ನಮ್ಮ ಸಮಸ್ಯೆಗಳನ್ನು ಕಡೆಗಣಿಸದಿರಿ : ದಲಿತ ಮುಖಂಡರ ಒತ್ತಾಯ

ಮಧುಗಿರಿ :

      ದಲಿತರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ ಪೊಲೀಸ್ ಠಾಣೆಗಳಲ್ಲಿ ದಲಿತರ ಮೇಲೆ ಕೌಂಟರ್ ಕೇಸ್ ಹಾಕುವುದು ನಿಲ್ಲಿಸಬೇಕು ಎಂದು ದಲಿತ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

     ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮಥ್ರ್ಯ ಸೌಧದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಉಪವಿಭಾಗ ಮಟ್ಟದ ದಲಿತರ ಕುಂದುಕೊರತೆ ಸಭೆಯಲ್ಲಿ ಕೆಲವು ಪ್ರಕರಣಗಳಲ್ಲಿ ದಲಿತರು ದೂರು ತೆಗೆದುಕೊಂಡು ಹೋದ ಸಂದರ್ಭದಲ್ಲಿ ಕೌಂಟರ್ ಕೇಸ್ ಹಾಕುತ್ತಿರುವುದು ಸರಿಯಲ್ಲ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಸಭೆಯಲ್ಲಿ ಎಲ್ಲಾ ಮುಖಂಡರು ಖಂಡಿಸಿದರು.

      ದಸಂಸ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ ಇತ್ತೀಚೆಗೆ ರಾತ್ರಿ ವೇಳೆ ಪೊಲೀಸ್ ಬೀಟ್ ಸರಿಯಾಗಿ ಮಾಡುತ್ತಿಲ್ಲ ನಿಮ್ಮ ಸಿಬ್ಬಂದಿಗಳು ಬೀಟ್ ವಿಚಾರವಾಗಿ ಅಧಿಕಾರಿಗಳ ದಿಕ್ಕುತಪ್ಪಿಸುತ್ತಿದ್ದಾರೆ ಇನ್ನುಮುಂದಾದರೂ ಪೊಲೀಸ್ ಬೀಟ್ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಕ್ರಮ ಜರುಗಿಸಿ ಇಲ್ಲವಾದರೆ ರಾತ್ರಿವೇಳೆ ಕೊಲೆ ದರೋಡೆ ಸುಲಿಗೆ ಇತ್ಯಾದಿ ಪ್ರಕರಣಗಳು ಹೆಚ್ಚಾಗಿ ಜನರ ನೆಮ್ಮದಿಗೆ ದಕ್ಕೆ ಬರದಂತೆ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತನ್ನಿ ಎಂದರು.

      ದಲಿತ ಒಕ್ಕೂಟದ ಅಧ್ಯಕ್ಷ ಡಿ.ಟಿ ಸಂಜೀವಮೂರ್ತಿ ಮಾತನಾಡಿ ಸಭೆ ನಡೆಯುವ ದಿನಾಂಕವನ್ನು ಮೂರು ದಿನ ಮುಂಚಿತವಾಗಿ ಪತ್ರ ಮುಖೇನ ತಿಳಿಸಿದರೆ ಸಭೆಗೆ ಬರಲು ಅನುಕೂಲವಾಗುತ್ತದೆ. ಮುಖಂಡರು ತುರ್ತಾಗಿ ಬರಲು ಸಾಧ್ಯವೇ ಕಾನೂನು ನಿಯಮದಂತೆ ಸಭೆಯ ಬಗ್ಗೆ ಮುಂಚಿತವಾಗಿ ತಿಳಿಸಬೇಕಾಗಿತ್ತು ಮುಂದೆ ನಡೆಯುವ ಸಭೆಗಳಿಗಾದರೂ ಲಿಖಿತವಾಗಿ ತಿಳಿಸುವ ಕ್ರಮವಹಿಸಿ ಎಲ್ಲಾ ಸಭೆಗಳಲ್ಲೂ ಅಕ್ರಮ ಮದ್ಯ ಮಾರಾಟದ ವಿಚಾರವು ಅರ್ಧ ಸಭೆಯನ್ನು ಆಕ್ರಮಿಸುತ್ತದೆ ಇದೆಲ್ಲ ತಿಳಿದಿದ್ದರೂ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತಿಲ್ಲ ಯಾಕೆ ಅಂಗಡಿಗಳಿಗೆ ಅಕ್ರಮವಾಗಿ ಮದ್ಯ ನೀಡುವ ವೈನ್ ಸ್ಟೋರ್ ಗಳ ಮೇಲೆ ಪ್ರಕರಣ ದಾಖಲಿಸಿದರೆ ಮಾತ್ರ ಇದು ನಿಯಂತ್ರಣಕ್ಕೆ ಬರುತ್ತದೆ ಎಂದರು.

      ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾರಾಜು ಮಾತನಾಡಿ ಜಾತೀಯತೆಯನ್ನು ಬೇರು ಸಮೇತ ಕಿತ್ತು ಹಾಕಲು ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಪೆರಿಯಾರ್ ಇನ್ನೂ ಅನೇಕ ಮಹಾತ್ಮರು ಶ್ರಮಿಸಿದ್ದಾರೆ ಎಂದು ಅಂತರ್ಜಾತಿ ವಿವಾಹಕ್ಕೆ ಸರಕಾರವೇ ಪ್ರೋತ್ಸಾಹಿಸುತ್ತಿದೆ ಇಂದು ಅಂತರ್ಜಾತಿ ವಿವಾಹ ಮಾಡಿಕೊಂಡವರು ತಮ್ಮ ಊರುಗಳನ್ನು ತ್ಯಜಿಸಿ ದೂರವೇ ಉಳಿಯುತ್ತಾರೆ ಇತ್ತೀಚೆಗೆ ಬ್ಯಾಲ್ಯದ ದಲಿತ ಯುವಕ ಸವರ್ಣೀಯ ಯುವತಿಯನ್ನು ಮದುವೆಯಾಗಿದ್ದು ದಂಪತಿಗಳಿಬ್ಬರು ತಮ್ಮ ಊರಿಗೆ ಬರಲು ಭಯಪಡುತ್ತಿದ್ದಾರೆ ಪರಸ್ಪರ ಒಪ್ಪಿ ವಿವಾಹವಾದವರಿಗೆ ಸೂಕ್ತ ರಕ್ಷಣೆ ಒದಗಿಸಬೇಕಿದೆ ಮಧುಗಿರಿಯ ದಲಿತ ಯುವಕನೊಬ್ಬ ಸಿನಿಮಾ ಚಿತ್ರೀಕರಣ ಮಾಡುವಾಗ ಪೊಲೀಸರಿಂದ ತೊಂದರೆ ಉಂಟಾಗಿದೆ ದಲಿತ ಯುವಪ್ರತಿಭೆಗಳನ್ನು ಚಿವುಟದೆ ಪೆÇ್ರೀತ್ಸಾಹಿಸಿ ಎಂದಾಗ ಧ್ವನಿಗೂಡಿಸಿದ ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ತೊಂಡೋಟಿ ರಾಮಾಂಜಿ ದಲಿತರು ಸಿನಿಮಾ ಕ್ಷೇತ್ರದಲ್ಲಿ ಅದರಲ್ಲೂ ನಮ್ಮ ಸ್ಥಳೀಯ ಪ್ರತಿಭೆ ಸುಕ್ಕ ಸಿನಿಮಾ ತೆಗೆಯುತ್ತಿರುವುದು ಹೆಮ್ಮೆಯ ಸಂಗತಿ ಎಲ್ಲರೂ ಪ್ರೋತ್ಸಾಹಿಸುವ ಮೂಲಕ ಬೆಳವಣಿಗೆಗೆ ಕಾರಣರಾಗಿರಿ, ಎಲ್ಲ ಪೊಲೀಸ್ ಠಾಣೆಗಳಲ್ಲಿ ಕಾನೂನು ನಿಯಮದಂತೆ ತಪ್ಪದೇ ಸಭೆಗಳನ್ನು ಮಾಡಿ ದಲಿತ ಮುಖಂಡರನ್ನು ಕರೆದು ಸಮಸ್ಯೆಗಳನ್ನು ಆಲಿಸಿ ಇತ್ಯರ್ಥ ಪಡಿಸಬೇಕು ಎಂದರು.

