Author: News Desk Benkiyabale

ತುಮಕೂರು: ಗಿಡ, ಮರ, ಸೂರ್ಯ, ಚಂದ್ರ ಸೇರಿದಂತೆ ಪ್ರಕೃತಿಯು ಬೇರೆಯವರಿಗೆ ಸಹಾಯ ಮಾಡುವ ಪರೋಪಕಾರಿಯಾಗಿದೆ. ಮನುಷ್ಯ ಕೂಡಾ ಪರೋಪಕಾರದ ಪಾಠವನ್ನು ಪ್ರಕೃತಿಯಿಂದ ಕಲಿತು, ಪರೋಪಕಾರ ಮಾಡುತ್ತಾ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಉಳ್ಳವರು ಬಡವರಿಗೆ ಸಹಾಯ ಮಾಡುವ ಔದಾರ್ಯ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಹೇಳಿದರು. ಭಾನುವಾರ ನಗರದಲ್ಲಿ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದಿAದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿಯವರ ಅಕಾಲಿಕ ಮರಣಕ್ಕೀಡಾದ ಮಗ ಗೌತಮ್ ನೆನಪಿನಲ್ಲಿ ಬಡ ಮಕ್ಕಳಿಗೆ ವಿವಿಧ ಸವಲತ್ತು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು. ನಮ್ಮ ಸಮಾಜದಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಅನೇಕ ಶ್ರೀಮಂತರಿದ್ದಾರೆ. ಆದಾಯ ತೆರಿಗೆ, ಇ.ಡಿ. ಅಧಿಕಾರಿಗಳು ದಾಳಿ ಮಾಡಿ ಬಹಿರಂಗ ಮಾಡಿದಾಗಲಷ್ಟೇ ಅವರ ಆಸ್ತಿಪಾಸ್ತಿಯ ಮಾಹಿತಿ ಗೊತ್ತಾಗುತ್ತದೆ. ಅಂತಹ ಶ್ರೀಮಂತರು ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವ ಉದಾರತನ ಹೊಂದಬೇಕು. ಅಗತ್ಯವಿರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಶ್ರೀಮಂತರು ಬೆಳೆಸಿಕೊಳ್ಳಬೇಕು. ಸಂಘದ ಅಧ್ಯಕ್ಷ ಗೋಪಿಯವರು ತಮ್ಮ ಮಗನ…

Read More

ಕೊರಟಗೆರೆ: ದಲಿತ ಸರ್ವೋದಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ, ಹರೀಶ ಬಿಸಿ ಹಾಗೂ ಸಾಮಾಜಿಕ ಹೋರಾಟಗಾರ ಸಿನಿಮಾರಂಗದ ನಿರ್ಮಾಪಕ ನಿರ್ದೇಶಕ ಜಟ್ಟಿ ಅಗ್ರಹಾರ ನಾಗರಾಜು ಎಂಬವರು ಗೌರವಾನ್ವಿತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಲೋಕೋಪಯೋಗಿ ಇಲಾಖೆ ಇವರಿಗೆ, ಕರ್ನಾಟಕ ಸರ್ಕಾರದ ಮಾನ್ಯ ಮಹಾ ಲೆಕ್ಕ ಪಾಲಕರು ವಿಧಾನಸೌಧ ಇವರಿಗೆ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ , ಜಿಲ್ಲಾಧಿಕಾರಿಗಳು ತುಮಕೂರು, ಲೋಕೋಪಯೋಗಿ ಇಲಾಖೆ ತುಮಕೂರು ಸೇರಿದಂತೆ ಇನ್ನಿತರ ತನಿಕಾ ಅಧಿಕಾರಿಗಳಿಗೆ ಇವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಜಂಗಲ್ ಕ್ಲೀನಿಂಗ್ ಹಾಗೂ ರಸ್ತೆ ಪ್ಯಾಚ್ ಹಗಲು ದರೋಡೆ ಕೊರಟಗೆರೆ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ವಹಿಸಿರುವ ಜಂಗಲ್ ಕ್ಲೀನಿಂಗ್ ಹಾಗೂ ರೋಡ್ ಪ್ಯಾಚ್ ಈವರೆಗೂ ಯಾವುದೇ ಕಾಮಗಾರಿಗಳು ಗುಣಮಟ್ಟದಲ್ಲಿ ನಿರ್ವಹಣೆ ಮಾಡಿರುವುದಿಲ್ಲ, ಕಾಟಾಚಾರಕ್ಕೆ ಜಂಗಲ್ ಕ್ಲೀನಿಂಗ್ ಅದು ಒಂದೇ ವಾರಕ್ಕೆ ಇಲ್ಲವೇ ೧೫ ದಿನಗಳೊಳಗೆ ಮತ್ತೆ ಜಂಗಲ್ ಮಾಮೂಲಿಯಾಗಿ ಬೆಳೆಯುವ ರೀತಿಯಲ್ಲಿ ರಸ್ತೆಯ ಎರಡು…

