ಮಧುಗಿರಿ:
ಶಾಲೆಯಲ್ಲಿ ಸುಮಾರು 6 ತಿಂಗಳಿಂದ ಶಿಕ್ಷಕ ಕರ್ತವ್ಯಕ್ಕೆ ಹಾಜರಾಗದ ಕಾರಣ ಗ್ರಾಮ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಬೀಗ ಹಾಕಿ ಪ್ರತಿಭಟಿಸಿದರು.
ತಾಲೂಕಿನ ಪುರವರ ಹೊಬಳಿಯ ಕೊಂಡವಾಡಿ ಗ್ರಾಪಂನ ಕಂಸಾನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 40 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕರಿದ್ದು ಕಳೆದ 3 ತಿಂಗಳ ಹಿಂದೆ ರಜೆಯಲ್ಲಿ ಹೋದ ಶಿಕ್ಷಕರೊಬ್ಬರು ರಜೆಗೆ ಹೋದವರು ಮತ್ತೆ ಇತ್ತ ಕಳೆ ಸುಳಿದಿಲ್ಲಾ, ಇಲ್ಲಿ ಏಕೈಕ ಶಿಕ್ಷಕರಿದ್ದಾರೆ, ಇಲಾಖೆಯ ಮೀಟಿಂಗ್, ಅಕ್ಷದಾಸೋಹ, ಇದರ ಜತೆ ಬಿಎಲ್‍ಓ ಹೊಣೆಯನ್ನು ನಿಭಯಿಸುತಿದ್ದು ಈ ಭಾಗಗ ಮಕ್ಕಳು ಶಿಕ್ಷಣ ವಂಚಿತರಾಘುತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಆರು ತಿಂಗಳಿಂದ ಗೈರಾಗುತ್ತಿರುವ ಶಿಕ್ಷಕರನ್ನು ತೆಗೆದು ಬೇರೆ ಶಿಕ್ಷಕರನ್ನು ನಿಯೋಜಿಸುವಂತೆ ಹಲವು ಬಾರಿ ಮನವಿ ಪತ್ರ ನೀಡಿದದ್ದೇವೆ, ಆದರೆ ಇಲಾಖೆಯ ಅಕಾರಿ ಈ ಬಗ್ಗೆ ನಿರ್ಲಕ್ಷ್ಯಿಸಿದ್ದು ಬಡ ಮಕ್ಕಳು ಅಕ್ಷರಬ್ಯಾಸದಿಂದ ವಂಚಿತರಾಗುತಿದ್ದಾರೆ. ನರಸಿಂಹರೆಡ್ಡಿ ಎಂಬ ಶಿಕ್ಷಕ ಸಮಯಕ್ಕೆ ಸರಿಯಾಗಿ ಬಾರದೆ ಖಾಸಗಿ ವ್ಯವಹಾರದಲ್ಲಿ ತೊಡಗಿದ್ದು ಸುಮಾರು 50 ಇಲ್ ಹಾಕಿ ನಂತರ ಒಂದು ದಿನ ಕರ್ತವ್ಯಕ್ಕೆ ಹಾಜರಾಗಿದ್ದಾರೆ, ನಂತರ ಮತ್ತೆ ಹತ್ತು ದಿನ ಇಎಲ್ ಹಾಕಿದ್ದು ಆರು ತಿಂಗಳು ಕಳೆದರು ಶಾಲೆ ಕಡೆ ದರ್ಶನ ಮಾಡಿಲ್ಲಾ, ಅಕಸ್ಮಾತ್ ಶಾಲೆಗೆ ಬಂದರೂ ಪಾಠ ಪ್ರವಚನ ಮಾಡದೆ ಮೊಬೈಲ್ ಹಿಡಿದು ಶಾಲೆಯಲ್ಲಿ ಖಾಸಗಿ ವ್ಯವಹಾರದ ವಿಚಾರ ಮಾತನಾಡುವಲ್ಲಿ ನಿರತರಾಗಿರುತ್ತಾರೆ, 22 ಮಾರ್ಚ್ 2019 ರಿಂದ ಇದುವರಗೆ ಕರ್ತವ್ಯಕ್ಕೆ ಹಾಜರಾಗಿಲ್ಲಾ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನರಸಿಂಹರೆಡ್ಡಿ ಎಂಬ ಶಿಕ್ಷಕ ಶಾಲೆಗೆ ಹಾಜರಾಗುತ್ತಿಲ್ಲಾ, ಇಲಾಖೆಯು ಬೇರೆ ಶಿಕ್ಷಕರನ್ನು ನೇಮಿಸುತ್ತಿಲ್ಲಾ, ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದೆ ಎಂದು ಗ್ರಾಮಸ್ಥರು ಬಿಆರ್‍ಸಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಬಿಆರ್‍ಸಿ ಆನಂದ ಕುಮಾರ್ ಮಾತನಾಡಿ, ಇಲ್ಲಿ ನಿಯೋಜಿಸಿದ್ದ ಶಿಕ್ಷಕ ಕರ್ತವ್ಯಕ್ಕೆ ಹಾಜರಾಗದ ಕಾರಣ ಹಲವು ಬಾರಿ ನೋಟಿಸದ ನೀಡಿದ್ದು ಇದರ ಬಗ್ಗೆ ಇಲಾಖೆಗೆ ಪತ್ರ ಬರೆಯಲಾಗಿದೆ, ನಾಳೆಯಿಂದ ಪುಲಮೇನಹಳ್ಳಿ ಶಾಲೆಯಿಂದ ವಾರದ 6 ದಿನಗಳ ತಾತ್ಕಾಲಿಕವಾಗಿ ನಿಯೋಜಿಸುವುದಾಗಿ ತಿಳಿಸಿದರು.
ಶಿಕ್ಷಕರ ಸಮಸ್ಯೆ ಬಗ್ಗೆ ಒಂದು ವರ್ಷದಿಂದ ಇಲಾಖೆ ಗಮನಕ್ಕೆ ತರಲಾಗಿದೆ ಆದರು ಪ್ರಯೋಜನವಿಲ್ಲಾ, ನಾಳೆ ಇಲ್ಲಿ ಇಬ್ಬರು ಶಿಕ್ಷಕರನ್ನು ನಿಯೋಜಿಸದಿದ್ದಲ್ಲಿ ಶಾಲೆಯ ಮಕ್ಕಳು ಹಾಗೂ ಪೋಷಕರು ಪಾದಯಾತ್ರೆ ಮಾಡುವ ಮೂಲಕ ಬಿಇಓ ಕಚೇರಿ ಮುಂದೆ ಧರಣಿ ಮಾಡುವುದಾಗಿ ಗ್ರಾಪಂ ಸದಸ್ಯ ವಿಜಿ ಕುಮಾರ್ ಎಚ್ಚರಿಸಿದರು.