19 ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿ ಪೊಲೀಸರ ವಶ

ಮಧುಗಿರಿ:      ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಎಂ.ಪ್ರವೀಣ್ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ಸುಮಾರು 19 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಘಟನೆ ಇತ್ತೀಚೆಗೆ ನಡೆದಿದೆ.       ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಬಡಿಗೇನಹಳ್ಳಿ ಗ್ರಾಮದ ಜಮೀನಿನಲ್ಲಿ ಪಾಪಣ್ಣ ಎಂಬುವವರು 19 ಗಾಂಜಾ ಗಿಡಗಳನ್ನು ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂದಿಸಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಿಪಿಐ ಸರ್ಧಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. (Visited 2 times, 1 visits today)

ಮುಂದೆ ಓದಿ...

ನಮ್ಮಲ್ಲಿಯೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದ ಬಗ್ಗೆ ಸಂಶೋಧನೆ ನಡೆಯಬೇಕು

ತುಮಕೂರು:      ಇಡೀ ಪ್ರಪಂಚದಲ್ಲಿ ಶೈಕ್ಷಣಿಕ ಸಂಶೋಧನೆಗಳಿಗೆ ಮನ್ನಣೆ ದೊರೆಯುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿಯೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದ ಬಗ್ಗೆ ಸಂಶೋಧನೆ ನಡೆಯಬೇಕು. ಸಂಶೋಧನೆಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ, ಸಂಶೋಧನಾ ಲೇಖನಗಳನ್ನು ದಾಖಲಿಸುವ ಕೆಲಸಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಮುಂದಾಗುವ ಅನಿವಾರ್ಯತೆ ಇಂದಿನದಾಗಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟಿದ್ದಾರೆ.      ನಗರದ ಸಿದ್ದಾರ್ಥನಗರದಲ್ಲಿ ಶ್ರೀ ಸಿದ್ದಾರ್ಥ ಅಕಾಡೆಮಿಕ್ ಆಫ್ ಹೈಯರ್ ಎಜುಕೇಷನ್ (ಸಾಹೇ ವಿಶ್ವವಿದ್ಯಾಲಯ) ಏರ್ಪಡಿಸಿದ್ದ ಸಂಯೋಜಿತ ವಿಷಯಗಳ ಸಂಶೋಧನಾತ್ಮಕ ಪ್ರಕಟಣೆಗಳಾದ ‘ಸಾಹೇ ಜರ್ನಲ್ಸ್ ಆಪ್ ಇಂಟರ್ ಡಿಸಿಪ್ಲಿನರಿ ರೀಸರ್ಚ್ ಮತ್ತು ಜರ್ನಲ್ಸ್ ಆಪ್ ಆ್ಯಕ್ಸನ್ ರೀಸರ್ಚ್ ಆ್ಯಂಡ್ ಸೋಷಿಯಲ್ ಡೆವೆಲಪ್‍ಮೆಂಟ್’ ಬಿಡುಗಡೆ ಮಾಡಿ ಮಾತನಾಡಿದರು.       ಇಡೀ ಪ್ರಂಚದಲ್ಲಿ ಅಂತರ ಶಿಕ್ಷಣ ಮತ್ತು ಸಂಶೋಧನೆಗಳು ನಡೆಯುತ್ತಿವೆ. ಸಮಾಜದಲ್ಲಿ ಸವiತೋಲದ ಶೈಕ್ಷಣಿಕ ಚಟುವಟಿಕೆಗಳು…

ಮುಂದೆ ಓದಿ...

