ಗುಬ್ಬಿ: ಸೀಲ್‍ಡೌನ್ ಪ್ರದೇಶದಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸುವ ಜತೆಗೆ ಕೊರೋನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರ ಬವಣೆ ಆಲಿಸುವ ಕೆಲಸ ಸೇವೆಗೆ ಅರ್ಥ ನೀಡಿದೆ ಎಂದು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ತಿಳಿಸಿದರು. ತಾಲ್ಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ವಿಎಸ್‍ಎಸ್‍ಎನ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾದ ದಿನಸಿ ಪದಾರ್ಥಗಳ ಕಿಟ್ ನೀಡಿ ಮಾತನಾಡಿದ ಅವರು ದೊಡ್ಡಗುಣಿ ಭಾಗದಲ್ಲಿ ಎರಡು ಕೊರೋನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಈ ವಾರಿಯರ್ಸ್‍ಗಳ ಸೇವೆ ಸ್ಮರಣೀಯ. ಅವರ ಶ್ರಮದ ಫಲ ಮತ್ತೇ ಯಾವುದೇ ಪ್ರಕರಣ ಈ ಭಾಗದಲ್ಲಿ ಕಂಡಿಲ್ಲ ಎಂದು ಶ್ಲಾಘಿಸಿದರು. ಕೊರೋನಾ ವೈರಸ್ ಗ್ರಾಮೀಣ ಭಾಗದಲ್ಲಿ ಕಾಡುತ್ತಿದೆ. ಮುಗ್ದ ಜನರ ಬದುಕಿನಲ್ಲಿ ಆವಾಂತರ ಹುಟ್ಟಿಸುವ ಈ ವೈರಾಣು ತಡೆಗೆ ಅಗತ್ಯ ಜಾಗೃತಿ ಕ್ರಮವನ್ನು ಸ್ವಯಂಪ್ರೇರಿತರಾಗಿ ಜನರು ಅನುಸರಿಸಬೇಕಿದೆ. ಈ ಸಂದರ್ಭದಲ್ಲಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಆದರೆ ಆಶಾ…
Author: News Desk Benkiyabale
ಮಧುಗಿರಿ: ಪರಿಶಿಷ್ಟ ಜಾತಿಯವರು ಉಳುಮೆ ಮಾಡುತ್ತಿದ್ದ ಸಾಗುವಳಿ ಜಮೀನಿನಲ್ಲಿ ಪಣ್ಣೇನಹಳ್ಳಿ ಗ್ರಾಮದ ಅನ್ಯಕೋಮಿನ ಕೆಲವರು ದೌರ್ಜನ್ಯ ನಡೆಸಿದ್ದಾರೆಂದು ದಲಿತ ಮುಖಂಡರು ಆರೋಪಿಸಿ ಮಧುಗಿರಿ ಉಪವಿಭಾಗಧಿಕಾರಿ ಡಾ.ಕೆ.ನಂದಿನಿದೇವಿರವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಉಪವಿಭಾಗಧಿಕಾರಿಗಳ ಕಛೇರಿ ಮುಂದೆ ಆಗಮಿಸಿದ ಕೊರಟಗೆರೆ ತಾಲೂಕಿನ ದಲಿತ ಮುಖಂಡರು ನಮ್ಮ ಬಡ ರೈತರಿಗೆ ಆನ್ಯಾಯವೆಸಗಿದ್ದು ತೊಗರಿಘಟ್ಟ ಗ್ರಾಮದ ನಮ್ಮ ಪರಿಶಿಷ್ಟ ಜಾತಿಯವರು ಇಲ್ಲಿಗೆ ಸುಮಾರು 30-40 ವರ್ಷಗಳಿಂದ ಸರ್ವೆ ನಂಬರ್ 24 ರಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು ಸರ್ಕಾರಿ ನಿಯಮಾವಳಿಯಂತೆ 2017-18 ನೇ ಸಾಲಿನಲ್ಲಿ ಬಗರ್ ಹುಕ್ಕುಂ ಸಮಿತಿಯಿಂದ ಸುಮಾರು 15 ಕುಟುಂಬಗಳಿಗೆ ಸಾಗುವಳಿ ಪತ್ರಗಳನ್ನು ಕೊರಟಗೆರೆ ತಹಶಿಲ್ದಾರ್ ರವರು ನೀಡಿರುತ್ತಾರೆ. ಇದರನ್ವವಾಗಿ ನಮ್ಮ ಬಡ ಕುಟುಂಬಗಳು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ದಲಿತರ ಜಮೀನುಗಳ ಮೇಲೆ ಕಣ್ಣು ಹಾಕಿರುವ ಕೆಲವರು ಉದ್ದೇಶವಾಗಿ ಜುಲೈ 15 ತಾರೀಖು ಪಣ್ಣೇನಹಳ್ಳಿಯ ಅನ್ಯ…
