ತಿಪಟೂರು:
ಹಳೇ ದ್ವೇಷದ ಹಿನ್ನೆಲೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ.
22 ವರ್ಷದ ಯೋಗೀಶ್ ಎಂಬುವವನೇ ಚಾಕುವಿನಿಂದ ಇರಿತಕ್ಕೆ ಒಳಗಾದ ಯುವಕ. ಈಡೇನಹಳ್ಳಿ ಗ್ರಾಮದ ಯೋಗೀಶ್ ಹಾಗೂ ಸೂಗುರಿನ ರಾಜೇಶ್ ಎಂಬುವನಿಗೂ ಹಲವು ದಿನಗಳಿಂದ ವೈಶಮ್ಯ ಇತ್ತು, ಹಲವು ಬಾರಿ ಹಲ್ಲೆ ಮಾಡೋಕೆ ರಾಜೇಶ್ ಪ್ರಯತ್ನಿಸಿದ್ದನಂತೆ.. ಇಂದು ಯೋಗೀಶ್ ಒಂಟಿಯಾಗಿದ್ದುದ್ದನ್ನು ಗಮನಿಸಿದ ರಾಜೇಶ್ ಏಕಾಏಕಿ ಚಾಕುವಿನಿಂದ ಪಕ್ಕೆಗೆ ಇರಿದು ಪರಾರಿಯಾಗಿದ್ದಾನೆ. ಕೂಡಲೇ ಗಾಯಾಳು ಯೋಗೀಶ್ ನನ್ನು ತಿಪಟೂರು ತಾಲೂಕು ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ನೊಣವಿನಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜೇಶ್ ಬಂಧಿಸಲು ಬಲೆ ಬೀಸಿದ್ದಾರೆ.
(Visited 108 times, 1 visits today)