Read More

ತುಮಕೂರು: ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯ ಸಂಘಕ್ಕೆ ತುಮಕೂರು ಜಿಲ್ಲಾ ಘಟಕದಿಂದ ಇಬ್ಬರು ನಿರ್ದೇಶಕರು ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ. ಮೇ.೨೫ ರಂದು ಚುನಾವಣೆ ನಿಗದಿಯಾಗಿದ್ದು, ಸಾಮಾನ್ಯ ಸ್ಥಾನಕ್ಕೆ ಸಮಾಜದ ಯುವ ಮುಖಂಡ ಬಿ.ಚಂದ್ರಬಾಬು ಹಾಗೂ ಮಹಿಳಾ ಮೀಸಲು ಸ್ಥಾನಕ್ಕೆ ಜಿಪಂ ಮಾಜಿ ಸದಸ್ಯೆ ವರಲಕ್ಷ÷್ಮಮ್ಮ ಅವರುಗಳು ಮಾತ್ರ ಕಣದಲ್ಲಿದ್ದುದರಿಂದ ಇಬ್ಬ ರು ಅವಿರೋಧ ಆಯ್ಕೆಯಾಗಿದ್ದಾರೆಂದು ಉಪ ಚುನಾವಣಾಧಿಕಾರಿ ಟಿ.ಎನ್.ಗುರುರಾಜ್ ತಿಳಿಸಿ ದರು. ೨ ನಿರ್ದೇಶಕ ಸ್ಥಾನಕ್ಕೆ ಒಟ್ಟು ಐವರು ನಾಮಪತ್ರ ಸಲ್ಲಿಸಿದ್ದು, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಹೆಬ್ಬೂರು ನಾಗರಾಜಚಾರ್ ಹಿರಿಯ ಮುಖಂಡರಾದ ಡಾ.ಕೆ.ವಿ.ಕೃಷ್ಣಮೂರ್ತಿ, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯ ಕ್ಷ ಗೋವರ್ಧನಚಾರ್, ನಿಗಮದ ಜಿಲ್ಲಾ ನಿರ್ದೇಶಕ ಟಿ.ಸಿ.ಡಮರುಗೇಶ್, ಶೇಖರ್ ಇತರರ ಸಮ್ಮುಖದಲ್ಲಿ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿ ಮೂವರು ಅಭ್ಯರ್ಥಿಗಳಾದ ಚಂದ್ರಶೇಖರ್, ಜಿ.ಲೀಲಾ, ಎಸ್.ಹರೀಶ್ ಅವರು ಉಮೇದುವಾರಿಕೆ ಹಿಂಪಡೆದಿದ್ದರಿAದ ಚಂದ್ರಬಾಬು ಹಾಗೂ ವರಲಕ್ಷಮ್ಮ ಅವರು ಅವಿರೋಧ ಆಯ್ಕೆಯಾಗಲು ಸಾಧ್ಯವಾಯಿತು.

