ಡಿಸಿಎಂ ಮತ್ತು ತಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ : ಸಿದ್ದರಾಮಯ್ಯ

  ಹುಬ್ಬಳ್ಳಿ:

      ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದಲ್ಲಿ ಆಗಲೀ ಅಥವಾ ಡಿಸಿಎಂ ಮತ್ತು ತಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

      ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೃಹಖಾತೆ ಬಿಟ್ಟುಕೊಡುವ ಕುರಿತಂತೆ ಉಪಮುಖ್ಯಮಂತ್ರಿಡಾ.ಜಿ.ಪರಮೇಶ್ವರ್ ಜೊತೆವಾದ – ವಾಗ್ದಾದವೂ ನಡೆಲಿಲ್ಲ . ಗೃಹ ಖಾತೆ ಬಿಟ್ಟು ಕೊಡಿ ಎಂದು ಪಟ್ಟು ಹಿಡಿದಿಲ್ಲ ಎಂದರು.

       ಬಾದಾಮಿಗೆ ತೆರಳುವ ಮುನ್ನವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಚಿವರಿಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರುಖಾತೆಗಳಿಗೂ ಹಂಚಿಕೆ ಮಾಡುತ್ತಾರೆ . ಹೀಗಾಗಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು. 

      ಇದೇ ವೇಳೆ ಬಿಜೆಪಿಯವರ ವಿರುದ್ಧ ಕಿಡಿಕಾರಿದ ಸಿದ್ರಾಮಯ್ಯ, ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸರಕಾರ ಅವಧಿ ಪೂರ್ಣಗೊಳಿಸಲಿದೆ ಎಂದರು. 

(Visited 7 times, 1 visits today)

Related posts