ಪಾವಗಡ : ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ದಿನಸಿ ವಸ್ತುಗಳ ಮಾರಾಟ ಮಾಡಲು ಮುಂದಾಗಿದ್ದ ಅಂಗಡಿ ಮಾಲಿಕನಿಗೆ ಸ್ಥಳೀಯರಿಂದ ಅಂಗಡಿ ಬಾಗಿಲು ಹಾಕಿ ತಹಶಿಲ್ದಾರ್ ಗೆ ದೂರ ಸಲ್ಲಿಸಿದ ಘಟನೆ ತಾಲೂಕಿನಲ್ಲಿ ಸಂಭವಿಸಿದೆ. ಈ ಘಟನೆ ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮ ದಲ್ಲಿ ನಡೆದಿದೆ ಲಾಕ್ ಡೌನ್ ಆದ ಪರಿಣಾಮ ದಿಂದ ಎಲ್ಲಾ ಚಿಲ್ಲರೆ ಅಂಗಡಿ ಮಾಲೀಕರು ಅಗತ್ಯ ವಸ್ತುಗಳ MRP ದರಕ್ಕಿಂತ ಹೆಚ್ಚುವರಿ ಹಣ ಅಂದರೆ ಅದರ ದುಪ್ಪಟ್ಟು ಬೆಲೆ ಪಡೆದು ಸಾರ್ವಜನಿಕರ ಹಣವನ್ನು ಹಗಲು ದರೋಡೆಯಂತೆ ಲೂಟಿ ಮಾಡುತ್ತಿದ್ದಾರೆ. ಕೆಲಸವಿಲ್ಲದೆ,ಆದಾಯವಿಲ್ಲದೆ, ಜನರು ಅಪಾರ ಕಷ್ಟದಲ್ಲಿ ಸಿಲುಕಿರುವ ಇಂತಹ ಸಂದರ್ಭದಲ್ಲಿ ಧರದ ಬಿಸಿಯು ಮುಟ್ಟಿ ಕಂಗಾಲಾಗಿದ್ದಾರೆ ಇದರಿಂದ ಜೀವನ ಹೇಗೆ ಮಾಡುವುದು ಎಂದು ಪರಿತಪಿಸುತ್ತಿದ್ದಾರೆ ಎಂದು ಕಡಮಲಕುಂಟೆ ಗೆಳೆಯರ ಬಳಗ ಅಂಗಡಿ ಮಾಲಿಕರನ್ನು ಪ್ರಶ್ನಿಸಿದಾಗ ಅವರು ಉಡಾಫೆಯ ಮಾತುಗಳನ್ನು ಹೇಳುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ…
Author: News Desk Benkiyabale
ಪಾವಗಡ: ಪಾವಗಡ ತಾಲ್ಲೂಕಿನಲ್ಲಿ ಯಾವುದೇ ಕರೋನಾ ಪಾಸಿಟಿವ್ ಕೇಸ್ ಇಲ್ಲದಿದ್ದರೂ ಸಹ ಪಕ್ಕದ ಆಂಧ್ರದಲ್ಲಿ ಹೆಚ್ಚಿನ ಕೇಸ್ ಗಳು ಕಂಡು ಬಂದಿರುವುದರಿಂದ ಆಂಧ್ರದಿಂದ ಯಾರೊಬ್ಬರೂ ನುಸುಳದಂತೆ ಗಡಿಗಳಲ್ಲಿ ಚೆಕ್ ಪೋಸ್ಟ್ ಹಾಕಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ತಿಳಿಸಿದರು. ಸೋಮವಾರ ಗಡಿಗ್ರಾಮವಾದ ಮುರರಾಯನಹಳ್ಳಿಯಲ್ಲಿ ಎಚ್.ಪಿ. ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಸ್ಥಳಕ್ಕೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಘಟನೆಯ ವಿವರವನ್ನು ಪಡೆದುಕೊಂಡು, ನಂತರ ಹಿಂದೂಪುರ ಮಾರ್ಗದ ಗಡಿಗ್ರಾಮವಾದ ವಿರುಪಸಮುದ್ರ, ಅಕ್ಕಮ್ಮನಹಳ್ಳಿ, ಗುಮ್ಮಗಟ್ಟ, ಕೊಡಮಡಗು, ದೊಮ್ಮತಮರಿ, ಹಾಗೂ ಕಲ್ಯಾಣದುರ್ಗ ಮಾರ್ಗದ ನಾಗಲಾಪುರ ಗ್ರಾಮಗ ಗಡಿ ಚೆಕ್ ಪೋಸ್ಟ್ ಗೆ ಬೇಟಿ ನೀಡಿ ನಂತರ ವೆಂಕಟಾಪುರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರೊಂದಗೆ ಕೋವಿಡ್ 19 ವಿರುದ್ದ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ, ನಂತರ ಪಟ್ಟಣದ ಪೋಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅರ್ಜಿದಾರರ ಸಾಮಾಜಿಕ ಅಂತರದ ಪೆಟ್ಟಿಗೆಯನ್ನು ಉದ್ಗಾಟಿಸಿ, ನೀರೀಕ್ಷಣಾ ಮಂದಿರದಲ್ಲಿ ಪತ್ರಿಕಾಘೋಷ್ಟಿ ನಡೆಸಿ ಮಾತನಾಡಿದರು.…
ತುಮಕೂರು : ಕ್ಯಾತ್ಸಂದ್ರ ಪೋಲಿಸ್ ಠಾಣಾ ವ್ಯಾಪ್ತಿಯ ಕ್ಯಾತ್ಸಂದ್ರ ಸರ್ಕಾರಿ ಉರ್ದು ಪಾಠ ಶಾಲೆಯ ಆವರಣದಲ್ಲಿ ಬಡವರ ಬಾಗಿಲು ಕಾರ್ಯಕ್ರಮ ಕ್ಕೆ ಇಂದು ಆರಂಭ. ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮೊದಲಿಗೆ ಆರಂಭವಾದ ಬಡವರ ಬಾಗಿಲು ಎನ್ನುವ ವಿನೂತನ ಕಾರ್ಯಕ್ರಮ ನಗರ ಉಪಾಧೀಕ್ಷಕರ ವ್ಯಾಪ್ತಿಯ ಕ್ಯಾತ್ಸಂದ್ರ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆರಂಭವಾಗಿದೆ ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣರವರು ಬುಧವಾರ ಮಧ್ಯಾಹ್ನ 12.30ಕ್ಕೆ ಚಾಲನೆ ಮಾಡಿದರು. ಕ್ಯಾತ್ಸಂದ್ರ ಠಾಣೆಯ ಪಿಎಸೈ ರಾಮ ಪ್ರಸಾದ್ ಸ್ಥಳಿಯರ ಸಹಕಾರ ಮತ್ತು ಪಿಎಸೈ ರವರು ಸ್ವತ ಹಣ ಹಾಕಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕಾಗಿ ಬಡವರ ಬಾಗಿಲು ಎನ್ನುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಉಳ್ಳವರು ಸಹಾಯ ಮಾಡಲು ಇಚ್ಚಿಸುವವರು ಯಾವುದೇ ರೀತಿಯ. ಅಗತ್ಯ ದಿನಸಿ ಪದಾರ್ಥಗಳು,ಹಣ್ಣು, ತರಕಾರಿಗಳು ಹಾಗೂ ಇತರೆ ವಸ್ತುಗಳನ್ನು ತಂದಿಡಬಹುದು…
ತುಮಕೂರು: ಸರ್ಕಾರ ಕುಡಿಯುವ ನೀರಿಗಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದ್ದು, ಬರಪೀಡಿತ ತಾಲ್ಲೂಕಿಗೆ ಒಂದು ಕೋಟಿ ಹಾಗೂ ಇತರೆ ತಾಲ್ಲೂಕಿಗೆ 50 ಲಕ್ಷ ರೂ. ಗಳಿಗೆ ಮಂಜೂರಾತಿ ನೀಡಿದ್ದು, ಈ ಹಣದ ಸಂಪೂರ್ಣ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ತುರ್ತಾಗಿ ಕಾರ್ಯಗತಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆ ಕುರಿತು ಕ್ಷೇತ್ರದ ಶಾಸಕರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ಆದ್ಯತೆ ಮೇರೆಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‍ಪೋರ್ಸ್ ಸಮಿತಿಯ ಸಭೆಯನ್ನು ಆಯಾ ಕ್ಷೇತ್ರಗಳಲ್ಲಿ ನಡೆಸಿ ಚರ್ಚಿಸಿ ಸೂಕ್ತ…
