ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಶಾಲೆಗಳ ಸಮಗ್ರ ಮಾಹಿತಿ ನೀಡಿ- ಸಚಿವ

ತುಮಕೂರು :

      ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಶಾಲೆಗಳ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳುತಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದರು.

      ಪಟ್ಟಣದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿದೇರ್ಶಕರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೌಲ್ಯಾಧಾರಿತ ಮತ್ತು ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಸರಕಾರದ ಮುಖ್ಯ ಉದ್ದೇಶವಾಗಿದೆ.

      ಕರ್ನಾಟಕ ಪಬ್ಲೀಕ್ ಶಾಲೆಗಳು ಯಶಸ್ವಿಯಾಗಿದ್ದು, ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಬೇಕು ಎಂಬ ಭಾವನೆ ಪೋಷಕರಲ್ಲಿದೆ, ಆದ್ದರಿಂದ ಬೇಡಿಕೆ ಹೆಚ್ಚಾಗಿದೆ, ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಎರಡು ಭಾಷೆಗಳಿರುವುದರಿಂದ ಇದರ ಬಗ್ಗೆ ಸಮಗ್ರವಾಗಿ ಚರ್ಚಿಸಬೇಕಿದೆ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಕಲಿತು ಮೌಲ್ಯಧಾರಿತ ಶಿಕ್ಷಣವಂತರಾಗಬೇಕು, ರಾಜ್ಯದ 60 ಕ್ಕೂ ಅಧಿಕ ಶಾಲೆಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಆಯಾ ಶಾಲೆಗಳ ಕುಂದುಕೊರತೆಗಳನ್ನು ಕಲೆಹಾಕುತ್ತನೆ, ನಂತರ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮ ಕ್ಯಗೊಳ್ಳಲಾಗುವುದು.

      ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಆತ್ಮ ಸ್ಥೈರ್ಯ ತುಂಬಲಾಗುವುದು, ಜತೆಯಲ್ಲಿ ಕೀಳರಿಮೆ ಭಾವನೆಯನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಪ್ರಮುಖರಿಂದ ಇಂಗ್ಲೀಷ್ ಶಾಲೆಗಳು ಬೇಡ ಎಂಬ ಅಪಸ್ವರ ಕೇಳಿ ಬರುತಿದ್ದು, ಇದರ ಬಗ್ಗೆ ಪೋಷಕರಿಂದ ಬೇಡಿಕೆ ಅಪಾರವಾಗಿ ಕೇಳಿ ಬರುತ್ತಿದೆ.ಆದ್ದರಿಂದ ಆಯಾ ಜಿಲ್ಲೆಯ ಅಧಿಕಾರಿಗಳಿಂದ ಸಮಗ್ರ ಮಾಹಿತಿಯೊಂದಿಗೆ ಶಿಕ್ಷಣ ತಜ್ಞರು ಹಾಗೂ ಮುಖ್ಯಮಂತ್ರಿಗಳ ಜತೆ ಮಾತನಾಡಿ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

      ಈ ಸಂದರ್ಬದಲ್ಲಿ ದಲ್ಲಿ ಜಿಪಂ ಸಿಇಓ ಶುಭಕಲ್ಯಾಣ್, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ಡಯಟ್ ಪ್ರಾಂಶುಪಾಲರಾದ ವೈ.ಎನ್.ರಾಮಕೃಷ್ಣಯ್ಯ, ಡಿವೈಪಿಸಿ ರಾಜ್‍ಕುಮಾರ್, ಡಿಡಿಪಿಐ ರವಿಶಂಕರ್‍ರೆಡ್ಡಿ, ಬಿಇಒ ರಂಗಪ್ಪ , ತಹಶೀಲ್ದಾರ್ ನಂದೀಶ್, ಅಶ್ವಥನಾರಾಯಣ, ಸಿಪಿಐ ದಯಾನಂದ ಶೇಗುಣಸಿ, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 8 times, 1 visits today)

Related posts

Leave a Comment