ತುರುವೇಕೆರೆ:

      ಪಟ್ಟಣದ ದಬ್ಬೇಗಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ತೊಡಕಾಗಿರುವ ರಸ್ತೆ ಬದಿಯ ಮರಗಳ ತೆರವು ಕಾರ್ಯಾಚರಣೆಯನ್ನು ಕೂಡಲೇ ಅರಣ್ಯ ಇಲಾಖೆ ತೆರವುಗೊಳಿಸಿಕೊಡಬೇಕೆಂದು ಶಾಸಕ ಮಸಾಲಜಯರಾಮ್ ಸೂಚಿಸಿದರು.

      ಪಟ್ಟಣದ ದಬ್ಬೇಗಟ್ಟ ರಸ್ತೆಯಲ್ಲಿರುವ 12ಲಕ್ಷರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸಾಮಾಜಿಕ ಅರಣ್ಯ ವಲಯ ಕಚೇರಿಯ ಉಧ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದಬ್ಬೇಗಟ್ಟ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ರಸ್ತೆ ಬದಿಯಲ್ಲಿರುವ ಮರಗಳು ತೊಡಕಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಶೀಘ್ರಗತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು, ಮರಗಳ ತೆರವು ಕಾರ್ಯಾಚರಣೆ ಮುಗಿದ ತತ್‍ಕ್ಷಣದಿಂದಲೇ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು, ಅಗಲೀಕರಣದ ಸಂಧರ್ಭದಲ್ಲಿ ರಸ್ತೆ ಇಕ್ಕೆಲಗಳಲ್ಲಿರುವ ಕಟ್ಟದ ಮಾಲೀಕರ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಇದೇ ರಸ್ತೆಯಲ್ಲಿ ನಮ್ಮ ಪಕ್ಷದ ಕಚೇರಿಯಿದೆ ಮೊದಲ ಹಂತದಲ್ಲಿಯೇ ನಮ್ಮ ಪಕ್ಷದ ಕಚೇರಿಯಿಂದಲೇ ಕಟ್ಟದ ತೆರವು ಕಾಮಗಾರಿ ಆರಂಭವಾಗುತ್ತದೆ ನನಗೆ ನೂರು ಜನರ ಹಿತಕ್ಕಿಂತ ಸಹಸ್ರಾರು ಜನರ ಒಳಿತು ಮುಖ್ಯ ಎಂದು ಪರೋಕ್ಷವಾಗಿ ರಸ್ತೆ ಇಕ್ಕೆಲಗಳಲ್ಲಿರುವ ಕಟ್ಟಡ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು.

      ಇದೇ ಸಂಧರ್ಭದಲ್ಲಿ ಡಿ.ಎಫ್.ಓ. ಸತೀಶ್ ಬಾಬಾರೈ ಮಾತನಾಡಿ ಕಟ್ಟಡದ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಶಾಸಕರು ಕೇಳಿದ ಮರಗಳ ತೆರವು ಕಾರ್ಯಾಚರಣೆಬಗ್ಗೆ ವಿವರಣೆನೀಡಿದ ಅವರು ರಸ್ತೆ ಬದಿಯ ಮರಗಳ ತೆರವು ಕಾರ್ಯಾಚರಣೆ ಕೆಲಸ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳ ಜವಬ್ದಾರಿಯಾಗಿದೆ ಎಂದರು. ಸ್ಥಳದಲ್ಲಿಯೇ ಇದ್ದ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಸುನಿಲ್ ಮಾತನಾಡಿ ಮರಗಳ ತೆರವು ಕಾರ್ಯಚರಣೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕೂಡಲೇ ಶಾಸಕರ ನೇತೃತ್ವದಲ್ಲೇ ಮರಗಳ ತೆರವು ಕಾರ್ಯಚರಣೆಗೆ ಚಾಲನೆ ನೀಡಲಾಗುವುದು ಎಂದರು.

      ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷೆ ನಾಗರತ್ನ, ಡಿ.ಎಫ್.ಓ.ಸತೀಶ್‍ಬಾಬಾರೈ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಗಂಗಾಧರನ್.ಜಿ.ಡಿ. ತಾ.ಪಂ.ಸದಸ್ಯ ಹಾಗು ತುಮಲ್ ನಿರ್ದೇಶಕ ಮಹಾಲಿಂಗಯ್ಯ, ತಾ.ಪಂ. ಉಪಾಧ್ಯಕ್ಷ ನಂಜೇಗೌಡ ತಾ.ಪಂ.ಸದಸ್ಯರುಗಳಾದ ಮಹಾಲಿಂಗಪ್ಪ, ಭೈರಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಆರ್.ಜಯರಾಮ್, ಇಲಾಖೆಯ ಎ.ಸಿ.ಫ್. ಸಂತೋಶ್‍ನಾಯ್ಕ್ ಮತ್ತು ಚಂದ್ರಪ್ಪ, ಆರ್.ಎಫ್.ಒ. ನಿಸಾರ್‍ಅಹ್ಮದ್, ತಿಮ್ಮರಾಜು, ಶಿಲ್ಪ, ಸುಜಾತ, ಸಿಬ್ಬಂದಿಗಳಾದ ಗಂಗಾಧರ್, ಭೀಮಗೌಡ, ಜಯಲಕ್ಮಮ್ಮ, ಚಂದ್ರಯ್ಯ, ಹೊನ್ನಪ್ಪ, ಯೋಗೇಂದ್ರ, ಫಾರ್ಥಸಾರಥಿ ಇದ್ದರು.
 

(Visited 38 times, 1 visits today)