Read More

ತುಮಕೂರು: ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಚಕೋರ (ತುಮಕೂರು ಜಿಲ್ಲೆ ಉಪನ್ಯಾಸ ಮಾಲಿಕೆ-೬) “ಬುಡಕಟ್ಟು ಕಾವ್ಯಗಳಲ್ಲಿ ಮಹಿಳೆ” ಎಂಬ ವಿಷಯದ ಬಗ್ಗೆ ಉಪನ್ಯಾಸಮಾಲೆ ಹಮ್ಮಿಕೊಂಡಿದ್ದು ಸಸಿಗೆ ನೀರರೆಯುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಜನಪ ದ ವಿದ್ವಾಂಸರಾದ ಶ್ರೀ ಉಜ್ಜಜ್ಜಿ ರಾಜಣ್ಣ ಬುಡಕಟ್ಟು ಕಾವ್ಯಗಳಲ್ಲಿ ಮಹಿಳೆ ವಿಷ ಯದ ಬಗ್ಗೆ ಯಾವ ರೀತಿ ಮಹಿಳೆಯರು ಸಮಾ ಜದಲ್ಲಿ ಸೋಲು ಗೆಲುವನ್ನು ಜಾತಿ ಬೇದ ಭಾವವನ್ನು ಎದುರಿಸುತ್ತಾ ಇದ್ದಾರೆ ಹಾಗೂ ಬಂದAತಹ ಕಷ್ಟಗಳಿಗೆ ಪರಿಹಾರವನ್ನು ಕೂಡ ಕಂಡುಕೊAಡು ಸಮಾಜದಲ್ಲಿ ಜೀವಿಸುತ್ತಿದ್ದಾರೆ ಎಂದು ಉಪನ್ಯಾಸಮಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶ್ರೀಮತಿ ಸುಮಾ ಸತೀಶ್ ಚಕೋರ ಆಯೋಜನೆ ಹಾಗೂ ಉಪನ್ಯಾಸ ಮಾಲೆ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾ ಲರದ ಡಾ. ಪಿ ಹೇಮಲತಾ ಅಧ್ಯಕ್ಷತೆ ವಹಿಸಿ ಅಧ್ಯಕ್ಷತೆ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಚಕೋರ…

Read More

ತುಮಕೂರು: ಶಿಕ್ಷಣ ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯುವ ಪ್ರಮುಖಆಸ್ತç. ಹಾಗಾಗಿ ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣವೆಂಬ ಬೆಳಕನ್ನು ತನ್ನದಾಗಿಸಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಹಾಗೂ ಸಲಾಮ್‌ಏಜುಕೇಷನ್‌ಅಂಡ್‌ಚಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ಇಕ್ಬಾಲ್‌ಅಹಮದ್ ತಿಳಿಸಿದ್ದಾರೆ. ನಗರದಇಸ್ರಾ ಶಾದಿಮಹಲ್‌ನಲ್ಲಿ ಅಕ್ಸಾಏಜುಕೇಷನ್ ಸೊಸೈಟಿ ಮತ್ತು ಸಲಾಮ್ ಎಜುಕೇಷನ್ ಅಂಡ್‌ಚಾರಿಟಬಲ್ ಟ್ರಸ್ಟ್ (ರಿ), ತುಮಕೂರು ವತಿಯಿಂದ,ಆರ್.ವೈ.ಟಿ. ಹಾಗೂ ರೆಹಮಾನಿ-೩೦ ಸಂಸ್ಥೆಗಳ ಸಹಯೋಗದಲ್ಲಿ ಹೈಸ್ಕೂಲ್ ಮತ್ತುಕಾಲೇಜು ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕೇರಿಯರ್‌ಗೈಡ್‌ಲೈನ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಲ ಬದಲಾದಂತೆ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ.ಹಾಗಾಗಿ ಪೋಷಕರುತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಲು ಪ್ರಯತ್ನಿಸಬೇಕಿದೆ. ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಹಗರಲಿರುಳು ದುಡಿಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರುಇದರ ಲಾಭವನ್ನು ಪಡೆದು ಕೊಳ್ಳಬೇಕೆಂದರು. ನ್ಯಾ.ರಾಜೇAದ್ರ ಸಾಚಾರ ವರದಿ ಸೇರಿದಂತೆದೇಶದಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿ, ಗತಿಗಳನ್ನು ಅಧ್ಯಯನ ನಡೆಸಿದ ಸಂಸ್ಥೆಗಳ ವರದಿಗಳಲ್ಲಿ ಶಿಕ್ಷಣದಲ್ಲಿ ಅಲ್ಪಸಂಖ್ಯಾತರು, ಅದರಲ್ಲಿಯೂ ಮುಸ್ಲಿಂರು ಶೈಕ್ಷಣಿಕವಾಗಿ ಬಹಳ ಹಿಂದುಳಿದ್ದಾರೆ. ಹೈಸ್ಕೂಲ್ ನಂತರದಲ್ಲಿಅವರ ಸಂಖ್ಯೆಇನ್ನೂಕಡಿಮೆ.ಹಾಗಾಗಿ ಅಕ್ಸಾ, ಸಲಾಮ್ ಸೇರಿದಂತೆ ಹಲವಾರು ಸಂಸ್ಥೆಗಳು ಸಮುದಾಯದ ಶೈಕ್ಷಣಿಕ…

