Author: News Desk Benkiyabale

ಗುಬ್ಬಿ:       ಕೊರೊನಾ ತಡೆಗೆ ಸರ್ಕಾರವೇ ತಲೆ ಕೆಡಿಸಿಕೊಂಡು ಸರ್ಕಸ್ ಮಾಡುತ್ತಿದ್ದರೆ ಇತ್ತ ಜಿಲ್ಲಾ ಪಂಚಾಯತ್ ಉನ್ನತ ಅಧಿಕಾರಿಗಳು ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆಗೆ ತಕ್ಕನಾಗಿ ಕೊರೋನಾ ಸೋಂಕಿನ ಅಧಿಕಾರಿಯ ಸಂಪರ್ಕಿತ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ತಮ್ಮ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ.        ಇತ್ತೀಚೆಗೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಜಿಪಂ ಯೋಜನಾ ನಿರ್ದೇಶಕ ಮಹಮದ್ ಮುಬೀನ್ ಮತ್ತು ಸಹಾಯಕ ಯೋಜನಾ ನಿರ್ದೇಶಕ ಈಶ್ವರ್ ಪ್ರಸಾದ್ ತಮ್ಮ ಕರ್ತವ್ಯ ನಿಷ್ಠೆ ತೋರಲು ಮುಂದಾಗಿ ತಾವು ಹೋಂ ಕ್ವಾರೆಂಟೈನ್‍ನಲ್ಲಿರಬೇಕಿರುವ ಬಗ್ಗೆ ಮರೆತಿದ್ದಾರಾ ಅಥವಾ ನಮ್ಮನ್ನು ಯಾರು ಕೇಳುತ್ತಾರೆ ಎಂಬ ಬೇಜವಾಬ್ದಾರಿತನವಾ ಎಂಬುದು ಸಭೆಯಲ್ಲಿನ ಅಧಿಕಾರಿಗಳ ಮಧ್ಯೆ ಗುಸುಗುಸು ಚರ್ಚೆ ನಡೆದಿದೆ.       ತುಮಕೂರು ಜಿಲ್ಲಾ ಪಂಚಾಯಿತಿ ಡಿಎಸ್-1 ಅಧಿಕಾರಿಯೊಬ್ಬರಿಗೆ ಕೊರೋನಾ ಪಾಸಿಟೀವ್ ದೃಢವಾದ ಹಿನ್ನಲೆ…

Read More

ತುಮಕೂರು:       ನಗರದಲ್ಲಿ ದಿನೇ ದಿನೇ ಕೊರೋನ ವೈರಸ್ ಸೋಂಕು ಹೆಚ್ಚುತ್ತಿರುವುದರಿಂದ ವಿತರಕರು ಹಾಗೂ ಸಿಬ್ಬಂದಿ ಹಿತದೃಷ್ಠಿಯಿಂದ ನಗರದಲ್ಲಿ ಒಂದು ವಾರಗಳ ಕಾಲ ಸ್ವಯಂ ಪ್ರೇರಿತ ಲಾಕ್‍ಡೌನ್ ಮಾಡಲು ನಿರ್ಧರಿಸಿ ತುಮಕೂರು ತಹಶೀಲ್ದಾರ್ ಮೋಹನ್‍ಕುಮಾರ್ ಅವರ ಮೂಲಕ ತುಮಕೂರು ವಿತರಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.         ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ವಿತರಕರ ಸಂಘದ ಅಧ್ಯಕ್ಷ ನವೀನ್‍ಕುಮಾರ್, ಕೊರೋನ ವೈರಸ್ ನಮ್ಮ ದೇಶದಲ್ಲೇ ಅಲ್ಲ, ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಕಳೆದ ಮಾರ್ಚ್ 24 ರಿಂದ ಮೂರು ತಿಂಗಳ ಕಾಲ ಕರ್ನಾಟಕ ರಾಜ್ಯಾದ್ಯಂತ ಲಾಕ್ ಡೌನ್ ಮಾಡಿದ್ದರೂ ಸಹ ಸೋಂಕು ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಕೊರೋನ ವೈರಸ್ ನಿಂದ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ ಈ ನಿಟ್ಟಿನಲ್ಲಿ ನಮ್ಮ ವಿತರಕರು ಮತ್ತು ಸಿಬ್ಬಂದಿ ವರ್ಗದ ಹಿತದೃಷ್ಠಿಯಿಂದ ಜು.19ರಿಂದ ಜು.26ರವರೆಗೆ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು.  …

