ಈ ಸೋಮನ ತಂಡಕ್ಕೆ ಸುವರ್ಣ ಹಬ್ಬದ ಸಡಗರ !

       ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ದೇವರುಗಳ ಉಸ್ತವ ಮತ್ತು ಜಾತ್ರೆಗಳ ಸಮಯದಲ್ಲಿ ಸೋಮಗಳ ಮುಖವಾಡಗಳನ್ನು ಧರಿಸಿಕೊಂಡು ಕುಣಿಯುವ ಜಾನಪದ ಕಲೆಯು ಆಚರಣೆಯಲ್ಲಿದೆ. ಇದನ್ನು ‘ಸೋಮನ ಕುಣಿತ’ ಎಂದು ಕರೆಯಲಾಗುತ್ತದೆ.       ಕೇವಲ ದೇವರುಗಳ ಮೆರವಣಿಗೆಗಳಿಗೆ ಮಾತ್ರ ಸೀಮಿತಗೊಂಡಿದ್ದ ಸೋಮನ ಕುಣಿತವನ್ನು ಆಧುನಿಕ ರಂಗದ ಮೇಲೆ ತರುವಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ದಂಡಿನಶಿವರದ ಡಿ. ಎಸ್. ಗಂಗಾಧರಗೌಡರ ತಂಡ ಯಶಸ್ವಿಯಾಗಿದೆ.       ಈ ಜಾನಪದ ಕಲೆಗೆ ಮರುಜೀವ ನೀಡಿ,ರಾಜ್ಯದಿಂದ ರಾಸ್ಟ್ರ ಮಟ್ಟಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈ ತಂಡಕ್ಕೆ ಸಲ್ಲುತ್ತದೆ. ಕಳೆದ ಮೂವತ್ತು ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಈ ತಂಡ ಸಾವಿರಾರು ಪ್ರದರ್ಶನ ನೀಡುತ್ತಾ ಬಂದಿದ್ದು, ತನ್ನ ಬೆಳ್ಳಿ ಹಬ್ಬ ಆಚರಿಸಿಕೊಂಡು ಇದೀಗ ಸುವರ್ಣ ಹಬ್ಬದ ಸಡಗರದ ಹೊಸ್ತಿಲಲ್ಲಿದೆ.       ಹದಿನೈದು ಜನರಿಂದ ಕೊಡಿರುವ…

ಮುಂದೆ ಓದಿ...