ಧರ್ಮದ ಮೂಲಕ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕಿದೆ

ತುಮಕೂರು:       ಧರ್ಮದ ಮೂಲಕ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅರುಣಾದೇವಿ ಉದಯಕುಮಾರ್ ಹೇಳಿದರು.       ನಗರದ ಸಿದ್ದಗಂಗಾ ಮಠಕ್ಕೆ ಪತಿ ಉದಯಕುಮಾರ್, ಪುತ್ರಿ ಮಾಧುರ್ಯರವರೊಂದಿಗೆ ಭೇಟಿ ನೀಡಿದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಕುಟುಂಬ ವ್ಯವಸ್ಥೆ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದರು.       ನಾಲ್ಕು ಗೋಡೆಗಳ ಮಧ್ಯೆ ಇರುವ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸ ಮಾಡುವ ಚಿಂತನೆ ಹೊಂದಲಾಗಿದೆ ಎಂದು ಅವರು ಹೇಳಿದರು.       ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ನೆರವು ನೀಡಲಾಗುವುದು.…

ಮುಂದೆ ಓದಿ...

ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಟಾನಕ್ಕೆ ಆಗ್ರಹ!!

ತುಮಕೂರು:      ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಟಾನಕ್ಕೆ ಆಗ್ರಹಿಸಿ ಮಾದಿಗ ದಂಡೋರ-ಎಂಆರ್‍ಹೆಚ್ಎಸ್ ವತಿಯಿಂದ ನಗರದಲ್ಲಿರುವ ಇಬ್ಬರು ಶಾಸಕರುಗಳ ಮನೆ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು. ಮಾದಿಗ ದಂಡೋರ-ಎಂಆರ್‍ಹೆಚ್ಎಸ್‍ನ ರಾಜ್ಯ ವಕ್ತಾರ ರಾಘವೇಂದ್ರಸ್ವಾಮಿ, ಜಿಲ್ಲಾಧ್ಯಕ್ಷ ಜೆ.ಸಿ. ರಾಜಣ್ಣ ನೇತೃತ್ವದಲ್ಲಿ ಸಮಾವೇಶಗೊಂಡ ದಂಡೋರದ ಪದಾಧಿಕಾರಿಗಳು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ನಗರದಲ್ಲಿ ವಾಸವಿರುವ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು. ಒಳ ಮೀಸಲಾತಿ ಜಾರಿ ಸಂಬಂಧ ಸುಪ್ರೀಂ ಕೋರ್ಟ್‍ನ ಪಂಚ ನ್ಯಾಯಮೂರ್ತಿಗಳ ಪೀಠದ ತೀರ್ಪಿನಂತೆ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಶಾಸನ ಸಭೆಯಲ್ಲಿ ಅಂಗೀಕರಿಸಬೇಕು. ಈ ಕುರಿತು ಶಾಸಕರುಗಳು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ನಂತರ ಇಬ್ಬರು ಶಾಸಕರಿಗೆ ಪ್ರತ್ಯೇಕವಾಗಿ ಮಾದಿಗ ದಂಡೋರದ ವತಿಯಿಂದ ಮನವಿ…

ಮುಂದೆ ಓದಿ...