Read More

ಚಿಕ್ಕನಾಯಕನಹಳ್ಳಿ :        ಚಿಕ್ಕನಾಯಕನಹಳ್ಳಿ ಠಾಣೆಯ 55 ವರ್ಷದ ಎಎಸ್‍ಐಗೆ ಸೋಂಕು ಕಾಣಿಸಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.        ಪಟ್ಟಣದ ಬೇಕರಿ ಮಾಲೀಕ, ಬ್ರಾಹ್ಮಣರ ಬೀದಿ ನಿವಾಸಿ 30 ವರ್ಷದ ವ್ಯಕ್ತಿ, ಪಟ್ಟಣದ 28ವರ್ಷದ ಯುವಕ, ಕಾಡೇನಹಳ್ಳಿಯ 38 ವರ್ಷದ ಮಹಿಳೆ, ಅರಸೀಕೆರೆ ಗಾರ್ಮೆಂಟ್ಸ್‍ಗೆ ಕೆಲಸಕ್ಕೆ ಹೋಗುತ್ತಿದ್ದ 22 ವರ್ಷದ ಹಂದನಕೆರೆ ಯುವತಿಗೂ ಸೋಂಕು ತಗುಲಿದೆ. ಅಂತ್ಯಸಂಸ್ಕಾರಕ್ಕೆ ಜಾಗ ಗುರುತಿಸಿ: ಈಗಾಗಲೇ ರಾಜ್ಯಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೋವಿಡ್-19 ತಡೆಗಟ್ಟುವ ಹಾಗೂ ಇದರಿಂದಾಗುವ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಹೊಣೆ ನೀಡಿದೆ. ನಗರ ಸೇರಿ ತುಮಕೂರು ತಾಲೂಕಿನಲ್ಲಿ ಮೃತಪಡುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನರದಲ್ಲಿ ಎಲ್ಲ ಧರ್ಮಿಯರು ವಾಸವಿದ್ದು ಹತ್ತಿರವಾದ ಸೂಕ್ತ ಸ್ಥಳ ಗುರುತಿಸಿ ಸೋಂಕಿತ ಮೃತರ ಅಂತಿಮ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಡಾ.ಕೆ.ರಫೀಕ್ ಅಹ್ಮದ್ ಮನವಿ ಮಾಡಿದ್ದಾರೆ.

