Author: News Desk Benkiyabale

ತುಮಕೂರು:      ಬೆಳ್ಳಂಬೆಳಗ್ಗೆ ಕರಡಿ ದಾಳಿ ಮಾಡಿದ್ದರಿಂದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಸೂರೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.       ರೇಣುಕಮ್ಮ ಮತ್ತು ಬೇದುರ್‍ಬೀ ಅವರ ಕೈಗಳನ್ನು ಬಗೆದು ಕಂಡವನ್ನು ಕಿತ್ತಿದೆ. ಕರೀಮ್‍ಸಾಬ್ ಕಾಲನ್ನು ಕಚ್ಚಿಬಿಟ್ಟಿದೆ. ಮೂವರನ್ನೂ ತೋವಿನಕೆರೆ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದರೂ ಇವುಗಳ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.       ಜಿಲ್ಲೆಯಲ್ಲಿರುವ ಕರಡಿಧಾಮದ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಇದರಿಂದಾಗಿ ಸ್ಥಳಿಯರ ಆಕ್ರೋಶ ಮುಗಿಲು ಮುಟ್ಟಿದೆ ಇನ್ನೂ ಕರಡಿಯಿಂದ ಕಡಿಸಿಕೊಂಡವರನ್ನು ನೋಡಲು ಜನತೆ ಮುಗಿಬಿದಿದ್ದಾರೆ ದಾಳಿಗೊಳಗಾದವರಿಗೆ ಸಮೀಪದ  ತೋವಿನಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಗುತ್ತಿದೆ ಎಂದು ವರದಿಯಾಗಿದೆ.

Read More

ತುಮಕೂರು:       ನಾನು ಸತ್ತರೂ ಬಿಜೆಪಿಗೆ ಹೋಗಲ್ಲ. ನಾನು ಇದ್ದರೂ ಜೆಡಿಎಸ್, ಸತ್ತರೂ ಜೆಡಿಎಸ್ ಪಕ್ಷದಲ್ಲೇ ಎಂದು ಶಾಸಕ ಗೌರಿಶಂಕರ್ ಸ್ಪಷ್ಟಪಡಿಸಿದರು.       ತಾಲೂಕಿನ ಬೆಳ್ಳಾವಿಯಲ್ಲಿ ಶನಿವಾರ ನಡೆದ ಕನಕ ಜಯಂತಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರು ನಾನು ಬಿಜೆಪಿಗೆ ಹೋಗುತ್ತೇನೆಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಅದು ಸುಳ್ಳು ನನ್ನ ಆತ್ಮ ಜೆಡಿಎಸ್. ನನ್ನ ಅಂತಿಮ ಕೂಡ ಜೆಡಿಎಸ್, ನನ್ನ ಹೆಣ ಕೂಡ ಬೇರೆ ಪಕ್ಷದ ಮುಖ ನೋಡುವುದಿಲ್ಲ ಎಂದು ಖಡಕ್ ಆಗಿ ನುಡಿದರು.       ಕೆಲ ಮಾಧ್ಯಮಗಳಿಂದಲೂ ನನ್ನ ತೇಜೋವಧೆ ಆಗುತ್ತಿದೆ. ಮಾಧ್ಯಮದವರು ಸುಳ್ಳು ಸುದ್ದಿ ಬಿತ್ತರಿಸಿ ಜನರ ನಂಬಿಕೆ ಕಳೆದುಕೊಳ್ಳಬಾರದು. ವಿಶೇಷವಾಗಿ ಮಾಧ್ಯಮದವರನ್ನು ಕೈಮುಗಿದು ಕೇಳುತ್ತೇನೆ. ಅಪಪ್ರಚಾರ ಮಾಡಬೇಡಿ. ನನ್ನ ಕೊನೆ ಉಸಿರು ಇರೋವರೆಗೂ ಕೂಡ ಕುಮಾರಣ್ಣ, ದೇವೇಗೌಡರು,ಜೆಡಿಎಸ್ ಅಷ್ಟೇ.ನನ್ನ ಹೆಣ ಕೂಡ ಇನ್ನೊಂದು ಪಕ್ಷ ಅಂತಾ ಕನಸಿನಲ್ಲಿ ಕಾಣಲ್ಲ ಎಂದರು.