Read More

ತುಮಕೂರು: ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿAಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಏರ್ಪಟ್ಟಿದ್ದಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾವೈಭವ ಕಲೋತ್ಸವ-೨೫ದಲ್ಲಿ ಕನ್ನಡಸಿನಿ ತಾರೆಯರದಂಡು ಪಾಲ್ಗೊಳ್ಳುವ ಮೂಲಕ ಮೆರಗುತಂದರೆ, ಇಂಜಿನಿಯರಿAಗ್ ವಿದ್ಯಾರ್ಥಿಗಳ ಕಲಾ ಕೌಶಲ್ಯ ಸಿರಿವಂತಿಕೆ ಅನಾವರಣಗೊಂಡಿದೆ. ಶನಿವಾರ ಸಂಜೆ ನಡೆದ ಸಮರೋಪ ಮತ್ತು ಬಹುಮಾನ ವಿರತಣೆ ಕಾರ್ಯಕ್ರಮದಲ್ಲಿ ಸಿನಿ ತಾರೆಯರರಾದ ನಟ ಅನಿರುದ್ದ ಮತ್ತು ದಿಗಂತ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇಬ್ಬರೂ ನಟರು ಕ್ಯಾಂಪಸ್‌ನಲ್ಲಿ ಗಿಡನೆಟ್ಟು ಆನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಅನಿರುದ್ದ ಅವರು, ಕಾಲೇಜಿನ ಹಸಿರು ಕ್ಯಾಂಪಸ್ ಉಳಿಸಿಕೊಳ್ಳುವ ಆಂದೋಲನದ ಭಾಗವಾಗಿ ಗಿಡ ನೆಟ್ಟು ಪರಿಸರ ಉಳಿಸಿದ್ದರಿ. ಈ ಸಾಮಾಜಿಕ ಕಳಕಳಿಯ ಕೆಲಸ ಮುಂದುವರಿಯಲಿ. ಬುದ್ದನ ತತ್ವಾದರ್ಶಗಳು ಎಲ್ಲರಿಗೂ ಆದರ್ಶವಾಗಲಿ. ಅವರ ಚಿಂತನೆಯ ಮಾತುಗಳು ಭವಿಷ್ಯಕ್ಕೆ ನಾಂದಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ಜೊತೆ ಸಾಮಾಜಿಕ ಕಳಕಳಿಯ ಬದ್ದತೆಯನ್ನು ಮೈಗೂಢಿಸಿಕೊಳ್ಳಿ ಎಂದು ಕರೆ ನೀಡಿದರು. ಮತ್ತೋರ್ವ ನಟ ದಿಗಂತ್ ಮಾತನಾಡಿ, ಕಾಲೇಜ್ ವಾತಾವರಣ ಹಸಿರುಮಯವಾಗಿದೆ. ಕಾಲೇಜಿನಲ್ಲಿ…

