Author: News Desk Benkiyabale

ತುಮಕೂರು :       ಕಲ್ಪತರು ನಾಡಾಗಿದ್ದ ತುಮಕೂರು ಜಿಲ್ಲೆಗೆ ಕಳೆದ 2-3 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬರ ಪರಿಸ್ಥಿತಿಯನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದ್ದು, ಈ ಭಾಗದ ಜನರು ಕೇವಲ ತೆಂಗು ಬೆಳೆಗೆ ಮಾತ್ರ ಜೋತುಬೀಳದೆ ಗೋಡಂಬಿ ಬೆಳೆ ಬೆಳೆಯಲು ಮುಂದಾಗಬೇಕು. ಜಿಲ್ಲೆಯ ವಾತಾವರಣ ಗೋಡಂಬಿ ಬೆಳೆಗೆ ಹೇಳಿಮಾಡಿಸಿದಂತಿದೆ ಎಂದು ಕಾನೂನು ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಹಾಗೂ ತುಮಕೂರು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.         ಅವರು ಜ.31ರಂದು ಫಲಪುಷ್ಪ ಪ್ರದರ್ಶನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಕಲಾವಿದರಿಗಿಂತ ಶ್ರೇಷ್ಠ ಕಲಾಕಾರನೆಂದರೆ ನಮ್ಮ ಪ್ರಕೃತಿ. ಈ ಪ್ರಕೃತಿಯ ಕಲಾಕೃತಿಯ ಮುಂದೆ ನಾವೆಲ್ಲ ಮಾಡುವುದು ಕೃತಕ. ಆದರೆ ಈಗಿನ ಧಾವಂತ ಬದುಕಿನಲ್ಲಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಮ್ಮ ಎಲ್ಲಾ ಜೀವನದ ಬದುಕಿನಲ್ಲಿ ರೂಢಿಸಿಕೊಂಡಾಗ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ. ಕೃಷಿಯ ಜೊತೆಗೆ ಎಲ್ಲಾ ಉಪಕಸುಬುಗಳನ್ನು…

Read More

ತುಮಕೂರು :       ನೃತ್ಯ ಮತ್ತು ಸಂಗೀತ ಮನೋವಿಕಾಸದ ದೃಷ್ಠಿಯಿಂದ ಆರಂಭವಾಯಿತೇ ಹೊರತು ಕೇವಲ ಮನರಂಜನೆಯ ಉದ್ದೇಶಕ್ಕಾಗಿ ಆರಂಭವಾಗಲಿಲ್ಲ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟರು.       ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಸ್ಕಾರ ಭಾರತಿ, ಕರ್ನಾಟಕ ತುಮಕೂರು ಶಾಖೆಯಿಂದ ಹಮ್ಮಿಕೊಂಡಿದ್ದ ಪ್ರಾಂತ ಶಾಸ್ತ್ರೀಯ ನೃತ್ಯಕಲಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆಯ ಕ್ಷೇತ್ರವನ್ನು ಶುದ್ಧಗೊಳಿಸುವ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸಂಸ್ಕಾರ ಭಾರತಿ ಕೆಲಸ ಮಾಡುತ್ತಿದೆ. ಕಲೆಗೆ ಅಂಟಿಕೊಂಡಿರುವ ಕತ್ತಲೆಯನ್ನು ದೂರಮಾಡುತ್ತಾ ಸಾಗುತ್ತಿದೆ ಎಂದರಲ್ಲದೇ ಸಂಗೀತ ಮನಸ್ಸನ್ನು ಮುದಗೊಳಿಸುವ ಕಾರ್ಯವನ್ನು ಮಾಡುತ್ತದೆ. ಇಂದು ಸರ್ಕಾರ ಉತ್ತಮ ಶಿಕ್ಷಣವನ್ನು ನೀಡಿ, ಹೊಸ ಅನ್ವೇಷಣೆಗಳನ್ನು ಕಂಡು ಹಿಡಿಯಲು ಸಹಕಾರಿಯಾಗಿದೆ. ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.       ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾರಭರಣ ಮಾತನಾಡಿ, ಕಲೆ ಮತ್ತು ಕಲಾವಿದರ ಉನ್ಮುನವನ್ನು…

