ಆರೋಪಿಯನ್ನು ಬಂಧಿಸುವಲ್ಲಿ ತಾರತಮ್ಯ ಎಣಿಸುತ್ತಿರುವುದು ಸರಿಯಲ್ಲ : ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ

ತುರುವೇಕೆರೆ:       ತಾಲೂಕಿನ ಮುನಿಯೂರು ಗ್ರಾಮದಲ್ಲಿ ಸೋಮಶೇಖರ್ ಎಂಬುವವನಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಆರೋಪಿ ಪುನಿತ್ ಎಂಬುವವನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ  ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಎದುರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತಾಲೂಕು ಜೆಡಿಎಸ್ ಫ್ರತಿಭಟನೆ ನಡೆಸಿತು.       ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಎದುರು ತಮ್ಮ ಜೆಡಿಎಸ್ ಕಾರ್ಯಕರ್ತರೊಂದಿಗೆ ಗೇಟ್ ಮುಂಬಾಗ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ತಾರತಮ್ಯ ಎಣಿಸುತ್ತಿರುವುದು ಸರಿಯಲ್ಲ ಶಾಸಕ ಮಸಾಲ ಜಯರಾಮ್ ಆರೋಪಿಯನ್ನು ಅಡಗಿಸಿಟ್ಟಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ, ಶಾಸಕರಾದವರು ಇಂತಹ ಕ್ರಿಮಿನಲ್‍ಗಳ ಪರ ನಿಲ್ಲುತ್ತಿರುವುದು ಸರಿಯಿಲ್ಲ, ಪುನಿತ್…

ಮುಂದೆ ಓದಿ...

ಜೆಡಿಎಸ್‍ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪಗೆ ಖಡಕ್ ಎಚ್ಚರಿಕೆ!!

ತುರುವೇಕೆರೆ:       ತುರುವೇಕೆರೆ ಅಕ್ಷರಶಃ ರಾಜಕೀಯ ರಣರಂಗವಾಗಿ ಮಾರ್ಪಾಡಾಗಿದ್ದು, ಒಬ್ಬರ ಮೇಲೊಬ್ಬರು ರಾಜಕೀಯ ಕೆಸರೆರಚಾಟ ಮಾಡುತ್ತಿದ್ದಾರೆ.       ತಾನು, ತನ್ನ ಅಧಿಕಾರ ಇವಷ್ಟನ್ನೇ ಗುರಿಯಾಗಿಸಿಕೊಂಡು ತನ್ನ ಬೆಂಬಲಿಗರ ಓಲೈಕೆಗಾಗಿ ತನ್ನ ಘನತೆಯ ಶೋಭೆಯನ್ನು ಮರೆತು ಎದುರಾಳಿಯ ತೇಜೋವಧೆಗೆ ಮುಂದಾಗಿರುವುದು ವಿಪರ್ಯಾಸ.       ಯಾರೊಬ್ಬರು ಸಹ ತನ್ನ ನೈತಿಕತೆಯ ಹೊರೆ ಹೆಚ್ಚುವಿಕೆಗೆ ಮುಂದಾಗದೆ ಎದುರಾಳಿಯ ತೇಜೋವಧೆಯೊಂದೆ ಗುರಿಯಾಗಿಸಿಕೊಂಡು ತಾನು ತನ್ನ ಬೆಂಬಲಿಗರಿಂದ ಅಸಂಭದ್ಧ ಪದಗಳ ಬಳಕೆಯನ್ನು ಮಾಡುತ್ತಾ ರಾಜಕೀಯ ಕೆಸರೆರಚಾಟದ ಜಂಗಿ ಕುಸ್ತಿಯ ಅಖಾಡವನ್ನಾಗಿ ತುರುವೇಕೆರೆ ಕ್ಷೇತ್ರವನ್ನ ಮಾರ್ಪಡಿಸಿಕೊಂಡು ಅಭಿವೃದ್ಧಿಯ ಮೂಲ ಮಂತ್ರವನ್ನ ಹೊರಗಿಟ್ಟು ಕೊರೊನಾ ಸೋಂಕಿನಂತಹ ಆರೋಗ್ಯ ತುರ್ತುಪರಿಸ್ಥಿತಿಯ ಅರಿವಿಲ್ಲದೆ ಮಾತನಾಡುತ್ತಿರುವುದು, ಮಾತನಾಡಲು ಪ್ರೇರೇಪಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ತುರುವೇಕೆರೆ ಜನಾಭಿಪ್ರಾಯವಾಗಿದೆ.       ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಮಾತುಗಳು ಮೌನವನ್ನೇ ಮರೆತು ರಾಜಕೀಯ…