Read More

ತುಮಕೂರು:       ಜಿಲ್ಲೆಯಲ್ಲಿ 23 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 653ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.      ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 16, ಚಿಕ್ಕನಾಯಕನಹಳ್ಳಿ-1, ಕೊರಟಗೆರೆ-2 ಕುಣಿಗಲ್-3 ಮಂದಿ ಗುಬ್ಬಿ-1 ಒಟ್ಟು 23 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಜಿಲ್ಲಾಸ್ಪತ್ರೆಯಿಂದ 20 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 287 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 346 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 20 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ಚಿಕ್ಕನಾಯಕನಹಳ್ಳಿ:       ತಾಲ್ಲೂಕಿನ ಮೂಲದ ವೃದ್ಧನೊಬ್ಬ ಬೆಂಗಳೂರಿನಿಂದ ಸ್ವಂತ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದು, ನಂತರ ಗ್ರಾಮಕ್ಕೆ ಪ್ರವೇಶನೀಡದ ಕಾರಣ ಬೆಂಗಳೂರಿಗೆ ಹಿಂತಿರುಗುವ ಸಂದರ್ಭದಲ್ಲಿ ಮರಣಹೊಂದಿದ್ದಾನೆ ಎಂಬ ಸುದ್ದಿಯಿಂದ ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ.        ತಾಲ್ಲೂಕಿನ ಕುಪ್ಪೂರು ಪಂಚಾಯಿತಿಯ ದಿಬ್ಬದಹಳ್ಳಿಯ ಮೂಲದ ರಾಜಣ್ಣ(65) ಎಂಬುವರು ಬೆಂಗಳೂರಿನಲ್ಲಿ ತಮ್ಮ ಮಕ್ಕಳ ಮನೆಯಲ್ಲಿದ್ದರು. ಈಚೆಗೆ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾದ ಕಾರಣಕ್ಕೆ ಊರಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಕೆಲವು ಸಮಯ ಇರಲು ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಬುಧವಾರ ಬೆಂಗಳೂರಿನಿಂದ ಚಿ.ನಾ. ಹಳ್ಳಿಗೆ ಬಂದು, ಇಲ್ಲಿಂದ ದಿಬ್ಬದಹಳ್ಳಿಗೆ ತೆರಳಲು ವಾಹನವಿರದ ಕಾರಣ ನಡೆದುಕೊಂಡೆ ಪಯಣಬೆಳೆಸಿದರು. ಆದರೆ ಊರಿನ ಸಮೀಪದ ಕುರುಬಳ್ಳಿಗೆ ಬಂದಾಗ ವಿಷಯತಿಳಿದ ಈತನ ನೆಂಟರು ಇವರನ್ನು ತಮ್ಮ ಮನೆಗೆ ಬರುವುದಕ್ಕೆ ಅಸಮ್ಮತಿ ವ್ಯಕ್ತವಾದ ಹಿನ್ನಲೆಯಲ್ಲಿ ಕುರುಬರಳ್ಳಿಯ ತಂಗುದಾಣದಲ್ಲಿಯೇ ವಿಶ್ರಾಂತಿ ಪಡೆದರು.        ಈ ಸಮಯದಲ್ಲಿ ಈ ಗ್ರಾಮದ ಕೆಲವರೊಂದಿಗೆ ಮಾತನಾಡಿದ್ದರು. ಇವರಿಗೆ ಉಬ್ಬಸವಿದ್ದಕಾರಣ ತೀವ್ರ ನಿತ್ರಾಣರಾಗಿದ್ದ ಕಾರಣ ಗ್ರಾಮಸ್ಥರು ಕೋವಿಡ್19…

Read More

ತುಮಕೂರು:       ರೈಲ್ವೆ ಖಾಸಗೀಕರಣದ ಭಾಗವಾಗಿ 109 ರೈಲುಗಳನ್ನು ಖಾಸಗಿಯವರಿಗೆ ವಹಿಸಲು ತೀರ್ಮಾನ ಕೈಗೊಂಡಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಹಾಗೂ ರೈತಪರ-ಜನಪರ ಸಂಘಟನೆಗಳ ಮುಖಂಡರು ತುಮಕೂರಿನ ರೈಲ್ವೆ ನಿಲ್ದಾಣದ ಎದುರು ಜುಲೈ 17ರಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.       ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ 175 ವರ್ಷ ಹಳೆಯದಾದ 2 ಲಕ್ಷ ಕೋಟಿ ಆಸ್ತಿಯುಳ್ಳ 13 ಸಾವಿರ ಪ್ಯಾಸೆಂಜರ್ ಟ್ರೈನ್‍ಗಳನ್ನು ಓಡಿಸುವ ಬಡಜನರ ಸಾರಿಗೆ ಸಾಧನವಾದ ಜನತೆಯ ತೆರಿಗೆಯಲ್ಲಿ ಕಟ್ಟಲ್ಪಟ್ಟ ರೈಲ್ವೆಯನ್ನು ಖಾಸಗೀಕರಣ ಮಾಡುವ ಕ್ರಮ ದೇಶವಿರೋಧಿಯಾದುದು ಎಂದು ಆರೋಪಿಸಿದರು. ಇದನ್ನು ಜನಪರ ಸಂಘಟನೆಗಳು ವಿರೋಧಿಸಬೇಕು ಎಂದರು.        ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಬಡವರ ರಥ ರೈಲ್ವೆ ಖಾಸಗೀಕರಣ ಮಾಡಬಾರದು. ಬಿಜೆಪಿ ನಿರಂತರವಾಗಿ ದೇಶದ ಆಸ್ತಿಯನ್ನು ಮಾರುತ್ತಿದೆ ಎಂದು ಹೇಳಿದರು.       ಜನಸಂಗ್ರಾಮ…