Read More

ನವದೆಹಲಿ:       ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡದ ಸರ್ಕಾರಗಳಿಗೆ ಸುಪ್ರೀಂಕೋರ್ಟ್ 50 ಸಾವಿರ ರೂ ದಂಡ ವಿಧಿಸಿದೆ.       ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಿಗೆ ಸುಪ್ರೀಂಕೋರ್ಟ್ 50 ಸಾವಿರ ರೂ ದಂಡ ವಿಧಿಸಿದೆ. ಜಸ್ಟೀಸ್ ಮದನ್ ಬಿ ಲೋಕುರ್ ಅವರಿದ್ದ ಪೀಠ ಕರ್ನಾಟಕ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ, ಗೋವಾ ರಾಜ್ಯಗಳಿಗೆ ದಂಡ ವಿಧಿಸಿದೆ.       ರಾಜಸ್ಥಾನದಲ್ಲಿ ಶೇ. 50 ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ, ಗೋವಾದಲ್ಲಿ ಶೇ.60ರಷ್ಟು ಹುದ್ದೆಗಳು ಖಾಲಿ ಇವೆ, ಅಸ್ಸಾಂನಲ್ಲಿ ಶೇ.40, ಕರ್ನಾಟಕದಲ್ಲಿ ಶೇ.50, ಮಹಾರಾಷ್ಟ್ರದಲ್ಲಿ ಶೇ 50, ಒಡಿಶಾದಲ್ಲಿ ಶೇ 33 ರಷ್ಟು, ಉತ್ತರ ಪ್ರದೇಶದಲ್ಲಿ ಶೇ. 80 ರಷ್ಟು ಹುದ್ದೆಗಳು ಖಾಲಿ ಇವೆ.       ಈಗಾಗಲೇ ಖಾಲಿ ಇರುವ ಹುದ್ದೆಗಳ ಕುರಿತು ಸರ್ಕಾರಗಳಿಗೆ ಮಾಹಿತಿ ಸಲ್ಲಿಸಲು ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾಲ್ಕು…

Read More

ಬೆಂಗಳೂರು:        ಇಂದು ಬೆಳಗ್ಗೆ ಕಾಟನ್ ಪೇಟೆ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದಲ್ಲಿ ದಿಢೀರ್ ಅಂತ ರಸ್ತೆ ಕುಸಿದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.        ಮುಖ್ಯರಸ್ತೆಯು ಸುಮಾರು 8 ಅಡಿ ಆಳದಷ್ಟು ಕುಸಿದಿದೆ, ಬಸ್ ಪಾಸಾಗುತ್ತಿದ್ದಂತೆಯೇ ಭೂಕುಸಿತ ಉಂಟಾಗಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಕಳಪೆ ಕಾಮಗಾರಿಯೇ ಭೂಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಕಾಟನ್‌ ಪೇಟೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಾಗಿದೆ.       ಇನ್ನು ಹೀಗೆ ರಸ್ತೆ ಮಧ್ಯೆ ಕುಸಿದಿರೋದ್ರಿಂದ ವಾಹನ‌ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.. ಜನರು ಓಡಾಡಲು ಪರ್ಯಾಯ ಮಾರ್ಗಕಾಣದೇ ಟ್ರಾಫಿಕ್​ ಜಾಂ ಉಂಟಾಗಿದೆ. ಇನ್ನು ಘಟನ ಸ್ಥಳಕ್ಕೆ ಮೇಯರ‍್ ಸೇರಿದಂತೆ ಹಿರಿಯ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ

