ತುಮಕೂರಿನಲ್ಲಿ ಭೀಕರ ಕೊಲೆ ; ಬೆಚ್ಚಬಿದ್ದ ಜನತೆ!

ತುಮಕೂರು :        ನಗರದಲ್ಲಿ ಮತ್ತೊಂದು ಭೀಕರ ಕೊಲೆಯಾಗಿದೆ.       ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಾಗಣ್ಣನ ಪಾಳ್ಯದಲ್ಲಿ ಸಂಜೆ 4.30 ಸುಮಾರಿನಲ್ಲಿ ಮಹಾಂತೇಶ್ ಮತ್ತು ಮಂಜುನಾಥ್ ಎಂಬುವರಿಬ್ಬರ ಮೇಲೆ ಭೀಕರ ಸ್ವರೂಪದಲ್ಲಿ ಹಲ್ಲೆ ಮಾಡಿದ್ದಾರೆ.       ಲಾಂಗು ಮತ್ತು ಮಚ್ಚು ಹಾಗೂ ಇತರೆ ಮಾರಕಾಸ್ತ್ರಗಳನ್ನು ಹಿಡಿದುಬಂದ ರೌಡಿಗಳ ಗುಂಪು ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶ್ ಹಾಗೂ ಮಂಜುನಾಥ್ ರವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದು, ಆಸ್ಪತ್ರೆಯಲ್ಲಿ ಮಹಾಂತೇಶ್ ಕೊನೆಯುಸಿರೆಳೆದಿದ್ದಾರೆ.       ಮಹಾಂತೇಶ್ ಮತ್ತು ಚಿನ್ನು ಎನ್ನುವವರ ನಡುವೆ ಆಗಾಗ ಗಲಾಟೆ-ಗದ್ದಲಗಳು ನಡೆಯುತ್ತಿತ್ತು.  ಚಿನ್ನು ಎನ್ನುವ ರೌಡಿ ಕುಖ್ಯಾತ ರೌಡಿ ರೋಹಿತ್ ನ ಶಿಷ್ಯನಾಗಿದ್ದು, ಮುಂದಾಗಬಹುದಾದ ಅನಾಹುತವನ್ನು ಗಮನಿಸಿ ಈ ಹಿಂದೆಯೇ ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್ ರವರು ಮಹಾಂತೇಶ…

ಮುಂದೆ ಓದಿ...

ಫೇಕ್ ಎನ್‌ಕೌಂಟರ್ ಮಾಡಿದ ಇನ್ಸ್ಪೆಕ್ಟರ್ ; ರೌಡಿಶೀಟರ್ ಚೊಟ್ಟೆಕುಮಾರನಿಗೆ ಚಟ್ಟ ಕಟ್ಟಿದ ಜೂಜು!!

