ಕರಡಿ ದಾಳಿ : ಗಂಭೀರ ಗಾಯ

ಮಧುಗಿರಿ :

      ಬೆಳಗಿನ ಜಾವ 5 ಗಂಟೆಗೆ ಹೊಲದ ಕೆಲಸಕ್ಕೆಂದು ಹೋಗುತ್ತಿದ್ದ ರೈತ ಮೇಲೆ ಕರಡಿಯೊಂದು ದಾಳಿ ಮಾಡಿ ಗಂಬೀರವಾಗಿ ಗಾಯಗೊಳಿಸಿದೆ.

      ತಾಲೂಕಿನ ಕಸಬಾ ವ್ಯಾಪ್ತಿಯ ಹಳೇಹಟ್ಟಿ ಗ್ರಾಮದ ರೈತ ಚಿಗಲಿಂಗಪ್ಪ(60) ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಬೆಳಗ್ಗೆ ಹೊಲದ ಕೆಲಸಕ್ಕೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಕರಡಿಯೊಂದು ಏಕಾಎಕಿ ದಾಳಿ ಮಾಡಿ ತೊಡೆಯ ಭಾಗಕ್ಕೆ ಗಂಬೀರವಾಗಿ ಗಾಯಗೊಳಿಸಿದೆ.

      ಈ ಸಂದರ್ಭದಲ್ಲಿ ರೈತ ಜೋರಾಗಿ ಕಿರುಚಿಕೊಂಡಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಕರಡಿಯನ್ನು ಓಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದು, ಚಿಗಲಿಂಗಪ್ಪ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

(Visited 7 times, 1 visits today)

Related posts