ಮುಂದೆ ಓದಿ...

ಪಶು ವೈದ್ಯರು ಹಳ್ಳಿಗಳಿಗೆ ತೆರಳಿ ಚಿಕಿತ್ಸೆ ನೀಡಿ: – ಸಚಿವ ಚವ್ಹಾಣ್

 ತುಮಕೂರು :       ಪಶು ವೈದ್ಯರು ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಿ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ ಚವ್ಹಾಣ್ ಅವರು ಪಶು ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.       ತುಮಕೂರು ನಗರದಲ್ಲಿರುವ ಪಶುಪಾಲನ ಮತ್ತು ಪಶು ವೈದ್ಯ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿಂದು ನಡೆದ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ನಡೆಸಿ ಮಾತನಾಡಿದ ಅವರು ವೈದ್ಯರು ಹಳ್ಳಿಗಳಿಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಪರಿಹರಿಸಿ, ಪಶು ಸಂಗೋಪನೆ ಇಲಾಖೆಯಲ್ಲಿನ ಪಶುವೈದ್ಯರು ಬರೀ ಕೇಂದ್ರ ಸ್ಥಾನದ ಕಛೇರಿಯಲ್ಲಿ ಕುಳಿತು ಕೊಳ್ಳದೇ ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.       ನಿತ್ಯ ಹಳ್ಳಿಗಳಿಗೆ ಭೇಟಿ ನೀಡಿದ ಕೆಲಸದ ಪೋಟೊ ಹಾಗೂ ವಿವರವನ್ನು ವಾಟ್ಸಾಪ್ ಮೂಲಕ ನನಗೆ ಕಳುಹಿಸಿ. ಸದ್ಯದಲ್ಲೆ…

ಮುಂದೆ ಓದಿ...

ತುಮಕೂರು : ಇಂದು ಮತ್ತೆ 16 ಮಂದಿಗೆ ಸೋಂಕು; ಒಂದು ಸಾವು!!

ತುಮಕೂರು :     ನಗರದಲ್ಲಿ ಇಂದು ಒಂದೇ ದಿನ 16 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 268 ಏರಿಕೆಯಾಗಿದೆ. ತಾಲ್ಲೂಕುವಾರು ಸೋಂಕಿತರ ವಿವರ : ತುಮಕೂರು -6 ಕೊರಟಗೆರೆ-4 ಪಾವಗಡ – 2 ಮಧುಗಿರಿ-2 ಚಿಕ್ಕನಾಯಕನಹಳ್ಳಿ-1 ಕುಣಿಗಲ್-1        ಇದರಲ್ಲಿ 65 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 194 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕೊರೊನಾ ಸೋಂಕಿತರೊಬ್ಬರು ಇಂದು ಸಾವನ್ನಪ್ಪ್ಪಿದ್ದಾರೆ ಎಂದು  ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.  

ಮುಂದೆ ಓದಿ...