ತುಮಕೂರು:        ರೌಡಿಶೀಟರ್ ಚೊಟ್ಟೆ ಕುಮಾರನ ಹತ್ಯೆಯ ಆರೋಪಿ ಟೆಂಪಲ್ ರಾಜನ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.       ಚೊಟ್ಟೆ ಕುಮಾರನ ಹತ್ಯೆಗೆ ಕಾರಣ ಹುಡುಕುತ್ತಾ ಹೊರಟರೆ ಪೊಲೀಸರು ನಿಯಂತ್ರಿಸಲಾಗದೆ ಜೂಜುಕೋರರಿಂದ ಹಣ ಪಡೆದು ಅಕ್ರಮ ಜೂಜಾಟಕ್ಕೆ ಕೈಜೋಡಿಸಿದ ಪರಿಣಾಮ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ನಡೆಯುತ್ತಿರುವ ಜೂಜು ದಂಧೆ, ದಂಧೆಯ ಕಿಂಗ್‌ಪಿನ್‌ಗಳು ಮತ್ತು ಅವರಿಗೆ ಕೈಜೋಡಿಸುವ ಚೊಟ್ಟೆ ಕುಮಾರನಂತಹ ಅನುಯಾಯಿಗಳು ಹತ್ಯೆಯಾದ ಮೇಲೆ ಹತ್ಯೆಗೆ ಮೂಲ ಕಾರಣ ಜೂಜಾಟ. ಅದರ ಸಂಬಂಧ ದಾಳಿಯಿಂದ ದಾಖಲಾದ ಪ್ರಕರಣ ಆ ಸಂದರ್ಭದಲ್ಲಿ ವಶಪಡಿಸಿಕೊಂಡ ಹಣ ಮತ್ತು ದ್ವಿಚಕ್ರ ವಾಹನ, ವಾಹನವನ್ನು ಬಿಡಿಸಲು ಪೊಲೀಸರು ಕೇಳಿದ ೧೦ ಸಾವಿರ ರೂ.ಲಂಚ, ಲಂಚದ ಹಣ ಕೊಟ್ಟರೂ ಬಿಡುಗಡೆಯಾಗದ ವಾಹನ, ಇದರ ಸಂಬಂಧ ಬೇಸರಗೊಂಡ ಟೆಂಪಲ್ ರಾಜ ಗ್ಯಾಂಬ್ಲರ್ ನಡೆಸುತ್ತಿದ್ದ ಚಿಗರಿಗೆ ಫೋನಾಯಿಸಿ ಮಧ್ಯದ ಮತ್ತಿನಲ್ಲಿ ವಾಚಾಮಗೋಚರವಾಗಿ ನಿಂದಿಸಿದ್ದ. ನಿಂದನೆಗೊಳಗಾದ…

ಮುಂದೆ ಓದಿ...

ಕಾರು ಡಿಕ್ಕಿಯಾಗಿ ರಾಷ್ಟ್ರೀಯ ಹಾಕಿ ಆಟಗಾರ್ತಿ ದುರ್ಮರಣ!

ಧಾರವಾಡ:         ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿ ಮೃತಪಟ್ಟಿದ್ದಾರೆ. ಸುಜಾತ ಕೆರೆಳ್ಳಿ(16) ಮೃತಪಟ್ಟವರೆಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ ಮಾದನಬಾವಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.       17 ವರ್ಷದೊಳಗಿನ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿಯಾಗಿರುವ ಸುಜಾತ, ತಂದೆಯೊಂದಿಗೆ ತೆರಳುವಾಗ ಕಾರು ಡಿಕ್ಕಿ ಹೊಡೆದಿದೆ. ಸುಜಾತ ತಂದೆ ಮಲ್ಲಿಕಾರ್ಜುನ ಕೆರೆಳ್ಳಿ ಸ್ಥಿತಿ ಗಂಭೀರವಾಗಿದ್ದು ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಸುಜಾತ ಮೈಸೂರಿನಲ್ಲಿ ಎಸ್.ಎಸ್.ಎಲ್.ಸಿ. ಓದಿದ್ದು, ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ. ರಜೆ ಕಾರಣಕ್ಕೆ ಊರಿಗೆ ಬಂದಿದ್ದರು. ತಂದೆಯೊಂದಿಗೆ ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿದೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. (Visited 11 times, 1 visits today)Share

ಮುಂದೆ ಓದಿ...

ಮೈಸೂರು: ಅಪಘಾತದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು!

ಮೈಸೂರು:       ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬೈಕ್ ನಲ್ಲಿ ಮೂವರು ವಿದ್ಯಾರ್ಥಿಗಳು ತೆರಳುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.        ನಂಜನಗೂಡಿನ ಮಾಕನಪುರ ಮತ್ತು ಕಸವನಹಳ್ಳಿ ಸಮೀಪ ಈ ಘಟನೆ ನಡೆದಿದೆ.  ಹಗಿನವಾಳು ಗ್ರಾಮದಿಂದ ಪರೀಕ್ಷೆ ಬರೆಯಲು ಕಸುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.       ನಂಜನಗೂಡು ತಾಲೂಕಿನ ಹಗಿನವಾಳು ಗ್ರಾಮದ ನಿವಾಸಿ ಮಣಿಕಂಠ (16) ಮೃತ ವಿದ್ಯಾರ್ಥಿ. ಪರೀಕ್ಷೆ ಬರೆಯಲು ದ್ವಿಚಕ್ರ ವಾಹನದಲ್ಲಿ ಮೂವರು ಸಹಪಾಠಿಗಳು ತೆರಳುತ್ತಿದ್ದರು. ಈ ವೇಳೆ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ.       ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಮಣಿಕಂಠ ಸಾವಿಗೀಡಾದರೆ, ದರ್ಶನ್…

