ಮೋದಿಯನ್ನು ಜೀವಂತವಾಗಿ ಸುಡಲು ಇದು ಸಕಾಲ : ಟಿ.ಬಿ.ಜಯಚಂದ್ರ 

ತುಮಕೂರು:

 

         ಪ್ರಧಾನಿ ನರೇಂದ್ರ ಮೋದಿಯನ್ನ ಜೀವಂತವಾಗಿ ಸುಡಲು ಇದು ಸಕಾಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿವಾದ್ಮತಕ ಹೇಳಿಕೆಯೊಂದನ್ನು ನೀಡಿದ್ದಾರೆ.

         ನೋಟು ಅಮಾನೀಕರಣ ಜಾರಿಗೊಂಡು 2 ವರ್ಷ ಕಳೆದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಟೌನ್‍ಹಾಲ್ ವೃತ್ತದಲ್ಲಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕರಾಳ ದಿನ ಆಚರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತರನ್ನುದ್ದೇಶಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಯಾವುದೇ ಆಡಳಿತಾತ್ಮಕ ಅನುಭವವಿಲ್ಲದೆ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರ ಮಧ್ಯರಾತ್ರಿ ಚಲಾವಣೆಯಲ್ಲಿದ್ದ 500, 1000 ರೂ ನೋಟು ಅಮಾನೀಕರಣದಿಂದ ಭಾರತದ ಆರ್ಥಿಕ ವ್ಯವಸ್ಥೆ 2 ವರ್ಷ ಕಳೆದರೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ, ನನಗೆ 50 ದಿನ ಕೊಡಿ, ದೇಶ ಸರಿಹೋಗದಿದ್ದರೆ, ಜೀವಂತವಾಗಿ ಸುಟ್ಟುಬಿಡಿ ಎಂದು ಹೇಳಿದ್ದ ನರೇಂದ್ರ ಮೋದಿ 2 ವರ್ಷ ಕಳೆದರೂ ನೋಟು ಅಮಾನೀಕರಣದಿಂದ ಉಂಟಾಗಿರುವ ವಿವಿಧ ವೈಫಲ್ಯಗಳನ್ನು ಸರಿಪಡಿಸಲು ಸಾಧ್ಯವಾಗಿಲ್ಲ, ಅವರನ್ನು ಸುಡಲು ಇದು ಸಕಾಲ ಎಂದರು.

      ನೋಟು ಅಮಾನಿಕರಣದಿಂದ ಕಪ್ಪುಹಣ ಮತ್ತು ಭಯೋತ್ಪಾದನೆಯನ್ನು ತಡೆಗಟ್ಟಬಹುದೆಂದು ಮೋದಿ ಪ್ರಕಟಿಸಿದ್ದರು. ಆದರೆ ಚಲಾವಣೆಯಲ್ಲಿದ್ದ ಶೇ.99.3ರಷ್ಟು ಹಣ ವಾಪಾಸ್ ಆಗಿದ್ದರು ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ತಡೆಯಲು ಸಾಧ್ಯವಾಗಿಲ್ಲ, ಭಯೋತ್ಪಾದನೆ ಈ ಹಿಂದಿಗಿಂತಲೂ ಹೆಚ್ಚಾಗಿದೆ. ಈ ವೈಫಲ್ಯವನ್ನು ಮುಚ್ಚಿ ಹಾಕಲು ಜನರನ್ನು ತಪ್ಪು ದಾರಿಗೆ ಎಳೆಯುವ ಅನೇಕ ಕೆಲಸಗಳನ್ನು ಬಿಜೆಪಿ ಮಾಡುತ್ತಾ ಬಂದಿದೆ ಎಂದು ಜಯಚಂದ್ರ ಆರೋಪಿಸಿದರು.

