ಕೊರಟಗೆರೆ: ಗುಡುಗು-ಮಿಂಚಿನ ನಡುವೆ ಬಿರುಗಾಳಿಯ ಮಳೆ ಬೀಳು ತ್ತಿರುವ ನಡುವೆಯೇ ಸೋಮವಾರ ಮಧ್ಯರಾತ್ರಿ ಕಳ್ಳರ ತಂಡ ಬೈರೇನಹಳ್ಳಿ ಮಧ್ಯದ ಅಂಗಡಿಯ ಬೀಗ ಮುರಿದು ಸುಮಾರು 2ಲಕ್ಷ 32ಸಾವಿರ ಮೌಲ್ಯದ 498 ಲೀಟರ್ ಮಧ್ಯ ಕಳ್ಳತನ ಮಾಡಿರುವ ಘಟನೆ ನಡೆದಿದೆ. ತುಮಕೂರು ನಗರ ವಾಸಿಯಾದ ಸೀನಪ್ಪ ಮಾಲೀಕತ್ವದ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿಯ ಸಪ್ತಗಿರಿ ವೈನ್ಸ್‍ನಲ್ಲಿ ಕಳೆದ ವರ್ಷ ನಡೆದಿದ್ದ ಕಳ್ಳತನ ಮಾಸುವ ಮುನ್ನವೇ ಈಗ ಅದೇ ವೈನ್ಸ್‍ನಲ್ಲಿ ಮತ್ತೊಂದು ಸಲ ಕಳ್ಳತನ ನಡೆದು ಸಿಸಿಟಿವಿ ಸಮೇತ ಪರಾರಿ ಆಗಿದ್ದಾರೆ. ಬೈರೇನಹಳ್ಳಿ ಗ್ರಾಮದ ಹೊರವಲಯದ ಸಪ್ತಗಿರಿ ವೈನ್ಸ್‍ನ ಮಾಲೀಕ ಮತ್ತು ವ್ಯವಸ್ಥಾಪಕನ ದಿವ್ಯನಿರ್ಲಕ್ಷ್ಯದಿಂದ ಕಳ್ಳತನ ನಡೆದಿದೆ. ಮೊದಲ ಸಲ ಕಳ್ಳತನ ನಡೆದಾಗ ಪೊಲೀಸ್ ಇಲಾಖೆ ಸಿಸಿಟಿವಿ ಮತ್ತು ಭದ್ರತೆಗಾಗಿ ಸೆಕ್ಯುರಿಟಿ ನೇಮಿಸುವಂತೆ ಸೂಚನೆ ನೀಡಿದ್ದಾರೆ. ವೈನ್ಸ್ ಮಾಲೀಕ ನಿರ್ಲಕ್ಷ್ಯ ಮಾಡಿರುವ ಪರಿಣಾಮ ಕಳ್ಳರ ತಂಡ…
Author: News Desk Benkiyabale
ತುಮಕೂರು : ಜಿಲ್ಲೆಯಲ್ಲಿ ಇಂದು 51 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 864 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 23, ಪಾವಗಡ-05, ಗುಬ್ಬಿ-03, ಕುಣಿಗಲ್-07, ಮಧುಗಿರಿ-02, ಶಿರಾ-04, ತಿಪಟೂರು-03, ತುರುವೇಕೆರೆ-01, ಚಿಕ್ಕನಾಯಕನಹಳ್ಳಿ-03 ಮಂದಿ ತಾಲೂಕಿನಲ್ಲಿ ಒಟ್ಟು 51 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 48 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 485 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 349 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 30 ಸಾವನ್ನಪ್ಪಿದ್ದು, ಬುಧವಾರ-02 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ: ಸೀಲ್‍ಡೌನ್ ಪ್ರದೇಶದಲ್ಲಿನ ನಿವಾಸಿಗಳಿಗೆ ಜೀವನೋಪಾಯದ ಅಗತ್ಯವಸ್ತು ಪೂರೈಸದೆ ನಿಲ್ರ್ಯಕ್ಷಿಸಲಾಗುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ 10ನೇವಾರ್ಡ್‍ನ ಬ್ರಾಹ್ಮಣರಬೀದಿಯ ಪೂರ್ವದಿಕ್ಕಿನ ರಸ್ತೆಯನ್ನು