ಮುಂದೆ ಓದಿ...

ಹುಬ್ಬಳ್ಳಿ : ಕಟ್ಟಡ ಕುಸಿತ

ಹುಬ್ಬಳ್ಳಿ:       ನಿರ್ಮಾಣ ಹಂತದ ಕಟ್ಟಡದ ಗೋಡೆ ಮನೆಯ ಮೇಲೆ‌ ಬಿದ್ದು ಮನೆಯೊಂದು ಜಖಂಗೊಂಡ ಘಟನೆ ಹುಬ್ಬಳ್ಳಿ ನಗರದ ಕೇಶ್ವಾಪುರದಲ್ಲಿ‌ ನಡೆದಿದೆ.       ಮಹ್ಮದ್ ಅಲಿ ಮಕಾಂದಾರ ಎನ್ನುವವರಿಗೆ ಸೇರಿದ ಮನೆಯೇ ಜಖಂಗೊಂಡಿದೆ. ಪಕ್ಕದ ಮನೆಯ ನಿರ್ಮಾಣ ಹಂತದ ಗೋಡೆ ಮಹ್ಮದ್ ಅಲಿಯವರ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇರದಿದಕ್ಕೆ ಭಾರಿ ಅನಾಹುತ ತಪ್ಪಿದೆ.       ಆದ್ರೆ ಮನೆಯಲ್ಲಿ ಮೇಲ್ಛಾವಣಿ ಸೇರಿದಂತೆ ಮನೆಯಲ್ಲಿನ ವಸ್ತುಗಳಿಗೆ ಹಾನಿಯಾಗಿವೆ. ಬಿಲ್ಡರ್ ರಾಜು ಹಿರೇಮಠ ಅವರ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಹಾನಿಗೊಳದಗಾದ ಮಹ್ಮದ್ ಅಲಿ ಆರೋಪಿಸಿದ್ದಾರೆ. ಸ್ಥಳಕ್ಕೆ ಕೇಶ್ವಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.       ಧಾರವಾಡ ಕಟ್ಟಡ ದುರಂತ ಪ್ರಕರಣ ಮಾಸುವ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ನಿರ್ಮಾಣ‌ ಹಂತದ ಕಟ್ಟಡ ಕುಸಿದಿದೆ. (Visited…

ಮುಂದೆ ಓದಿ...

ಜ್ಞಾನದ ಸಂಪತ್ತಿಗಿಂತ ಮಿಗಿಲಾದುದು ಬೇರಾವುದೂ ಇಲ್ಲ – ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಮಹಾ ಸ್ವಾಮಿ

