Author: News Desk Benkiyabale

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪುಣ್ಯಕ್ಷೇತ್ರಗಳಲ್ಲೊಂದಾದ ತಮ್ಮಡಿಹಳ್ಳಿ ಶ್ರೀ ಪರ್ವತ ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಅರಣ್ಯ ಹಾಗೂ ಪೈಪ್‌ಲೈನ್‌ಗಳಿಗೆ ಹಾನಿಯಾದ ಘೆಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಕುಪ್ಪೂರು-ತಮ್ಮಡಿಹಳ್ಳಯಲ್ಲಿನ ಶ್ರೀಪರ್ವತಮಲ್ಲಿಕಾರ್ಜುನ ಬೆಟ್ಟದ ಸುತ್ತಲಿನ ಕುರುಚಲು ಅರಣ್ಯ ಪ್ರದೇಶಕ್ಕೆ ಮಂಗಳವಾರ ಮದ್ಯಾಹ್ನ 1 ಗಂಟೆಯ ಸಮಯದಲಿ ಆಕಸ್ಮಿಕ ಬೆಂಕಿ ಕಾಣಸಿಕೊಂಡು ಕ್ಷಣಾರ್ಧದಲ್ಲಿ ಬೆಟ್ಟದ ಸುತ್ತಲೂ ವ್ಯಾಪಿಸಿದೆ. ಬೆಟ್ಟವು ಸುಮಾರು 100 ಎಕರೆ ವ್ಯಾಪ್ತಿಯ ವಿಸ್ತೀಣದವಿದ್ದು, ಜಾಲಿಗಿರಿ ಮರಗಳ ಬೀಡಾಗಿದೆ, ಇದರ ಜೊತೆಗೆ ಮುತ್ತುಗ ಮತ್ತಿತರ ಕಾಡುಮರಗಳಿಂದ ಬೆಟ್ಟ ಆವೃತಗೊಂಡಿದ್ದು ಯತೇಚ್ಚವಾಗಿ ದರ್ಬೆ ಹುಲ್ಲಿನ ಬಿಡಾಗಿದೆ. ಬೆಂಕಿಯ ಕೆನ್ನಾಲಿಗೆಯು ಒಣಗಿದ ದರ್ಬೆಹುಲ್ಲಿಗೆ ವ್ಯಾಪಿಸಿದ ಕಾರಣ ವೇಗವಾಗಿ ಎಲ್ಲಡೆ ವಿಸ್ತರಣೆಗೊಂಡಿದೆ. ಬೆಂಕಿ ಕಾಣಸಿಕೊಂಡ ತಕ್ಷಣ ಸ್ಥಳೀಯರು ಹಾಗೂ ಬೆಟ್ಟದ ಕೆಳಭಾಗದಲ್ಲಿನ ವಿರಕ್ತಮಠದ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸಿದರೂ ಸಫಲವಾಗದ ಕಾರಣ ತಕ್ಷಣ ಆಗ್ನಿಶಾಮಕ ವಾಹನ್ಕಕೆ ಕರೆಮಾಡಿ ಸ್ವಲ್ಪ ಸಮಯದಲ್ಲಿಯೇ ವಾಹನ ಆಗಮಿಸಿ ಸುಮಾರು 2 ಗಂಟೆಗಳ ಕಾಲ ಸಿಬ್ಬಂದಿ ಹರಸಾಹಸದಿಂದ ಬೆಂಕಿಯನ್ನು…

