ಆಸ್ಟ್ರೇಲಿಯಾದಲ್ಲಿ ಅನಾವರಣವಾಯ್ತು ಮಹಾತ್ಮ ಗಾಂಧೀ ಪ್ರತಿಮೆ

ಆಸ್ಟ್ರೇಲಿಯಾ:      ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಎರಡನೇ ದಿನವಾದ ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಅನಾವರಣಗೊಳಿಸಿದ್ದಾರೆ.       ಆಸ್ಟ್ರೇಲಿಯಾದ ಪರ್ರಮಟ್ಟ ನಗರದ ಜ್ಯುಬಿಲಿ ಪಾರ್ಕ್​ನಲ್ಲಿ ಗಾಂಧೀಜಿ ಅವರ ಪ್ರತಿಮೆ ಇರಿಸಲಾಗಿದೆ. ಭಾರತ ಸರ್ಕಾರ ಈ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದೆ. ಶಿಲ್ಪಿಗಳಾದ ರಾಮ್​ ಮತ್ತು ಅನಿಲ್​ ಸುತಾರ್​ ಅವರು ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಪ್ರತಿಮೆ ಅನಾವರಣಾ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕೋಟ್​ ಮೋರ್ರಿಸೋನ್​ ಮತ್ತು ಪರ್ರಮಟ್ಟ ನಗರದ ಮೇಯರ್​ ಆ್ಯಂಡ್ರ್ಯೂ ವಿಲ್ಸನ್​ ಮತ್ತು ರಾಷ್ಟ್ರಪತಿಯವರ ಪತ್ನಿ ಹಾಜರಿದ್ದರು. (Visited 13 times, 1 visits today)Share

ಮುಂದೆ ಓದಿ...

800 ಅಡಿ ಪ್ರಪಾತಕ್ಕೆ ಬಿದ್ದ ಭಾರತೀಯ ದಂಪತಿ

ಕ್ಯಾಲಿಫೋರ್ನಿಯಾ:       ಅಮೆರಿಕದ ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಎಂಬಲ್ಲಿ 800 ಅಡಿ ಎತ್ತರದಿಂದ ಬಿದ್ದು ಭಾರತೀಯ ದಂಪತಿ ಸಾವನ್ನಪ್ಪಿದ ಘಟನೆ ಅ.25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.       ಕ್ಯಾಲಿಫೋರ್ನಿಯಾದ ಯೋಸೆಮೈಟ್‌ ನ್ಯಾಷನಲ್‌ ಪಾರ್ಕ್‌ನಲ್ಲಿ  ಆಕ್ಟೋಬರ್‌ 25 ರಂದು ವಿಷ್ಣು ವಿಶ್ವನಾಥ್‌ (29) ಮತ್ತು ಪತ್ನಿ ಮೀನಾಕ್ಷಿ ಮೂರ್ತಿ (30) ಅವರು 800 ಅಡಿ ಆಳಕ್ಕೆ ಬಿದ್ದು  ದಾರುಣವಾಗಿ ಸಾವನ್ನಪ್ಪಿದ್ದಾರೆ.       ದಂಪತಿಗಳ ಶವ ಮೊದಲೇ ಸಿಕ್ಕಿದ್ದರೂ ಅವರನ್ನು ಗುರುತಿಸುವುದಕ್ಕೆ ಬಹಳ ಸಮಯ ಹಿಡಿದಿತ್ತು.  ಅವರ ಶವಗಳನ್ನು ಸೋಮವಾರ ಮೇಲಕ್ಕೆತ್ತಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.       ಸಿಸ್ಕೊ ಸಂಸ್ಥೆಯಲ್ಲಿ ಸಿಸ್ಟಮ್​ ಇಂಜಿನಿಯರ್​ ಆಗಿ ಕೆಲಸ ಸಿಕ್ಕಮೇಲೆ ಮೃತ ದಂಪತಿ ನ್ಯೂಯಾರ್ಕ್​ನಿಂದ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದ್ದು, ಈ ದಂಪತಿಗೆ ವಿಶ್ವ ಸುತ್ತುವ…

ಮುಂದೆ ಓದಿ...

ಸಮುದ್ರಕ್ಕೆ ವಿಮಾನ ಪತನ: 189 ಪ್ರಯಾಣಿಕರೂ ಜಲಸಮಾಧಿ

ಜಕಾರ್ತಾ :       ಇಂಡೋನೇಷ್ಯಾದ ಲಯನ್‌ ಏರ್‌ ಸಂಸ್ಥೆಗೆ ಸೇರಿದ ವಿಮಾನ ಪತನಗೊಂಡು ಸಮುದ್ರಕ್ಕೆ ಬಿದ್ದ ಪರಿಣಾಮ ಭಾರತದ ಪೈಲಟ್‌ ಭವ್ಯೇ ಸುನೇಜಾ ಸಹಿತ 188 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ.        ಲಯನ್ ಏರ್ ನ JT610 ವಿಮಾನದಲ್ಲಿದ್ದ ಯಾರೊಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ. ಅದು ಹೊಸ ಬೋಯಿಂಗ್ 737 MAX8 ವಿಮಾನವಾಗಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಪ್ರಕಾರ, ಅಪಘಾತ ಸಂಭವಿಸಿದ ಕಡಲ ಪ್ರದೇಶದಿಂದ ಹದಿನೈದು ಕಿ.ಮೀ. ದೂರಕ್ಕೆ ಮಾನವ ಅವಶೇಷಗಳು ದೊರೆತಿವೆ.       ಸಮುದ್ರಕ್ಕೆ ವಿಮಾನ ಅಪ್ಪಳಿಸಿ ಸುಮಾರು 30-40 ಮೀಟರ್‌ ಆಳಕ್ಕೆ ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿದೆ. ವಿಮಾನದಲ್ಲಿ ಐವರು ಸಿಬಂದಿ, ಇಬ್ಬರು ಪೈಲಟ್‌ಗಳು, 178 ಮಂದಿ ಪ್ರಯಾಣಿಕರು, ಒಂದು ಮಗು, ಎರಡು ಶಿಶುಗಳು ಇದ್ದವು ಎಂದು ಇಂಡೋನೇಷ್ಯಾ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ನಿರ್ದೇಶಕ…

ಮುಂದೆ ಓದಿ...