Read More

ಬೆಂಗಳೂರು:        ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರು ತಮ್ಮ ಪ್ರತಿ ತಿಂಗಳ ಆರೋಗ್ಯದ ಸಲುವಾಗಿ ಇಂದು ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.        ನಿನ್ನೆ ಬಿಜಿಎಸ್ ಆಸ್ಪತ್ರೆ ವೈದ್ಯರು ಮಠಕ್ಕೆ ಬಂದು ಸ್ವಾಮಿಜಿಯವರ ಆರೋಗ್ಯ ತಪಾಸಣೆ ಮಾಡಿದ್ದರು. ಆದರೂ ಕೂಡ ಮತ್ತೊಮ್ಮೆ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಿಶೇಷ ತಪಾಸಣೆ ಮಾಡಬೇಕಿದೆ ಎಂದು ವೈದ್ಯರ ಬೇಡಿಕೆಯ ಮೇರೆಗೆ ಇಂದು ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.        ಸಣ್ಣದಾಗಿ ಜ್ವರ ಕಾಡುತ್ತಿದ್ದು, ರಕ್ತ ಪರೀಕ್ಷೆ, ಅಲ್ಟ್ರಾ ಸೌಂಡ್ ಮತ್ತು ಕಿಬ್ಬೊಟ್ಟೆಯ ಸಿಟಿ ಸ್ಕ್ಯಾನ್ ಮಾಡಲಾಗುತ್ತೆ‌. ಇನ್ನು ಕಳೆದ ಎರಡೂವರೆ ವರ್ಷಗಳಲ್ಲಿ 5 ಬಾರಿ ಶ್ರೀಗಳ ಲಿವರ್​​ನಲ್ಲಿ ಸ್ಟಂಟ್ ಅಳವಡಿಸಲಾಗಿದೆ. ಶ್ರೀಗಳಿಗೆ ಡಾ. ರವೀಂದ್ರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.       ಇಂದು ಬೆಂಗಳೂರಿನಲ್ಲೇ ಇರಲಿದ್ದು, ಇದಕ್ಕೆ ಪೂರ್ವಾಭಾವಿಯಾಗಿ ಮಠದಿಂದ  ಶ್ರೀಗಳ ಶಿಷ್ಯರು ಆಗಮಿಸಿದ್ದಾರೆ. ನಾಳೆ ಸಂಜೆವರೆಗೂ ಶ್ರೀಗಳು ಆಸ್ಪತ್ರೆಯಲ್ಲೇ ಇರಲಿದ್ದು, ಅವರ…

Read More

 ತುಮಕೂರು:        ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್.ಐ.ವಿ(ಏಡ್ಸ್) ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು, ಸಂಘ-ಸಂಸ್ಥೆಗಳು, ಜನಸಾಮಾನ್ಯರು ಸಹಕರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಮನವಿ ಮಾಡಿದರು.       ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ನಗರ ಪಾಲಿಕೆಯ ಬಳಿ ಇಂದು ಬೆಳಿಗ್ಗೆ ಏರ್ಪಡಿಸಿದ್ದ ಜಾಗೃತಿ ಜಾಥಾ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ವರ್ಷ “ತಮ್ಮ ಹೆಚ್.ಐ.ವಿ. ಸ್ಥಿತಿಯನ್ನು ತಿಳಿದುಕೊಳ್ಳಿ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.       ಜಾಥಾ ಕಾರ್ಯಕ್ರಮದಲ್ಲಿ ಎರಡನೇ ಅಧಿಕ ಜಿಲ್ಲಾ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ್, ಆರನೇ ಅಧಿಕ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ಸ್ವಾಮಿ ಹೆಚ್.ಎಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ ಜಿನರಾಳ್ಕರ್, ತುಮಕೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಸಿದ್ದೆಗೌಡ,…

