಗಳೂರಿನ ಎನ್‍ಐವಿ ಧೃಢಪಡಿಸಿದೆ. ಈ ಯುವಕನು ಜಿಲ್ಲಾ ಆಸ್ಪತ್ರೆಯಲ್ಲಾಗಲೀ ಖಾಸಗಿ ಆಸ್ಪತ್ರೆಗಳಲ್ಲಾಗಲೀ ದಾಖಾಲಾಗಿರುವುದಿಲ್ಲ. ಜಿಲ್ಲೆಯಲ್ಲಿ ಬೇರೆ ಯಾವುದೇ ಹೊಸ ಶಂಕಿತ ಕರೋನಾ ವೈರಸ್ ರೋಗಿಗಳು ಇರುವುದಿಲ್ಲ ಹಾಗೂ ಯಾವುದೇ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿರುವುದಿಲ್ಲ. ಸಾರ್ವಜನಿಕರು ಅನಾವಶ್ಯಕವಾಗಿ ಭಯ ಪಡುವ ಹಾಗೂ ಊಹಾಪೋಹಗಳಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಮನವಿ ಮಾಡಿದ್ದಾರೆ. ಕರೋನಾ ವೈರಸ್…