ಕೊರಟಗೆರೆ: ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ತುರ್ತು ಚಿಕಿತ್ಸಾ ಕೇಂದ್ರ

ಕೊರಟಗೆರೆ:       ಕೊರೊನಾ ಸೋಂಕಿತ ರೋಗಿಗಳಿಗೆ ಪೌಷ್ಟಿಕಾಂಶದ ಆಹಾರ, ಮೂಲಸೌಕರ್ಯ ಮತ್ತು ಸಮರ್ಪಕ ವೈದ್ಯಕೀಯ ಔಷಧಿ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹಗಲುರಾತ್ರಿ ಜಾಗೃತೆ ವಹಿಸಬೇಕಾಗಿದೆ ಕೊರಟಗೆರೆ ತಹಶೀಲ್ದಾರ್ ಮತ್ತು ತಾಲೂಕು ವೈದ್ಯಾಧಿಕಾರಿಗೆ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಸೂಚನೆ ನೀಡಿದರು.       ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪ್ರತ್ಯೇಕ ಕೊವಿದ್ ತುರ್ತು ಚಿಕಿತ್ಸೆ ಕೇಂದ್ರ ಮತ್ತು ಕೊರೊನಾ ಸೊಂಕಿತ ರೋಗಿಗಳಿಗೆ ಮೂಲ ಸೌಲಭ್ಯದ ತುರ್ತುಸಭೆಯಲ್ಲಿ ಸರಕಾರಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.       ಆಡಳಿತ ವೈದ್ಯಾಧಿಕಾರಿ ಮತ್ತು ತಾಲೂಕು ವೈದ್ಯಾಧಿಕಾರಿ ಸಮನ್ವಯತೆ ಕಾಪಾಡಿಕೊಂಡು ಕೊರೊನಾ ರೋಗದ ವಿರುದ್ದ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಕೊರೊನಾ ರೋಗದ ವಿರುದ್ದ ಪ್ರತಿಯೊಂದು ಇಲಾಖೆಯ ಸಹಕಾರ ಅಗತ್ಯವಾಗಿ ಬೇಕಾಗಿದೆ. ತುರ್ತು ಪರಿಸ್ಥಿತಿಯಲ್ಲಿ ನಾವೇಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ ಎಂದು ತಿಳಿಸಿದರು.…

ಮುಂದೆ ಓದಿ...

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ : ಜೆಸಿಎಂ ಆತಂಕ

ತುಮಕೂರು:       ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಈವರೆಗೆ ಒಟ್ಟು 252 ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಭಾನುವಾರ ಒಂದೇ ದಿನದಲ್ಲಿ 31 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.       ಇದುವರೆಗೆ ವರದಿಯಾದ 252 ಸೋಂಕಿತರ ಪೈಕಿ 61 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಉಳಿದಂತೆ 183 ಸಕ್ರಿಯ ಪ್ರಕರಣಗಳಿದ್ದು, 8 ಮಂದಿ ಮರಣ ಹೊಂದಿದ್ದಾರೆ. ಈವರೆಗೆ 20512 ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, 1395 ಜನರನ್ನು ನಿಗಾವಣೆಯಲ್ಲಿಡಲಾಗಿದೆ. ಈ ಪೈಕಿ 16879 ಮಾದರಿಗಳು ನೆಗೆಟಿವ್ ಪ್ರಕರಣವೆಂದು ವರದಿಯಾಗಿದೆ. ಪ್ರಸ್ತುತ 566 ಪ್ರಾಥಮಿಕ ಹಾಗೂ 829…

ಮುಂದೆ ಓದಿ...

ಚಿ.ನಾ.ಹಳ್ಳಿ : 8 ವರ್ಷದ ಬಾಲಕನಿಗೆ ಕೊರೊನಾ ದೃಢ!!

