ಒಂದೇ ವರ್ಷದಲ್ಲಿ ಯೋಗ್ಯತೆ ತಿಳಿಯಿತು – ಬಿ.ಸುರೇಶ್‍ಗೌಡ

ತುಮಕೂರು:       ಯಾವುದೋ ಅಲೆಯಲ್ಲಿ ಗೆದ್ದವರ ಯೋಗ್ಯತೆ ಏನು ಎಂಬುದು ಮತದಾರರಿಗೆ ಒಂದೇ ವರ್ಷದಲ್ಲಿ ತಿಳಿಯಿತು, ಕ್ಷೇತ್ರದ ಕ್ರಷರ್, ಗ್ರಾನೈಟ್ ಮಾಲೀಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಎಂದು ಶಾಸಕ ಗೌರಿಶಂಕರ್ ಅವರ ಹೆಸರು ಹೇಳದೆ ಮಾಜಿ ಶಾಸಕ ಬಿ.ಸುರೇಶ್‍ಗೌಡ ಹರಿಹಾಯ್ದರು.       ನಗರದ ಕ್ಯಾತ್ಸಂದ್ರದಲ್ಲಿ ಬಿ.ಸುರೇಶ್‍ಗೌಡ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಶಿವಕುಮಾರಸ್ವಾಮೀಜಿ ಅವರು ಇದ್ದ ಕ್ಷೇತ್ರದಲ್ಲಿ ಶಾಸಕನಾಗಿ ಉತ್ತಮ ಕೆಲಸ ಮಾಡಿರುವ ಹೆಮ್ಮೆ ನನಗಿದೆ, ಮೋದಿ ಅವರು ನೀಡಿರುವ ಸ್ಮಾರ್ಟ್‍ಸಿಟಿ ವ್ಯವಸ್ಥಿತವಾಗಿ ರೂಪುಗೊಳ್ಳಬೇಕೆಂದರೆ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.       ಪಾಲಿಕೆಯಲ್ಲಿ ಬಹಳಷ್ಟು ಬದಲಾವಣೆ ತಂದ ಟಿ ಭೂಬಾಲನ್ ರವರ ರೀತಿಯ ಅಧಿಕಾರಿಗಳು ನಮ್ಮ ನಗರ ಮತ್ತು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದ ಅವರು, ವಸಂತ ನರಸಾಪುರದಲ್ಲಿ ರೈಲ್ವೆ ಕಾರಿಡಾರ್ ಮಾಡಬೇಕು…

ಮುಂದೆ ಓದಿ...

ಐಟಿ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ – ಸಂಸದ ಜಿ.ಎಸ್.ಬಸವರಾಜು

ಗುಬ್ಬಿ :       ಐಟಿ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ. ವೈಯಕ್ತಿಕ ದ್ವೇಷದ ಮಾತು ಇಲ್ಲಿ ಬರುವಂತಿಲ್ಲ. ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡಿರುವ ಸಿದ್ದರಾಮಯ್ಯನವರ ಆರೋಪ ಸತ್ಯಕ್ಕೆ ದೂರವಾದದು ಎಂದು ಸಂಸದ ಜಿ.ಎಸ್.ಬಸವರಾಜು ಸ್ಪಷಪಡಿಸಿದರು.       ಪಟ್ಟಣದ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ದೇವಾಲಯ ಜೀಣೋದ್ದಾರ ಸಮಿತಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಆದಾಯ ತೆರಿಗೆ ಇಲಾಖೆ ಅವರ ಕರ್ತವ್ಯವನ್ನು ಕಾನೂನು ರೀತಿ ನಡೆಸಿದ್ದಾರೆ. ಮೆಡಿಕಲ್ ಸೀಟ್ ಮಾರಾಟ ದಂಧೆ ನಡೆದಿರುವ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆಯುತ್ತಿದೆ. ಪರಮೇಶ್ವರ್ ಅವರು ನನಗೆ ಒಳ್ಳೆಯ ಸ್ನೇಹಿತ. ಅವರ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ ಎಂದರು.       ಸೇವಾ ಕಾರ್ಯ ನಡೆಸಬೇಕಾದ ಶಿಕ್ಷಣರಂಗ ಸಂಪೂರ್ಣ ಕಮರ್ಷಿಯಲ್ ಆಗಿ ಕಲುಷಿತಗೊಂಡಿರುವುದು ವಿಷಾದಕರ ಸಂಗತಿ. ಪರಮೇಶ್ವರ್ ಆಪ್ತ ಸಹಾಯಕನ ಆತ್ಮಹತ್ಯೆ…

ಮುಂದೆ ಓದಿ...

