Author: News Desk Benkiyabale

ಪಾವಗಡ: ಯುವಜನತೆಯು ದೇಶದ ಪ್ರಬಲ ಶಕ್ತಿಯಾಗಿದೆ ಪ್ರಬಲವಾಗಿರುವಂತಹ ಮಾನವ ಸಂಪನ್ಮೂಲವನ್ನು ದೇಶದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀಮದ್ ಜಪಾನಂದ ಜಿ ಮಹಾರಾಜ್ ಅವರು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇಂಕ್ ಇಂಪ್ಯಾಕ್ಟ್ ಸರ್ವಿಸಸ್ ಪ್ರೈ.ಲಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿದಂತಹ ಶ್ರೀಮದ್ ಜಪಾನಂದ ಜಿ ಮಹಾರಾಜ್ ರವರು ಮಾತನಾಡಿದರು ಗಡಿ ಭಾಗವಾದ ಪಾವಗಡಕ್ಕೆ ಹೆಸರಾಂತ ಹಲವು ಕಂಪನಿಗಳು ಬಂದಿವೆ ಇದನ್ನು ಪಾವಗಡದ ಜನತೆಯು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು. ಪಾವಗಡದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶ್ರೀಮತಿ ಇಂದ್ರಾಣಮ್ಮನವರು ಮಾತನಾಡಿ ಪಾವಗಡದ ಮೂಲದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ವಿದೇಶಗಳಲ್ಲೂ ತಮ್ಮನ್ನು ತಾವು ಬಿಂಬಿಸಿಕೊAಡಿದ್ದಾರೆ ಪಾವಗಡದಲ್ಲಿ ಶಿಕ್ಷಣಕ್ಕೆ ಉತ್ತಮವಾದ ರೀತಿಯ ಉತ್ತೇಜನವನ್ನು ಶ್ರೀ ಸ್ವಾಮಿ ಜಪಾನಂದ…

Read More

ತುಮಕೂರು: ದಲಿತರ ಮೇಲೆ ಹೆಚ್ಚಾಗುತ್ತಿರುವ ಕೊಲೆ,ದೌರ್ಜನ್ಯ,ಅಸ್ಪೃಶ್ಯತಾಚರಣೆ, ಕೌಂಟರ್ ಕೇಸ್, ಮರ್ಯಾದೆ ಹತ್ಯೆ ತಡೆಯಲು ರಾಜ್ಯ ಸರ್ಕಾರ ಕ್ರಮ ವಹಿಸಲು ಒತ್ತಾಯಿಸಿ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆಯ ಭಾಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ನಡೆಸಿ ಸ್ಥಾನಿಕ ಅಧಿಕಾರಿಗಳಾದ ಶ್ರೀ ಮೋಹನ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷರಾದ ಗೋಪಾ ಲಕೃಷ್ಣ ಹರಳಹಳ್ಳಿ ಮಾತನಾಡಿ ಮಂಡ್ಯದ ಕೆ.ಆರ್ ಪೇಟೆ ದಲಿತ ಜಯಕುಮಾರ್ ಎಂಬ ದಲಿತನನ್ನು ಸಜೀವವಾಗಿ ದಹನ ಮಾಡಿ ಕೊಲೆ ಮಾಡಲಾಗಿದೆ, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಕವಣಗಾಲದಲ್ಲಿ ದಲಿತ ಯುವಕ ಸ್ವಾಮಿನಾಥ ದೇವಲಾಯ ಪ್ರವೇಶ ಮಾಡಿದ ಎಂಬ ಕಾರಣಕ್ಕಾಗಿ ಇಡೀ ಗ್ರಾಮದ ಮೇಲ್ಜಾತಿಯವರು ಬಹಿಷ್ಕಾರ ಹಾಕಿದ ಘಟನೆ, ತುಮಕೂರಿನ ಪಂಚಾಯತ್ ರಾಜ್ ಇಲಾ ಖೆಯಲ್ಲಿ ಓಂಕಾರ್ ಮೂರ್ತಿ ಎಂಬ ದಲಿತ ಸಮುದಾಯದ ಸಿಬ್ಬಂದಿಗೆ ನಿರಂತರವಾಗಿ ಜಾತಿ ತಾರತಮ್ಯ ಮಾಡಿ ದರ‍್ಜನ್ಯವೆಸಗಲಾಗಿದೆ ಆ ದರೆ ಇದೂವರೆಗೂ ದೂರು ದಾಖಲಿಸಿಲ್ಲ, ದಲಿತ ಸಮುದಾಯದ ವರದಿಗಾರನ ಮೇಲೆ ಜಾತಿ…