Read More

ತುಮಕೂರು:       ಜಿಲ್ಲೆಯಲ್ಲಿ 18 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 630ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.      ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 7, ಚಿಕ್ಕನಾಯಕನಹಳ್ಳಿ-5, ಕುಣಿಗಲ್-3 ಮಂದಿ ಹಾಗೂ ತಿಪಟೂರು, ಗುಬ್ಬಿ, ತುರುವೇಕೆರೆ ತಾಲೂಕಿನಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 18 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಜಿಲ್ಲಾಸ್ಪತ್ರೆಯಿಂದ 45 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 267 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 345 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 18 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

 ಚಿಕ್ಕನಾಯಕನಹಳ್ಳಿ:       ಮದ್ಯವನ್ನು ಕಳ್ಳಹಾದಿಯಲ್ಲಿ ಗ್ರಾಮಕ್ಕೆ ತಂದು ಅಕ್ರಮವಾಗಿ ಮಾರುತ್ತಿದ್ದ ಕೃತ್ಯವನ್ನು ಮಾಲು ಸಮೇತ ಬಯಲಿಗೆಳೆದು ಕಾನೂನುಕ್ರಮ ಕೈಗೊಳ್ಳುವಂತೆ ತಾಲ್ಲೂಕಿನ ಜಾಣೇಹಾರ್ ಗ್ರಾಮದ ಮಹಿಳೆಯರು ದೂರು ಸಲ್ಲಿಸಿದ್ದಾರೆ.       ತಾಲ್ಲೂಕಿನ ಕಂದಿಕೆರೆ ಹೋಬಳಿ ಜಾಣೆಹಾರ್ ಗ್ರಾಮ ಹಿಂದುಳಿದ ಪ್ರದೇಶವಾಗಿದ್ದು, ಈ ಗ್ರಾಮದಲ್ಲಿ ಈಹಿಂದೆ ಧರ್ಮಲಿಂಗಯ್ಯ ಎಂಬುವನು ಅಕ್ರಮವಾಗಿ ಮದ್ಯಮಾರಾಟ ಮಾಡಿ ಗ್ರಾಮದ ಸ್ವಾಸ್ಥ್ಯಕ್ಕೆ ಧಕ್ಕೆಯನ್ನು ತಂದಿದ್ದನು. ಇದನ್ನು ಮನಗಂಡು ಗ್ರಾಮದ ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮದ ಮಹಿಳೆಯರು ಪ್ರತಿಭಟನೆ ಮಾಡಿ ದೂರುನೀಡಿ ಮದ್ಯಮಾರಾಟವನ್ನು ತಡೆಹಿಡಿದಿದ್ದರು.       ಆದರೆ ಆದೇ ವ್ಯಕ್ತಿ ಮತ್ತೆ ಈಚೆಗೆ ಸರಿರಾತ್ರಿಯಲ್ಲಿ ಗ್ರಾಮದ ಬೇಲಿಗಳಲ್ಲಿ ಮದ್ಯದ ದಾಸ್ತಾನನ್ನು ಬಚ್ಚಿಟ್ಟು, ನಂತರ ಗುಟ್ಟಾಗೆ ಬೀದಿಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಮತ್ತೆ ಆರಂಭಿಸಿದ್ದನು. ಈ ವಿದ್ಯಮಾನವನ್ನರಿತ ಗ್ರಾಮದ ಮಹಿಳೆಯರು ಕಳೆದ ಸೋಮವಾರ ರಾತ್ರಿ 11 ಗಂಟೆಗೆ ಹೊಂಚುಹಾಕಿ ಮಾಲುಸಮೇತ ಬರುತ್ತಿದ್ದವನ ಮೇಲೆ ಆಕ್ರಮಣ ಮಾಡಿದರು. ಇದರಿಂದ ಗಾಬರಿಗೊಂಡ ಧರ್ಮಲಿಂಗಯ್ಯನು ಮದ್ಯದ ಪೆಟ್ಟಿಗೆ…