ಕೊರಟಗೆರೆ: ಅಬಕಾರಿ ಇಲಾಖೆಯಿಂದ ಜಪ್ತಿ ಮಾಡಿದ್ದ  66.09ಲೀ ಮದ್ಯ ನಾಶ!!

ಕೊರಟಗೆರೆ:       ಅಬಕಾರಿ ನಿಯಮಗಳಿಗೆ ವಿರುದ್ಧವಾಗಿ ಸ್ವಾಧೀನತೆ, ಸಾಗಾಣಿಕೆ, ಮಾರಾಟ ಇತ್ಯಾದಿಗಳಲ್ಲಿ ಜಪ್ತಿ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಮದ್ಯದ ಸಿಟ್ರಾ ಪಾಕೇಟ್‍ಗಳನ್ನು ಅಬಕಾರಿ ಆವರಣದಲ್ಲಿ ಸೋಮವಾರ ನಾಶಪಡಿಸಲಾಯಿತು.       ಕೊರಟಗೆರೆ ಅಬಕಾರಿ ವಲಯ ಕಚೇರಿ ಆವರಣದಲ್ಲಿ ಮಧುಗಿರಿ ಅಬಕಾರಿ ಉಪಅಧೀಕ್ಷಕ ಸುಭಾಶ್‍ಚಂದ್ರ ನೇತೃತ್ವದೊಂದಿಗೆ ತುಮಕೂರು ಕೆಎಸ್‍ಬಿಸಿಎಲ್ ವ್ಯವಸ್ಥಾಪಕ ಹೆಚ್.ಎಂ.ಗೌಡ, ಕೊರಟಗೆರೆ ಅಬಕಾರಿ ನಿರೀಕ್ಷಕ ರಾಮಮೂರ್ತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಸುಮಾರು 50ಸಾವಿರ ಮೌಲ್ಯದ 66.09 ಲೀಟರ್ ಮದ್ಯವನ್ನು ನಾಶಪಡಿಸಿದ್ದಾರೆ.       2019-20ನೇ ಸಾಲಿನ ಲೋಕಸಭಾ ಚುನಾವಣೆ ವೇಳೆಯಲ್ಲಿ ಅಕ್ರಮವಾಗಿ ಮದ್ಯ ಶೇಖರಣೆ ಮತ್ತು ಸಾಕಾಣಿಕೆ ಮಾಡುತ್ತಿದ್ದ ದಾಳಿ ನಡೆಸಿ ವಶಪಡಿಸಿಕೊಳ್ಳಲಾದ ಮಧ್ಯವನ್ನು ಸೋಮವಾರ ಮಧ್ಯಾಹ್ನ ಕಚೇರಿ ಆವರಣದಲ್ಲಿ ನಾಶಪಡಿಸಲಾಗಿದೆ. ಕಚೇರಿ ಆವರಣದಲ್ಲಿ ಗುಂಡಿ ತೋಡಿ ಅದರಲ್ಲಿ ಮಧ್ಯದ ಸಿಟ್ರಾ ಪಾಕೇಟ್ ಹರಿದು ಮದ್ಯವನ್ನು ಸುರಿದು…

ಮುಂದೆ ಓದಿ...

ತುಮಕೂರು : ರೋಗಿಗಳ ತ್ವರಿತ ಸೇವೆಗಾಗಿ ಡಿಜಿಟಲ್ ನರ್ವ್ ಸೆಂಟರ್!!