ಕಳೆದೆರಡುದಿನದ ಹಿಂದೆ ಕೊರೊನಾ ಸೋಂಕು ಪತ್ತೆಯಾದ ಕಾರಣಕ್ಕೆ ಸೀಲ್‍ಡೌನ್ ಮಾಡಲಾಗಿತ್ತು. ಆದರೆ ಸೀಲ್‍ಡೌನ್ ಆದ ನಂತರ ಅಲ್ಲಿರುವ ನಿವಾಸಿಗಳಿಗೆ ಜೀವನೋಪಾಯದ ಅಗತ್ಯವಸ್ತುಗಳನ್ನು ಸರಬರಾಜು ಮಾಡುವಲ್ಲಿ ಸ್ಥಳೀಯ ಪುರಸಭೆ ನಿಲ್ರ್ಯಕ್ಷವಹಿಸಿದ ಕಾರಣ ಕೆಲವರು ಸೀಲ್‍ಡೌನ್ ಪ್ರದೇಶದಿಂದ ಹೊರಕ್ಕೆ ತೆರಳಿ ತಮಗೆಬೇಕಾದ ದಿನಸಿ, ತರಕಾರಿ, ಔಷಧಿ, ಹಾಲು ಇತ್ಯಾದಿಗಳನ್ನು ತರಲಾರಂಭಿಸಿದರು. ಈ ಓಡಾಟವನ್ನು ಗಮನಿಸಿದ ಕೆಲವರಿಂದ ದೂರುಹೋದ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಹಾಜರಾಗಿ ಸೀಲ್ಡೌನ್ ಪ್ರದೇಶದಲ್ಲಿರುವ ಜನರನ್ನುದ್ದೇಶಿಸಿ ಮಾತನಾಡಿ ನೀವು ಯಾವುದೇ ಕಾರಣಕ್ಕೆ ಹೊರಗೆಹೋಗುವ ಹಾಗಿಲ್ಲ, ನಿಮಗೇ ಏನಾದರೂ ಬೇಕಿದ್ದರೆ ಕಾವಲಿರುವ ಸಿಬ್ಬಂದಿಗಳಿಂದ ವಸ್ತುಗಳನ್ನು ತರಿಸಿಕೊಳ್ಳಬಹುದೆಂದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯರು ಇಲ್ಲಿ ಒಬ್ಬರೇ ಸಿಬ್ಬಂದಿ ಇದ್ದಾರೆ, ಅವರೂಸಹ ಸರಿಯಾಗಿ ಇರುವುದಿಲ್ಲ, ಇಲ್ಲಿ…
ತುಮಕೂರು: ತುಮಕೂರು ತಾಲ್ಲೂಕು ಪಂಚಾಯಿತಿ ಕೊನೆಯ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕವಿತಾ ರಮೇಶ್ ಅವರು, ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಪ್ರಭಾರ ಅಧ್ಯಕ್ಷ ಶಾಂತಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು. ತಾಪಂ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕವಿತಾ ರಮೇಶ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ತಾಲ್ಲೂಕು ಪಂಚಾಯಿತಿ ಎಲ್ಲಾ ಸದಸ್ಯರ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ಹರಿಸುವೆ ಎಂದು ತಿಳಿಸಿದರು. ಕುಡಿಯುವ ನೀರಿಗೆ ಆಧ್ಯತೆ: ತಾಲ್ಲೂಕು ಪಂಚಾಯಿತಿ ಕೊನೆಯ ಅವಧಿ 1 ವರ್ಷವಿದ್ದು, ಈ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ, ತಾಲ್ಲೂಕಿನಲ್ಲಿ ಉದ್ಬವಿಸಿರುವ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು, ಜೊತೆಗೆ ವಿವಿಧ ಅಭಿವೃದ್ದಿ ಕಾರ್ಯಗಳ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುವುದಾಗಿ ಹೇಳಿದರು. ಭ್ರಷ್ಟಾಚಾರ ನಿರ್ಮೂಲನೆ: ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದಿಂದ…
