ಸ್ಟೇರಿಂಗ್ ರಾಡ್ ಕಟ್ : ಬೇಲಿ ಸಾಲಿಗೆ ನುಗ್ಗಿದ ಬಸ್!!

ಹುಳಿಯಾರು :

      “ಚಲಿಸುತ್ತಿದ್ದ ಬಸ್‍ನ ಸ್ಟೇರಿಂಗ್ ರಾಡ್ ಕಟ್ಟಾಗಿ ಬಸ್ ಬೇಲಿ ಸಾಲಿನ ಕಡೆ ನುಗ್ಗಿದ ಘಟನೆ ಹುಳಿಯಾರು – ಹೊಸದುರ್ಗ ರಸ್ತೆಯ ಕೇಶವಾಪುರದ ಬಳಿ ಭಾನುವಾರ ಜರುಗಿದೆ.

      ಹೊಸದುರ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‍ಆರ್ಟಿಸಿ ಬಸ್‍ನ ಸ್ಟೇರಿಂಗ್ ರಾಡ್ ಕಟ್ಟಾಗಿ ಚಾಲಕನ ಕಂಟ್ರೋಲ್ ತಪ್ಪಿ ರಸ್ತೆಯಿಂದ ಬೇಲಿ ಸಾಲಿನ ಕಡೆ ಬಸ್ ಚಲಿಸಿದೆ. ಅಷ್ಟರಲ್ಲಿ ಎಚ್ಚೆತ್ತ ಚಾಲಕ ತನ್ನ ಸಮಯಪ್ರಜ್ಞೆ, ಜಾಗರೂಕತೆಯಿಂದ ಚಲಿಸುತ್ತಿದ್ದ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.

      ಪರಿಣಾಮ ಭಾರಿ ಅವಘಡ ತಪ್ಪಿ ಯಾವುದೇ ಸಾವು, ನೋವುಗಳು ಸಂಭವಿಸದೆ ಎಲ್ಲರೂ ಕ್ಷೇಮದಿಂದ ಬಸ್ ಇಳಿದಿದ್ದಾರೆ. ನಂತರ ಬಸ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮತ್ತೊಂದು ಕೆಎಸ್‍ಆರ್ಟಿಸಿ ಬಸ್‍ಗೆ ಹತ್ತಿಸಿ ಅವರವರ ಊರಿಗೆ ಕಳುಹಿಸಿಕೊಟ್ಟಿದ್ದಾರೆ. 

(Visited 10 times, 1 visits today)

Related posts

Leave a Comment