ತುಮಕೂರು : ಜಿಲ್ಲೆಯಲ್ಲಿಂದು 15 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 612ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ತುಮಕೂರು ತಾಲ್ಲೂಕಿನಲ್ಲಿ 12 ಮಂದಿ ಹಾಗೂ ತಿಪಟೂರು, ಶಿರಾ, ಗುಬ್ಬಿ ತಲಾ ಒಬ್ಬರು ಸೇರಿದಂತೆ ಒಟ್ಟು 15 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಅಲ್ಲದೆ ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ಜಿಲ್ಲಾಸ್ಪತ್ರೆಯಿಂದ 5 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 222 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 372 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 18 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು: ಹೊರದೇಶಗಳಿಂದ ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ತರಿಸಿಕೊಳ್ಳುವುದರಿಂದ ದೇಶೀಯ ಹಾಲು ಉತ್ಪಾದಕರಿಗೆ ತೊಂದರೆಯಾಗಲಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ತುಮಕೂರು ಹಾಲು ಒಕ್ಕೂಟಕ್ಕೆ ಭೇಟಿ ನೀಡಿದ ಸಚಿವರು, ಹಾಲು ಸಂಸ್ಕರಣಾ ಘಟಕದ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನಂದಿನಿ ಹಾಲಿನ ಮಾರಾಟ ಗಣನೀಯವಾಗಿ ಕಡಿಮೆಯಾಗಿ ನಷ್ಟ ಉಂಟಾಗಿದೆ. ಮೈಸೂರು ಹಾಗೂ ತುಮಕೂರು ಹಾಲಿನ ಡೈರಿಗಳಿಗೆ ಭೇಟಿ ನೀಡಿದಾಗ ಇದೇ ಸಮಸ್ಯೆ ತಲೆದೋರಿದೆ. ಡೈರಿಯಲ್ಲಿ ತುಪ್ಪ ಹಾಗೂ ಹಾಲಿನ ಪುಡಿಯು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಿದ್ದು, ಹಾಗೆ ಉಳಿದಿದ್ದು ಮಾರಾಟವಾಗುತ್ತಿಲ್ಲ. ಈ ಕುರಿತು ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದರು. ತುಮಕೂರು ಹಾಲು ಒಕ್ಕೂಟದಲ್ಲಿ 154 ಕೋಟಿ ರೂ.ಗಳ ಮೆಗಾ ಡೈರಿ ನಿರ್ಮಾಣಕ್ಕೆ ಮನವಿ ಮಾಡಿದ್ದು, ಕೋವಿಡ್-19 ನಿಯಂತ್ರಣಕ್ಕೆ ಬಂದ…
ತುಮಕೂರು : ಜಿಲ್ಲೆಯಲ್ಲಿಂದು 32 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 597 ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಇಂದು ಜಿಲ್ಲೆಯ ತುಮಕೂರು ತಾಲ್ಲೂಕಿನಲ್ಲಿ 17, ಚಿಕ್ಕನಾಯಕನಹಳ್ಳಿ -6, ಮಧುಗಿರಿ-8, ಕೊರಟಗೆರೆ -1 ಸೇರಿ ಒಟ್ಟು 32 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಈವರೆಗೆ 213 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 367 ಸಕ್ರಿಯ ಪ್ರಕರಣಗಳಿದ್ದು, ಇಂದು 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಈವರೆಗೆ 17 ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧುಗಿರಿ: ಹೋಂ ಕ್ವಾರಂಟೈನ್‍ನಲ್ಲಿರುವವರು ಸಮುದಾಯದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದರೆ, ಅಂತಹವರನ್ನು ತಹಸೀಲ್ದಾರ್ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಪತ್ತೆ ಹಚ್ಚಿ ಅವರುಗಳ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಧುಗಿರಿ ತಾಲೂಕಿನ ಕೋವಿಡ್ 19 ನಿಯಂತ್ರಣದ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಸೋಕಿತ ವ್ಯಕ್ತಿಯ ಕೋವಿಡ್ ವರದಿ ಬಂದ ನಂತರವಷ್ಟೇ ಮನೆಯಿಂದ ಹೊರ ಬರಬೇಕು, ಅಂತಹವರನ್ನು ಸ್ಥಲೀಯ ಆಡಳಿತದವರು ನಿಗಾವಹಿಸಬೇಕು ಇಲ್ಲವಾದರೆ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟುವುದು ಕಷ್ಟಕರವಾಗುತ್ತದೆ. ಕಂಟೈನ್ಮೆಂಟ್ ವಲಯದಲ್ಲಿನ ಎಲ್ಲರ ಪರೀಕ್ಷಾ ವರದಿ ಬಂದ ನಂತರವಷ್ಟೆ ತೆರವುಗೊಳಿಸಬೇಕು. ಕೋವಿಡ್-19 ಗೆ ಸಂಬಂದಿಸಿದಂತೆ ಜಿಲ್ಲೆಗೆ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ತುರ್ತಾಗಿ ಆಂಟಿ ರ್ಯಾಪಿಡ್ ಕಿಟ್‍ಗಳು ಮಂಜೂರಾಗಿದ್ದು, ಇನ್ನೂ ಹೆಚ್ಚಿನ ಕಿಟ್‍ಗಳಿಗಾಗಿ ಸಿಎಂಗೆ ಮನವಿ ಮಾಡಲಾಗಿದೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕರೋನಾ ಸೋಂಕು ಪತ್ತೆಯ ಫಲಿತಾಂಶ ಬರುವುದು…
ಮಧುಗಿರಿ: ಕೋಲಾರ ಜಿಲ್ಲೆ ಬಂಗಾರ ಪೇಟೆ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಕೆ.ಚಂದ್ರಮೌಳೇಶ್ವರ ರವರ ಹತ್ಯೆಯ ಬಗ್ಗೆ ಸೂಕ್ತ ಸಿ.ಬಿ.ಐ ತನಿಖೆ ನಡೆಸುವ ಅಗತ್ಯ ಇದೆ ಎಂದು ಮಧುಗಿರಿ ತಾಲ್ಲೂಕು ಯಾದವ ನೌಕರರ ಸಂಘ ಹಾಗೂ ಮಧುಗಿರಿ ತಾಲ್ಲೂಕು ಯಾದವ ಸಂಘ ಒತ್ತಾಯಿಸಿವೆ. ಬಿ.ಕೆ.ಚಂದ್ರಮೌಳೇಶ್ವರವರ ತಾಯಿಯವರ ತವರೂರು ಮಧುಗಿರಿ ತಾಲ್ಲೂಕು ಕಸಬಾ ಮರುವೇಕೆರೆ ಆಗಿದ್ದು ಹಾಗೂ ಮಧುಗಿರಿ ಗಾಂಧಿ ಎಂ.ಪುಟ್ಟತಿಮ್ಮಯ್ಯ ರವರ ಸೋದರಳಿಯನವರಾಗಿದ್ದು ಸರಳ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರ ಪ್ರಾಮಾಣಿಕತೆಯನ್ನು ಕೋಲಾರ ಜನತೆ ಕೊಂಡಾಡಿದ್ದು ಇವರು ಜಮೀನಿನ ವಿವಾದ ಬಗ್ಗೆ ಖುದ್ದು ಹಾಜರಾಗಿ ಪರಿಶೀಲಿಸುವಾಗ ಪೊಲೀಸರ ಸಮ್ಮುಖದಲ್ಲಿ ವೆಂಕಟಾಚಲ ಎನ್ನುವ ವ್ಯಕ್ತಿ ಯಾವುದೇ ಕಾರಣವಿಲ್ಲದೇ ಚೂರಿಯಿಂದ ತಹಸೀಲ್ದಾರ್‍ರಿಗೆ ಇರಿದಿರುತ್ತಾರೆ. ಈ ಕೊಲೆ ಕೆಲವು ಅನುಮಾನಗಳಿಗೆ ಆಸ್ಪದವಾಗಿರುತ್ತದೆ. ಆದುದರಿಂದ ಜರೂರಾಗಿ ಸಿ.ಬಿ.ಐ ತನಿಖೆಗೆ ಒಳವಡಿಸುವುದರ ಮೂಲಕ ಅನುಕೂಲಕಲ್ಪಿಸಿಕೊಟ್ಟು ಮೃತರ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಲು ಮಧುಗಿರಿ ತಾಲ್ಲೂಕು ಯಾದವ ನೌಕರರ ಸಂಘದ ಅಧ್ಯಕ್ಷರಾದ ಸಿ.ಕೃಷ್ಣಪ್ಪ ರವರು…
ಪಾವಗಡ: ಕೊರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಾಲೂಕು ಆಡಳಿತ ನಿಷ್ಟ್ರಿಯವಾಗಿದೆ. ನೀವು ನಿಮ್ಮ ಕೆಲಸಕ್ಕೆ ನಾಲಾಯಕ್, ನಿಮಗೆ ಕೆಲಸ ಮಾಡುವ ಮನಸ್ಸು ಇಲ್ಲದ ಕಾರಣದಿಂದ ತಾಲೂಕಿ ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ ಇಂತಹ ದುರ್ಘಟನೆಗೆ ನೇರವಾಗಿ ನೀವುಗಳೇ ಕಾರಣವೆಂದು ತಾಲೂಕು ಆಡಳಿತದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಕೆಂಡಕಾರಿದರು. ಪಾವಗಡ ಪಟ್ಟಣದ ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹ್ಮ ಸ್ವಾಮಿ ದೇವಾಲಯದ ಬಳಿಯ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ಮಾತನಾಡಿದ ಅವರು, ತಹಶೀಲ್ದರ್, ತಾಪಂ ಇಒ ಹಾಗೂ ಪೊಲೀಸ್ ಇಲಾಖೆಯನ್ನ ತೀವ್ರ ತರಾಟೆಗೆ ತೆಗೆದುಕೊಂಡ ಅವರು ಇದೇ ರೀತಿ ಮುಂದೆ ತಲೆದಂಡ ತಪ್ಪಿದಲ್ಲ ಉಷಾರ್ ಎಂದು ಎಚ್ಚರಿಕೆ ನೀಡಿದರು. ಪಾವಗಡ ಒಂದು ಗಡಿ ತಾಲೂಕು ಆಗಿದ್ದು ಇಲ್ಲಿ ನಿರಂತರವಾದ ತಪಾಸಣಿ ನಡೆಸಬೇಕು. ಈ ಕೆಲಸ ನೀವು…
ತುಮಕೂರು: ತುಮಕೂರು ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳನ್ನ ಸೀಲ್ ಡೌನ್ ಮಾಡಲಾಗಿದೆ. ಠಾಣೆಯ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇಂದು ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳೆರಡನ್ನೂ ಸೀಲ್ ಡೌನ್ ಮಾಡಲಾಗಿದೆ. ಹಾಗೆ, ಇಂದು ಮೀಸಲು ಪಡೆಯ 4 ಮಂದಿ ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟಿರುವುದು ಖಚಿತವಾಗಿದೆ. ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಿಬ್ಬಂದಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಎಸ್ಪಿ ಕಚೇರಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿತ್ತು. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಜಿಲ್ಲಾ ಎಸ್ಪಿ ವಂಶಿಕೃಷ್ಣ, ಎರಡು ದಿನಗಳ ಕಾಲ ಕಚೇರಿಯಲ್ಲಿ ಯಾವುದೇ ಕೆಲಸಗಳು ನಡೆಯುವುದಿಲ್ಲ ಎಂದಿದ್ದರು.
ಗುಬ್ಬಿ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೇರೂರು ಕೆರೆಯ ನೀರು ಯಾವುದೇ ಶುದ್ಧೀಕರಣವಾಗದೇ ನೇರ ಸಾರ್ವಜನಿಕರಿಗೆ ತಲುಪುತ್ತಿದೆ. ಈ ಅಶುದ್ದ ನೀರು ಬಳಸಿದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಆರೋಪಿಸಿ ಪಟ್ಟಣದ ಕೆಲ ಪ್ರಜ್ಞಾವಂತ ನಾಗರೀಕರು ಸಾಮಾಜಿಕ ಜಾಲತಾಣದ ಮೂಲಕ ಇಡೀ ದಿನ ಚಾಟಿಂಗ್ ಮೂಲಕ ಕೊರೋನಾ ಸಂಕಷ್ಟದಲ್ಲಿ ವಿನೂತನ ರೀತಿ ಪ್ರತಿಭಟಿಸಿದ ಘಟನೆ ಭಾನುವಾರ ಕಂಡುಬಂತು. ಪಟ್ಟಣದ ಹಲವು ಬಡಾವಣೆಗೆ ಬೆಳಿಗ್ಗೆ ಸರಬರಾಜು ಆದ ಹೇಮಾವತಿ ನೀರು ಕೆಂಪು ಮಣ್ಣಿನಿಂದ ಕೂಡಿದ್ದು ಕಂಡು ಫೋಟೋ ತೆಗೆದು ವಾಟ್ಸ್‍ಪ್ ಮೂಲಕ ಚರ್ಚಿ ಆರಂಭಿಸಿದ ಕೆಲವರ ಆಕ್ರೋಶಕ್ಕೆ ಸಾಥ್ ನೀಡಿದ ಬಹಳ ಮಂದಿ ಸಾಮಾಜಿಕ ಜಾಲತಾಣದಲ್ಲೇ ತಮ್ಮೆಲ್ಲಾ ಆಕ್ರೋಶ ಹೊರಹಾಕಿದರು. ಜಲ ಶುದ್ದೀಕರಣ ಘಟಕ ಬಹಳ ತಿಂಗಳಿಂದ ಕೆಲಸ ಮಾಡುತ್ತಿಲ್ಲ. ನೀರು ಶುದ್ದಗೊಳಿಸದೇ ಕೆರೆಯ ನೀರು ನೇರವಾಗಿ ಸಾರ್ವಜನಿಕರ ಸಂಪು ಸೇರುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆ…