ಮಧುಗಿರಿ: ಕರೋನದ ವೈರಸ್ ಹರಡದಂತೆ ಸರ್ಕಾರ ಲಾಕ್ ಡೌನ್, ಸೀಲ್ ಡೌನ್ ಮತ್ತಿತರರ ಕ್ರಮ ಕೈಗೊಳ್ಳುತ್ತಿದ್ದರೂ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ನಿಯಂತ್ರಿಸುವ ಅಂದರೆ ಚೈನ್ ಬ್ರೇಕ್ ಮಾಡಲು ನಾನಾ ಪ್ರಯತ್ನಗಳು ನಡೆಯುತ್ತಲೇ ಇದೆ. ಮಧುಗಿರಿ ಪಟ್ಟಣದ ವಿಆರ್ ಎಸ್ ಟಿ ರಸ್ತೆಯಲ್ಲಿನ ಅಮೃತ ಟ್ರೇಡರ್ಸ್ ನ ಪಶು ಆಹಾರ ಮಳಿಗೆಯವರು ಮಾತ್ರ ಮಾರ್ಚ್ ಇಪ್ಪತ್ತನಾಲ್ಕು ರಿಂದ ಇಲ್ಲಿಯವರೆಗೂ ಸಾಮಾಜಿಕ ಅಂತರ ,ಮಾಸ್ಕ್ ಧರಿಸಿದವರಿಗೆ ಮಾತ್ರ ಪಶು ಆಹಾರದ ವಸ್ತುಗಳನ್ನು ನೀಡುತ್ತಿರುವುದು ಕಾಣಬಹುದು.ಇವರ ವ್ಯಾಪಾರ ಶೈಲಿ ವ್ಯಾಪಾರಸ್ಥರಿಗೆ ಮಾದರಿಯಾಗಿದೆ. ಕೊರೋನಾದಿಂದ ದೂರ ಉಳಿಯಲು ಇವರು ಅಂಗಡಿ ಸುತ್ತಲೂ ಸೀಲ್ಡ್ ಮಾದರಿಯಲ್ಲಿ ಅಡ್ಡ ಪಟ್ಟಿಗಳನ್ನು ಕಟ್ಟಿಕೊಂಡು ರೈತರೇ ಗ್ರಾಹಕರಾಗಿರುವುದರಿಂದ ರೈತರ ಕ್ಷೇಮಕ್ಕಾಗಿ ಸ್ಯಾನಿಟೈಸರ್ ಮಾಡಿ ನಂತರ ವ್ಯಾಪಾರ ಮಾಡುತ್ತಾರೆ. ಇವರಲ್ಲಿ ನಾಲ್ವರು ಕೆಲಸ ಮಾಡುತ್ತಿದ್ದು, ಅವರ ಆರೋಗ್ಯದ ದೃಷ್ಟಿಯನ್ನು ಕೇಂದ್ರೀಕರಿಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ನಗದು ರೂಪದಲ್ಲಿ ಹಣ ಪಡೆಯಲು ಪ್ರತ್ಯೇಕವಾಗಿ ಮಹಿಳೆಯೊಬ್ಬರನ್ನು…
ತುಮಕೂರು: ಜಿಲ್ಲೆಯಲ್ಲಿ ಇಂದು 37 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 813 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 20, ಪಾವಗಡ-03, ಗುಬ್ಬಿ-3, ಕುಣಿಗಲ್-02 ಮಧುಗಿರಿ-1, ಶಿರಾ-06, ತಿಪಟೂರು-02 ಮಂದಿ ತಾಲೂಕಿನಲ್ಲಿ ಒಟ್ಟು 78 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 25 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 436 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 349 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 28 ಸಾವನ್ನಪ್ಪಿದ್ದು, ಮಂಗಳವಾರ-02 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು: ತುಮಕೂರು ಗ್ರಾಮಾಂತರ ಹಾಲಿ ಜೆಡಿಎಸ್‍ನ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಜುಲೈ 18,2020 ರಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಕಲಿ ವಿಮಾ ಪಾಲಿಸಿಗಳನ್ನ ಸ್ವತಃ ತಯಾರು ಮಾಡಿ ಆ ಕ್ಷೇತ್ರದ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ವಿತರಿಸಿರುವ ಆರೋಪ ಕುರಿತು ಮೊಕದ್ದಮೆ ದಾಖಲು ಮಾಡಲಾಗಿದೆ. 