ತುಮಕೂರು-ಬೆಂಗಳೂರು: ಮೆಮು ರೈಲು ಸಂಚಾರಕ್ಕೆ ಚಾಲನೆ

ತುಮಕೂರು: ತುಮಕೂರು ನಗರದ ರೈಲು ನಿಲ್ದಾಣದಿಂದ ಪ್ರತಿನಿತ್ಯ ತುಮಕೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ವಿಶೇಷ ರೈಲು ಸಂಚಾರಕ್ಕೆ ಸಂಸದರಾದ ಶ್ರೀ ಜಿ.ಎಸ್. ಬಸವರಾಜು ಅವರಿಂದು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈ ದಿನ ಈಡೇರಿದಂತಾಗಿದೆ. ತುಮಕೂರು ಮತ್ತು ಬೆಂಗಳೂರಿನ ಕೆಎಸ್‍ಆರ್ ರೈಲು ನಿಲ್ದಾಣದ ನಡುವೆ ಸಂಚರಿಸುವ ಈ ವಿದ್ಯುತ್‍ಚಾಲಿತ ರೈಲು ಸೇವೆ(ಮೆಮು)ಯಿಂದ ಮುಖ್ಯವಾಗಿ ಕಾರ್ಮಿಕರು, ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಬೆಂಗಳೂರು-ತುಮಕೂರು 8 ಭೋಗಿಗಳುಳ್ಳ ಡೆಮು ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ 16 ಭೋಗಿಗಳುಳ್ಳ ಮೆಮು ರೈಲನ್ನಾಗಿ ಪರಿವರ್ತಿಸಲಾಗಿದೆ. ಸುಮಾರು 20 ವರ್ಷಗಳಿಂದ ಹೋರಾಟದ ಶ್ರಮದಿಂದ ಎರಡು ಪ್ರಮುಖ ನಗರಗಳ ನಡುವೆ ಸಂಚರಿಸುವ ಈ ಮೆಮು ರೈಲು ಸೇವೆ ಸಾಕಾರವಾಗಿದೆ ಎಂದರಲ್ಲದೆ, 2024ರೊಳಗಾಗಿ ರಾಷ್ಟ್ರದ ಎಲ್ಲಾ ರೈಲು ಮಾರ್ಗಗಳು ಡೀಸೆಲ್ ಮುಕ್ತ ವಿದ್ಯುತ್ ಚಾಲಿತ ರೈಲು…

ಮುಂದೆ ಓದಿ...

ಕಲ್ಪತರು ನಾಡಲ್ಲಿ ನಗೆಬೀರಿದ ಕಮಲ!

ತುಮಕೂರು:      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಗೆಲುವು ಸಾಧಿಸಿದ್ದೇನೆಂಬ ಸಂತಸದಲ್ಲಿ ಇದು ಬಸವರಾಜುರವರ ಅಭೂತಪೂರ್ವ ಗೆಲುವು ಎಂದೆಲ್ಲಾ ಮಾತನಾಡಿಕೊಳ್ಳುತ್ತಿರುವ ಬಿಜೆಪಿಗರು ಒಮ್ಮೆ ಆಲೋಚಿಸಬೇಕಿದೆ. ಈ ಗೆಲುವಿನ ಹಿಂದೆ ದೇವೇಗೌಡರ ವಿರೋಧಿ ಅಲೆ ಬಹುಮುಖ್ಯವಾಗಿ ಕಂಡುಬರುತ್ತಿದ್ದು, ಅದರೊಟ್ಟಿಗೆ ಮೋದಿಯ ಅಲೆ, ಭಕ್ತರ ಮುಗ್ಧತೆ ಗೆಲುವಿಗೆ ಸೋಪಾನವಾಗಿದೆ ಎಂದರೂ ತಪ್ಪಾಗಲಾರದು. 4 ಬಾರಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಜಿಲ್ಲೆಯ ಶಾಶ್ವತ ಅಭಿವೃದ್ಧಿಗಳೆಡೆ ಗಮನಹರಿಸಿಲ್ಲವೆಂಬ ಆಪಾದನೆಯಿಂದ ಹೊರತಾಗಲಿಲ್ಲವಾದರೂ ದೇವೇಗೌಡರನ್ನ ಸೋಲಿಸಿಯೇ ತೀರಬೇಕೆಂಬ ಮನೋಭಾವವುಳ್ಳ ಗೌಡರ ವಿರೋಧಿ ಬಣಗಳು ಬಿಜೆಪಿಯ ಬಸವರಾಜುಗೆ ಆಸರೆಯಾಗಿ ಬೆಂಬಲಿಸಿದರು. ಗೌಡರ ವಿರೋಧದ ಅಲೆಯಲ್ಲಿ ತೇಲಿ ಬಂದಿರುವ ಬಸವರಾಜು, ಮಾಜಿ ಪ್ರಧಾನಿಯ ವಿರುದ್ಧ ಆಯ್ಕೆಯಾಗಿ ಬಂದ ಅಭ್ಯರ್ಥಿ ಎಂಬ ಬೃಹತ್ ಹಣೆಪಟ್ಟಿಯನ್ನ ಕಟ್ಟಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮಾಜಿ ಪ್ರಧಾನಿಯನ್ನ ಸೋಲಿಸಿದ್ದ ಸಂಸದರೆಂಬ ಅಭಿಮಾನ…

ಮುಂದೆ ಓದಿ...