       ರೋಗಿಗಳ ತ್ವರಿತ ಸೇವೆಗಾಗಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ಡಿಜಿಟಲ್ ನರ್ವ್ ಸೆಂಟರ್ ಅನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ.       ಜನರು, ತಂತ್ರಜ್ಞಾನ ಹಾಗೂ ಪ್ರಕ್ರಿಯೆಗಳ ಸಂಯೋಜನೆ ಆಧಾರದಡಿ ಪರಸ್ಪರ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿರುವ ಈ ಡಿಜಿಟಲ್ ನರ್ವ್ ಸೆಂಟರ್ ಯೋಜನೆಯನ್ನು 2.27 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕೆಲವೇ ದಿನಗಳಲ್ಲಿ ಚಾಲನೆಗೊಳ್ಳಲಿದೆ.       ಗಂಭೀರ ಪರಿಸ್ಥಿತಿಯಲ್ಲಿರುವ ನಗರ ವ್ಯಾಪ್ತಿಯೊಳಗಿನ ರೋಗಿಗಳಿಗೆ ತ್ವರಿತವಾಗಿ ಆರೋಗ್ಯ ಸೇವೆ ಒದಗಿಸುವ ಯೋಜನೆ ಇದಾಗಿದೆ. ರೋಗಿಗಳು ಡಿಜಿಟಲ್ ನರ್ವ್ ಸೆಂಟರ್ ಟೋಲ್ ಫ್ರೀ ಸಂಖ್ಯೆ 1800-425-4325ಕ್ಕೆ ಕರೆ ಮಾಡಿ ತಮ್ಮ ರೋಗದ ಬಗ್ಗೆ ಮಾಹಿತಿ ನೀಡಿದಲ್ಲಿ ಸೆಂಟರ್‍ನಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರು ತ್ವರಿತವಾಗಿ ವೈದ್ಯಕೀಯ ಸಲಹೆ ನೀಡುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆರೋಗ್ಯ ಸೇವಾ ಕೇಂದ್ರಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ…

ಮುಂದೆ ಓದಿ...

ಅ.14 ರಿಂದ ಝೆನ್ ಟೀಮ್ ವತಿಯಿಂದ ನೀನಾಸಂ ನಾಟಕೋತ್ಸವ!

ತುಮಕುರು:       ಇಲ್ಲಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ 14 ಮತ್ತು 15 ರಂದು ಎಂ.ಜಿ. ರಸ್ತೆಯ ಬಾಲಭವನದಲ್ಲಿ ಸಂಜೆ 6.30 ಕ್ಕೆ ನೀನಾಸಂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.       14 ರ ಸೋಮವಾರ ಸಂಜೆ 6.30 ಕ್ಕೆ ಗಿರೀಶ್ ಕಾರ್ನಾಡ್ ರಚಿಸಿರುವ ರಾಕ್ಷಸ- ತಂಗಡಿ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ಬಿ.ಆರ್. ವೆಂಕಟರಮಣ ಐತಾಳ್ ನಿರ್ದೇಶಿಸಿದ್ದಾರೆ. 15 ರ ಮಂಗಳವಾರ ಸಂಜೆ ಕರ್ಣ ಸಾಂಗತ್ಯ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ಗಣೇಶ್ ಮಂದರ್ತಿ ನಿರ್ದೇಶಿಸುತ್ತಿದ್ದಾರೆ.       ನಾಟಕ ಪ್ರದರ್ಶನಕ್ಕೂ ಮುನ್ನ ನಡೆಯುವ ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಮುಕುಂದರಾವ್ ಮತ್ತು ಗೋಮಾರದಹಳ್ಳಿ ಮಂಜುನಾಥ್ ಆಗಮಿಸಲಿದ್ದಾರೆ. 15 ರಂದು…

ಮುಂದೆ ಓದಿ...

ಐಟಿ ದಾಳಿ ಬೆನ್ನಲ್ಲೇ ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಶರಣು!!

ತುಮಕೂರು:       ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಪರಮೇಶ್ವರ್ ಅವರ ನಿವಾಸದ ಮೇಲೆ ಐಟಿ ದಾಳಿ ಆದ ಬೆನ್ನಲ್ಲೆ ಪರಮೇಶ್ವರ್ ಅವರ ಆಪ್ತ ರಮೇಶ್ ಅವರು ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.       ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಗ್ರೌಂಡ್ ಬಳಿ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ಶವ ಪತ್ತೆ ಆಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.        ಹಲವು ವರ್ಷಗಳಿಂದ ರಮೇಶ್ ಅವರು ಪರಮೇಶ್ವರ್ ಗೆ ಆಪ್ತರಾಗಿದ್ದಾರೆ. ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ಆದಾಗ ರಮೇಶ್ ಅವರನ್ನೂ ಸಹ ಹಲವು ಗಂಟೆಗಳ ಕಾಲ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.       ಇಂದು ಬೆಳಿಗ್ಗೆ ಹಲವರಿಗೆ ಕರೆ ಮಾಡಿದ್ದ ರಮೇಶ್ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್…

ಮುಂದೆ ಓದಿ...

ತುಮಕೂರು ಪಾಲಿಕೆಗೆ ಪರಮೇಶ್ವರ್ ರಿಂದ 2 ಕೋಟಿ ರೂ. ತೆರಿಗೆ ವಂಚನೆ!?