Read More

ತುಮಕೂರು :       ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮ ಪಂಚಾಯತಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರನ್ನು ಹೊರತುಪಡಿಸಿ ಉಳಿದ ಸಿಬ್ಬಂದಿಗಳಾದ ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಜವಾನ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿ ಕೆಲಸಕ್ಕೆ ಹಾಜರಾಗದಿರುವುದು ಕಂಡು ಬಂದಿದ್ದರಿಂದ ಸಂಬಂಧಿಸಿದವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲು ಉಪಕಾರ್ಯದರ್ಶಿ (ಅಭಿವೃದ್ಧಿ) ಟಿ.ಕೆ. ರಮೇಶ್ ಅವರಿಗೆ ಸೂಚಿಸಿದರು.       ಅಲ್ಲದೆ ಸದರಿ ಗ್ರಾಮ ಪಂಚಾಯಿತಿಯಲ್ಲಿ ಸಕಾಲ ಯೋಜನೆಯ ನಾಮಫಲಕವನ್ನು ಅಳವಡಿಸದೇ ಇರುವುದನ್ನು ಗಮನಿಸಿ ಕೂಡಲೇ ಅಳವಡಿಸುವಂತೆ ಪಂಚಾಯತಿ ಕಾರ್ಯದರ್ಶಿಗೆ ಸೂಚಿಸಿದರಲ್ಲದೆ ಗ್ರಾಮ ಪಂಚಾಯಿತಿಯ ಹಾಜರಾತಿ ವಹಿ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯ 1 ರಿಂದ 7 ರಿಜಿಸ್ಟರ್‍ಗಳನ್ನು ಪರಿಶೀಲಿಸಿದರು. ನಂತರ ಕೂಲಿ ಕಾರ್ಮಿಕರ ಆಧಾರ್ ನಂಬರ್‍ಗಳನ್ನು ಬ್ಯಾಂಕ್‍ಗೆ ಲಿಂಕ್ ಮಾಡಿರುವ ಪ್ರಗತಿ ಕೇವಲ…

Read More

ತುಮಕೂರು :        ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರವನ್ನು ಡೆನ್ಮಾರ್ಕ್ ದೇಶದ ಅಲ್ಬೋರ್ಗ್ ಮಾದರಿಯಲ್ಲಿ ಅತ್ಯಾಧುನಿಕ ಮೂಲ ಡಿಜಿಟಲ್ ಸೌಕರ್ಯವಿರುವ ಮಹಾನಗರವನ್ನಾಗಿ ಅಭಿವೃದ್ಧಿಪಡಿಸಲು ಒತ್ತು ನೀಡಿ, ಯೋಜನೆ ಅನುಷ್ಠಾನ ಮತ್ತು ನಿರ್ವಹಣೆಯನ್ನು ಕಾರ್ಯ ನಿರ್ವಹಣೆ ಸಮಿತಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.       ಡೆನ್ಮಾರ್ಕ್ ದೇಶದ ಕನ್ಸಲ್ಟೆಂಟ್ ಮುಖ್ಯಸ್ಥರಾಗಿರುವ ಜೆಟ್ಟೆ ಬೆಜ್ರೆಮ್ ಅವರು ಇಂದು ನಗರದಲ್ಲಿರುವ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿ ಡೆನ್ಮಾರ್ಕ್ ತಂಡ ಮತ್ತು ಕಾರ್ಯನಿರ್ವಾಹಣಾ ಸಮಿತಿ ಸಭೆಯ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಟಿ. ಭೂಬಾಲನ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು.       ತುಮಕೂರು ತೆಂಗು ಬೆಳೆಯುವ ಕಲ್ಪತರ ನಾಡಾಗಿದ್ದು ಶಿಕ್ಷಣದ ಬೀಡಾಗಿದೆ. ಸ್ಮಾರ್ಟ್ ರಸ್ತೆ,…

Read More

 ತುಮಕೂರು :      ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ-2020ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಹಾಗೂ ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರು ಜಿಲ್ಲೆಯ ತುರುವೇಕೆರೆ, ಕುಣಿಗಲ್, ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ತಿಟಪೂರು ತಾಲೂಕಿನ ವಿವಿಧ ಗ್ರಾಮಗಳ ಮನೆಗಳಿಗೆ ಇಂದು ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆ ನಡೆಸಿದರು.       ಜಿಲ್ಲೆಯ ತುರುವೇಕೆರೆ ತಾಲೂಕಿನ ಜಿ.ದೊಡ್ಡೇರಿ, ಶೆಟ್ಟಿಗೊಂಡನಹಳ್ಳಿ, ಗುಬ್ಬಿ ತಾಲೂಕಿನ ಕಲ್ಲೂರು, ನಿಟ್ಟೂರು, ತಿಪಟೂರು ತಾಲೂಕಿನ ಕೆ.ಬಿ ಕ್ರಾಸ್, ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ.ಪುರ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಿದರು.       ವೀಕ್ಷಕರಾದ ಮಣಿವಣ್ಣನ್ ಅವರು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಮನೆಯ ಸದಸ್ಯರೆಲ್ಲರ ಹೆಸರು ಸೇರ್ಪಡೆಯಾಗಿರುವ, ಮರಣ ಹೊಂದಿದವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿರುವ ಹಾಗೂ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಸ್ಥಳಾಂತರಗೊಂಡಿರುವ ಮತದಾರರ ಹೆಸರನ್ನು ಪಟ್ಟಿಯಲ್ಲಿ…

