ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಉದ್ಘಾಟನೆ

ಚಿಕ್ಕನಾಯಕನಹಳ್ಳಿ:

      2 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವನ್ನು ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು.

      ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ನೂತನವಾಗಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿ 18 ಕೊಠಡಿಗಳಲ್ಲಿ 16 ಕೊಠಡಿಗಳಲ್ಲಿ 50 ಜನ ವಿದ್ಯಾರ್ಥಿನಿಯರು ವಾಸ ಮಾಡಬಹುದು 16 ಕೊಠಡಿಗಳು ಶೌಚಾಲಯ ಸಹಿತ ಕೊಠಡಿಗಳಾಗಿದ್ದು, ಈಗಿರುವ ವಸತಿ ನಿಲಯ ಚಿಕ್ಕದಾಗಿತ್ತು. ನೂತನವಾಗಿ ನಿರ್ಮಿಸಿರುವ ವಸತಿ ನಿಲಯ ಸುಸಜ್ಜಿತವಾಗಿದ್ದು, ಅಡುಗೆ ಮನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಹೊಂದಿದೆ. ವಸತಿ ನಿಲಯವನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ವಿದ್ಯಾಭ್ಯಾಸ ಮಾಡುವಂತೆ ಸಲಹೆ ನೀಡಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಮ್ಮ, ಆರ್.ರಾಮಚಂದ್ರಯ್ಯ, ತಾ.ಪಂ ಸದಸ್ಯ ಕೇಶವಮೂರ್ತಿ, ತಹಶಿಲ್ದಾರ್ ತೇಜಸ್ವಿನಿ ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹಳೇಮನೆ ಶಿವನಂಜಪ್ಪ, ಬಿ.ಸಿ.ಎಮ್ ಇಲಾಖಾಧಿಕಾರಿ ಶಿವರಾಜ್. ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್, ನಿರ್ದೇಶಕರಾದ ಆರ್.ಶಿವರಾಜ್, ಶಂಕರಲಿಂಗಪ್ಪ, ಬರಗೂರು ಬಸವರಾಜು, ಮತ್ತಿತರರು ಉಪಸ್ಥಿತರಿದ್ದರು

(Visited 23 times, 1 visits today)

Related posts

Leave a Comment