Read More

ತುಮಕೂರು: ದೇಶದಲ್ಲಿ ಸಾಮಾಜಿಕ ಚಿಂತಕರ ಸಂಖ್ಯೆ ಕಡಿಮೆಯಾಗುತ್ತಿದೆ, ವ್ಯಕ್ತಿಗತ ಚಿಂತನೆಗಳು ಮೇಲುಗೈ ಪಡೆಯುತ್ತಿವೆ. ಇಂತಹ ಸಂದರ್ಭದೊಳಗೆ ಸಾಮಾಜಿಕ ಸಹಿಷ್ಣುತೆಯ ಲೇಖಕರ ಅಗತ್ಯ ಹೆಚ್ಚಿದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಡಾ.ಜಿ.ವಿ. ಆನಂದಮೂರ್ತಿ ವಿಶ್ಲೇಷಿಸಿದರು. ಜನಮುಖಿ ಬಳಗ ತುಮಕೂರು, ಗೋಪಿಕಾ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ತುಮಕೂರಿನ ಜನ ಚಳವಳಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಡವನಹಳ್ಳಿ ವೀರಣ್ಣಗೌಡ ಅವರ ಉರಿವ ದೀಪದ ಕೆಳಗೆ ಕಥಾ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ದೇಶದ ಉದ್ದಗಲಕ್ಕೂ ಇಂದು ಸಾಂಸ್ಕೃತಿಕ ಅರಾಜಕತೆ ಹೆಚ್ಚುತ್ತಿದೆ. ಸಾಂಸ್ಕೃತಿಕ ಮತ್ತು ರಾಜಕೀಯ ಅರಾಜಕತೆಯ ನಡುವೆ ಸಾಹಿತ್ಯ ಕ್ಷೇತ್ರದಲ್ಲೂ ಅರಾಜಕತೆ ಸೃಷ್ಟಿಯಾಗಿದೆ. ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರö್ಯದ ದಮನವಾಗುತ್ತಿದೆ. ಹಿಂದಿನ ಚಿಂತನೆಗಳು ಮತ್ತು ಚರ್ಚೆಗಳು ಈಗ ನಡೆಯುತ್ತಿಲ್ಲ ಎಂದು ವಿಷಾದಿಸಿದರು. ಹಿಂದೆ ಚಳವಳಿಗೂ ಭಾಷೆಗೂ ಅವಿನಾಭಾವ ಸಂಬAಧವಿತ್ತು. ಈಗ ಭಾಷಾ ಚಿಂತಕರು ಮತ್ತು ಸಾಮಾಜಿಕ ಚಿಂತಕರ ಕೊರತೆಯನ್ನು ಕಾಣುತ್ತಿದ್ದೇವೆ. ಬಡತನ, ಜಾತಿಯತೆ, ಅಸ್ಪೃಷ್ಯತೆ ವಿರುದ್ಧ ಹೋರಾಡಲು ಸಾಮಾಜಿಕ ಚಳುವಳಿ ಹುಟ್ಟಿದ್ದವು. ಈ ಎಲ್ಲ ಹೋರಾಟಗಳು…

Read More

ಕೊರಟಗೆರೆ: ತಾಲೂಕಿನ ಚಿನ್ನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೆದ್ಮೇನಹಳ್ಳಿ ಸುಕದಹಳ್ಳಿ ಗ್ರಾಮಗಳ ನಡುವೆ ಇರುವ ಇತಿಹಾಸ ಪ್ರಸಿದ್ಧ ಈ ಹೊಳೆ ನಂಜುAಡೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಅದ್ದೂರಿಯಾಗಿ ನಡೆದ ಜಾತ್ರಾ ಮಹೋತ್ಸವ ಪ್ರತಿ ವರ್ಷವೂ ಶಿವರಾತ್ರಿ ಹಬ್ಬದಂದು ನಡೆಯುತ್ತದೆ ಈ ಜಾತ್ರೆಯಲ್ಲಿ ಸಾವಿರಾರು ಭಕ್ತಾದಿಗಳು ಶ್ರೀ ಹೊಳೆ ನಂಜುAಡೇಶ್ವರ ಸ್ವಾಮಿಯ ವಿಶೇಷ ಹೂಗಳಿಂದ ಅಲಂಕಾರ ಗೊಂಡಿರುವ ಶ್ರೀ ನಂಜುAಡೇಶ್ವರ ಸ್ವಾಮಿಯನ್ನ ಕಣ್ತುಂಬಿ ಕೊಳ್ಳುತ್ತಾ ದರ್ಶನ ಪಡೆದು ಪುನೀತರಾಗುತ್ತಾರೆ.ಇನ್ನು ಚಿನ್ನಹಳ್ಳಿ ಗ್ರಾಮದ ಜಗದೀಶ್ ಕುಟುಂಬದ ವತಿಯಿಂದ ಪ್ರತಿ ವರ್ಷವೂ ಬರುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಬೆಳಗ್ಗಿನಿಂದ ಸಂಜೆವರೆಗೂ ನೆರವೇರಿಸುತ್ತಾ ಬಂದಿದ್ದಾರೆ.ಕೇAದ್ರ ಸಚಿವ ವಿ. ಸೋಮಣ್ಣನವರು ಈ ಹೊಳೆ ನಂಜುAಡೇಶ್ವರ ಸ್ವಾಮಿಯ ಪರಮ ಭಕ್ತರು ಪ್ರತಿ ವರ್ಷವೂ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆಯುತ್ತಾರೆ ಇಂದು ಕೂಡ ಕೇಂದ್ರ ಸಚಿವ ವಿ. ಸೋಮಣ್ಣನವರ ಧರ್ಮಪತ್ನಿ ಶೈಲಜಾಸೋಮಣ್ಣ ಸನ್ನಿಧಾನಕ್ಕೆ ಭೇಟಿ ನೀಡಿ ಶ್ರೀ ನಂಜುAಡೇಶ್ವರನ ದರ್ಶನ ಪಡೆದು ಭಕ್ತಾದಿಗಳಿಗೆ ಶಿವರಾತ್ರಿ ಹಬ್ಬದ ಶುಭಾಶಯಗಳನ್ನ ಕೊರಿದರು ಹಾಗೆಯೇ…