Read More

ತುಮಕೂರು:       ಮಹಾ ನಗರಪಾಲಿಕೆಯ ನೂತನ ಮೇಯರ್ ಆಗಿ 13ನೇ ವಾರ್ಡ್(ಕುರಿಪಾಳ್ಯ)ನ ಫರೀದ ಬೇಗಂ ಹಾಗೂ ಉಪ ಮೇಯರ್ ಆಗಿ 33(ಕ್ಯಾತ್ಸಂದ್ರದ ಚೌಡೇಶ್ವರ ನಗರ)ನೇ ವಾರ್ಡ್‍ನ ಶಶಿಕಲಾ ಗಂಗಹನುಮಯ್ಯ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಳೆದ ವರ್ಷದಂತೆ ಮತ್ತೊಮ್ಮೆ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳು ಮಹಿಳೆಯರಿಗೊಲಿದಿವೆ.       ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಪಾಲಿಕೆ ಚುನಾವಣಾಧಿಕಾರಿ ಡಾ|| ಎನ್.ವಿ. ಪ್ರಸಾದ್ ಅವರು ಮೇಯರ್, ಉಪ ಮೇಯರ್ ಹಾಗೂ 4 ವಿವಿಧ ಸ್ಥಾಯಿ ಸಮಿತಿಗಳಿಗೆ ಗುರುವಾರ ಪಾಲಿಕೆ ಸಭಾಂಗಣದಲ್ಲಿ ನಡೆಸಿದ ಚುನಾವಣೆ ಪ್ರಕ್ರಿಯೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಈ ಅವಿರೋಧ ಆಯ್ಕೆ ನಡೆಯಿತು. ಚುನಾವಾಣಾಧಿಕಾರಿಗಳು ಬೆಳಿಗ್ಗೆ 11.30 ಗಂಟೆಗೆ ಸರಿಯಾಗಿ ಹಾಜರಿದ್ದ ನಗರ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಹಾಗೂ 35 ವಾರ್ಡ್‍ಗಳ ಪಾಲಿಕೆ ಸದಸ್ಯರು ಸೇರಿ ಒಟ್ಟು 38 ಜನರಿಂದ ಹಾಜರಾತಿ ಪಡೆದು ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.       ಮೊದಲಿಗೆ…

Read More

 ತುಮಕೂರು:       ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿಗಾವಹಿಸಿ ಕೋಟ್ಪಾ ಕಾಯ್ದೆಯಡಿ ಹೆಚ್ಚಿನ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಕೋನ ವಂಶಿಕೃಷ್ಣ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ ಕಾನೂನಿನ ಬಗ್ಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಕೋಟ್ಪಾ ಕಾರ್ಯಾಚರಣೆ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕ ಮಾತನಾಡಿ,…

Read More

ತುಮಕೂರು :       ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ “ಎ” ದರ್ಜೆಯ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ “ಸಪ್ತಪದಿ” ಕಾರ್ಯಕ್ರಮವನ್ನು ಆಯೋಜಿಸುವ ಕುರಿತಂತೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯ, ದೇವರಾಯನದುರ್ಗದ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಹಾಗೂ ಕುಣಿಗಲ್ ತಾಲ್ಲೂಕಿನ ಹಳೇಊರು ಹುಲಿಯೂರಮ್ಮ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿಸಲು ಸರ್ಕಾರ ಆಯ್ಕೆ ಮಾಡಿದೆ ಎಂದು ಅವರು ತಿಳಿಸಿದರು.       ಸರಳ ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಧು-ವರರು ಆಗಮಿಸಿ, ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಜಿಲ್ಲೆಯ ಮೂರು ದೇವಾಲಯಗಳಲ್ಲಿ ಮೇ 24ರಂದು ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಬಗ್ಗೆ ವಿಸ್ತøತವಾಗಿ ಚರ್ಚಿಸಲಾಯಿತು. ಅಲ್ಲದೆ ಮೇ 24 ದಿನಾಂಕವನ್ನು ತಾತ್ಕಾಲಿಕವಾಗಿ ನಿಗಧಿಪಡಿಸಿ, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳೋಣ ಎಂದರು.    …