2018 ರ ಚುನಾವಣೆಯ ಸಂದರ್ಭದಲ್ಲಿ ಕರ್ತವ್ಯ ನಿರತ ಚುನಾವಣಾ ಅಧಿಕಾರಿಗಳು ನಕಲಿ ಬಾಂಡ್ ಹಂಚಿಕೆ ಮಾಡುತ್ತಿದ್ದ ಜೆಡಿಎಸ್‍ನ ಮುಖಂಡೆ ಗೌರಮ್ಮ ಎನ್ನುವವರಿಂದ ಬಾಂಡ್‍ಗಳನ್ನು ವಶಪಡಿಸಿಕೊಂಡು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಆ ಸಮಯದಲ್ಲಿಯೇ ದೂರು ದಾಖಲು ಮಾಡಲಾಗಿತ್ತು. ನಂತರ ತನಿಖೆಯ ಹಂತದಲ್ಲಿರುವಾಗ ಉಚ್ಛಾ ನ್ಯಾಯಾಲಯದಲ್ಲಿ ತನಿಖೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪ್ರಥಮ ವರ್ತಮಾನ ವರದಿಯನ್ನ ರದ್ದುಗೊಳಿಸುವಂತೆ ಆರೋಪಿತರ ಪರವಾಗಿ ಉಚ್ಛಾನ್ಯಾಯಾಲಯದಲ್ಲಿ ಮನವಿ ಮಾಡಿ ಮಾನ್ಯ ಉಚ್ಛಾನ್ಯಾಯಾಲ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತ್ತು. ನಂತರ 2018ರ ಚುನಾಣೆಯಲ್ಲಿ ನಕಲಿ…
ಕೊರಟಗೆರೆ: ಕರುನಾಡಿನ ಮುಖ್ಯಮಂತ್ರಿ ಕ್ವಾರೈಂಟೆನ್‍ಗೆ ಹೋಗಿದ್ದಾರೆ. ಆರೋಗ್ಯ ಸಚಿವರು ದೇವರೇ ಗತಿ ಅಂತಾ ಹೇಳ್ತಿದ್ದಾರೇ.. ಕೊರೊನಾ ವಿಚಾರವಾಗಿ ಒಬ್ಬೊಬ್ಬ ಸಚಿವ ಒಂದೊಂದು ರೀತಿಯ ವಿಭಿನ್ನ ಹೇಳಿಕೆ ನೀಡ್ತಿದ್ದಾರೇ.. ಕರ್ನಾಟಕದ ಜನರ ಆರೋಗ್ಯ ಪರಿಸ್ಥಿತಿ ಅರಿಯಲು ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಡಾ.ಜಿ.ಪರಮೇಶ್ವರ್ ಆರೋಪ ಮಾಡಿದರು. ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯ ಸಭಾಂಗಣದಲ್ಲಿ ಇತ್ತೀಚಿಗೆ ಏರ್ಪಡಿಸಲಾಗಿದ್ದ ಕೊರೊನಾ ಹರಡುವಿಕೆ ತಡೆಯುವ ತುರ್ತುಸಭೆಯಲ್ಲಿ ಅಧಿಕಾರಿಗಳ ಚರ್ಚಿಸಿ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಕೊರೊನಾ ಹರಡುವಿಕೆ ತಡೆಯಲು ಕರ್ನಾಟಕ ಸರಕಾರದ ಸಮರ್ಪಕ ಮಾರ್ಗದರ್ಶನ ಇಲ್ಲದೇ ತುಮಕೂರು ಜಿಲ್ಲಾಡಳಿತ ಮತ್ತು ಕೊರಟಗೆರೆ ಕೊರೊನಾ ಆಡಳಿತ ಯಂತ್ರ ನಿಷ್ಕ್ರೀಯವಾಗಿದೆ. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸಚಿವರ ವಿಭಿನ್ನ ರೀತಿಯ ಹೇಳಿಕೆಯಿಂದ ಕೊರೊನಾ ಸಿಲ್‍ಡೌನ್, ಲಾಕ್‍ಡೌನ್ ಮತ್ತು ಕ್ವಾರೈಂಟೆನ್‍ಗೆ ಬೆಲೆಯೇ ಇಲ್ಲದಾಗಿದೆ ಎಂದು ಆರೋಪ ಮಾಡಿದರು. ತುಮಕೂರು ಜಿಲ್ಲಾಡಳಿತ ಕೊರೊನಾ…