Read More

ತುರುವೇಕೆರೆ: ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಸ್ಥಾಪಿತವಾಗಿರುವ ರಾಜ್ಯದ ಪ್ರತಿಷ್ಠಿತ ಹಳ್ಳಿಕಾರ್ ಮಠದ ಸರ್ವತೋಮುಖ ಅಭಿವೃದ್ಧಿಗೆ ತಾವು ಕಂಕಣಬದ್ದವಾಗಿರುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಶ್ರೀ ಹಳ್ಳಿಕಾರ್ ಮಠ ಟ್ರಸ್ಟ್ ವತಿಯಿಂದ ನಡೆದ ಶ್ರೀ ಹಳ್ಳಿಕಾರ್ ಮಠ ಹಾಗೂ ಶ್ರೀ ಕೃಷ್ಣ ದೇವಾಲಯದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಅಲ್ಲಿನ ಮಠದ ಸ್ವಾಮೀಜಿಗಳಾದ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿಯವರ ದ್ವಿತೀಯ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ರಾಜ್ಯದಾದ್ಯಂತ ಹಳ್ಳಿಕಾರ್ ಸಮುದಾಯವಿದೆ. ಆದರೆ ನಮ್ಮ ತಾಲೂಕಿನಲ್ಲೇ ರಾಜ್ಯದ ಮೊದಲ ಹಳ್ಳಿಕಾರ್ ಮಠ ಸ್ಥಾಪನೆ ಮಾಡಿರುವುದು ಹೆಮ್ಮೆಯ ಸಂಗತಿ. ಈ ಸಮುದಾಯ ಕಳೆದ ಮೂವತ್ತು ವರ್ಷಗಳಿಂದಲೂ ತಮ್ಮ ಬೆಂಬಲಕ್ಕೆ ನಿಂತಿದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಈಗಾಗಲೇ ತಾವು ಮಠದ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಮುಂಬರುವ ದಿನಗಳಲ್ಲೂ ಮಠದ ಸರ್ವತೋಮುಖ ಅಭಿವೃದ್ದಿಗಾಗಿ 25 ಲಕ್ಷ ರೂಗಳ ಅನುದಾನವನ್ನು ನೀಡುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ ನೀಡಿದರು. ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಮಾತನಾಡಿ, ಒಕ್ಕಲಿಗರು…

Read More

ತುಮಕೂರು: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅಂಗವಿಕಲ ಪ್ರತ್ಯೇಕ ಸಚಿವಾಲಯ, ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದ್ಯತೆ ನೀಡಬೇಕು ಹಾಗೂ 2025- 26ನೇ ಸಾಲಿನ ಬಜೆಟ್‌ನಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಒತ್ತಾಯಿಸಿದೆ. ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೇರ್ಪಡಿಸಬೇಕು, ಅಂಗವಿಕಲರಿಗೆ ಮೀಸಲಿಟ್ಟ ಶೇ.5 ರ ಅನುದಾನ ಸಮರ್ಪಕವಾಗಿ ಬಳಸಬೇಕು, ಅಂಗವಿಕಲರ ಕುಂದುಕೊರತೆ ಸಭೆಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಬೇಕು ಎಂದು ವೇದಿಕೆ ಅಧ್ಯಕ್ಷ ಸಿ.ಗಂಗರಾಜು ಪ್ರಧಾನ ಕಾರ್ಯದರ್ಶಿ ಇನಾಯಿತ್ ಖಾನ್ ಒತ್ತಾಯಿಸಿದ್ದಾರೆ. ಸ್ವಯಂ ಉದ್ಯೋಗ ದೊರಕಿಸುವ ಆಧಾರ್ ಯೋಜನೆಯ ಸಹಾಯಧನವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು, ಮಾಸಾಶನ ಹೆಚ್ಚಳ ಮಾಡಬೇಕು, ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ಸಂಸ್ಥೆ ಪ್ರಾರಂಭಿಸಬೇಕು, ಅಂಗವಿಕಲರು ತಯಾರಿಸಿದ ಉತ್ಪನ್ನ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಅಂಗವಿಕಲರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಅವರು ಸಚಿವರುಗಳಾದ ಡಾ.…