Read More

ಮಧುಗಿರಿ :       ಶೈಕ್ಷಣಿಕ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ನೋಟೀಸ್ ನೀಡುವ ಬೆದರಿಕೆಯೊಡ್ಡಿ ಅವರ ಹೋರಾಟ ಮನೋಭಾವವನ್ನು ಹತ್ತಿಕ್ಕಲು ಯತ್ನಿಸುತ್ತಿರುವುದು ಖಂಡನೀಯ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಎನ್. ಮಹಲಿಂಗೇಶ್ ತಿಳಿಸಿದರು.       ಪಟ್ಟಣದ ಡಿಡಿಪಿಐ ಕಚೇರಿಯ ಮುಂದೆ ಗುರುಭವನ ಸಮಿತಿಯ ಅವ್ಯವಹಾರಗಳನ್ನು ಖಂಡಿಸಿ 9 ಶಿಕ್ಷಕರ ಸಂಘಗಳು ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಕಮಿಟಿಯ ಹಣಕಾಸಿನ ವ್ಯವಹಾರಗಳು ಪಾರದರ್ಶಕತೆಯಿಂದ ಕೂಡಿರಬೇಕು. ಎಲ್ಲಾ ವ್ಯವಹಾರಗಳನ್ನು ಚೆಕ್ ಮೂಲಕವೇ ನಡೆಸಬೇಕು ಎಂಬ ನಿಯಮವಿದ್ದರೂ ಈ ಎಲ್ಲಾ ನಿಯಮಗಳನ್ನು ಈಗ ಇರುವ ಗುರುಭವನ ಕಮಿಟಿ ಗಾಳಿಗೆ ತೂರಿದೆ. ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುವ ಸ್ಥಾನವಿದ್ದು, ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಂಘದ ವಿರುದ್ದ ಅಲ್ಲ. ಗುರುಭವನ ಕಮಿಟಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಗೆಹರಿಸಲು ನಾವು ಹೋರಾಟ ಮಾಡುತ್ತಿದ್ದು, ಈಗ ಇರುವ ಗುರುಭವನ ಸಮಿತಿಯ ಪದಾಧಿಕಾರಿಗಳನ್ನು ಬದಲಾಯಿಸಿ ಪುನರ್ ರಚಿಸಬೇಕು ಎಂದು ಒತ್ತಾಯಿಸಿದರು.  …

Read More

ಮಧುಗಿರಿ :       ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಶೌಚಾಲಯಗಳನ್ನು ಸ್ವಚ್ಚಗೊಳಿಸಲು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದು, ಇದರ ಬಗ್ಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ತಿಳಿಸಿದರು.       ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಸಮೀಪವಿರುವ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಶನಿವಾರ ಬೆಳಗ್ಗೆ ದಿಡೀರ್ ಬೇಟಿ ನೀಡಿ ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳ ಕೈಯಲ್ಲಿ ಶೌಚಾಲಯಗಳನ್ನು ಸ್ವಚ್ಚಗೊಳಿಸುವುದು ಅಪರಾಧ. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ನಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ ಇಲ್ಲಿನ ಹಾಸ್ಟೆಲ್‍ನಲ್ಲಿ ಸ್ವಚ್ಚತೆಯನ್ನು ಕಾಯ್ದುಕೊಂಡಿಲ್ಲ. ಮಕ್ಕಳಿಗೆ ವಿತರಿಸಲಾಗಿರುವ ಜಾಮೂನಿನ ಪೊಟ್ಟಣದಲ್ಲಿ ಯಾವುದೇ ದಿನಾಂಕ ನಮೂದಿಸಿಲ್ಲ. ಪೌಸ್ಟಿಕಾಂಶುಳ್ಳ ಆಹಾರವನ್ನು ಮಕ್ಕಳಿಗೆ ನೀಡುತ್ತಿಲ್ಲ ಅಲ್ಲದೇ ಹಾಸ್ಟೆಲ್ ನಲ್ಲಿ 25 ವಿದ್ಯಾರ್ಥಿಗಳಿದ್ದು, ಉಳಿದವರು ಎಲ್ಲಿ ತಂದು ಹಾಸ್ಟೆಲ್ ವಾರ್ಡನ್‍ಗೆ ತರಾಟೆಗೆ ತೆಗೆದುಕೊಂಡು ಇದರ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