ತುಮಕೂರು: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹೆದರುತ್ತಿರುವ ಇಂದಿನ ದಿನಗಳಲ್ಲಿ ಶ್ರೇಯಸ್ ಎನರ್ಜಿ ಅಂಡ್ ಟೆಕ್ನಾಲಜಿಸ್ ಪ್ರವೈಟ್ ಲಿ ಕಂಪನಿಯವರು ಅಭಿವೃದ್ದಿ ಪಡಿಸಿರುವ ಸ್ಥಳಾಂತರಿಸಬಹುದಾದ ಐಸಿಯು ಜೊತೆಗಿನ ಐಸೋಲೇಷನ್ ವಾರ್ಡು ಅತ್ಯಂತ ಉಪಯುಕ್ತವಾಗಲಿದ್ದು, ಇದು ರೋಗಿಗಳ ಚಿಕಿತ್ಸೆಗೆ ಬಳಕೆಗೆ ಬರುವಂತಾ ಗಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ. ಸಿದ್ದಗಂಗಾ ಕ್ಷೇತ್ರದಲ್ಲಿ ಶ್ರೇಯಸ್ ಎನರ್ಜಿ ಅಂಡ್ ಟೆಕ್ನಾಲಜಿಸ್ ಪ್ರವೈಟ್ ಲಿ ಕಂಪನಿಯವರಾದ ಮಂಜುನಾಥ್ ಮತ್ತು ಶ್ರೇಯಸ್ ಅವರು ಅಭಿವೃದ್ಧಿಪಡಿಸಿರುವ ಪೋರ್ಟಬಲ್ ಐಸೋಲೇಷನ್ ಕಂ ಐಸಿಯು ವಾರ್ಡು ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಂಪನಿಯವರು ಹೇಳುವಂತೆ ಅತ್ಯಂತ ಅಧುನಿಕ ತಂತ್ರಜ್ಞಾನವನ್ನು ಬಳಸಿ, ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳನ್ನು ವೈದ್ಯರು ತಮಗೆ ಯಾವುದೇ ಸೋಂಕು ಹರಡದ ರೀತಿ ಚಿಕಿತ್ಸೆ ಮಾಡಬಹುದಾಗಿದೆ. ಈಗಾಗಲೇ ಸರಕಾರದ ಕೋವಿಡ್ ಟಾಸ್ಕಪೋರ್ಸ್‍ನಿಂದ, ಆರೋಗ್ಯ ಮಂತ್ರಿಗಳಿಂದ ತಾಂತ್ರಿಕವಾಗಿ ಶಿಫಾರಸ್ಸಾಗಿರುವ ಈ ಯೋಜನೆಯನ್ನು ಸರಕಾರ ಅಳವಡಿಸಿಕೊಂಡು…
ತುಮಕೂರು: ಜಿಲ್ಲೆಯಲ್ಲಿ ಇಂದು 78 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 777 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 17, ಪಾವಗಡ-10 ಕುಣಿಗಲ್-24 ಮಧುಗಿರಿ-10, ಕೊರಗಟಗೆರೆ-08, ತುರುವೇಕೆರೆ-1, ಶಿರಾ-06, ತಿಪಟೂರು-02 ಮಂದಿ ತಾಲೂಕಿನಲ್ಲಿ ಒಟ್ಟು 78 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 53 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 411 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 341 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 26 ಸಾವನ್ನಪ್ಪಿದ್ದು, ಸೋಮುವಾರ-03 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.