Read More

ತುಮಕೂರು: ನಾವು ಇಂದು ದುರಿತ ಕಾಲದಲ್ಲಿ ಬದುಕುತ್ತಿದ್ದು ಇಡೀ ನಗರಕ್ಕೆ ತಮ್ಮ ಶ್ರಮದಿಂದ ಅಭಿವೃದ್ಧಿ ಶಕ್ತಿ ತುಂಬುತ್ತಿರುವ ಸ್ಲಂ ಜನರನ್ನು ವ್ಯವಸ್ಥೆ ತಾರತಮ್ಯದಿಂದ ನೋಡುತ್ತಿದ್ದು ಜಾತಿಯ ಪ್ರತಿ ರೂಪಗಳಾಗಿ ಕೊಳಚೆ ಪ್ರದೇಶಗಳನ್ನು ಈ ಪ್ರಭುತ್ವ ಉಳಿಸಿಕೊಂಡಿದೆ, ಹಾಗಾಗಿ ಸ್ಲಂ ಜನರ ಶಕ್ತಿ ಚೈತನ್ಯದಿಂದ ನಮ್ಮ ಹಕ್ಕು ಪಡೆಯಲು ಮುಂದಾಗಬೇಕು ದಮನಕ್ಕೆ ಒಳಗಾದವರೇ ಮೇಲೆದ್ದು ನಿಲ್ಲ ಬೇಕಿದೆ ಎಂದು ಸಾಹಿತಿ ದು.ಸರಸ್ವತಿ ಕರೆ ನೀಡಿದ್ದರು ಇಂದು ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾತರರಿಬಾಯಿಪುಲೆ ಮಹಿಳಾ ಸಂಘಟನೆಯಿAದ ನಡೆದ ಸ್ಲಂ ಜನರ ಮೇಲಿನ ಸಾಮಾಜಿಕ ಮತ್ತು ಅಭಿವೃದ್ಧಿ ತಾರತಮ್ಯ ವಿರೋಧಿಸಿ ಪ್ರತಿಭಟನೆಯನ್ನು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಿದೆ ಇದನ್ನೇ ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿ, ರಮಾ,ಫಾತೀಮಾ ಹೇಳಿದ ತತ್ವ ನಾವು ಈ ತತ್ವ ಮುಟ್ಟಬೇಕಾದರೇ ಶಿಕ್ಷಣವನ್ನು ಸ್ಲಂಗಳಲ್ಲಿರುವ ವಂಚಿತ ಸಮುದಾಯಗಳು ಪಡೆಯಲೇ ಬೇಕು. ನಾವು ಗುಲಾಮರಾಗಿದ್ದಕ್ಕೆ ನಮ್ಮ ಮೇಲೆ ಧೌರ್ಜನ್ಯವನ್ನು ಮಾಡುತ್ತಿದ್ದಾರೆ.…