Read More

ಚಿಕ್ಕನಾಯಕನಹಳ್ಳಿ:       ಈ ತಿಂಗಳ ಅಂತ್ಯದೊಳಗೆ ಬಗರ್‍ಹುಕುಂ ಸಾಗುವಳಿಯಲ್ಲಿ ಭೂಮಿ ಮಂಜೂರಾಗಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಗುವುದು, 2019ರ ಜನವರಿ 15ರೊಳಗೆ ಸಾಗುವಳಿ ಚೀಟಿ ವಿತರಿಸಿರುವ ರೈತರಿಗೆ ಖಾತೆ ಮಾಡಿಕೊಡಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.       ತಾಲ್ಲೂಕಿನ ಕಾತ್ರಿಕೆಹಾಲ್‍ನಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಜನತೆ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ, ಈಗಾಗಲೇ ತಾಲ್ಲೂಕಿನಿಂದ 12ಸಾವಿರಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಿದ್ದಾರೆ, ಇವರ ಜೀವನವೂ ಸುಖಕರವಾಗಿಲ್ಲ ಹಾಗಾಗಿ ರೈತರಿಗೆ ಜಮೀನು ನೀಡಿ ಸಾಗುವಳಿ ಮಾಡುವಂತೆಯೂ ಈ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದ ಅವರು, ಕಂದಿಕೆರೆ ಹೋಬಳಿಯಲ್ಲಿ ಪ್ರತಿ ಬಾರಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ನಮ್ಮ ಅಭ್ಯರ್ಥಿಗಳಗೆ ಹೆಚ್ಚು ಮತ ನೀಡುತ್ತಿದ್ದರು ಆದರೆ ವಿಧಾನಸಭೆಯಲ್ಲಿ ಮತ ಬರುತ್ತಿರಲಿಲ್ಲ, ಈ ಬಾರಿಯ ವಿಧಾನಸಭಾ…

Read More

ತುಮಕೂರು :       ಎತ್ತಿನಹೊಳೆ ಯೋಜನೆಗೆ ಜಿಲ್ಲೆಯಲ್ಲಿ ಮನೆ, ಜಮೀನು ಕಳೆದುಕೊಳ್ಳುವ ರೈತರಿಗೆ ಉತ್ತಮ ಬೆಲೆಯನ್ನು ನೀಡಿ ಪುನರ್ವಸತಿ ಕಲ್ಪಿಸಬೇಕು ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಮೇಲ್ಗಾಲುವೆ ನಿರ್ಮಾಣದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪುನರ್ವಸತಿ ಮತ್ತು ಪುನರ್‍ನಿರ್ಮಾಣ ಪ್ರಯೋಜನಗಳ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.       ಎತ್ತಿನ ಹೊಳೆ ಯೋಜನೆಗಾಗಿ ರೈತರು ಜಮೀನು, ಮನೆ ಹಾಗೂ ಮರಗಳನ್ನು ಕಳೆದುಕೊಳ್ಳಲಿದ್ದಾರೆ. ಇಂತಹ ರೈತರು ಉತ್ತಮ ಬೆಲೆಯನ್ನು ನೀಡುವಂತೆ ನನಗೆ ಮನವಿ ಮಾಡುತ್ತಿದ್ದು, ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಉತ್ತಮ ಬೆಲೆಯನ್ನು ನಿಗಧಿಪಡಿಸಿ, ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.       ಎತ್ತಿನ ಹೊಳೆ ಕುಡಿಯುವ ನೀರು ಯೋಜನೆಯ 10.47 ಕಿ.ಮೀ. ಉದ್ದದ ಮೇಲ್ಗಾಲುವೆ ಹಾಗೂ 0.542 ಕಿ.ಮೀ. ಉದ್ದದ ಮುಖ್ಯ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನದಿಂದ…

Read More