Read More

ಚಿಕ್ಕನಾಯಕನಹಳ್ಳಿ: ಪುರಸಭಾ ಅನುದಾನದಲ್ಲಿ ಬೆಸ್ಕಾಂ ನಡೆಸಿದ ವಿದ್ಯುತ್ ಕಂಬದ ಬದಲಾವಣೆ ಕಾಮಾಗಾರಿ, ಸರಕಾರಿ ಬಸ್‌ಗಳ ಕೊರತೆ, ಡಿಪೋ ಸಮಸ್ಯೆ ಹಾಗು ಬೆಸ್ಕಾಂ ಅಕ್ರಮ ಸಕ್ರಮ ಯೋಜನೆ ಸೇರಿದಂತೆ ಹಲವು ಸಮಸ್ಯೆಗಳು ಇಲ್ಲಿ ಬುಧವಾರ ನಡೆದ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದವು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕ್ರಮ ಮತ್ತು ತಾಲ್ಲೂಕಿನ ಅಭಿವೃದ್ದಿಗೆ ಅಗತ್ಯವಿರುವ ಕಾರ್ಯಗಳ ಕುರಿತು ಚರ್ಚೆಗಳು ನಡೆದವು. ಸಭೆಯಲ್ಲಿ ಭಾಗವಹಿದ್ದ ಅಧಿಕಾರಿಗಳು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದರು. ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಿದ್ದು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಮಾಣಿಕತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹಾಗು ಫಲಾನುಭವಿಗಳೊಂದಿಗೆ ಮುಕ್ತ ಸಂವಾದ ನಡೆಸುವುದು. ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ಸ್ಪಂದಿಸುವAತೆ ಗ್ಯಾರಂಟಿ ಸಮಿತಿ ಸದಸ್ಯರಿಗೆ ಅಧ್ಯಕ್ಷ ಚಂದ್ರಶೇಖರ್ ಸೂಚಿಸಿದರು. ಶಕ್ತಿ ಯೋಜನೆಯಲ್ಲಿ ಉತ್ತಮ…

Read More

ಹುಳಿಯಾರು: ಚೆನ್ನಾಗಿದ್ದ ಡಾಂಬಾರ್ ರಸ್ತೆ ಮೇಲೆ ಮಣ್ಣು ಹಾಕಿ ಕೆಸರು ಗದ್ದೆಯಾಗುವಂತೆ ಮಾಡಿ ಸುಗಮ ಸಂಚಾರಕ್ಕೆ ತೊಡಕು ಮಾಡಿದ್ದಾರೆ ಎಂದು ಹೋಬಳಿಯ ಕಲ್ಲಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಚಿಕ್ಕಬಿದರೆ ಗ್ರಾಮದಿಂದ ನಂದಿಹಳ್ಳಿಗೆ ಡಾಂಬರು ರಸ್ತೆಯಿದ್ದು ಕಲ್ಲಹಳ್ಳಿ ಗ್ರಾಮದ ಮೂಲಕ ಹಾದು ಹೋಗಿದೆ. ಗ್ರಾಮದಲ್ಲಿ ಡಾಂಬರು ರಸ್ತೆಯ ಎರಡು ಕಡೆ ನೀರು ಹರಿದು ಹೋಗಲು ೬ ತಿಂಗಳ ಹಿಂದೆ ಚರಂಡಿ ನಿರ್ಮಿಸಿದ್ದರು. ಈಗ ಈ ಚರಂಡಿ ಪಕ್ಕಕ್ಕೆ ಸಮತಟ್ಟು ಮಾಡಲು ಮಣ್ಣು ಹಾಕಿದ್ದಾರೆ. ಜೆಸಿಬಿ ಮೂಲಕ ಮಣ್ಣು ಸಮತಟ್ಟು ಮಾಡುವಾಗ ಡಾಂಬಾರ್ ರಸ್ತೆಯ ಮೇಲೆಲ್ಲ ಮಣ್ಣು ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಡಾಂಬರ್ ರಸ್ತೆಯ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯುವಂತೆ ಗುತ್ತಿಗೆದಾರರನ್ನು ಕೇಳಿಕೊಂಡರು ತೆಗೆಯದೆ ನಿರ್ಲಕ್ಷಿö್ಯಸಿದ್ದಾರೆ. ಪರಿಣಾಮ ಮಳೆ ಬಿದ್ದಾಗ ಕೆಸರು ಗದ್ದೆಯಾಗಿಗೂ, ಬೇಸಿಗೆಯಲ್ಲಿ ಧೂಳಿನ ರಸ್ತೆಯಾಗಿಯೂ ಪರಿವರ್ತನೆಯಾಗಿ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಚರಂಡಿಯನ್ನೂ ಸಹ ಅನಾವಶ್ಯಕವಾಗಿ ಮಾಡಿದ್ದಾರಲ್ಲದೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲೇ ನಿಲ್ಲುವಂತೆ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಇದರಿಂದ…