ಚಿಕ್ಕನಾಯಕನಹಳ್ಳಿ:       8 ವರ್ಷದ ಬಾಲಕೊನೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ತಾಲ್ಲೂಕಿನಲ್ಲಿ ಈವರೆಗೆ ಸೋಕಿತರ ಪ್ರಮಾಣ 10ಕ್ಕೇರಿದಂತಾಗಿದೆ.       ಕಳೆದ ವಾರ ಪಟ್ಟಣದ ಸಮೀಲದ ಕಾಡೇನಹಳ್ಳಿಯ 22ವರ್ಷದ ಯುವಕನೋರ್ವನಿಗೆ ಸೋಂಕು ದೃಢಪಟ್ಟಿದ್ದು ಸದರಿ ಯವಕನ ಸಮೀಪದ ಮನೆಯಲ್ಲಿನ 8 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಕಳೆದೆರಡು ದಿನದ ಹಿಂದೆ ಬಾಲಕನಿಗೆ ಜ್ವರಬಂದ ಹಿನ್ನಲೆಯಲ್ಲಿ ಗಂಟಲ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಅದು ದೃಢಪಟ್ಟಿದೆ. ಬಾಲಕನ ಮನೆಯಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿ ವಾಸವಿದ್ದಾರೆ. ಈಗಾಗಲೇ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಬಾಲಕನ್ನು ಪಟ್ಟಣದ ಆಸ್ಪತ್ರೆಯಲ್ಲಿ ಐಸೋಲೇಸನ್ ವಾರ್ಡ್‍ಗೆ ಸೇರಿಸಲಾಗಿದೆ. ಕುಟುಂಬದವರನ್ನು ಕ್ವಾರಂಟೈನ್‍ಗೊಳಪಡಿಸಲಾಗಿದೆ.       ಹೊರಗಿನಿಂದ ಬಂದವರ ಆತಂಕ: ರಾಜ್ಯದ ಬಹುತೇಕ ನಗರಗಳನ್ನು ಕೊರೊನಾ ಸೋಂಕಿತರ ಪ್ರಮಾಣ ವಿಪರೀತವಾಗಿ ಏರುತ್ತಿರುವುದರಿಂದ ನಗÀರಗಳಿಂದ ಗ್ರಾಮಗಳಿಗೆ ತಂಡೋಪತಂಡವಾಗಿ ಬರುತ್ತಿರುವುದು ಗಾಬರಿ ಹುಟ್ಟಿಸಿದೆ.…

ಮುಂದೆ ಓದಿ...

ತುಮಕೂರು : ಜಿಲ್ಲೆಯಲ್ಲಿ 221 ಕ್ಕೇರಿದ ಕೊರೊನಾ ಪಾಸಿಟೀವ್!!

ತುಮಕೂರು :       ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 13 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 221 ಕ್ಕೆ ಏರಿಕೆ ಆದಂತಾಗಿದೆ. ತಾಲ್ಲೂಕುವಾರು ಸೋಂಕಿತರ ವಿವರ : ತುಮಕೂರು -6 ಪಾವಗಡ – 3 ಮಧುಗಿರಿ-2, ಕುಣಿಗಲ್-2       ಜಿಲ್ಲೆಯ  ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕೊರಟಗೆರೆ, ಕುಣಿಗಲ್ ತಾಲ್ಲೂಕುಗಳಲ್ಲಿ ಕೊರೊನಾ ರುದ್ರ ನರ್ತನ ಮಾಡುತ್ತಿದೆ.       ಲಾಕ್‍ಡೌನ್ ಸಡಿಲಿಕೆಯ ನಂತರ ಎಲ್ಲರೂ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದು, ಯಾರಿಗೆ ಯಾರಿಂದ ಸೋಂಕು ಹರಡುತ್ತಿದೆ ಎಂಬ ಅರಿವಿಲ್ಲ.       ಗ್ರಾಮೀಣ ಪ್ರದೇಶದ ಜನತೆಯನ್ನ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಯಾವುದೇ ರೀತಿಯಲ್ಲಿ ಯಾರಿಂದ ಯಾರಿಗೆ ಸುಳಿವು ನೀಡದೇ ಎಲ್ಲರಲ್ಲೂ ಆವರಿಸುತ್ತಿದೆ.