ಹಲ ವರ್ಷಗಳ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಎಸ್.ಆರ್.ಶ್ರೀನಿವಾಸ್

ಗುಬ್ಬಿ:       ಹಲವಾರು ವರ್ಷಗಳಿಂದ ಇತ್ಯರ್ಥವಾಗದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಎಸ್.ಆರ್.ಶ್ರೀನಿವಾಸ್ ಎರಡು ಬಣಗಳಾಗಿದ್ದ ರೈತರೊಟ್ಟಿಗೆ ಚರ್ಚಿಸಿ ವಿಶೇಷ ಅನುದಾನದಲ್ಲಿ ಸಿಸಿ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆಯೊಂದಿಗೆ ಸುಖಾಂತ್ಯ ಕಾಣಿಸಿದರು.       ತಾಲ್ಲೂಕಿನ ಚೇಳೂರು ಹೋಬಳಿ ಸಿ.ಹರುವೇಸಂದ್ರಪಾಳ್ಯ ಗ್ರಾಮದಲ್ಲಿ ಗಂಗಣ್ಣ ಸಹೋದರರ ಮನೆಗಳಿಗೆ ತೆರಳಲು ಇದ್ದ ರಸ್ತೆ ವಿವಾದ ತಾರಕಕ್ಕೇರಿ ನ್ಯಾಯಾಲಯ ಮೆಟ್ಟಿಲೇರಿದ್ದರು. ಈ ನಡುವೆ ಅಲ್ಲಿನ ಖರಾಬುಹಳ್ಳ ತೆರವು ಮಾಡಲು ಅರ್ಜಿ ಸಲ್ಲಿಸಲಾಗಿದ್ದ ಕಾರಣ ರಸ್ತೆಗಾಗಿ ನಡೆದ ತಿಕ್ಕಾಟಕ್ಕೆ ಹಲವಾರು ಮನೆಗಳಿಗೆ ಹೋಗಲು ರಸ್ತೆ ಇಲ್ಲವಾಗುವ ಬಗ್ಗೆ ಅರಿತು ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕರು ಅಧಿಕಾರಿಗಳಿಂದ ಆಗಬೇಕಿದ್ದ ಹಳ್ಳ ತೆರವು ಕೆಲಸ ತಾತ್ಕಾಲಿಕವಾಗಿ ನಿಲ್ಲಿಸಿ ವಿವಾದ ಮಾಡಿಕೊಂಡ ರೈತರೊಟ್ಟಿಗೆ ಎರಡು ತಾಸು ಚರ್ಚಿಸಿ ರಸ್ತೆ, ಖರಾಬು ಸ್ಥಳಗಳನ್ನು ಪರಿಶೀಲಿಸಿ ಅಂತಿಮವಾಗಿ ಎರಡೂ ಗುಂಪುಗಳಿಂದ ಐದು ಅಡಿಗಳಂತೆ ಸ್ಥಳ…

ಮುಂದೆ ಓದಿ...

ಇಂದು ನಾವೆಲ್ಲರೂ ಪರಿಸರದ ಶ್ರೀರಕ್ಷೆಯಲ್ಲಿದ್ದೇವೆ : ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ತುಮಕೂರು:      ಇಂದು ನಾವೆಲ್ಲರೂ ಪರಿಸರದ ಶ್ರೀರಕ್ಷೆಯಲ್ಲಿದ್ದೇವೆ. ಪರಿಸರ ತುಂಬಾ ಮಹತ್ವದ್ದು, ಪರಸ್ಪರ ದೇವೋಭವ ಎಂದು ಹೇಳುವ ಹಾಗೆ ಪರಿಸರ ದೇವೋಭವ ಎಂದು ಹೇಳಬೇಕಾದ ಕಾಲಘಟ್ಟವಿದು. ಪರಿಸರವನ್ನು ನಾವು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ ಎಂದು ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.      ತಾಲ್ಲೂಕಿನ ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಎಚ್.ಶಿವಕುಮಾರ್ (ಬಂಡೆಕುಮಾರ್) ಅವರ 40ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ದೇವಸ್ಥಾನದ ಸನ್ನಿಧಾನದಲ್ಲಿ ವೃಕ್ಷವನ್ನು ಆರೋಪಣ ಮಾಡುವಂತಹ ಕಾರ್ಯಕ್ರಮವನ್ನು ಬಂಡೆ ಕುಮಾರ್ ಅವರು ಮಾಡಿದ್ದಾರೆ. ಇದು ಅವರ ಪರಿಸರ ಪ್ರೇಮ, ಪರಿಸರ ಕಾಳಜಿಯನ್ನು ತೋರಿಸುತ್ತದೆ ಎಂದರು.      ಪರಿಸರ ಕಾಳಜಿಯನ್ನು ಹೊಂದಿರುವ ಬಂಡೆ ಕುಮಾರ್ ಅವರು,…