Read More

ತುರುವೇಕೆರೆ: ಜಿಲ್ಲೆಯ ರೈತರಿಗೆ ಮರಣ ಶಾಸನದಂತಾಗಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಸರ್ಕಾರವನ್ನು ಎಚ್ಚರಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಲಿಂಕ್ ಕೆನಾಲ್ ಕಾಮಗಾರಿಯಿಂದ ಜಿಲ್ಲೆಯ ಏಳೆಂಟು ತಾಲ್ಲೂಕಿಗೆ ದೊಡ್ಡ ಅಪಾಯವಾಗಲಿದೆ. ಕುಣಿಗಲ್ ತಾಲ್ಲೂಕಿಗೆ ನೀರು ಹರಿಸಬೇಕೆಂದರೆ ಮೂಲ ನಾಲೆಯ ಮೂಲಕ ತೆಗೆದುಕೊಂಡು ಹೋಗಲಿ ನಮ್ಮದ್ದು ಯಾವುದೇ ಅಭ್ಯಂತರವೇನಿಲ್ಲ. ಆದರೆ ನೀವು ಲಿಂಕ್ ಕೆನಾಲ್ ಮಾಡಿ ಪೈಪ್ ಗಳನ್ನು ಮೂಲಕ ನೀರನ್ನು ತೆಗೆದುಕೊಂಡು ಹೋದಲ್ಲಿ ಜಿಲ್ಲೆಯ ಏಳೆಂಟು ತಾಲ್ಲೂಕುಗಳಿಗೆ ಮರಣ ಶಾಸನವಾಗಲಿದೆ. ಕೂಡಲೇ ಈ ಕಾಮಗಾರಿಯನ್ನು ಸರ್ಕಾರ ವಾಪಸ್ ಪಡೆಯಬೇಕೆಂದು ನಾವುಗಳು ಒತ್ತಾಯ ಮಾಡುತ್ತೇವೆ ಎಂದರು. ಸುಮಾರು ಒಂದೂವರೆ ವರ್ಷದಿಂದಲೂ ನಾವುಗಳು ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ. ನೀವು ೭೦ನೇ ಕಿ.ಮೀ.ನಲ್ಲಿ ೫೦೦ ಕ್ಯೂಸೆಕ್ಸ್ ನೀರನ್ನು ಕುಣಿಗಲ್ ಭಾಗಕ್ಕೆ ಹರಿಸಿದರೆ ಇನ್ನು ಏಳು ತಾಲ್ಲೂಕಿಗೆ ೬೦೦…

Read More

ತುರುವೇಕೆರೆ: ಸಾರ್ವಜನಿಕರು ನೀಡಿದ ದೂರುಗಳ ಪರಿಶೀಲನೆಗಾಗಿ ಜಿಲ್ಲಾ ಲೋಕಾ ಯುಕ್ತ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿಯವರು ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಲೋಕಾಯುಕ್ತರಿಗೆ ಬಂದಿದ್ದ ದೂರು ಗಳ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂ ಡಿದ್ದಾರೆಂದು ಪರಿವೀಕ್ಷಣೆ ಮಾಡಿದರು.ಈ ವೇಳೆ ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿಯ ಸಿಬ್ಬಂದಿಯೇ ತಮಗೆ ನೀಡಲಾಗಿದ್ದ ನಿವೇಶನದ ಬದಲಿಗೆ ಹೊಂದಿ ಕೊಂಡAತಿರುವ ಪಂಚಾಯಿತಿಯ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂದು ರಂಗ ಸ್ವಾಮಿ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತದಿಂದ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದಾಗ್ಯೂ ಸಹ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂ ಡಿಲ್ಲವೆಂದು ಪುನಃ ರಂಗಸ್ವಾಮಿ ಉಪ ಲೋಕಾ ಯುಕ್ತರಿಗೇ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ತಮ್ಮ ಸಿಬ್ಬಂದಿ ಸಹಿತ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಮುಖ್ಯಾದಿಕಾರಿಗಳ ಜೊತೆ ಚರ್ಚೆ…