Read More

ಚಿಕ್ಕನಾಯಕನಹಳ್ಳಿ:       ಸೀಲ್‍ಡೌನ್‍ಗೆ ಪ್ರತಿರೋಧ ಒಡ್ಡಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕೋವಿಡ್ ನಿಯಂತ್ರಣದ ಹೋರಾಟಕ್ಕೆ ಸಹಕರಿಸಿದ್ದವರ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.       ತಾಲ್ಲೂಕಿನ ಗೋಡೆಕೆರೆಹಟ್ಟಿಯಲ್ಲಿ ಈವರೆಗೆ 15 ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಸೋಂಕಿತರನ್ನು ಕ್ವಾರಂಟೈನ್‍ಗೆ ಒಳಪಡಿಸಲು ಮುಂದಾದ ತಾಲ್ಲೂಕು ಆಡಳಿತಕ್ಕೆ ಸ್ಥಳೀಯರು ಪ್ರತಿರೋಧ ಒಡ್ಡಿ ತಹಸೀಲ್ದಾರ್ ರರನ್ನು ಸೇರಿದಂತೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದರು ಹಾಗೂ ಸೀಲ್‍ಡೌನ್ ಮಾಡಲಾಗಿದ್ದ ವ್ಯವಸ್ಥೆಯನ್ನು ಕಿತ್ತುಹಾಕಿದ್ದರು.       ಈಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಗೋಡೆಕೆರೆಹಟ್ಟಿಗೆ ಭೇಟಿ ನೀಡಿ ಸ್ಥಳೀಯರಿಗೆ ಪರಿಸ್ಥಿತಿಯ ಮನವರಿಕೆ ಮಾಡಿದರು.       ಹಾಗೂ ಕೊರೊನಾ ಹೋರಾಟದಲ್ಲಿ ಶ್ರಮಿಸುತ್ತಿರುವ ಸರ್ಕಾರಿ ಇಲಾಖೆಗಲ ಸಿಬ್ಬಂದಿಯ ರಕ್ಷಣೆ ನನ್ನ ಹೊಣೆಗಾರಿಕೆಯಾಗಿದ್ದು, ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ನಿಧ್ರ್ಯಾಕ್ಷಣ್ಯಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು. ಕೋರೊನಾ ಸೋಂಕಿತ ನಿಯಂತ್ರಣದ ಹೋರಾಟದಲ್ಲಿ ಎಲ್ಲರೂ ಶಾಂತಿಯಿಂದ ಸಹಕರಿಸಬೇಕೆಂದು ತಿಳಿಸಿದರು.  …

Read More

ಮಧುಗಿರಿ:       ಮುಂಗಾರು ಹಂಗಾಮಿನಲ್ಲಿ ಮೂಬೈಲ್ ಆಫ್ ಮೂಲಕ ಜಿಐಎಸ್ ಮತ್ತು ಜಿಪಿಎಸ್ ಬಳಸಿ ಮುಂಗಾರು ಬೆಳೆ ಸಮೀಕ್ಷೆ ಮಾಡಿದ ಕೆಲ ಪಿಆರ್‍ಗಳಿಗೆ ಹಣ ನೀಡಿಲ್ಲಾ ಎಂದು ಬೆಳೆ ಸಮೀಕ್ಷೆ ಮಾಡಿದ ಪಿಆರ್‍ಗಳು ಆರೋಪಿಸಿದ್ದಾರೆ.       ಮಧುಗಿರಿಯ ವ್ಯಾಪ್ತಿಯಲ್ಲಿ ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ನೇತೃತ್ವದಲ್ಲಿ ಖಾಸಗಿ ವ್ಯಕ್ತಿಗಳಿಂದ ಮೊಬೈಲ್ ಆಪ್ ಮೂಲಕ ಮುಂಗಾರು ಹಾಗು ಹಿಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು.       ಖಾಸಗಿ ಪಿಆರ್‍ಗಳು ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡು ಪ್ರತಿ ಸರ್ವೆ ನಂಬರ್‍ನ ಎಲ್ಲಾ ಫ್ಲಾಟ್‍ಗಳ ತೆರಳಿ ಬೆಳೆ ಇದ್ದರೆ ಬೆಳೆಯ ಮಾಹಿತಿಯನ್ನು ಫೋಟೋ ಸಹಿತ ಅಪ್ಲೋಡ್ ಮಾಡಿದ್ದಾರೆ, ಇದರಿಂದ ಎಲ್ಲಿ ಮತ್ತು ಯಾವ ಬೆಳೆ ಬೆಳೆಯಲಾಗಿದೆ ಎಂಬ ಮಾಹಿತಿಯೊಂದಿಗೆ ಸಮೀಕ್ಷೆಯಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.       ಪ್ರತಿ ಸರ್ವೆ ನಂಬರ್‍ಗೆ ಇಂತಿಷ್ಟು…

Read More