ತುಮಕೂರು:

      ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಬಂಜಾರ ಜನಾಂಗ ಹಿಂದುಳಿದಿದ್ದು, ಇವರ ಅಭಿವೃದ್ಧಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಉಪ ವಿಭಾಗಾಧಿಕಾರಿ ಶಿವಕುಮಾರ್ ತಿಳಿಸಿದರು.

       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂತ ಸೇವಾಲಾಲ್ ಕಾಡಿನಲ್ಲಿರುವ ಬಂಜಾರ ಜನಾಂಗಕ್ಕೆ ನಾಗರಿಕತೆಯನ್ನು ಪರಿಚಯಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.

      ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಕಾರ್ಯಧ್ಯಕ್ಷ ಮಾತನಾಡಿ ಸಂತ ಸೇವಾಲಾಲ್ ಅವರು ಪ್ರತಿಪಾದಿಸಿದ ಅಹಿಂಸಾ ಮಾರ್ಗ ನಾವೆಲ್ಲಾ ಅನುಸರಿಸಬೇಕು. ಪುರಾತನವಾಗಿರುವ ಬಂಜಾರ ಜನಾಂಗ ಸುಮಾರು 17ನೇ ಶತಮಾನದಿಂದ ಹಲವಾರು ದೇಶಗಳಲ್ಲಿ ನೆಲಸಿತ್ತು. ತನ್ನದೇ ಆದ ವಿಶಿಷ್ಟ ವಸ್ತ್ರಾಲಂಕಾರ, ಹಬ್ಬ ಆಚರಣೆಯಂತಹ ವಿಶೇಷ ಸಂಸ್ಕøತಿಗಳಿಂದ ಗುರುತಿಸಿಕೊಂಡಿದೆ ಎಂದು ಅವರು ತಿಳಿಸಿದರು.

      ಲಂಬಾಣಿ ಜನಾಂಗದ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇನಾನಾಯ್ಕ ಮಾತನಾಡಿ, ಸಮುದಾಯದವರು ಸಂಘಟಕರಾಗಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಅಲೆಮಾರಿ ಜೀವನದಿಂದ ಹೊರಬರಬೇಕು ಎಂದರು.

      ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎಸ್.ಎಸ್.ಐ.ಟಿ.ಯ ಸಹಾಯಕ ಪ್ರಾಧ್ಯಾಪಕ ಡಾ|| ಡಿ. ರಾಜನಾಯ್ಕ್ ಮಾತನಾಡಿದರು.  ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಗೌರವಾಧ್ಯಕ್ಷ ಡಿ. ನಾರಾಯಣ ನಾಯ್ಕ, ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಕರಿಯಾನಾಯ್ಕ, ಕುಣಿಗಲ್ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಹರೀಶ್ ನಾಯ್ಕ, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಸಮಾಜದ ಮುಖಂಡ ಚಂದ್ರಾನಾಯ್ಕ ಮತ್ತಿತರ ಗಣ್ಯರು ಹಾಜರಿದ್ದರು. 

(Visited 22 times, 1 visits today)