ತುಮಕೂರು : ಕೊವೀಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿದ್ದು, ಈ ಪೈಕಿ ಹೋಂ ಕ್ವಾರೆಂಟೈನ್‍ನಲ್ಲಿ ಯಾರೂ ಇರುವುದಿಲ್ಲ. ಒಟ್ಟು 501 ಮಂದಿಯನ್ನು ಐಸೋಲೇಷನ್‍ನಲ್ಲಿ ಇಡಲಾಗಿದ್ದು, ಆಸ್ಪತ್ರೆಯ ಐಸೋಲೇಷನ್‍ನಲ್ಲಿರುವವರು 101 ಮಂದಿ, 370 ಜನರ 28 ದಿನಗಳ ಹೋಂ ಕ್ವಾರೆಂಟೈನ್ ಅವಧಿ ಪೂರ್ಣಗೊಂಡಿದೆ. ಈವರೆವಿಗೂ 1621 ಜನರ ಗಂಟಲುಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 1268 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ. 3 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. ಒಬ್ಬರು ಗುಣಮುಖ ಹಾಗೂ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 13 ಮಾದರಿಗಳು ತಿರಸ್ಕøತಗೊಂಡಿವೆ ಹಾಗೂ 337 ತಪಾಸಣೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಡಿಹೆಚ್‍ಓ ಡಾ: ಚಂದ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು : ಕೋವಿಡ್-19 ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಮೊದಲ ಬಾರಿಗೆ ರೈತನ ಮನೆ ಬಾಗಿಲಿಗೇ ಬೀಜಗಳನ್ನು ಪೂರೈಸುವ ಕಾರ್ಯಕ್ಕೆ ಮುಂದಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ರೈತರು ಊರುಗಳಲ್ಲೇ ಲಾಕ್ ಡೌನ್ ಆಗಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ಅನ್ನದಾತರಿಗೆ ನೆರವಾಗಲು ವಿ.ವಿ ಯು ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಗೆ ಅಂತಿಮ ರೂಪ ನೀಡಿದ್ದು, ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಜಾರಿಗೆ ತರಲಾಗುತ್ತಿದೆ. ಏಕೆ ಈ ವ್ಯವಸ್ಥೆ : ಲಾಕ್ ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳೂ ಕೃಷಿ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದರೂ ಬಿತ್ತನೆ ಬೀಜ ತರಲು ಸ್ವಂತ ವಾಹನದಲ್ಲಿ ಹೋಗಲು ಹೆಚ್ಚಿನವರ ಬಳಿ ವಾಹನಗಳಿಲ್ಲ ಬಾಡಿಗೆ ವಾಹನಗಳೂ ಸಿಗುತ್ತಿಲ್ಲ. ಆದ್ದರಿಂದ ರೈತರಿಗೆ ನೆರವಾಗಲು ಬಿತ್ತನೆ ಬೀಜಗಳನ್ನು ತಲುಪಿಸುವ ವ್ಯವಸ್ಥೆ ರೂಪಿಸಿದೆ. ಬೀಜ ಪೂರೈಕೆ ಹೇಗೆ : ವಿವಿ ಯಿಂದ ಬೀಜ…