ತುರುವೇಕೆರೆ:      ಜ್ಞಾನದ ಸಂಪತ್ತಿಗಿಂತ ಮಿಗಿಲಾದುದು ಬೇರಾವುದೇ ಸಂಪತ್ತಿಲ್ಲ ಎಂದು ತುರುವೇಕೆರೆ ವಿರಕ್ತ ಮಠದ ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಮಹಾ ಸ್ವಾಮಿಗಳು ಅಭಿಪ್ರಾಯಪಟ್ಟರು.       ಮೈಸೂರಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದ ತೊಂಬತ್ತೊಂಬತ್ತನೇ ವಾರ್ಷಿಕ ಘಟಿಕೋತ್ಸವ ಪದವಿ ಪ್ರಧಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸ್ವೀಕರಿಸಿ ಮಾತನಾಡಿದ ಅವರು ಇಂದು ನನ್ನನ್ನು ಆಯ್ಕೆ ಮಾಡಿ ಗೌರವ ಡಾಕ್ಟರೇಟ್ ಕೊಟ್ಟಿರುವುದು ನನಗೆ ಹಾಗು ನನ್ನ ಸಮಾಜದ ಸಧ್ಬಕ್ತರಿಗೆ ಗೌರವ ತಂದುಕೊಟ್ಟಿದೆ. ಮೈಸೂರು ವಿಶ್ವವಿಧ್ಯಾನಿಲಯ ಇಡೀ ದೇಶದಲ್ಲಿಯೇ ಆರನೆಯ ವಿಶ್ವವಿಧ್ಯಾಲಯವಾಗಿದ್ದು ಕರ್ನಾಟಕ ರಾಜ್ಯದ ಮೊದಲನೆಯ ವಿಶ್ವವಿದ್ಯಾಲಯವಾಗಿದೆ. ಕಳೆದ 99 ವರ್ಷಗಳಲ್ಲಿ ವಿಶ್ವವಿದ್ಯಾಲಯ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸಿದೆ. ಆ ನಿಟ್ಟಿನಲ್ಲಿ ಇಂದು ಶ್ರೀ ಮಠಕ್ಕೆ ಗೌರವ ನೀಡಿ ನಮ್ಮನ್ನು ಸತ್ಕರಿಸಿರುವುದು ನಮ್ಮ ಬದುಕಿನ ಯಾತ್ರೆಯಲ್ಲಿ ಬಹು ಮಹತ್ವದ…

ಮುಂದೆ ಓದಿ...

ಸಿದ್ದರಾಮಯ್ಯ ಜೊತೆ ಕಾಗಿನೆಲೆ ಶ್ರೀಗಳ ಗೌಪ್ಯ ಮಾತುಕತೆ..?!

ಮೈಸೂರು :       ಮಾಜಿ ಸಂಸದ ಸಿ ಹೆಚ್ ವಿಜಯಶಂಕರ್ ಗೆ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಕಾಗಿನೆಲೆ ಶ್ರೀಗಳು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.       ಇಂದು ಬೆಳಗ್ಗೆ ಶಾರದಾ ದೇವಿ ನಗರದಲ್ಲಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ ಕಾಗಿನೆಲೆ ಶ್ರೀಗಳು ಮೈಸೂರು-ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಂಸದ ಸಿ ಹೆಚ್ ವಿಜಯಶಂಕರ್ ಗೆ ಅವರಿಗೆ ಟಿಕೆಟ್ ನೀಡಬೇಕೆಂದು ಶ್ರೀಗಳು ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. (Visited 7 times, 1 visits today)Share

ಮುಂದೆ ಓದಿ...

ಅಪಘಾತ : ಬಸ್-ಬೈಕ್​ ಗೆ ಬೆಂಕಿ ; ಮೂವರ ದುರ್ಮರಣ!

 ಬೆಂಗಳೂರು:        ಬಿಎಂಟಿಸಿ ಬಸ್​ ಮತ್ತು ಬೈಕ್​ ನಡುವೆ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.       ಬಸವ, ಅವಿನಾಶ್ ಹಾಗೂ ಪ್ರದೀಪ್ ಮೃತರು. ಇಂದು ಮಧ್ಯಾಹ್ನ ಬೆಂಗಳೂರಿನ ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿಗೆರೆ ಬಳಿ‌ ಈ ಭೀಕರ ಅಪಘಾತ ಸಂಭವಿಸಿದೆ.        ಡಿಕ್ಕಿಯ ರಭಸಕ್ಕೆ ಬಸ್​ ಮತ್ತು ಬೈಕ್​ಗೆ ಬೆಂಕಿ ಹೊತ್ತಿಕೊಂಡು ಉರಿದಿವೆ. ಬಸ್​ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್​ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಪಘಾತದ ಬಳಿಕ ಬಸ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.        ಮೃತದೇಹಗಳನ್ನು  ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಿಎಂಟಿಸಿ ಆಧಿಕಾರಿಗಳು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ಧಾರೆ. ಕಗ್ಗಲೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (Visited 12 times, 1 visits today)Share

ಮುಂದೆ ಓದಿ...