Read More

ತುಮಕೂರು: ಇತಿಹಾಸ ಪ್ರಸಿದ್ದ ಹೆತ್ತೇನಹಳ್ಳಿಯ ಶ್ರೀ ಮಾರಮ್ಮ ಆಧಿಶಕ್ತಿ ದೇವಿಯ ಜಾತ್ರಾ ಮಹೋತ್ಸವ ರಾತ್ರಿಯಿಂದ ಆರಂಭವಾಗಿದ್ದು, ಶ್ರೀ ಅಮ್ಮನವರ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಇಂದು ಮುಂಜಾನೆ ಅತ್ಯಂತ ವಿಜೃಂಭಣೆಯಿAದ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಮುಂಜಾನೆ ನಡೆದ ಹೆತ್ತೇನಹಳ್ಳಿಯಮ್ಮನ ರಥೋತ್ಸವಕ್ಕೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸಾಕ್ಷಿಯಾಯಿತು. ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಹೆತ್ತೇನಹಳ್ಳಿ, ಕೈದಾಳ, ಗೂಳೂರು, ಕಂಭತ್ತನಹಳ್ಳಿ, ರಂಗಯ್ಯನಪಾಳ್ಯ, ಚಿಕ್ಕಸಾರಂಗಿ, ನರುಗನಹಳ್ಳಿ, ಮಾಯಣ್ಣಗೌಡನ ಪಾಳ್ಯ ಸೇರಿದಂತೆ ಈ ಭಾಗದ ಹಳ್ಳಿಗಳಲ್ಲಿ ಹೆತ್ತೇನಹಳ್ಳಿಯಮ್ಮನ ಜಾತ್ರೆಗೆ ವಿಶೇಷವಾಗಿಯೇ ಭಕ್ತ ಸಮೂಹ ಸಜ್ಜಾಗುತ್ತಾರೆ. ಅದರಂತೆ ಸೋಮವಾರ ಇಡೀ ದಿನ ಭಕ್ತರು ಉಪವಾಸ ವ್ರತ ಮಾಡಿ ಮುಂಜಾನೆ ಅಗ್ನಿಕೊಂಡ ಹಾಯ್ದು ಅಮ್ಮನವರಿಗೆ ಹರಕೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಇನ್ನು ಈ ಭಾಗದ ಹೆಣ್ಣು ಮಕ್ಕಳು ಅಮ್ಮನವರಿಗೆ ಬಾಯಿ ಬೀಗದ ಹರಕೆ ತೀರಿಸುವ ಸಂಪ್ರದಾಯ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ಹದಿ ಹರೆಯದ ಹೆಣ್ಣು ಮಕ್ಕಳು, ಮಹಿಳೆಯರು ಸಹ ಉಪವಾಸ ವ್ರತ ಮಾಡಿ ರಾತ್ರಿ…

Read More

ತುಮಕೂರು: ನಾಡಿನ ಜನರ ಅಭಿಮಾನ ಸಂಪಾದಿಸಿರುವ ಡಾ.ರಾಜಕುಮಾರ್ ಅವರ ಕುಟುಂಬ ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ರೇಷ್ಠ ಕಾರ್ಯ. ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಸಮಾಜ ಸೇವೆ ಮುಂದುವರೆದಿರುವುದು ಶ್ಲಾಘನೀಯ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ನಗರದ ಸಿದ್ಧಗಂಗಾ ಮಠದಲ್ಲಿ ಡಾ. ಪುನೀತ್ ರಾಜಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಮಠದ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರಿಗೆ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಮಠದಲ್ಲಿರುವ ಎಲ್ಲ ಮಕ್ಕಳಿಗೂ ಕಣ್ಣಿನ ತಪಾಸಣೆ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಕನ್ನಡಕ ಕೊಡಿಸುವ ಕೆಲಸವನ್ನು ಪ್ರತಿ ವರ್ಷ ಪುನೀತ್ ರಾಜ್‌ಕುಮಾರ್ ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆ ಎಂದರು. ಶ್ರೀಮಠದಲ್ಲಿ ಈಗಾಗಲೇ ಡಾ.ರಾಜ್ ಕುಮಾರ್ ಚಾರಿಟಬಲ್ ಟ್ರಸ್ಟ್ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಇದರೊಂದಿಗೆ ಈಗ ಡಾ. ಪುನೀತ್‌ರಾಜ್ ಕುಮಾರ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ ಎಂದ ಅವರು, ಶಂಕರ್ ಕಣ್ಣಿನ ಆಸ್ಪತ್ರೆ, ಟೈಟಾನ್…