      ಕಳೆದ ಎರಡು ವರ್ಷಗಳಿಂದ ಎಐಸಿಸಿ ಅಧ್ಯಕ್ಷರಾದ ರಾಹುಲ್‍ಗಾಂಧಿ ಅವರು ಸದನದ ಒಳಗೆ ಮತ್ತು ಹೊರಗೆ ನೋಟು ಅಮಾನಿಕರಣದಿಂದ ಜನತೆಗೆ ಆಗಿರುವ ತೊಂದರೆ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಇಂದು ಕಾಂಗ್ರೆಸ್ ಪಕ್ಷ ಜನಸಾಮಾನ್ಯರಿಗೆ ಆಗಿರುವ ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಆಂದೋಲನದ ಮೂಲಕ ಜನರಲ್ಲಿ ಅರಿವು ಮೂಡಿಸಿ ನರೇಂದ್ರ ಮೋದಿ ಅವರಂತಹ ಅನನುಭವಿ ಮತ್ತು ಅಪ್ರಬುದ್ಧ ರಾಜಕಾರಣಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಮತ್ತಷ್ಟು ಅಧೋಗತಿಗೆ ತೆಗೆದುಕೊಂಡು ಹೋಗುವುದನ್ನು ತಡೆಯುವ ಸಲುವಾಗಿ ಹೋರಾಟ ರೂಪಿಸಲಾಗಿದೆ. ಎಂದರು.

      ಮಾಜಿ ಶಾಸಕ ಎಸ್.ರಫೀಕ್ ಅಹಮದ್ ಮಾತನಾಡಿ 2 ವರ್ಷಗಳ ಹಿಂದ ನರೇಂದ್ರ ಮೋದಿ ಅವರು ತೆಗೆದುಕೊಂಡ ಕರಾಳ ನಿರ್ಧಾರದಿಂದ ದೇಶದ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕವರ್ಗ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗಿಲ್ಲ, ಅಂದು ಕುಸಿದ ನಿರ್ಮಾಣ ಕ್ಷೇತ್ರ ಇಂದಿಗೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ, ಬಡವರು ತಮ್ಮ ಮುಂದಿನ ಕಷ್ಟ ಸುಖಗಳಿಗೆಂದು ಕೂಡಿಟ್ಟಿದ್ದ ಅಲ್ಪಸ್ವಲ್ಪ ಹಣವನ್ನು ಬದಲಾಯಿಸಿಕೊಳ್ಳಲು ಹತ್ತಾರು ದಿನಗಳು ಸರದಿ ಸಾಲಿನಲ್ಲಿ ನಿಂತು ಪ್ರಾಣ ತೆತ್ತಿದ್ದನ್ನು ಮೋದಿ ಸರ್ಕಾರ ಕಡೆಗಣಿಸಿದೆ ಇದರ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಕರಾಳ ದಿನವನ್ನು ಆಚರಿಸಲಾಗುತ್ತಿದೆ ಎಂದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ, ಮಾಜಿ ಶಾಸಕ ಆರ್.ನಾರಾಯಣ್ ಮತ್ತಿತರ ಮುಖಂಡರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಕೆಲ ಕಾಲ ಟೌನ್‍ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನೋಟು ಅಮಾನಿಕರಣವನ್ನು ಖಂಡಿಸಲಾಯಿತು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ರಫೀಕ್ ಅಹ್ಮದ್, ಆರ್.ನಾರಾಯಣ್, ನಗರಪಾಲಿಕೆ ಸದಸ್ಯರಾದ ಇನಾಯತ್, ಶಕೀಲ್ ಅಹ್ಮದ್, ಮಾಜಿ ಸದಸ್ಯರಾದ ಹಫೀಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋರಾಜು, ಮೆಹಬೂಬ್‍ಪಾಷ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಅಫ್ತಾಬ್ ಅಹಮದ್, ನರಸೀಯಪ್ಪ, ವೆಂಕಟೇಶ್, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರಾದ ಟಿ.ಜಿ.ಲಿಂಗರಾಜು, ಟಿ.ಬಿ.ಮಲ್ಲೇಶ್, ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಟೂಡ ಮಾಜಿ ಸದಸ್ಯೆ ಗೀತಮ್ಮ ಸೇರಿದಂತೆ ಹಲವರು ಕರಾಳದಿನದಲ್ಲಿ ಭಾಗವಹಿಸಿದ್ದರು.

 

(Visited 42 times, 1 visits today)

Related posts

Leave a Comment