ಚಿಕ್ಕನಾಯಕನಹಳ್ಳಿ :
ಸಂತೆಯನ್ನು ಹಾಲಿ ನಡೆಯುತ್ತಿದ್ದ ಜಾಗದಿಂದ ಸ್ಥಳಾಂತರ ಮಾಡಲು ಪುರಸಭಾ ಆಡಳಿತ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮಕೈಗೊಂಡಿರುವುದನ್ನು ಸಂತೆಯ ವ್ಯಾಪಾರಿಗಳು, ಸಾರ್ವಜನಿಕರು ವಿರೋಧಿಸಿ ಸಂತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ಪ್ರತಿಸೋಮವಾರ ನಡೆಯುತ್ತಿದ್ದ ವಾರದ ಸಂತೆಯು ಪಟ್ಟಣದ ಬಿ.ಹೆಚ್. ರಸ್ತೆ ಹಾಗೂ ತೀನಂಶ್ರೀ ಸಭಾಂಗಣದ ಆವರಣದಲ್ಲಿ ನಡೆಯುತ್ತಿತ್ತು ಅದರೆ ಇದರ ಸಮೀಪದಲ್ಲೇ ಶಾಲೆ ಹಾಗೂ ಕಾಲೇಜುಗಳಿದ್ದು ಇದರಿಂದ ತೊಂದರೆಯಾಗುತ್ತದೆ ಎಂದು ದೂರು ನೀಡಿದ್ದರ ಹಿನ್ನೇಲೆಯಲ್ಲಿ ಜಿಲ್ಲಾಧಿಕಾರಿಗಳು ಸಂತೆಯನ್ನು ಪಟ್ಟನದ ಸಾರ್ವಜನಿಕ ಆಸ್ಪತ್ರೆ ಬಳಿ ಇರುವಂತಹ ಎಪಿಎಂಸಿ ಗೆ ಸ್ಥಳಾಂತರ ಮಾಡಲು ಆದೇಶ ನೀಡಿದ್ದು ಇದರ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಪುರಸಭೆಯವರು ಕರಪತ್ರದ ಮೂಲಕ ಇಂದಿನಿಂದ ಸಂತೆಯನ್ನು ಎಪಿಎಂಸಿ ವರ್ಗಾಹಿಸಲಾಗಿದೆ ಎಂದು ತಿಳಿಸಿದ್ದರು ಈ ಬಗ್ಗೆ ತೀವ್ರವಾಗಿ ವಿರೋದ ಮಾಡಿದ ವ್ಯಾಪಾರಸ್ಥರು, ನಾಗರೀಕರು ಕಳೆವಾರ ಪುರಸಭೆಯ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಪುರಸಭೆಯವರು ಕಳೆದ ಮೂರು ದಿನಗಳಿಂದ ಎಪಿಎಂಸಿಯಲ್ಲಿ ಸ್ವಚ್ಛಗೊಳಿಸಿ ವ್ಯಾಪಾರಸ್ಥರಿಗೆ ಅನುವು ಮಾಡಿದ್ದರು ಅದರೆ ವ್ಯಾಪಾರಸ್ಥರು ಮೊದಲಿನ ಜಾಗದಲ್ಲೇ ಸಂತೆಯನ್ನು ನಡೆಸಲು ಅನುಮತಿ ನೀಡುವಂತೆ ಇಂದು ಸಂತೆಯನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ತೇಜಸ್ವೀನಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಮುಖಂಡತ್ವವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪಟ್ಟಣದಲ್ಲಿ ಮಾರುತಿನಗರ, ಅಂಬೇಡ್ಕರ್ನಗರ, ಸೇರಿದಂತೆ ದಕ್ಷೀಣಭಾಗದಲ್ಲಿರುವ ಹೆಚ್ಚು ಜನರು ಕೂಲಿ ಕಾರ್ಮಿಕರು, ನಾಗರೀಕರಿಗೆ ಹಾಗೂ ಗ್ರಾಮೀಣಾ ಭಾಗದಿಂದ ಬರುವಂತಹ ಜನರಿಗೆ ಈಗ ನಡೆಯುತ್ತಿರುವ ಸಂತೆಯ ಜಾಗ ಉತ್ತಮವಾಗಿದ್ದು ಇದನ್ನು ಏಕಾಏಕಿ ಮುಂದಿನ ಸೋಮವಾರದಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ ಇದು ಪಟ್ಟಣದ ಹೃದಯ ಭಾಗದಿಂದ ಸುಮಾರು 3 ಕಿ.ಮೀ ದೂರದಲ್ಲಿದ್ದು ಸಂತೆಗೆ ಬಂದು ಹೋಗಲು ತುಂಭಾ ತೊಂದರೆಯಾಗುತ್ತಿದ್ದು ಈ ಹಿಂದಿನಂತೆ ಅದೇ ಸ್ಥಳದಲ್ಲಿ ಸಂತೆ ಮಾಡಲು ಅನುಮತಿ ನೀಡಲು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ವರದಿ ಮಾಡುವಂತೆ ತಿಳಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ನಿರ್ವಾಣಯ್ಯ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳಲಾಗಿದೆ ಎಂದರು. ತಹಸೀಲ್ದಾರ್ ತೇಜಸ್ವೀನಿ ಮನವಿ ಸ್ವೀಕರಿಸಿ ಮಾತನಾಡಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದರು.
ಸಂತೆ ಬಂದ್ ಹಿನ್ನೇಲೆಯಲ್ಲಿ ಸೂಕ್ತವಾದ ಬಿಗಿ ಬಂದೋಬಸ್ತ್ನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು ಸೋಮವಾರ ಬೆಳಗ್ಗೆ 6ಗಂಟೆಯಿಂದಲೇ ಹಳೆಯ ಸಂತೆ ಜಾಗದಲ್ಲಿ ಮೊಕ್ಕಾಂ ಹೂಡಿ ಅಲ್ಲಿ ಯಾರು ಅಂಗಡಿಗಳನ್ನು ತೆರೆಯದಂತೆ ತಿಳಿಸಿದರು ನಂತರ ಎಪಿಎಂಸಿಗೆ ತೆರಳುವಂತೆ ತಿಳಿಸುತ್ತಿದ್ದರು ವ್ಯಾಪಾರಸ್ಥರು ಕನ್ನಡ ಸಂಘದ ವೇಧಿಕೆ ಬಳಿ ಸಭೆ ಸೇರಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಬಿ.ಸುರೇಶ್ಬಾಬು ಬೇಟಿ ನೀಡಿ ವ್ಯಾಪಾರಸ್ಥರಿಗೆ ತಹಸೀಲ್ದಾರ್ಗೆ ಮನವಿ ಸಲ್ಲಿಸುವಂತೆ ತಿಳಿಸಿದ್ದರು ಎಂದು ತಿಳಿದುಬಂದಿದ್ದು ಸಂತೆಯ ಸ್ಥಳಾಂತರದ ವಿಷಯವು ಹಾಲಿ ಹಾಗೂ ಮಾಜಿ ಶಾಸಕರುಗಳ ನಡುವೆ ತೆರೆಮರೆಯ ಕದನವಾಗಿದೆ.