ಮುಂದೆ ಓದಿ...

ತುಮಕೂರು : ಜಿಲ್ಲಾಸ್ಪತ್ರೆಗೆ ನೂತನ ಎ.ಎಲ್.ಎಸ್ ಆಂಬುಲೆನ್ಸ್!!

ತುಮಕೂರು:       ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಜಿಲ್ಲಾ ಆಸ್ಪತ್ರೆಗೆ ನೂತನ ಎ.ಎಲ್.ಎಸ್ ಆಂಬುಲೆನ್ಸ್ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಟಿ ರಂಗಸ್ವಾಮಿ ತಿಳಿಸಿದ್ದಾರೆ.       ಕೋವಿಡ್-19 ಹಿನ್ನೆಲೆಯಲ್ಲಿ ಸೋಂಕಿತರನ್ನು ಕರೆತರಲು ಜಿಲ್ಲಾಸ್ಪತ್ರೆಗೆ 54 ಲಕ್ಷ ರೂ. ಮೊತ್ತದ ಒಂದು ಜೀವರಕ್ಷಕ ಎ.ಎಲ್.ಎಸ್ ಆಂಬುಲೆನ್ಸ್ ಅನ್ನು ಒದಗಿಸಲಾಗಿದೆ. ಜಿಲ್ಲಾಸ್ಪತ್ರೆ ಮನವಿ ಮೇರೆಗೆ ಈ ಅತ್ಯಾಧುನಿಕ ಆಂಬುಲೆನ್ಸ್ ಅನ್ನು ಒದಗಿಸಲಾಗಿದ್ದು, ಆಂಬುಲೆನ್ಸ್‍ನಲ್ಲಿ ಒಂದು Portable ventilator, Syringe infusion pump, Wheel chair cum Evacuation chair, Intubation kit, Advanced portable suction unit ಮತ್ತಿತರೆ ಪರಿಕರಗಳನ್ನೊಳಗೊಂಡಿದೆ.        ಜಿಲ್ಲಾಸ್ಪತ್ರೆಯ ಟ್ರಾಮಾ ಕೇರ್ ವಿಭಾಗದಿಂದ ರೋಗಿಗಳನ್ನು ಉನ್ನತ ಮಟ್ಟದ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲು ಹಾಗೂ ಅಪಘಾತ ಸ್ಥಳದಿಂದ…

ಮುಂದೆ ಓದಿ...

ಚಿ.ನಾ.ಹಳ್ಳಿ ತಾಪಂ ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ!

ತುಮಕೂರು:       ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ 2020-21ನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಗೌರವ ತೋರಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಆರ್.ರಾಮಚಂದ್ರಯ್ಯ, ಜಿಪಂ ಸದಸ್ಯರಾದ ಕಲ್ಲೇಶ್ ಮತ್ತು ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.       ನಗರದ ಪತ್ರಿಕಾ ಭವನದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶನಿವಾರ ತಾಪಂ ಕೆಡಿಪಿ ಸಭೆ ಇದೆ ಎಂದು ಶುಕ್ರವಾರ ಸಂಜೆ ನಮಗೆ ಮಾಹಿತಿ ನೀಡಿದ್ದಾರೆ. ಒಂದು ದಿನದಲ್ಲಿ ನಾವು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುವುದಾದರೂ ಹೇಗೆ? ವರದಿಯಲ್ಲಿರುವ ಮಾಹಿತಿ ತಿಳಿದುಕೊಳ್ಳಲು ನಮಗೆ ಸಮಯ ಬೇಡವೇ ಎಂದು ಪ್ರಶ್ನಿಸಿದರು.       ಸಭೆಯಲ್ಲಿ ಈ ಬಗ್ಗೆ ಸಚಿವರಾದ ಮಧುಸ್ವಾಮಿಯವರನ್ನು ಪ್ರಶ್ನೆ…

ಮುಂದೆ ಓದಿ...