ಮಾಸ್ಟರ್ ಹಿರಣ್ಣಯ್ಯ ವಿಧಿವಶ!!

ಬೆಂಗಳೂರು:        ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ರಂಗಭೂಮಿ ಕಲಾವಿದ ಮಾಸ್ಟರ್​ ಹಿರಣ್ಣಯ್ಯ ಅವರು ಗುರುವಾರ ನಗರದ ಉತ್ತರಹಳ್ಳಿಯ ಬಿಜಿಎಸ್​ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.       ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ  ಮಾಸ್ಟರ್ ಹಿರಣ್ಣಯ್ಯ  ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.       ಹಿರಣ್ಣಯ್ಯ ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ.        ಬೆಳಗ್ಗೆ ನಿಧನರಾದ ಮಾಸ್ಟರ್​ ಹಿರಣ್ಣಯ್ಯ ಅವರ ಅಂತ್ಯ ಸಂಸ್ಕಾರ ಬನಶಂಕರಿ ವಿದ್ಯುತ್​ ಚಿತಾಗಾರದಲ್ಲಿ ಸಂಜೆ ನೆರವೇರಿತು. ಅವರ ಮೂವರು ಪುತ್ರರು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ವಿಧಿವಿಧಾನ ಪೂರೈಸಿದರು.      ಪುತ್ರರಾದ ಬಾಬು ಹಿರಣ್ಣಯ್ಯ, ಶ್ರೀಕಾಂತ್​ ಹಿರಣ್ಣಯ್ಯ ಮತ್ತು ಗುರುನಾಥ್​ ಹಿರಣ್ಣಯ್ಯ ಅಂತಿಮ…

ಮುಂದೆ ಓದಿ...

ಸ್ಯಾಂಡಲ್ ವುಡ್ ನ ‘8’ ನಟ-ನಿರ್ಮಾಪಕರ ಮೇಲೆ ಐಟಿ ರೈಡ್

ಬೆಂಗಳೂರು:       ಸ್ಯಾಂಡಲ್ ವುಡ್ ಗೆ ಗುರುವಾರ ಬೆಳಿಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಮುಂಜಾನೆ ಆರು ಗಂಟೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಸ್ಟಾರ್ ನಿರ್ಮಾಪಕರ ಮನೆ ಮೇಲೆ ದಾಳಿ ಮಾಡಿ ಗಾಬರಿ ಮೂಡಿಸಿದ್ದಾರೆ.       ಕನ್ನಡ ಚಿತ್ರರಂಗದ 8 ಜನ ಖ್ಯಾತ ನಟ ಹಾಗೂ ನಿರ್ಮಾಪಕರು ಮನೆ, ಕಛೇರಿ ಮತ್ತು ಸಂಬಂಧಿಕರ ಮನೆ ಮೇಲೆ ರೈಡ್ ಮಾಡಲಾಗಿದ್ದು, ಸುಮಾರು 200 ಅಧಿಕಾರಿಗಳು, ಬೆಂಗಳೂರಿನ 25 ಕಡೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.       ಈ ದಾಳಿಗೆ ಒಳಗಾಗಿರುವ ನಟ ಮತ್ತು ನಿರ್ಮಾಪಕರು ಸಾಮಾನ್ಯದವರಲ್ಲ. ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರಾಗಿದ್ದಾರೆ.  ರಾಕಿಂಗ್ ಸ್ಟಾರ್ ಯಶ್:       ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಚಿನ್ನಾಭರಣಗಳು, ಹಣ, ಬ್ಯಾಂಕ್ ವ್ಯವಹಾರದ…

ಮುಂದೆ ಓದಿ...

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು:       ಸ್ಯಾಂಡಲ್‍ವುಡ್‍ನ ಖ್ಯಾತ ಹಿರಿಯ ನಟ ಲೋಕನಾಥ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.        ಲೋಕನಾಥ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದು, 5 ದಶಕಗಳ ಕಾಲ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಲೋಕನಾಥ್ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.       ಮಧ್ಯಾಹ್ನ 12 ರಿಂದ 2.30ರವರೆಗೂ ಅಂತಿಮ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ. ಬಳಿಕ ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.       ದೇವಾಂಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು…

ಮುಂದೆ ಓದಿ...