ಮುಂದೆ ಓದಿ...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

ನವದೆಹಲಿ :         ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.        ನಿನ್ನೆ ರಾತ್ರಿಯಿಂದಲೇ ಅವರ ಆರೋಗ್ಯ ಹದಗೆಟ್ಟಿತ್ತು. ಶ್ವಾಸಕೋಶದ ಸೋಂಕು ಉಲ್ಬಣಗೊಂಡು ಸೆಪ್ಟಿಕ್​ ಆಗಿತ್ತು ಎಂದು ಇಂದು ಬೆಳಗ್ಗೆಯಷ್ಟೇ ಆರ್ಮಿ ಆಸ್ಪತ್ರೆ ಮಾಹಿತಿ ನೀಡಿತ್ತು       ಮುಖರ್ಜಿ ಅವರು ನಿಧನರಾದ ಸಂಗತಿಯನ್ನು ಸ್ವತಃ ಅವರ ಪುತ್ರ ಅಭಿಜಿತ್‌ ಮುಖರ್ಜಿ ಅವರು ಸೋಮವಾರ ಟ್ವೀಟ್‌ ಮಾಡಿ ತಿಳಿಸಿದ್ದಾರೆ.      ಮಿದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರತೆಗೆಯುವ ಸಲುವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲೆಂದು ಆಗಸ್ಟ್‌ 10ರಂದು ಪ್ರಣವ್‌ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಿಗೆ ಕೋವಿಡ್‌ ಇರುವುದು ಖಚಿತವಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಕೋಮಾಕ್ಕೆ ಜಾರಿದ್ದ ಪ್ರಣವ್‌ ಮುಖರ್ಜಿ ಅವರ ಶ್ವಾಸಕೋಶಕ್ಕೆ ಸೋಂಕು ತಗುಲಿ ಪರಿಸ್ಥಿತಿ ವಿಷಮವಾಗಿತ್ತು. ಇಂದೂ ಕೂಡ ಹೆಲ್ತ್‌ ಬುಲೆಟಿನ್‌…

ಮುಂದೆ ಓದಿ...

ಹುಳಿಯಾರಿನ ಶಂಕರಾಪುರ ಬಡಾವಣೆಯಲ್ಲಿ ನೀರಿನ ಹಾಹಾಕಾರ

ಹುಳಿಯಾರು:       ಪಟ್ಟಣ ಪಂಚಾಯ್ತಿಯ ನಿರ್ಲಕ್ಷ್ಯದಿಂದಾಗಿ ಹುಳಿಯಾರಿನ ಶಂಕರಾಪುರ ಬಡಾವಣೆಯಲ್ಲಿ ಕಳೆದೆರಡು ತಿಂಗಳಿನಿಂದ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.       ಶಂಕರಾಪುರ ಬಡಾವಣೆಗೆ ಸಿಹಿ ಮತ್ತು ಉಪ್ಪು ನೀರು ಸರಬರಾಜಿವಿನ ಎರಡು ವ್ಯವಸ್ಥೆಯಿತ್ತು. ಇದರಲ್ಲಿ ಸಿಹಿನೀರು ಸರಬರಾಜು ಮಾಡುವ ಪೈಪ್‍ನಲ್ಲಿ ಅಕ್ರಮವಾಗಿ ನಲ್ಲಿಗಳನ್ನು ಹಾಕಿಕೊಂಡ ಪಡಿಣಾಮ ಬ್ರಾಹ್ಮಣರ ಬೀದಿಗೆ ಹನಿ ನೀರು ಬಾರದಾಗಿದೆ. ಇನ್ನು ಉಪ್ಪು ನೀರು ಸರಬರಾಜು ಮಾಡುವ ಪೈಪ್ ಇತ್ತೀಚೆಗೆ ಸಿಸಿ ರಸ್ತೆ ಮಾಡುವಾಗ ಹೊಡೆದಿದೆ. ಇದನ್ನು ಸರಿಪಡಿಸದ ಪರಿಣಾಮ ಇಡೀ ಶಂಕರಾಪುರ ಬಡಾವಣೆಗೆ ಉಪ್ಪು ನೀರು ಬಾರದೆ ನೀರಿನ ತಾತ್ವರ ಆರಂಭವಾಗಿದೆ.        ಇಲ್ಲಿನ ನಿವಾಸಿಗಳಲ್ಲಿ ಶೇ.80 ರಷ್ಟು ಕೂಲಿಕಾರ್ಮಿಕರಾಗಿದ್ದು ಕೊರೊನಾದಿಂದಾಗಿ ಕೂಲಿನಾಲಿ ಸಿಗದೆ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂಕಷ್ಟದಲ್ಲಿ ದುಡ್ಡು ಕೊಟ್ಟು ನೀರು ಖರೀಧಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ.…

ಮುಂದೆ ಓದಿ...

