ಸಿದ್ಧಗಂಗಾ ಶ್ರೀ ಚೆನ್ನೈಗೆ : ವ್ಹೀಲ್‌ ಚೇರ್‌ ಬೇಡ ಎಂದ ಶ್ರೀಗಳು!!

ಚೆನ್ನೈ:

      ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀ ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಆಗಮಿಸಿದ್ದು, ಇಲ್ಲಿಂದ ಶ್ರೀಗಳನ್ನು ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ವೈದ್ಯಕೀಯ ಸಂಸ್ಥೆಗೆ ಕರೆದುಕೊಂಡು ಬರಲಾಗಿದೆ.

      ಇದೇ ವೇಳೆ ಶ್ರೀಗಳಿಗ ದೈನಂದಿನ ಪೂಜಕಾರ‍್ಯಗಳಿಗೆ ಯಾವುದೇ ತೊಂದರೆಯಾಗದ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯಲ್ಲಿ ಶ್ರೀಗಳು ಪೂಜಾ ಕಾರ‍್ಯಗಳನ್ನು ನಡೆಸುವುದಕ್ಕೆ ಸಿದ್ದತೆ ಮಾಡಲಾಗಿದೆ ಎನ್ನಲಾಗಿದೆ. ಇನ್ನು ಆಸ್ಪತ್ರೆಯಲ್ಲಿ ಸ್ವಾಮೀಜಿಗೆ ಈಗಾಗಲೇ 5 ಸ್ಟಂಟ್ ಅಳವಡಿಸಲಾಗಿದ್ದು, ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ ಎನ್ನಲಾಗಿದೆ.

ವ್ಹೀಲ್‌ ಚೇರ್‌ ಬೇಡ ಎಂದ ಶ್ರೀಗಳು:

      ಶ್ರೀಗಳು ಲವವಲಿಕೆಯಿಂದ ಇದ್ದು , ಚೆನ್ನೈನಲ್ಲಿ ವ್ಹೀಲ್‌ ಚೇರ್‌ ಬೇಡ ಎಂದು ಕಾಲ್ನಡಿಗೆಯಲ್ಲೇ ಒಳಗೆ ತೆರಳಿದ್ದಾರೆ. ಮಠದಿಂದ ಪೊಲೀಸ್‌ ಬೆಂಗಾವಲಿನೊಂದಿಗೆ ಅಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತಂದು ಎಚ್‌ಎಎಲ್‌ನಿಂದ ಏರ್‌ ಅಂಬುಲೆನ್ಸ್‌ ಮೂಲಕ ಚೆನ್ನೈಗೆ ಕರೆದೊಯ್ಯಲಾಗಿದೆ.

      ಗುರುವಾರ ರಾತ್ರಿ ಆಗಮಿಸಿದ್ದ ಚೆನ್ನೈನ ವೈದ್ಯರ ತಂಡ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದಿದ್ದರು. ಈಗಾಗಲೇ ಶ್ರೀಗಳ ಶಿಷ್ಯವೃಂದದವರು ಚೆನ್ನೈಗೆ ತೆರಳಿದ್ದು ,ಆಸ್ಪತ್ರೆಯಲ್ಲೂ ಶ್ರೀಗಳ ಪೂಜಾ ವಿಧಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಿದ್ದಾರೆ. 

(Visited 14 times, 1 visits today)

Related posts

Leave a Comment