ಮಧುಗಿರಿ:
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಾಳೇನಹಳ್ಳಿ ಗ್ರಾಮದ ಜಾನಕಿರಾಮಯ್ಯ ಎಂಬುವವರ ಮನೆಯ ಮೇಕೆಯೊಂದು ಮನುಷ್ಯನ ರೂಪ ಹೋಲುವ ಮೇಕೆ ಮರಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ನಡೆದಿದೆ.
ಅವರ ಮನೆಯ ಮೇಕೆಯೊಂದು ಶನಿವಾರ ಎರಡು ಮರಿಗಳಿಗೆ ಜನ್ಮನೀಡಿದ್ದು ಒಂದು ಗಂಡು ಮರಿ ಆರೋಗ್ಯವಾಗಿದೆ, ಮತೊಂದು ಮರಿ ಮೃತಪಟ್ಟಿದ್ದು ಮೃತಪಟ್ಟ ಮರಿಯ ದೇಹ ಮನುಷ್ಯನ ಆಕಾರಹೊಂದಿದೆ. ವಿಷಯ ತಿಳಿದ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಜನ ತಂಡೋಪ ತಂಡವಾಗಿ ಬಂದು ವೀಕ್ಷಿಸಿದರು.
(Visited 18 times, 1 visits today)