Read More

ತುಮಕೂರು: ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಮಟ್ಟದಲ್ಲಿ ಅನೇಕ ಚರ್ಚೆ, ಬೆಳವಣಿಗೆಗಳು ನಡೆಯುತ್ತಿದ್ದು ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 25,000 ಸೈಬರ್ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಶೇ.20 ರಷ್ಟು ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ ಎಂದು ಗೃಹ ಸಚಿವರು ಹಾಗೂ ಸಾಹೇ ವಿವಿ ಕುಲಾಧಿಪತಿಗಳು ಆದ ಸವ್ಯಸಾಚಿ ಡಾ. ಜಿ ಪರಮೇಶ್ವರ್ ಅವರು ಹೇಳಿದರು. ನಗರದ ಕುಣಿಗಲ್‌ರಸ್ತೆಯ ಎಸ್‌ಎಸ್‌ಐಟಿ ಕ್ಯಾಂಪಸ್ ಆವರಣದಲ್ಲಿ ನೂತನವಾಗಿ ಆರಂಭಿಸಲಾದ ಪರಂ ಶುದ್ಧ ಕುಡಿಯುವ ನೀರಿನ ಘಟಕವನ್ನು ಭಾನುವಾರ)ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈ ಹಿಂದೆ ಗೃಹ ಸಚಿವನಾಗಿದ್ದ ಕಾಲಘಟ್ಟದಲ್ಲಿ ಇದರ ಸ್ಥಾಪನೆಗೆ ಸರ್ಕಾರ ಮಟ್ಟದಲ್ಲಿಚಿಂತನೆ ನಡೆಸಲಾಗಿತ್ತು. ಈಗ ಪೊಲೀಸ್ ಇಲಾಖೆ ಸೇರಿದಂತೆ ಸಿದ್ಧಾರ್ಥ ಇಂಜಿನಿಯರಿAಗ್ ಕಾಲೇಜಿನ ಸಹಯೋಗದಲ್ಲಿ ಸೈಬರ್ ಸೆಕ್ಯೂರಿಟಿ ವಿಭಾಗದ ಜೊತೆಗೆ ಸೇರಿ ಸೆಂಟರ್ ಆಫ್‌ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ ಸೆಂಟರ್ ಸದ್ಯವೇ ಆರಂಭಿಸಲಾಗುವುದು ಎಂದರು. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ: ಸ್ಥಳೀಯವಾಗಿ ಶುದ್ಧವಾದ ನೀರನ್ನು ಒದಗಿಸುವ ಸಲುವಾಗಿ…

Read More

ತುಮಕೂರು: ಭÀ್ರಷ್ಟಾಚಾರ ರಹಿತ, ನೈತಿಕ ರಾಜಕಾರಣವನ್ನು ನಂಬಿಕೊAಡಿರುವ ಜೆಡಿ(ಯು), ಮುಂಬರುವ 2026ರಲ್ಲಿ ನಡೆಲಿರುವ ಆಗ್ನೇಯ ಪದÀವಿಧರ ಶಿಕ್ಷಕರ ಕ್ಷೇತ್ರದ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಕೆ.ನಾಗರಾಜ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಮೊದಲು ನಾವು ಅಭ್ಯರ್ಥಿಯನ್ನು ಘೋಷಣೆ ಮಾಡಿರುವ ಉದ್ದೇಶ, ಪ್ರತಿ ಮತದಾರರನ್ನು ಅಭ್ಯರ್ಥಿ ಭೇಟಿಯಾಗಿ, ಮತಯಾಚಿಸಲಿ, ಹಣ, ಹೆಂಡ, ಇನ್ನಿತರ ಅಮಿಷಗಳ ಹೊರತಾಗಿಯೂ ಜನರು ವ್ಯಕ್ತಿ ನೋಡಿ ಮತ ಹಾಕುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ಅಗಿದೆ ಎಂದರು. ನಮ್ಮ ತಂದೆಯವರಾದ ಜೆ.ಹೆಚ್.ಪಟೇಲ್,ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರು ರಾಜಕಾರಣವೆಂದರೆ ಕೇವಲ ಅಧಿಕಾರ ಎಂದು ಭಾವಿಸಿರಲಿಲ್ಲ.ಕೃಷಿ,ಪರಿಸರ,ಶಿಕ್ಷಣ,ಆಡಳಿತ,ಆರೋಗ್ಯ ಇವುಗಳೆಲ್ಲಾ ಉತ್ತಮವಾಗಿರಬೇಕು ಎಂದು ಬಯಸಿದ್ದರು. ಹಾಗಾಗಿಯೇ ಅವರ ಆಡಳಿತ ಕಾಲದಲ್ಲಿ ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಅದ್ಯತೆ ನೀಡಲಾಗಿತ್ತು.ಆದರೆ ಇಂದಿನ ರಾಜಕಾರಣ ಬದಲಾಗಿದೆ.ರಾಜಕಾರಣವೆಂದರೆ ಹಣ ಹೂಡಿ, ಹಣ ಮಾಡುವುದು ಎಂಬAತಾಗಿದೆ.ಈ ಸ್ಥಿತಿ ಬದಲಾಗಬೇಕು ಎಂಬುದು ಜೆಡಿಯು ಕರ್ನಾಟಕದ ಆಶಯವಾಗಿದೆ ಎಂದು…

Read More