Read More

ತುಮಕೂರು: ಸ್ಲಂ ಜನರಿಗೆ ನೀಡಿರುವ ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಹಾಗೂ ಭೂಮಿ, ವಸತಿಗೆ ಸಂಬAಧಿಸಿದ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ತಿಳಿಸಿದರು. ನಗರದಲ್ಲಿ ಭಾನುವಾರ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಸ್ಲಂ ಸಮಿತಿ ಯಿಂದ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಸ್ಲಂ ಜನರ ಸಾಂಸ್ಕೃತಿಕ ಕಲಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿರುವ ಸ್ಲಂ ಜನರು ಕನಿಷ್ಟ ಸೌಲಭ್ಯದಲ್ಲಿ ಬದುಕುತ್ತಿದ್ದು ಸಂವಿಧಾನದ ಸಾಮಾಜಿಕ ನ್ಯಾಯವನ್ನು ಈ ಜನರಿಗೆ ತಲುಪಿಸಲು ಈಗಿನ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡ ಞಬೇಕು ಲ್ಯಾಂಡ್ ಬ್ಯಾಂಕ್, ವಸತಿ ಹಕ್ಕು ಕಾಯಿದೆ ಮತ್ತು ನಗರ ಉದ್ಯೋಗ ಖಾತ್ರಿ ಜಾರಿಗೆ ಈಗಾಗಲೇ ವಿಧಾನ ಸಭೆಯಲ್ಲಿ ಸಂಘಟನೆ ನೀಡಿದ ಮಾಹಿತಿ ಆಧಾರಿಸಿ ಪ್ರಶ್ನೆ ಕೇಳಲಾಗಿದೆ. ತುಮಕೂರಿನ ವಸತಿ ರಹಿತರಿಗೆ ಮತ್ತು ಕೋಡಿಹಳ್ಳ, ಇಸ್ಮಾಯಿಲ್ ನಗರ ಹಂದಿ ಜ್ಯೋಗಿಗಳಿಗೆ ಶೀಘ್ರದಲ್ಲೇ ವಸತಿ ಹಂಚಿಕೆ ಮಾಡಲು…

Read More

ತುಮಕೂರು: ಪರಿಶಿಷ್ಟ ಜಾತಿಯ ೧೦೧ ಉಪ ಪಂಗಡಗಳ ನಿಖರ ಜನಸಂಖ್ಯೆ ತಿಳಿಯಲು ಹಾಗೂ ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔಧ್ಯೋಗಿಕ ಸ್ಥಾನ, ಮಾನಗಳ ತಿಳಿಯಲು ಅನುಕೂಲವಾಗುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗ ಮೋಹನದಾಸ್ ಆಯೋಗವನ್ನು ಸರ್ಕಾರ ರಚಿಸಿದ್ದು ಈ ಹಿನ್ನೆಲೆಯಲ್ಲಿ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸು ವಾಗ ಪೂರ್ಣ ಮಾಹಿತಿ ಪಡೆಯದೆ ಅಪೂರ್ಣ ಮಾಹಿತಿಯನ್ನು ಒಳಗೊಂಡ ನಮೂನೆಗೆ ಮಾಹಿತಿದಾರರ ಸಹಿ ಪಡೆದು ಬರುತ್ತಿರುವ ಬಗ್ಗೆ ಮಾಹಿತಿ ಬಂದಿರುವುದಾಗಿ ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ತಿಳಿಸಿದರು. ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗಣತಿದಾರರು ಪೂರ್ಣ ಪ್ರಮಾಣದಲ್ಲಿ ಮಾಹಿತಿ ಪಡೆದು ಒಳ ಮೀಸಲಾತಿ ವರ್ಗೀಕರಣ ಮತ್ತು ನಿಖರ ಜನಸಂಖ್ಯೆ ತಿಳಿಯುವ ಆಯೋಗದ ಉದ್ದೇಶ ಸಂಪೂರ್ಣವಾಗಿ ಯಶಸ್ವಿಗೊಳ್ಳು ವಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಒಳ ಮೀಸಲಾತಿ ಸಮೀಕ್ಷೆಯ ಅರ್ಜಿ ನಮೂನೆಯಲ್ಲಿ ೨-೩ ವಿಷಯಗಳನ್ನು ನಮೂದಿಸದೆ ಸಹಿ ಪಡೆಯುತ್ತಿರುವ ಬಗ್ಗೆ ಆರೋಪ…