ಪ್ಲಾಸ್ಟಿಕ್ ಹಾಗೂ ರಟ್ಟು ತುಂಬಿದ್ದ ಕೊಠಡಿಗೆ ಬೆಂಕಿ : ಸಂಪೂರ್ಣ ಭಸ್ಮ!!

ಮಧುಗಿರಿ:       ಇಲ್ಲಿನ ಪುರಸಭಾ ಆವರಣದಲ್ಲಿರುವ ಈಜುಕೊಳ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಪ್ಲಾಸ್ಟಿಕ್ ಮತ್ತು ರಟ್ಟುಗಳನ್ನು ತುಂಬಿದ ರೂಂನಲ್ಲಿ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಭಸ್ಮವಾಗಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.       ಈ ಅಗ್ನಿ ದುರಂತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಅಮರನಾರಾಯಣ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದರಿಂದ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.       ವಾರಕ್ಕೊಮ್ಮೆ ಈ ತ್ಯಾಜ್ಯವನ್ನು ಖರೀದಿ ಮಾಡಿಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ವಿಲೇವಾರಿ ಮಾಡಬೇಕಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. No visits yet

ಮುಂದೆ ಓದಿ...

ಕರ್ತವ್ಯನಿರತ ಪೊಲೀಸ್ ಪೇದೆಗೆ ಚಪ್ಪಲಿಯಿಂದ ತಳಿಸಿದ ಪುಂಡರು!!

ತುಮಕೂರು:       ಜಿಲ್ಲೆಯ ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಪೊಲೀಸ್ ಠಾಣೆಯ ಎಸ್ಪಿ ಕಾನ್ಸ್ಟೇಬಲ್‍ರನ್ನುಪೊಲಿಸ್ ಠಾಣೆಯ ಮುಂದೆಯೇ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ 7:30 ರ ಸಮಯದಲ್ಲಿ ನಡೆದಿದೆ.       ಠಾಣೆಯ ಸಬ್‍ಇನ್ಸ್ಪೆಕ್ಟರ್ ರಾಮಯ್ಯ ರವರಿಗೆ ಕರೋನಾ ಸೋಂಕು ಪಾಸಿಟಿವ್ ಆಗಿದ್ದರಿಂದ ಕ್ವಾರಂಟೈನ್‍ನಲ್ಲಿ ಇದ್ದಾರೆ. ಇಲ್ಲಿನ ಪೊಲೀಸ್ ಸಿಬ್ಬಂದಿಯೂ ಸಹ ಹೋಮ್‍ಕ್ವಾರೇಂಟೈನ್ ಮುಗಿಸಿ ನಿನ್ನೆಯಷ್ಟೇ ಕೆಲಸಕ್ಕೆ ಹಾಜರಾಗಿದ್ದರು .       ಆಂಧ್ರಪ್ರದೇಶ ದಿಂದ ಜನರು ವೈ ಎನ್ ಹೊಸಕೋಟೆಯ ಮದ್ಯದಂಗಡಿಗಳಿಗೆ ಬಂದು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ .ಮದ್ಯದಂಗಡಿಗಳ ಮುಂದೆ ಜನಸಂದಣಿ ಇದೆ, ರಸ್ತೆಯಲ್ಲಿ ಓಡಾಡುವ ಜನರಿಗೆ ಕಿರಿಕಿರಿಯಾಗುತ್ತಿದೆ ಇದರಿಂದ ಸಾರ್ವಜನಿಕ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಸಾರ್ವಜನಿಕರು ದೂರಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ .       ಮದ್ಯದಂಗಡಿಗಳ ಮುಂದೆ…

ಮುಂದೆ ಓದಿ...