ತುಮಕೂರು:       ಜಿ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ತುಮಕೂರು ಮಹಾನಗರ ಪಾಲಿಕೆಗೆ ಮಹಾ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕೋಟಿ ಕೋಟಿ ರೂ ತೆರಿಗೆ ಕಟ್ಟದೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ವಂಚನೆ ಮಾಡಿದೆ ಎಂಬುದು ಐಟಿ ದಾಳಿ ವೇಳೆ ಬೆಳಕಿಗೆ ಬಂದಿದೆ.        ತುಮಕೂರು ಮಹಾನಗರ ಪಾಲಿಕೆಗೆ ತೆರಿಗೆ ಕಟ್ಟದೆ 2002 ರಿಂದಲೂ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ವಂಚನೆ ಮಾಡಿದೆ. ಎಂಜಿನಿಯರಿಂಗ್ ಕಾಲೇಜು ಆರಂಭವಾದಾಗಿಂದ ಒಮ್ಮೆಯೂ ತೆರಿಗೆ ಕಟ್ಟಿಲ್ಲ ಎನ್ನಲಾಗಿದೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಪಾಲಿಕೆಗೆ ಸರಿಸುಮಾರು 2 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂಬುದು ಐಟಿ ದಾಳಿ ವೇಳೆ ಬೆಳಕಿಗೆ ಬಂದಿದೆ.       ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಶಿಕ್ಷಣ ಸಂಸ್ಥೆ 1,83,20,439 ರೂ. ಬಾಕಿ ಇರಿಸಿಕೊಂಡಿದೆ. ಈ ಸಂಬಂಧ ತುಮಕೂರು ಮಹಾನಗರ ಪಾಲಿಕೆ ನೀಡಿದ್ದ…

ಮುಂದೆ ಓದಿ...

ಕೆರೆ ಏರಿ ಬಿರುಕು : ಶಾಸಕ ಡಾ.ಜಿ.ಪರಮೇಶ್ವರ ರಿಂದ ಪರಿಶೀಲನೆ !!

ಕೊರಟಗೆರೆ :       ಜಂಪೇನಹಳ್ಳಿ ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿ ಯೋಜನಾ ವರದಿ ಸಿದ್ಧಪಡಿಸಿ ಕೆರೆ ಏರಿ ಕಾಮಗಾರಿಗೆ ತುರ್ತು ಕ್ರಮಕೈಗೊಂಡು ನೀರು ರಕ್ಷಣೆ ಮಾಡಿ ಎಂದು ಸಣ್ಣ ನೀರಾವರಿ ಇಲಾಖೆ ಎಇ ರಮೇಶ್ ಅವರಿಗೆ ಶಾಸಕ ಡಾ.ಜಿ.ಪರಮೇಶ್ವರ ಸೂಚಿಸಿದರು.       ಪಟ್ಟಣದ ಹೊರವಲಯದ ಜಂಪೇನಹಳ್ಳಿ ಕೆರೆ ಕೋಡಿ ಬಿದ್ದ ಕಾರಣ ಗುರುವಾರ ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸಿದ ನಂತರ ರೈತರು ಕೆರೆ ಏರಿಯಿಂದ ನೀರು ಜಿನುಗುತ್ತಿರುವ ಬಗ್ಗೆ ಸ್ಥಳೀಯರು ಗಮನ ಸೆಳೆದ ವೇಳೆ ಸ್ಥಳ ಪರಿಶೀಲನೆ ಮಾಡಿದ ಅವರು ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಏರಿ ದುರಸ್ತಿ ಮಾಡುವಂತೆ ತಿಳಿಸಿದರು.        ಅಧಿಕಾರಿಗಳ ಜೊತೆ ಕೆರೆ ಏರಿ ಪರಿಶೀಲನೆ ನಡೆಸಿದ ವೇಳೆ ತುರ್ತಾಗಿ ಏರಿಯ ಮೇಲಿರುವ ಬೇಲಿ ತೆರವುಗೊಳಿಸಿ ಅಗತ್ಯ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ…

ಮುಂದೆ ಓದಿ...

ಧಾರಕಾರ ಮಳೆ : ಕೋಳಿ ಫಾರಂನ 5 ಸಾವಿರ ಕೋಳಿಗಳು ಸಾವು!!