Read More

ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಬುಧವಾರ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಧರ್ಮಪತ್ನಿಯಾದ ಲೇಟ್ ರಮಾಬಾಯಿ ಅವರ ಪರಿನಿಬ್ಬಾಣ ದಿವಸ್ ಆಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಹಮ್ಮಿಕೊಳ್ಳಲಾಗಿತ್ತು. ರಮಾಬಾಯಿರವರ ಪರಿನಿಬ್ಬಾಣ ದಿವಸ್ ಕುರಿತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡುತ್ತಾ ರಮಾಬಾಯಿರವರು ವಿಧಿವಶರಾದ ಐದು ವರ್ಷಗಳ ತರುವಾಯ ಡಾ. ಬಿ.ಆರ್.ಅಂಬೇಡ್ಕರರು ‘ದಿ ಪಾರ್ಟಿಷನ್ ಆಫ್ ಇಂಡಿಯಾ’ ಎಂಬ ವಿದ್ವತ್ ಪೂರ್ಣ ಗ್ರಂಥವನ್ನು ಬರೆದು ಅದನ್ನು ಅವರ ಪತ್ನಿ ರಮಾಬಾಯಿ ಅವರಿಗೆ ಸಮರ್ಪಿಸಿದರು, ಈ ಕೃತಿಯು ೧೯ನೇ ಶತಮಾನದಲ್ಲಿ ಪತ್ನಿಯೊಬ್ಬರಿಗೆ ಸಮರ್ಪಣೆ ಮಾಡಿದ ಮೊಟ್ಟ ಮೊದಲ ಕೃತಿ ಎನ್ನಲಾಗಿದೆ. ಅಂಬೇಡ್ಕರ್‌ರವರಿAದ ರಚಿತವಾದ ಆ ಕೃತಿಯನ್ನು ರಮಾಬಾಯಿ ಅವರಿಗೆ ಸಮರ್ಪಿಸುವ ಸಲುವಾಗಿ ನಾಲ್ಕು ಸಾಲುಗಳನ್ನು ಬರೆಯುತ್ತಾ ‘ಆಕೆಯ…

Read More

ಪಾವಗಡ: ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ ೫೫೦ ಲೀಟರ್ ಅಷ್ಟು ಆಮ್ಲಜನಕ ಬೇಕು ಎಂದು ಡೌನ್ ಟೆಂಪ್ ಫೌಂಡೇಷನ್ ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಯಾತೀಷ್ ಎನ್.ಎಸ್ ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ಮತ್ತು ಅಧ್ಯಯನ ಕೇಂದ್ರ, ಡೌನ್ ಟೆಂಪ್ ಫೌಂಡಷನ್ ಸಹಯೋಗದಲ್ಲಿ ಬುಧವಾರ ಪಾವಗಡ ನಗರದ ಮರಗಳ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಗೆ ಒಂದು ದಿನಕ್ಕೆ ೫೫೦ ಲೀಟರಿನಷ್ಟು ಆಮ್ಲಜನಕ ಬೇಕು, ಒಂದು ಮರ ಒಂದು ದಿನಕ್ಕೆ ೨೨೦ ಲೀಟರಿನಷ್ಟು ಆಮ್ಲಜನಕವನ್ನು ಉತ್ಪದಿಸುತ್ತವೆ. ಒಬ್ಬ ವ್ಯಕ್ತಿಗೆ ಕನಿಷ್ಠ ೨ ಮರಗಳಾದರೂ ಬೇಕು, ಆದರೆ ನಗರೀಕರಣ ಮತ್ತು ಬೇರೆ ಉದ್ದೇಶಗಳಿಗಾಗಿ ಮರಗಳನ್ನು ಕಡಿಯಲಾಗುತ್ತಿದ್ದು ಪರಿಸರದಲ್ಲಿ ಅಸಮತೋಲನ ನಿರ್ಮಾಣವಾಗಿದೆ, ಆದ ಕಾರಣ ಮರಗಳ ಗಣತಿ ಮತ್ತು ಅವುಗಳ ಆಮ್ಲಜನಕ ಉತ್ಪಾದನೆಯ ವರದಿಯು ಜನಸಂಖ್ಯೆಗೆ ಅನುಗುಣವಾದ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಲಿದೆ ಎಂದರು. ಶಿಬಿರಾರ್ಥಿಗಳಿಗೆ ಮರಗಳ ಗಣತಿಯನ್ನು ಹೇಗೆ ಮಾಡಬೇಕು ಎಂಬ ತರಬೇತಿಯನ್ನು ನೀಡಲಾಯಿತು ಮತ್ತು ಶಿಬಿರಾರ್ಥಿಗಳು ವಿವಿಧ ಬಗೆಯ…