ಮಧುಗಿರಿ: ಮಹಿಳೆಯೊಬ್ಬರ ಮೇಲೆ ವಿನಾಕಾರಣ ಪೊಲೀಸ್ ಇನ್ಸ್ಪೆಕ್ಟರ್ ಹಲ್ಲೆ ನಡೆಸಿರುವ ಘಟನೆ ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ದೊಡ್ಡೇರಿ ಹೋಬಳಿ ಕೋನಹಳ್ಳಿ ಗ್ರಾಮದ ರತ್ನಮ್ಮ ಎಂಬುವರು ಹಲ್ಲೆಗೊಳಗಾದ ಮಹಿಳೆ, ಸೋಮವಾರದಂದು ಈಕೆಗೂ ಪಕ್ಕದ ಮನೆಯವರಿಗೂ ಕ್ಷುಲ್ಲಕ ವಿಚಾರವಾಗಿ ಜಗಳ ಆರಂಭವಾಗಿದೆ ಈ ಸಂಭಂದ ಇದೇ ಸ್ಥಳಕ್ಕೆ ಆಗಮಿಸಿದ ಪಿಐ ಪ್ರಭಾಕರ್ ವಿಚಾರಣೆ ನಡೆಸಿ ರತ್ನಮ್ಮಳನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಪೊಲೀಸರಿಲ್ಲದೆ ಪಿಐ ಪ್ರಭಕಾರ್ ಮಹಿಳೆ ಮೇಲೆ ಕೈ ಮಾಡಿದ್ದು ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಪ್ರಸ್ತುತ ರತ್ನಮ್ಮ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಘಟನೆ ಬಗ್ಗೆ ಸಂಬಂಧಿಕರು ಮಧುಗಿರಿ ಡಿವೈಎಸ್ಪಿ ಅವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ತುಮಕೂರು: ಶಿರಾದ ರಾಮ್ ಮನೋಹರ್ ಲೋಹಿಯಾ ಸಮತಾ ವಿದ್ಯಾಲಯ ಟ್ರಸ್ಟ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಮಾಸ್ಕ್, ಸ್ಯಾನಿಟೈಸರ್ ಮತ್ತು ಹ್ಯಾಂಡ್ ಗ್ಲೌಸ್‍ಗಳನ್ನು ನರ್ಸ್, ವೈದ್ಯರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರುಗಳಿಗೆ ವಿತರಿಸಲು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಮಾಸ್ಕ್ ಸ್ಯಾನಿಟೈಜರ್‍ಗಳನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತಾ, ನಿಮ್ಮ ಕಾರ್ಯವೈಖರಿಯನ್ನು ಇಡೀ ದೇಶವೇ ನೋಡುತ್ತಿದೆ ಎಂದರು. ಡಿಹೆಚ್‍ಓ ಕಚೇರಿ ಆವರಣದಲ್ಲಿ ಸ್ಯಾನಿಟೈಜರ್‍ಗಳನ್ನು ಹಸ್ತಾಂತರಿಸಿ ಮಾತನಾಡಿದ ಹೈಕೋರ್ಟಿನ ಹಿರಿಯ ವಕೀಲರಾದ ಪ್ರೊ|| ರವಿವರ್ಮ ಕುಮಾರ್ ಅವರು, ಲಾಕ್‍ಡೌನ್ ಆಗಿರುವುದರಿಂದ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್‍ಗಳ ಸಮಸ್ಯೆಯಾಗುತ್ತಿದೆ. ಮನೆ-ಮನೆಗೆ ಭೇಟಿ ನೀಡಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಕುಟುಂಬ ಸದಸ್ಯರಿಗೆ ತಪಾಸಣೆ…
ತುಮಕೂರು: ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಅನವಶ್ಯಕವಾಗಿ ಓಡಾಡುವ ವಾಹನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಸುಬಾಹು” ಎನ್ನುವ ಹೊಸ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡಿದ್ದು, ಇದರಲ್ಲಿ ಪ್ರತಿಯೊಂದು