Read More

ತಿಪಟೂರು :       ಹೇಮಾವತಿ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ನೀರು ಬಿಡಲಾಗುವುದು, ಆದರೆ ಕೆರೆಗೆ ಮತ್ತು ಕಾಲುವೆಗೆ ಅಕ್ರಮವಾಗಿ ಪಂಪ್‍ಸೆಟ್ ಹಾಕಿ ನೀರು ಹೊಡೆದರೆ ಸಕ್ಷೆನ್ 36ರ ಅಡಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.       ತಾಲ್ಲೂಕು ಕಛೇರಿಯಲ್ಲಿ ಕರೆದಿದ್ದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಮಾವತಿ ಎಂಜಿನಿಯರ್ಗಳ ಪ್ರಕಾರ ಅಚ್ಚುಕಟ್ಟು ಪ್ರದೇಶಕ್ಕೆ ನೀಡಬಹುದಾದ ನೀರಿನ ಪ್ರಮಾಣ ಸಾಸಲಹಳ್ಳಿ ಕೆರೆ 5.88 ಎಂ.ಟಿಎಫ್, ನೊಣವಿನಕೆರೆ 103.60, ಬಜಗೂರು 17.04 ಎಂ.ಟಿಎಫ್, ವಿಘ್ನಸಂತೆ 18.73 ಎಂ.ಟಿಎಫ್, ಮತ್ತು ಆಲ್ಬೂರು ಎಂ.ಟಿಎಫ್ ಕೆರೆಗಳಲ್ಲಿ ನೀರು ಬಳಸಬಹುದು. ಮತ್ತು ತುರುವೇಕೆರೆ ವಿಭಾಗದಲ್ಲಿ ಮಲ್ಲಾಘಟ್ಟ 212-72 ಎಂ.ಟಿಎಫ್, ತುರುವೇಕೆರೆ 67.19 ಎಂ.ಟಿಎಫ್, ಸಾರಿಗೇಹಳ್ಳಿ 59.81 ಎಂ.ಟಿಎಫ್, ಗೋಣಿ ತುಮಕೂರು 1.08 ಎಂ.ಟಿಎಫ್, ಕೊಂಡಜ್ಜಿ 9.98 ಎಂ.ಟಿಎಫ್, ಗಂಗನಘಟ್ಟ 2.45 ಎಂ.ಟಿಎಫ್, ಅಮ್ಮಸಂದ್ರ 6.90 ಎಂ.ಟಿಎಫ್, ಸಂಪಿಗೆ 21.79 ಎಂ.ಟಿಎಫ್, ವೀರಸಾಗರ 14.33 ಎಂ.ಟಿಎಫ್,…

Read More

ಪಾವಗಡ :       ಒರಿಸ್ಸಾದಲ್ಲಿನ ಸುಮಾರು 500 ಜನ ಕುಷ್ಠ ರೋಗಿಗಳನ್ನು ದತ್ತು ಪಡೆದು ಸುಮಾರು 15 ಲಕ್ಷ ವ್ಯಚ್ಚದಲ್ಲಿ ಅವರಿಗೆ ನೇರವು ನೀಡಲಾಗುತ್ತಿದೆ ಎಂದು ಶ್ರೀರಾಮಕೃಷ್ಣ ಗ್ರಾಮಾಂತರ ಆರೋಗ್ಯದ ಅದ್ಯಕ್ಷರಾದ ಜಪಾನಂದಾ ಸ್ವಾಮಿಜಿ ತಿಳಿಸಿದ್ದಾರೆ.       ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ ಒರಿಸ್ಸಾದಲ್ಲಿನ ಸುಮಾರು 500 ಜನ ಕುಷ್ಠರೋಗಿಗಳನ್ನು ದತ್ತು ಪಡೆದಿದ್ದು ಅವರ ಯೋಗಕ್ಷೇಮಕ್ಕಾಗಿ ಅವರ ಭವಿಷ್ಯಕ್ಕೆ ಕತ್ತಲು ಕವಿಯಭಾರದು ಎಂಬ ಧ್ಯೇಯದಿಂದ ಸ್ವಾಮಿ ವಿವೇಕನಂದರ ಆಶಯದಂತೆ ನೊಂದವರ ಪರವಾಗಿ ನಿಂತು ಅವರ ಸೇವೆ ಮಾಡಬೇಕು ಎಂಬ ಸಂಕಲ್ಪದಿಂದ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಪೋಸ್ಸಿಸ್ ಸಹಯೋಗದಲ್ಲಿ ಸಮರ್ಪಣಾ ತಂಡದ ಸಹಕಾರದಿಂದ 15 ಲಕ್ಷ ವ್ಯಚ್ಚದಲ್ಲಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.       ಒರಿಸ್ಸಾದಲ್ಲಿನ ಎರಡು ಕಾಲೋನಿಗಳನ್ನು ದತ್ತು ಪಡೆದಿದ್ದು ಅಲ್ಲಿ ಪನಿ ಬಿರುಗಾಳಿಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಕುಷ್ಠ ರೋಗಿಗಳ ವಾಸಸ್ಥಳಗಳು ಶಿಥಿಲವಾಗಿದ್ದು ಜೀವನ ನಡೆಸುವುದು ಕೂಡ…

Read More