Read More

ಕೊರಟಗೆರೆ: ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವಲ್ಲಿ ಮಲತಾಯಿ ದೋರಣೆ ಮಾಡುತ್ತಿದೆ ಎಂದು ಕೊರಟಗೆರೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕ ಮತ್ತು ನೀರು ಸರಬರಾಜು ನೌಕರರ ಸಂಘವು ದಿನನಿತ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡು ತಹಶೀಲ್ದಾರ್‌ಗೆ ಮತ್ತು ಪ.ಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಕರೆಗೆ ಇಲ್ಲಿನ ಪ.ಪಂ ಪೌರ ನೌಕರರು ಕರ್ತವ್ಯಕ್ಕೆ ಗೈರಾಗಿ ದಿನನಿತ್ಯ ಕೆಲಸವನ್ನು ಸ್ಥಗಿತಗೊಳಿಸಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ (ಮೇ.೨೭)ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಪ.ಪಂ ಅಧಿಕಾರಿ ವರ್ಗ ಕಚೇರಿಗೆ ಬೀಗ ಹಾಕಿ ಮುಷ್ಕರದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಪೌರ ನೌಕರರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಪೌರ ನೌಕರರ ಸಂಘದ ಅಧ್ಯಕ್ಷ ಎನ್.ನರಸಿಂಹ ಮಾತನಾಡಿ, ರಾಜ್ಯಾದ್ಯಂತ ಪೌರ ಕಾರ್ಮಿಕರು ತಮ್ಮ ಹಕ್ಕಿಗಾಗಿ ಮುಷ್ಕರ ಕೈಗೊಂಡಿದ್ದಾರೆ. ರಾಜ್ಯಾಧ್ಯಕ್ಷರ ಕರೆಗೆ ಎಲ್ಲಾ ಪೌರ ನೌಕರರು ತಮ್ಮ…

Read More

ಚಿಕ್ಕನಾಯಕನಹಳ್ಳಿ: ಗುಣಮಟ್ಟದ ಆಹಾರ ವಸತಿ ವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳಿಗೆ ಇರುವಂತಹ ಸೌಲಭ್ಯಗಳ ಬಗ್ಗೆ ಶಾಸಕ ಸಿ.ಬಿ.ಸುರೇಶ್ ಬಾಬು ವಿದ್ಯಾರ್ಥಿನಿಯಕ್ಕೆ ಬೇಟಿ ನೀಡಿ ಪರಿಶಿಲನೆ ನಡೆಸಿದರು. ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆಯ ಮೇಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಸೋಮವಾರ ಸಂಜೆ ದಿಡೀರ್ ಬೇಟಿ ನೀಡಿದ ಅವರು ಅಡುಗೆ ಕೋಣೆ , ಲೈಬ್ರೆರಿ ಸೇರಿದಂತೆ ವಿದ್ಯಾರ್ಥಿನಿಲಯವನ್ನು ವೀಕ್ಷಿಸಿದರು ಈ ಸಂದರ್ಭ ದಲ್ಲಿ ಮಾತನಾಡಿದ ಅವರು ಸರ್ಕಾರ ಬಡವರಿಗಾಗಿ ವಸತಿ ಶಾಲೆಗಳನ್ನು ತೆರೆಯುತ್ತಿದ್ದು ಅದರಲ್ಲಿ ಸೀಟ್ ಸಿಗದೇ ಇರುವಂತಹವರು ವಿದ್ಯಾರ್ಥಿನಿಲಯಗಳಲ್ಲಿದ್ದು ಕೊಂಡು ಶಿಕ್ಷಣ ಪಡೆಯುವಂತೆ ಮಾಡಿದೆ ಅದ್ದರಿಂದ ಇಂತಹ ವಿದ್ಯಾರ್ಥಿನಿಲುಯಗಳಲ್ಲಿ ಗುಣಮಟ್ಟದ ಊಟ ಹಾಗೂ ವಸತಿಯನ್ನು ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹಾಗು ಹಾಸ್ಟೇಲ್ ನಲ್ಲಿದ್ದು ಕೊಂಡು ಓದುವಂತಹ ವಿದ್ಯಾರ್ಥಿಗಳ ಪಲಿತಾಂಶವು ಹೆಚ್ಚು ಬರಬೇಕು ಇದರತ್ತ ಗಮನಹರಿಸಬೇಕು ಎಂದಅವರು ಸಮಯವನ್ನು ಹಾಳು ಮಾಡದೇ ಪೋಷಕರ ಕನಸನ್ನು ನನಸು ಮಾಡುವಂತಹ ಉತ್ತಮವಾದ ಭವಿಷ್ಯವನ್ನು ಅದ್ಯಯನ ಮಾಡುವ ಮೂಲಕ ರೂಪಿಸಿಕೊಳ್ಳಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಸ್ಟೇಲ್ ಗೆ…

Read More