ಪಾವಗಡ :       ಸೋಮವಾರ ಬೆಳಗಿನ ಜಾವ ಮೂರು ಗಂಟೆಯಿಂದ ಸುರಿದ ಧಾರಕಾರ ಮಳೆಗೆ ಕೋಳಿ ಪಾರಂಗೆ ಮಳೆ ನೀರು ನುಗ್ಗಿ 5000 ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ಪಟ್ಟಣದ ಸಮೀಪದಲ್ಲಿ ನಡೆದಿದೆ.        ಪಾವಗಡ ಪಟ್ಟಣದ ಚಿನ್ನನಾಯಕನ ಹಳ್ಳಿ ರಸ್ತೆಯಲ್ಲಿರುವ ಗುರುರಾಜ್ ಕೋಳಿ ಪಾರಂಗೆ ಸೋಮವಾರ ಮುಂಜಾನೆ ವರುಣನ ಆರ್ಭಟದಿಂದ ಮಳೆ ನೀರು ನುಗ್ಗಿ 5000 ಸಾವಿರ ಕೋಳಿಗಳು ಪಾರಂನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು , ಕಳೆದ ಒಂದು ವಾರದಿಂದ ಮಳೆರಾಯನ ಆರ್ಭಟಕ್ಕೆ ಮಳೆ ನೀರು ನುಗ್ಗಿ ಕೋಳಿಗಳ ಸಾವಿನ ಎರಡನೇ ಘಟನೆಯಾಗಿರುತ್ತದೆ.        ಕಳೆದಾ ಒಂದು ತಿಂಗಳಿನಿಂದ ತಾಲೂಕಿನಾದ್ಯಂತ ಉತ್ತಮ ಮಳೆಗಾಗುತ್ತಿದ್ದು ,ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೋಳಿಪಾರಂಗೆ ನೀರು ನುಗುತ್ತಿದ್ದು ಮಣ್ಣು ಮಿಶ್ರಿತ ನೀರು ಪಾರಂಗೆ ಬಂದು ಸೇರಿ ಹಾಗೂ ಕೋಳಿಗಳನ್ನು ಬೇರೆಡೆ ಮಳೆಯಲ್ಲಿ…

ಮುಂದೆ ಓದಿ...

ತುಮಕೂರು : ವಿದ್ಯುತ್ ಪ್ರವಹಿಸಿ ಬ್ಯಾನರ್ ತೆರವುಗೊಳಿಸಲು ಹೋದ ಪೌರಕಾರ್ಮಿಕ ಸಾವು!!

ತುಮಕೂರು :       ಹೆಲ್ತ್ ಇನ್ಸ್‍ಪೆಕ್ಟರ್ ಮತ್ತು ಪರಿಸರ ಇಂಜಿನಿಯರ್ ಸೂಚನೆ ಮೇರೆಗೆ ಬ್ಯಾನರ್ ಮತ್ತು ಬಂಟಿಂಗ್ ತೆರವುಗೊಳಿಸಲು ಹೋದ ಪೌರ ಕಾರ್ಮಿಕ ನರಸಿಂಹಯ್ಯ (34) ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ತುಮಕೂರು ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.       ಹದಿನೈದನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಟೌನ್‍ಹಾಲ್ ಸರ್ಕಲ್‍ನಲ್ಲಿ ಅಕ್ಟೋಬರ್ 10ರಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಅಧಿಕಾರಿಗಳ ಸೂಚನೆ ಮೇರೆಗೆ ಕಬ್ಬಿಣದ ಸಲಾಕೆ ತೆಗೆದುಕೊಂಡು ಬ್ಯಾನರ್ ತೆರವುಗೊಳಿಸಲು ಹೋದಾಗ ಈ ದುರಂತ ನಡೆದಿದೆ. ಮೃತನ ಸಾವಿಗೆ ಸುರಕ್ಷತಾ ಸಲಕರಣೆಗಳನ್ನು ನೀಡದೇ ಇರುವುದೇ ಕಾರಣ ಎಂದು ಪೌರಕಾರ್ಮಿಕರ ಸಂಘ ಸಿಐಟಿಯು ಆರೋಪಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.       ಶಾಂತಿನಗರದ ವಾಸಿ ನರಸಿಂಹಯ್ಯ ಮೃತಪಟ್ಟಿರುವ ದುರ್ದೈವಿ. ಪೌರಕಾರ್ಮಿಕ ನರಸಿಂಹಯ್ಯ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲಾ ಪೌರಕಾರ್ಮಿಕರು ಕೆಲಸ…

ಮುಂದೆ ಓದಿ...