Read More

ಶಿರಾ: ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ತುಮುಲ್ ನಿರ್ದೇಶಕ ಎಸ್. ಆರ್.ಗೌಡ ಜಿಲ್ಲೆಯಲ್ಲೇ ಪ್ರಥಮ ಭಾರಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಶಿರಾ ನಗರದ ನಂದಿನಿ ಕ್ಷೀರ ಭವನದಲ್ಲಿ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ನಿ., ತುಮಕೂರು ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ತುಮಕೂರು ಹಾಗೂ ಸಹಕಾರ ಇಲಾಖೆ, ತುಮಕೂರು ಇವರ ಸಹಯೋಗದಲ್ಲಿ ಅಮ್ಮಿಕೊಂಡಿದ್ದು, ಈ ವಿಶೇಷ ತರಬೇತಿಯನ್ನು ತಾಲ್ಲೂಕಿನ ಎಲ್ಲಾ ಹಾಲಿನ ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಸದುಪಯೋಗ ಪಡಿಸಿಕೊಂಡು, ಈ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯವಾಗಿ ಕಾರ್ಯದರ್ಶಿಗಳ ಕರ್ತವ್ಯ ಮತ್ತು ಜವಾಬ್ದಾರಿ, ಕಡತಗಳ ನಿರ್ವಹಣೆ ಹಾಗೂ ಸಹಕಾರ ಸಂಘಗಳ ಚುನಾವಣೆ ನಡೆಸುವ ವಿಧಿ ವಿಧಾನಗಳು ಮತ್ತು ಇತ್ತೀಚಿನ ಕಾನೂನು ತಿದ್ದುಪಡಿ ಅಂಶಗಳ ಹಾಗೂ ಪ್ರಮುಖವಾಗಿ ಶುದ್ಧ ಹಾಲು ಉತ್ಪಾದನೆ ಬಗ್ಗೆ ಕುರಿತು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.…

Read More

ಚಿಕ್ಕನಾಯಕನಹಳ್ಳಿ: ಎಸ್ ಸಿ ಎಸ್ ಟಿ ಜನಾಂಗದವರಲ್ಲಿನ ಬಡವರ ಆರ್ಥಿಕ ಸದೃಡತೆಗಾಗಿ ಪಶುಸಂಗೋಪನಾ ಇಲಾಖೆಯವತಿಯಿಂದ ಕುಕ್ಕುಟಪಾಲನೆಗಾಗಿ ಉಚಿತವಾಗಿ ನಾಟಿಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ಪಶುಸಂಗೋಪನಾ ಇಲಾಖೆಯಲ್ಲಿ ಶುಕ್ರವಾರ ಕುಕ್ಕುಟಪಾಲನೆಗಾಗಿ ಅರ್ಹ ಪಲಾನುಭವಿಗಳಿಗೆ ಕೋಳಿಮರಿಗಳನ್ನು ನೀಡಿ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಬಡವರನ್ನು ಗುರುತಿಸಿ ತಾಲ್ಲೂಕಿನ ೬೭ಜನ ಮಹಿಳಾ ಪಲಾನು ಭವಿಗಳಿಗೆ ಒಬ್ಬರಿಗೆ ೨೧ ನಾಟಿ ಕೋಳಿಮರಿಗಳನ್ನು ವಿತರಣೆ ಮಾಡುತ್ತಿದ್ದು ಇದನ್ನು ಮಹಿಳೆಯರು ಚೆನ್ನಾಗಿ ಬೆಳೆಸಿ ಮೊಟ್ಟೆಗಳನ್ನು ಮಾರಾಟ ಮಾಡುವುದು ಹಾಗೂ ತಿನ್ನುವ ಮೂಲಕ ಉತ್ತಮ ಆರೋಗ್ಯ ಪಡೆಯಿರಿ ಕೋಳಿಯನ್ನು ಉತ್ತಮವಾಗಿ ಸಾಕಿ ಅವುಗಳನ್ನೇ ಕುಯ್ದುಕೊಂಡು ತಿನ್ನಬೇಡಿ ನಿಮ್ಮ ಕೌಟುಂಬಿಕ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು. ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗಭೂಷಣ್ ಮಾತನಾಡಿ ತುಮಕೂರು ಜಿಲ್ಲಾಪಂಚಾಯತಿ ವತಿಯಿಂದ ಕುಕ್ಕುಟಪಾಲನೆಗಾಗಿ ಕೋಳಿ ಮರಿಗಳನ್ನು ಅರ್ಹ ಪಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆಮಾಡಲಾಗಿದೆ ಬಡ ರೈತ ಮಹಿಳೆಯರಿಗಾಗಿ ಇದ್ದು ಚೆನ್ನಾಗಿ ಸಾಕಿ…

Read More