ವಾಹನಗಳ ವಿವರ/ಛಾಯಾಚಿತ್ರಗಳನ್ನು ಹಾಗೂ ವಾಹನ ಪ್ರಯಾಣಿಕರು/ಚಾಲಕರು ಸಂಚರಿಸಿಸಬಹುದಾದ ಸ್ಥಳ ಹಾಗೂ ಉದ್ದೇಶಗಳನ್ನು ನಮೂದಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ ಅವರು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ತೆರೆದಿರುವ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ವಾಹನಗಳು ಸಂಚರಿಸುವ ಬಗ್ಗೆ “ಸುಬಾಹು” ಆ್ಯಪ್ ಅನ್ನು ಅಳವಡಿಸಲಾಗಿದೆ. ತುಮಕೂರಿನ ಎಲ್ಲಾ ಟ್ರಾಫಿಕ್ ಪಾಯಿಂಟ್‍ಗಳಲ್ಲಿ ಇದನ್ನು ಬಳಸಬಹುದಾಗಿದೆ. ಪೊಲೀಸ್ ಸಿಬ್ಬಂದಿಯು ಈ ಆ್ಯಪ್ ಮೂಲಕ ವಾಹನಗಳ ಸಂಖ್ಯೆಯನ್ನು ಸ್ಕ್ಯಾನ್ ಮಾಡಿ, ಯಾವ ಕಾರಣಕ್ಕೆ ಸಂಚರಿಸುತ್ತಿದ್ದಾರೆ ಎಂಬುದು ಅಪ್‍ಲೋಡ್ ಮಾಡಲಾಗುವುದು. ಈ ವಿವರಗಳನ್ನು ಜಿಲ್ಲೆಯ ಎಲ್ಲಾ ಚೆಕ್ ಪಾಯಿಂಟ್‍ಗಳಲ್ಲಿ ಎಲ್ಲಿ ಬೇಕಾದರೂ ಪರಿಶೀಲನೆ ಮಾಡಬಹುದು. ದಿನದಲ್ಲಿ ಎಷ್ಟು ವಾಹನಗಳು ಯಾವ ಕಾರಣಕ್ಕೆ ಸಂಚರಿಸಿವೆ ಎಂಬುದು ತಿಳಿಯುತ್ತದೆ. ಇದರಿಂದ ಅನವಶ್ಯಕವಾಗಿ…
ತುಮಕೂರು : ತುಮಕೂರಿನ ಹೆಗ್ಗೆರೆ ಬಸ್ ನಿಲ್ದಾಣದ ಬಳಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ವಿನೂತನವಾಗಿ ತೆರೆದಿರುವ ಬಡವರ ಬಾಗಿಲು ಹೊಸ ಕಾರ್ಯಕ್ರಮ ಏ.24 ರ ಶುಕ್ರವಾರ ಬೆಳಗ್ಗೆ ಆರಂಭವಾಗಿ ವಿಶೇಷ ಜನಾಕರ್ಷಣೆಯ ನೆರವಿನ ಹಸ್ತವಾಗಿ ಜನಮನ್ನಣೆ ಗಳಿಸಿತು. ಎರಡನೆಯ ದಿನವಾದ ಇಂದು ಬಡವರ ಬಾಗಿಲು ಮಳಿಗೆಯಲ್ಲಿ ತುಮಕೂರು ನಗರದ ಜೆಡಿಎಸ್ ಮುಖಂಡ, ಗುತ್ತಿಗೆದಾರ ನರಸೇಗೌಡ ಇಂದು ಸಂಪೂರ್ಣ ಎಲ್ಲ ಪದಾರ್ಥಗಳನ್ನ ತಂದು ಅದರಲ್ಲಿ ಜೋಡಿಸಿ ನೆರವಿನ ಹಸ್ತ ಚಾಚಿದರು. ಸ್ಥಳೀಯ ಬಡವರು ಬಂದು ಅಗತ್ಯ ವಸ್ತುಗಳನ್ನು ತಮ್ಮ ಸ್ವಂತ ಮನೆಯ ಕಪಾಟಿನಂತೆ ಕೊಂಡೊಯ್ಯುತ್ತಿದ್ದುದು ವಿಶೇಷವಾಗಿತ್ತು. ಯಾರು ತಂದು ಕೈ ಎತ್ತಿ ಕೊಡುವುದಿಲ್ಲ. ಸಹಾಯ ಮಾಡಲಿಚ್ಚಿಸುವವರು ಈ ರ್ಯಾಕಿನಲ್ಲಿ ತಂದು ಜೋಡಿಸಿ ಹೋಗಿರುತ್ತಾರೆ. ಬೇಕಾದವರು ಬಂದು ಯಾವುದೇ ಆತಂಕ, ಮುಜುಗರಗಳಿಲ್ಲದೆ ಕೊಂಡೊಯ್ಯುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಿಂದ ಮಾಡಿದ ಈ ವಿಶೇಷ ಕಾರ್ಯಕ್ರಮ ಜಿಲ್ಲೆಯಲ್ಲದೇ ರಾಜ್ಯದ ಹೊಸ ಮಾದರಿಯ ಕಾರ್ಯಕ್ರಮವಾಗಿರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಇನ್ನಷ್ಟು ಕಡೆಗಳಲ್ಲಿ ಇಂತಹ…