ಟ್ರಾನ್ಸ್‍ಫಾರ್ಮರ್ ಬ್ಲಾಸ್ಟ್ ; 4 ತೆಂಗಿನ ಮರಗಳು ಭಸ್ಮ

ಹುಳಿಯಾರು : 

      ಟ್ರಾನ್ಸ್‍ಫಾರ್ಮರ್ ಬ್ಲಾಸ್ಟ್ ನಿಂದಾಗಿ 4 ತೆಂಗಿನ ಮರಗಳು ಸುಟ್ಟು ಭಸ್ಮವಾದ ಘಟನೆ ಹಂದನಕೆರೆ ಹೋಬಳಿ ಮತಿಘಟ್ಟ ಸಮೀಪದ ಬೆಳಗಹಳ್ಳಿ ಬಳಿ ಜರುಗಿದೆ. ಮತಿಘಟ್ಟದಿಂದ ಉಪ್ಪಾರಹಳ್ಳಿಗೆ ಮೋಟರ್ ಲೈನ್ ಕರೆಂಟ್ ಸರಬರಾಜು ಮಾಡಲು ಈ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿತ್ತು. ಆದರೆ ಸಾಮಾರ್ಥಕ್ಯೂ ಮೀರಿ ರೈತರು ಈ ಟಿಸಿಯಿಂದ ವಿದ್ಯುತ್ ಸಂಪರ್ಕ ಪಡೆದಿದ್ದರು. ಪರಿಣಾಮ ಗುರುವಾರ ರಾತ್ರಿ ಓವರ್ ಲೋಡ್ ಆಗಿ ಟಿಸಿ ಬ್ಲಾಸ್ಟ್ ಆಗಿದೆ.

       ಟಿಸಿ ಬ್ಲಾಸ್ಟ್‍ನಿಂದ ಹೊತ್ತಿದ ಬೆಂಕಿ ಸುತ್ತಮುತ್ತಲ 4 ಫಲಭರಿತ ತೆಂಗಿನ ಮರಗಳನ್ನು ಸುಟ್ಟಿವೆ. ಅಲ್ಲದೆ ಗುರುವಾರ ರಾತ್ರಿಯಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ರೈತರಿಗೆ ತೊಂದರೆಯಾಗಿದೆ.

      ಸ್ಥಳಕ್ಕೆ ಹಂದನಕೆರೆ ಬೆಸ್ಕಾಂ ಶಾಖಾಧಿಕಾರಿ ರಾಜಶೇಖರ್ ಅವರು ಭೇಟಿ ನೀಡಿ ಘಟನೆಯ ವಿವರ ಪಡೆದು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಟ್ರಾನ್ಸ್‍ಫಾರ್ಮರ್ ಬದಲಾವಣೆಗೆ ನುರಿತ ಕೆಲಸಗಾರರ ತಂಡ ಬರಬೇಕಿದ್ದು ಶನಿವಾರ ಬರುವ ಭರವಸೆಯನ್ನು ನೀಡಲಾಗಿದೆ.

(Visited 3 times, 1 visits today)

Related posts

Leave a Comment