      ಪಾವಗಡ ಪೊಲೀಸ್ ಠಾಣೆಗೆ ನಮ್ಮ ದಲಿತ ಪ್ರಾಂಶುಪಾಲ ಧನಂಜಯ ರವರ ವಿರುದ್ದ ಕೆಲವರು ಷಡ್ಯಂತ್ರ ರೂಪಿಸಿ ಅವರ ಹೆಸರಿಗೆ ಕಪ್ಪು ಮಸಿಬಳಿಯಲು ಯತ್ನಿಸಿದ್ದಾರೆ ಹಾಗೂ ಅವರಿಗೆ ಹಣ ಕೊಡುವಂತೆ ಪೀಡಿಸಿ ಹಣ ಕೊಡಲ್ಲಿಲ್ಲವೆಂದರೆ ಮಾಧ್ಯಮಗಳಲ್ಲಿ ಬಂದುಬಿಡುತ್ತೆ ಎಂದು ಎದುರಿಸಿ ಹಣ ನೀಡದೆ ಇರುವುದು ಹಾಗೂ ದಲಿತರನ್ನು ಶಾಲೆಯಿಂದ ಆಚೆಗಟ್ಟಬೇಕು ಎಂದು ಒಳಸಂಚು ರೂಪಿಸಿದ್ದಾರೆ ಕೆಲ ಹಣಬಾಕರು ಇದರ ವಿಚಾರ ಮಾತನಾಡಲು ಪಿಎಸ್ಐ ರಾಘವೇಂದ್ರ ಬಳಿ ತೆರಳಿದ್ದ ನಮ್ಮ ದಲಿತ ಮುಖಂಡರಿಗೆ ವೈಯುಕ್ತಿಕವಾಗಿ ತೇಜೋವಧೆಯ ಮಾತುಗಳನ್ನಾಡಿರುವ ಪಿಎಸೈ ದಲಿತ ವಿರೋಧಿ ಅಧಿಕಾರಿಯಾಗಿದ್ದು ಕೂಡಲೇ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಿಕೆ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ನಾರಾಯಣಪ್ಪ , ನರಸಿಂಹಯ್ಯ, ಪೆದ್ದನ್ನ , ಪಟ್ಟು ಹಿಡಿದರು.

      ಸಿಪಿಐ ದಯಾನಂದ್ ಸೆಗುಣಸಿ ಮಾತನಾಡಿ ದಲಿತರು ಮನೆ ನಿರ್ಮಾಣಕ್ಕಾಗಿ ಸಾಗಿಸುವ ಮರಳು ವಿಚಾರದಲ್ಲಿ ಯಾರಿಗೂ ಸಹ ತೊಂದರೆ ಮಾಡಿಲ್ಲ ಪೊಲಿಸರಿಂದ ನಿಮಗೆ ಯಾವುದೇ ತೊಂದರೆಯಾಗಲ್ಲ ಅನ್ಯಾಯವಾದಾಗ ನೀವು ನಡೆಸುವ ಅನೇಕ ದರಣಿಗಳಲ್ಲಿ ನಿಮ್ಮ ಜೊತೆಗಿದ್ದು ನೋವು ಕಂಡಿದ್ದೇವೆ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರವಿದೆ. ಮರಳಿನ ವಿಚಾರವಾಗಿ ಅರ್ಹಪಲಾನುಭವಿಗೆ ಅನುಕೂಲವಾಗುವ ಬದಲು ಮರಳು ದಂಧೆಯವರಿಗೆ ಉಪಯೋಗವಾಗದಂತೆ ಎಚ್ಚರಿಕೆ ವಹಿಸಿರುವುದಾಗಿ ತಿಳಿಸಿದರು.

      ಸಭೆಯಲ್ಲಿ ಪಾವಗಡ ಸಿಪಿಐ ವೆಂಕಟೇಶ್ ಪಿಎಸ್‍ಐ ಗಳಾದ ಕಾಂತರಾಜು, ನವೀನ್ ಕುಮಾರ್, ಮಂಗಳಗೌರಮ್ಮ, ಕೋದಂಡರಾಮಯ್ಯ, ಮಂಜುನಾಥ್, ರಾಮಯ್ಯ, ಮುಖಂಡರಾದ ಸಿದ್ದಾಪುರ ರಂಗಸ್ವಾಮಿ, ರಂಗನಾಥ್, ಎಂ ವೈ ಶಿವಕುಮಾರ್, ಭರತ್ ಕುಮಾರ್, ನರಸಿಂಹಮೂರ್ತಿ, ಚಿಕ್ಕಮ್ಮ, ಸಿದ್ದಗಂಗಪ್ಪ, ಮರಿಯಪ್ಪ, ಮಲೆರಂಗಯ್ಯ, ಹನುಮಂತರಾಯಪ್ಪ, ನೇರಳೆಕೆರೆ ರಂಗನಾಥ್, ರವಿಕಿರಣ್, ಹೇಮಂತ್, ದೇವರಾಜ್, ಪೇದೆಗಳಾದ ನಟರಾಜ್, ಗಣೇಶ್, ಹಾಗೂ ಉಪವಿಭಾಗದ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

(Visited 18 times, 1 visits today)

Related posts