ಮನೆ ಬಾಡಿಗೆ ಕೇಳಿದ ಮಾಲೀಕನಿಗೆ ಅವಾಸ್‌‌ ಹಾಕಿದ ಸುನಾಮಿ ಕಿಟ್ಟಿ

ಬೆಂಗಳೂರು:        ಸುನಾಮಿ ಕಿಟ್ಟಿಯ ಕಿರಿಕ್‌ಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಿಡ್ನಾಪ್ ಆಯ್ತು, ಒರೆಯಾನ್ ಮಾಲ್ ಗಲಾಟೆಯಾಯ್ತು, ಇದೀಗ ಮನೆ ಬಾಡಿಗೆ ವಿಚಾರಕ್ಕೆ ಮನೆ ಮಾಲೀಕನಿಗೆ ಕಿಟ್ಟಿ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.       4 ತಿಂಗಳ ಮನೆ ಬಾಡಿಗೆ ಕೇಳಿದಕ್ಕೆೆ, ಕಿಟ್ಟಿ ಮನೆ ಮಾಲೀಕನಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದ್ದು, ಮನೆ ಮಾಲೀಕ ಶಿವಣ್ಣ ಎಂಬುವವರು ಕಿಟ್ಟಿ ವಿರುದ್ಧ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ₹88 ಸಾವಿರ ಬಾಡಿಗೆ ಕೊಡದೇ ಕಿಟ್ಟಿ ಸತಾಯಿಸುತ್ತಿದ್ದಾರೆ ಎಂದು ಮನೆ ಮಾಲೀಕ ಶಿವಣ್ಣ ಆರೋಪಿಸಿದ್ದಾರೆ.       ಶಂಕರಮಠದ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿರೋ ಸುನಾಮಿ ಕಿಟ್ಟಿ, ತಿಂಗಳಿಗೆ ₹22 ಸಾವಿರ ಬಾಡಿಗೆ ನೀಡಬೇಕು. ಆದರೆ 4 ತಿಂಗಳಿಂದ ಮನೆ ಬಾಡಿಗೆ ಕಟ್ಟದೇ ಮಾಲೀಕ ಶಿವಣ್ಣನನ್ನ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ…

ಮುಂದೆ ಓದಿ...

ಹಿರಿಯ ನಿರ್ದೇಶಕ ಎಂ.ಎಸ್ ರಾಜಶೇಖರ್ ಇನ್ನಿಲ್ಲ

 ಬೆಂಗಳೂರು:        ಹಿರಿಯ ನಿರ್ದೇಶಕ ಎಂ.ಎಸ್ ರಾಜಶೇಖರ್ (75) ಸೋಮವಾರ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.        ಸ್ಯಾಂಡಲ್​ವುಡ್ ನ ಸೃಜನಶೀಲ ನಿರ್ದೇಶಕ ಅಂತಲೇ ಕರೆಸಿಕೊಂಡಿದ್ದ ಎಂ.ಎಸ್​. ರಾಜಶೇಖರ್ ಅವರು 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.             ಪತ್ನಿ ರಾಣಿ, ಮಗಳು ಶಾರದಾ, ಮಗ ರಘು ಅವರನ್ನು ಅಗಲಿದ್ದಾರೆ. ನಾಳೆ ನಾಗರಬಾವಿ ಸಮೀಪದ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.        (Visited 8 times, 1 visits today)Share

ಮುಂದೆ ಓದಿ...

ಶೃತಿ ಹರಿಹರನ್ ವಿರುದ್ಧ ಎಫ್ಐಆರ್..!

ಬೆಂಗಳೂರು:       ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ಕೋಲಹಲ ಎಬ್ಬಿಸಿದ್ದ  ಶೃತಿ ಹರಿಹರನ್​​ಗೆ ಇದೀಗ ಸಂಕಷ್ಟ ಎದುರಾಗಿದ್ದು, ಶ್ರುತಿ ಹರಿಹರನ್ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.       ತಮ್ಮ ಇಮೇಜ್ ಗೆ ಡ್ಯಾಮೇಜ್ ಆಗಿರುವ ಕಾರಣ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಹಾಗೂ ವಕೀಲರು ಲಿಖಿತ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಐಟಿ ಆ್ಯಕ್ಟ್‌ 200 ಅಡಿಯಲ್ಲಿ ಶ್ರುತಿ ಹರಿಹರನ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.       ಇಬ್ಬರ ನಡುವೆ ಸಂಧಾನ ನಡೆಸಲು ಚಲನಚಿತ್ರ ರಂಗದ ಪ್ರಮುಖರು ಪ್ರಯತ್ನಿಸುತ್ತಿರುವ ಮಧ್ಯೆಯೇ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. (Visited 51 times, 1 visits today)Share

ಮುಂದೆ ಓದಿ...