ಮಗನ ವಿರುದ್ಧ ದೂರು:ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲ

ಮೈಸೂರು:       ನಮ್ಮ ಕ್ಷೇತ್ರದ ಎಂಎಲ್‌ಎ ಆದ ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಕೈಗೆ ಸಿಗೋದಿಲ್ಲ. ನಮ್ಮ ಕೆಲಸ ಹೇಗೆ ಮಾಡಿಸೋದು? ಎಂದು ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಮಹಿಳೆಯೋರ್ವರು ಟೇಬಲ್ ಕುಟ್ಟಿ ಆವಾಜ್ ಹಾಕಿದ ಘಟನೆ ನಡೆದಿದೆ.       ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ತಮ್ಮ ಊರಿನ ಸಮಸ್ಯೆ ಕುರಿತು ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಮಲಾರ್ ಹಾಗೂ ಮಹಿಳೆಯೋರ್ವರು ವಿವರಿಸುತ್ತಿದ್ದರು. ಇದೇ ವೇಳೆ ಮಹಿಳೆಯೋರ್ವರು ನಿಮ್ಮ ಮಗ ಹಾಗೂ ಎಂಎಲ್‌ಎ ಯತೀಂದ್ರ ಊರಿಗೆ ಬರುವುದಿಲ್ಲ. ಕೈಗೂ ಸಿಗುವುದಿಲ್ಲ, ನಮ್ಮ ಸಮಸ್ಯೆ ಕೇಳುವವರಿಲ್ಲ ಎಂದು ಎದುರಿನ ಟೇಬಲ್ ಕುಟ್ಟಿದರು.        ಮಹಿಳೆ ವರ್ತನೆ ಕಂಡು ಕೆಂಡಮಂಡಲರಾದ ಸಿದ್ದರಾಮಯ್ಯ ಸಮಸ್ಯೆ ಹೇಳುತ್ತಿದ್ದ ಆಕೆಯ ಬಳಿಯಿಂದ…

ಮುಂದೆ ಓದಿ...

ಕಾಫಿ ಕುಡಿದು ತಾಯಿ, ಮಗಳು ದುರ್ಮರಣ

ಚಿಕ್ಕಬಳ್ಳಾಪುರ:       ಕಾಫಿ ಕುಡಿದು ತಾಯಿ ಮತ್ತು ಮಗಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.       ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ಅಕ್ಕುಲಮ್ಮ (70) ಮತ್ತು ನರಸಮ್ಮ (50) ಕಾಫಿ ಕುಡಿದು ಮೃತಪಟ್ಟಿದ್ದಾರೆ. ನರಸಮ್ಮನ ಮೊಮ್ಮಕ್ಕಳಾದ ಅರವಿಂದ್​ (7) ಮತ್ತು ಆರತಿ (5) ಅಸ್ವಸ್ಥರಾಗಿದ್ದು ಅವರನ್ನು ಕೋಲಾರದ ಎಸ್​ಎನ್​ಆರ್​ ಆಸ್ಪತ್ರೆಗೆ ದಾಖಲಿಸಲಾಗಿದೆ.       ಮೃತರು ಗ್ರಾಮದ ಅಂಗಡಿಯೊಂದರಿಂದ ಕಾಫಿಪುಡಿ ತಂದಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಕಾಫಿ ಸೇವಿಸಿದ ನಂತರ ನಾಲ್ವರೂ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಅಕ್ಕುಲಮ್ಮ ಮತ್ತು ನರಸಮ್ಮ ಮೃತಪಟ್ಟಿದ್ದಾರೆ.  ಕಾಫಿಯಲ್ಲಿ ವಿಷ ಬೆರತಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (Visited 4 times, 1 visits today)Share

ಮುಂದೆ ಓದಿ...